• Home
  • »
  • News
  • »
  • entertainment
  • »
  • Abhishek Ambareesh: ಅಭಿಷೇಕ್ ಅಂಬರೀಶ್ ಮುಂದಿನ ಸಿನಿಮಾ ಯಾವುದು?

Abhishek Ambareesh: ಅಭಿಷೇಕ್ ಅಂಬರೀಶ್ ಮುಂದಿನ ಸಿನಿಮಾ ಯಾವುದು?

ಬ್ಯಾಡ್​ ಮ್ಯಾನರ್ಸ್ ಬಳಿಕ ಅಭಿಷೇಕ್ ಯಾವ್ ಚಿತ್ರ ಮಾಡ್ತವ್ರೆ?

ಬ್ಯಾಡ್​ ಮ್ಯಾನರ್ಸ್ ಬಳಿಕ ಅಭಿಷೇಕ್ ಯಾವ್ ಚಿತ್ರ ಮಾಡ್ತವ್ರೆ?

ಬ್ಯಾಡ್ ​ಮ್ಯಾನರ್ಸ್ ಸಿನಿಮಾದ ಚಿತ್ರೀಕರಣ ಕೊನೆ ಹಂತದಲ್ಲಿಯೇ ಇದೆ. ಇದು ಮುಗಿದ ಮೇಲೆ ನಮ್ಮ ಸಿನಿಮಾದ ಕೆಲಸ ಶುರು ಮಾಡುತ್ತೇವೆ ಎಂದು ಡೈರೆಕ್ಟರ್ ಕೃಷ್ಣ, ನ್ಯೂಸ್-18 ಕನ್ನಡ ಡಿಜಿಟಲ್​​ಗೆ ಹೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಜೂನಿಯರ್ ರೆಬಲ್ (Abhishek Ambareesh) ಸ್ಟಾರ್ ಅಭಿಷೇಕ್ ಅಂಬರೀಶ್ ಸಿನಿಮಾ ಗತ್ತು ಜೋರಾಗಿಯೇ ಇದೆ. ಮೊದಲ ಸಿನಿಮಾ ಅಮರ್ (Amar) ಲವ್ಲಿಯಾಗಿಯೇ ಬಂತು. ಜನರ ಹೃದಯದಲ್ಲಿ ಪ್ರೀತಿಯಿಂದಲೇ ಜಾಗ ಮಾಡಿಕೊಂಡಿತು. ಇದಾದ್ಮೇಲೆ ಮುಂದೇನು ಅನ್ನೋ ಪ್ರಶ್ನೆಗೆ ಬ್ಯಾಡ್​ (Bad manners) ಮ್ಯಾನರ್ಸ್ ಸಿನಿಮಾ ಹೆಸರು ಕೇಳ್ತು. ಈಗ ಈ ಚಿತ್ರದ ಟೀಸರ್ ಭಾರೀ ಗಮನ ಸೆಳೆದಿದೆ. ಅಭಿಷೇಕ್ ಅಂಬರೀಶ್ ಜನ್ಮ ದಿನಕ್ಕೆ ಈ ಟೀಸರ್ (Teaser) ಹೊರ ಬಂದು ಧಮಾಕಾ ಮಾಡಿದೆ. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಇನ್ನೇನು ಚಿತ್ರ ಕೊನೆ ಹಂತಕ್ಕೂ ಬಂದಿದೆ. ಇದಾದ್ಮೇಲೆ ಮುಂದೇನೂ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.


ಜೂ.ರೆಬಲ್ ಸ್ಟಾರ್ ಅಭಿಷೇಕ್ ಮುಂದಿನ ಸಿನಿಮಾ ಯಾವುದು?


ಅಭಿಷೇಕ್ ಅಂಬರೀಶ್ ಸದ್ಯ ಬ್ಯಾಡ್​ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡೈರೆಕ್ಟರ್ ಸೂರಿ ನಿರ್ದೇಶನದ ಈ ಚಿತ್ರದ ಬಗ್ಗೆ ಭಾರೀ ಹೋಪ್ ಇದೆ. ಈಗಾಗಲೇ ಟೀಸರ್ ಕೂಡ ಭರ್ಜರಿಯಾಗಿಯೇ ರೆಸ್ಪಾನ್ಸ್ ಪಡೆದಿದೆ.


ಈ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಜನರಿಗೆ ಹೊಸ ರೀತಿಯಲ್ಲಿಯೇ ಬರಲಿದ್ದಾರೆ. ಆದರೆ ಈ ಚಿತ್ರದ ಕೆಲಸ ಇನ್ನೂ ನಡೆಯುತ್ತಿದೆ. ಕೊನೆಯ ಹಂತದ ಚಿತ್ರೀಕರಣ ಈಗ ನಡೆಯುತ್ತಿದೆ.


ಇದನ್ನೂ ಓದಿ: Actress Manasa Joshi: ಮಹಾಲಕ್ಷ್ಮಿ ಮನೆಗೆ ಬಂದ ಖುಷಿಯಲ್ಲಿ ಮಂಗಳಗೌರಿ ನಟಿ! ಹೆಮ್ಮೆ ಪಟ್ಟ ಪೋಷಕರು


ಬ್ಯಾಡ್​ ಮ್ಯಾನರ್ಸ್ ಬಳಿಕ ಅಭಿಷೇಕ್ ಯಾವ್ ಚಿತ್ರ ಮಾಡ್ತವ್ರೆ?
ಬ್ಯಾಡ್ ಮ್ಯಾನರ್ಸ್ ನಂತರ ಅಭಿಷೇಕ್ ಅಂಬರೀಶ್ ಒಪ್ಪಿಕೊಂಡ ಸಿನಿಮಾಗಳು ಎರಡು ಇವೆ. ಆ ಲೆಕ್ಕದಲ್ಲಿ ಮುಂಗಾರು ಮಳೆ ಕೃಷ್ಣ ಅವರು ಈಗಾಗಲೇ ಕಾಳಿ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದಾರೆ.


Kannada Film Actor Abhishek Ambareesh Next Film Details
ಅಭಿಷೇಕ್ ಅಂಬರೀಶ್ Next ಸಿನಿಮಾ ಯಾವುದು?


ಅಯೋಗ್ಯ, ಮದಗಜ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಕೂಡ ಅಭಿಷೇಕ್​​ಗಾಗಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಇನ್ನು ಯಾವುದೇ ಟೈಟಲ್ ಕೂಡ ಇಟ್ಟಿಲ್ಲ. ಆದರೂ ಈ ಚಿತ್ರದ ಪೋಸ್ಟರ್ ಭರ್ಜರಿಯಾಗಿಯೆ ರೆಸ್ಪಾನ್ಸ್ ಪಡೆದಿದೆ.


ಅಭಿಷೇಕ್ ಅಂಬರೀಶ್ Next ಸಿನಿಮಾ ಯಾವುದು?
ಅಭಿಷೇಕ್ ಅಂಬರೀಶ್ ಎರಡು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಅದರಲ್ಲಿ ಒಂದು ಮುಂಗಾರು ಮಳೆ ಕೃಷ್ಣ ಅವರದ್ದು, ಮತ್ತೊಂದು ಮಹೇಶ್ ಅವರ ಸಿನಿಮಾ. ಈ ಎರಡು ಸಿನಿಮಾಗಳಲ್ಲಿ ಮೊದಲು ಶುರು ಆಗೊದೇ ಕೃಷ್ಣ ಅವರ ಕಾಳಿ ಸಿನಿಮಾನೇ ಆಗಿದೆ.


ಹೌದು, ಕಾಳಿ ಸಿನಿಮಾ ಕೃಷ್ಣ ಅವರ ನಿರ್ದೇಶನದ ಸಿನಿಮಾನೇ ಆಗಿದೆ. ಸಿನಿಮಾ ಮಾಡ್ತಾ ಇದ್ದೀವಿ ಅಂತಲೇ ಡೈರೆಕ್ಟರ್ ಕೃಷ್ಣ ಈ ಹಿಂದೆ ಅನೌನ್ಸ್ ಮಾಡಿದ್ದರು. ಅಷ್ಟು ಬಿಟ್ಟರೇ, ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್​ ಮ್ಯಾನರ್ಸ್ ಸಿನಿಮಾದ ಕೆಲಸ ಪೂರ್ಣಗೊಳ್ಳುವುದನ್ನೆ ಕಾಯುತ್ತಿದ್ದಾರೆ.


Kannada Film Actor Abhishek Ambareesh Next Film Details
ಬ್ಯಾಡ್ ಮ್ಯಾನರ್ಸ್ ಸಿನಿಮಾ ಆದ್ಮೇಲೆ ಕಾಳಿ ಸಿನಿಮಾ ಶುರು


ನಿಜ, ಬ್ಯಾಡ್ ​ಮ್ಯಾನರ್ಸ್ ಸಿನಿಮಾದ ಚಿತ್ರೀಕರಣ ಕೊನೆ ಹಂತದಲ್ಲಿಯೇ ಇದೆ. ಇದು ಮುಗಿದ ಮೇಲೆ ನಮ್ಮ ಸಿನಿಮಾದ ಕೆಲಸ ಶುರು ಮಾಡುತ್ತೇವೆ ಎಂದು ಡೈರೆಕ್ಟರ್ ಕೃಷ್ಣ, ನ್ಯೂಸ್-18 ಕನ್ನಡ ಡಿಜಿಟಲ್​​ಗೆ ಹೇಳಿದ್ದಾರೆ.


ಕಾಳಿ ಸಿನಿಮಾ ಆದ್ಮೇಲೆ ಅಭಿಷೇಕ್ ಅಂಬರೀಶ್ ಯುವ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರ ಕೂಡ ಶುರು ಆಗುತ್ತದೆ. ಈ ಚಿತ್ರ ಆದ್ಮೇಲೆನೆ ನಮ್ಮ ಸಿನಿಮಾ ಶುರು ಆಗುತ್ತದೆ ಎಂದು ಡೈರೆಕ್ಟರ್ ಮಹೇಶ್ ಕುಮಾರ್ ತಿಳಿಸಿದ್ದಾರೆ.


ಇದನ್ನೂ ಓದಿ: Kamblihula New Movie: ಕಾಂತಾರ ಬಳಿಕ ಮತ್ತೊಂದು 'ಕ' ಅಕ್ಷರದ ಸಿನಿಮಾದ ಕ್ರೇಜ್


ಇನ್ನುಳಿದಂತೆ ಬ್ಯಾಡ್ ಮ್ಯಾನರ್ಸ್ ಸಿನಿಮಾ ಆದ್ಮೇಲೆ ಕಾಳಿ ಸಿನಿಮಾನೇ ಶುರು ಆಗುತ್ತದೆ. ಅದಕ್ಕೆ ಬೇಕಾಗೋ ಎಲ್ಲ ಸಿದ್ಧತೆಗಳು ಪ್ಲಾನ್ ಆಗುತ್ತಿವೆ. ಯಾವುದಕ್ಕೂ ವೇಟ್ ಮಾಡಿ, ಇತರ ಅಪ್​​ಡೇಟ್ಸ್ ಕೊಡ್ತಾ ಇರ್ತೀವಿ.

First published: