Action Director Ravi Varma: ಬಾಲಿವುಡ್ ಅಂಗಳದಲ್ಲಿ ರವಿ ವರ್ಮಾ ಸಾಹಸ!

ಬಾಲಿವುಡ್ ಅಂಗಳದಲ್ಲಿ ರವಿ ವರ್ಮಾ ಸಾಹಸದ ಅಟ್ಟಹಾಸ ಬಲು ಜೋರಾಗಿಯೇ ಕೇಳುತ್ತಿದೆ. ಅಗ್ನಿ (Agni) ಅನ್ನೋ ಹೆಸರಿನ ಹಿಂದಿ ಸಿನಿಮಾದ ಅಷ್ಟೂ ಆ್ಯಕ್ಷನ್ ಗಳನ್ನ ಸಾಹಸ ನಿರ್ದೇಶಕ ರವಿ ವರ್ಮಾ ಡೈರೆಕ್ಟ್ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ.

ಸಾಹಸ ನಿರ್ದೇಶಕ ರವಿ ವರ್ಮಾ

ಸಾಹಸ ನಿರ್ದೇಶಕ ರವಿ ವರ್ಮಾ

  • Share this:
ರಾಜಾ ರವಿ ವರ್ಮಾ (Action Director Ravi Varma) ಅಂದಾಕ್ಷಣ, ರವಿ ವರ್ಮನ ಆ ಕಲೆಯ ಚಿತ್ರಣ ಕಣ್ಮುಂದೆ ಬರುತ್ತದೆ. ಆದರೆ ನಾವು ಇವತ್ತು ಹೇಳ್ತಿರೋ ಈ ರವಿ ವರ್ಮಾ ಹೆಸರು ಕೇಳಿದ್ರೆ ಸಾಕು, ಥ್ರಿಲ್ ಮೂಡುತ್ತದೆ. ಬೆಳ್ಳಿ ತೆರೆ ಮೇಲೆ ಈ ಕಲಾಕಾರ್​ನ ಕಲ್ಪನೆ ಕಂಡ್ರೆ ರೋಮಾಂಚನ ಆಗುತ್ತದೆ. ಕನ್ನಡಿಗರ ಈ ರವಿ ವರ್ಮಾ ಆಗಾಗ ಬಾಲಿವುಡ್ (Bollywood) ಅಂಗಳದಲ್ಲೂ ಧೂಳ್ ಎಬ್ಬಿಸಿ ಬರ್ತಾರೆ. ಈಗ ಮತ್ತೆ ಅದೇ ಬಾಲಿವುಡ್ ಅಂಗಳದಲ್ಲಿ ರವಿ ವರ್ಮಾ ಸಾಹಸದ ಅಟ್ಟಹಾಸ ಬಲು ಜೋರಾಗಿಯೇ ಕೇಳುತ್ತಿದೆ. ಅಗ್ನಿ (Agni) ಅನ್ನೋ ಹೆಸರಿನ ಹಿಂದಿ ಸಿನಿಮಾದ ಅಷ್ಟೂ ಆ್ಯಕ್ಷನ್ ಗಳನ್ನ ಸಾಹಸ ನಿರ್ದೇಶಕ ರವಿ ವರ್ಮಾ ಡೈರೆಕ್ಟ್ ಮಾಡುತ್ತಿದ್ದಾರೆ. ಸದ್ಯ ಅಲ್ಲಿಯೇ ಇರೋ ರವಿ ವರ್ಮಾ ತಮ್ಮ ಈ ಚಿತ್ರದ ಕುರಿತು ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ.

ಬಾಲಿವುಡ್ ನ ಯುವ ನಟ ಪ್ರತೀಕ್ ಗಾಂಧಿ (Prateek Gandhi) ಅಭಿನಯದ ಅಗ್ನಿ (AGNI) ಚಿತ್ರಕ್ಕೆ ಸಾಹಸ ನಿರ್ದೇಶಕ ರವಿ ವರ್ಮಾ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇವರ ಚಿತ್ರ ಜೀವನದಲ್ಲಿ ಇದೂ ಕೂಡ ಒಂದ್ ಒಳ್ಳೆ ಅವಕಾಶವೇ ಆಗಿದೆ. ಬರುವ ಒಳ್ಳೆ ಪ್ರೋಜೆಕ್ಟ್​ಗಳನ್ನ ಬೇಡ ಎನ್ನದ ರವಿ ವರ್ಮಾ ಅದ್ಭುತ ಸಾಹಸಗಳನ್ನೆ ಮಾಡಿಕೊಡ್ತಾರೆ.

ಇದನ್ನೂ ಓದಿ: Ashika Ranganath: ಮದಗಜನ ಪಲ್ಲವಿಗೆ ಪ್ರಶಸ್ತಿಯ ಗರಿ, ಕನ್ನಡದ ಮಲ್ಲಿಗೆ ಜೊತೆ ವಿಶೇಷ ಸಂದರ್ಶನ

ಹಿಂದಿ ಚಿತ್ರರಂಗದಲ್ಲಿ ದಕ್ಷಿಣದ ಪ್ರತಿಭೆಗಳಿಗೆ ಒಳ್ಳೆ ಗೌರವ ಇದೆ. ದಕ್ಷಿಣದ ಟೆಕ್ನಿಷನ್​ಗಳು ಚೆನ್ನಾಗಿಯೇ ಕೆಲಸ ಮಾಡುತ್ತಾರೆ ಅನ್ನೋ ನಂಬಿಕೆನೂ ಇದೆ. ಈ ಹಿನ್ನೆಲೆಯಲ್ಲಿ ರವಿ ವರ್ಮಾ ಈಗಾಗಲೆ ಬಾಲಿವುಡ್ ನಲ್ಲಿ ತಮ್ಮ ಕೆಲಸಗಳಿಂದಲೇ ಗುರುತಿಸಿಕೊಂಡಿದ್ದಾರೆ. ತಮ್ಮ ಕೆಲಸದ ಮೂಲಕ ಪ್ರೇಕ್ಷಕರಿಗೆ ಥ್ರಿಲ್ ಮೂಡಿಸುತ್ತಿದ್ದಾರೆ.

ಬಾಲಿವುಡ್ ಅಗ್ನಿ ಚಿತ್ರಕ್ಕೆ ರಾಹುಲ್ ಧೋಲಾಕಿಯಾ ಡೈರೆಕ್ಷನ್
ಕನ್ನಡದ ಸಾಹಸ ನಿರ್ದೆಶಕ ರವಿ ವರ್ಮಾ ಅವರ ಸಾಹಸ ನಿರ್ದೇಶನದ ಈ ಚಿತ್ರಕ್ಕೆ ರಾಹುಲ್ ಧೋಲಾಕಿಯಾ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಈ ಆಕ್ಷನ್ ಇರೋ ಚಿತ್ರಕ್ಕೆ ದಕ್ಷಿಣದ ರವಿ ವರ್ಮಾ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಆಕ್ಷನ್ ಸೀನ್ ಚಿತ್ರೀಕರಣ ನಡೆಯುತ್ತಿದೆ.

Ravi Varma Now working for Bollywood Director Rahul Dholakia
ಬಾಲಿವುಡ್ ಅಗ್ನಿ ಸಿನಿಮಾಕ್ಕೆ ರವಿ ವರ್ಮಾ ಸಾಹಸ ನಿರ್ದೇಶನ


ಅಗ್ನಿ ಚಿತ್ರದ ಎಲ್ಲ ಸಾಹಸಗಳಿಗೂ ರವಿ ವರ್ಮಾ ಡೈರೆಕ್ಷನ್
ಇದೇ ಕೆಲಸದ ಮೇಲೆನೆ ಸಾಹಸ ನಿರ್ದೇಶಕ ರವಿ ವರ್ಮ ಈಗ ಮುಂಬೈಯಲ್ಲಿಯೇ ಇದ್ದಾರೆ. ಚಿತ್ರದ ಎಲ್ಲ ಸಾಹಸ ದೃಶ್ಯಗಳನ್ನ ಇವರೇ ಡೈರೆಕ್ಟ್ ಮಾಡುತ್ತಿದ್ದಾರೆ. ರವಿ ವರ್ಮಾ ಸಾಹಸಗಳು ಅಂದ್ರೆ ಕೊಂಚ ಡಿಫರಂಟ್ ಆಗಿಯೆ ಇರುತ್ತವೆ.

ಇದನ್ನೂ ಓದಿ: Ashika Ranganath: ಮದಗಜನ ಪಲ್ಲವಿಗೆ ಪ್ರಶಸ್ತಿಯ ಗರಿ, ಕನ್ನಡದ ಮಲ್ಲಿಗೆ ಜೊತೆ ವಿಶೇಷ ಸಂದರ್ಶನ

ಅವುಗಳು ಅಷ್ಟೇ ಅದ್ಭುತವಾಗಿಯೇ ತೆರೆ ಮೇಲೂ ಕಾಣುವ ಹಾಗೇನೆ ರವಿ ವರ್ಮಾ ಕಂಪೋಜ್ ಮಾಡಿರುತ್ತಾರೆ. ರವಿ ವರ್ಮಾ ಸಾಹಸ ನಿರ್ದೇಶನ ಕೇವಲ ಒಂದೇ ಭಾಷೆಯ ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ಅದು ದಕ್ಷಿಣದ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲೂ ಹವಾ ಕ್ರಿಯೇಟ್ ಮಾಡಿದೆ.

Ravi Varma Now working for Bollywood Director Rahul Dholakia
ಬಾಲಿವುಡ್ ಚಿತ್ರಕ್ಕೆ ರವಿ ವರ್ಮಾ ಸಾಹಸ ನಿರ್ದೇಶನ


ಬಾಲಿವುಡ್ ಕಿಂಗ್ ಶಾರುಕ್ ಚಿತ್ರಕ್ಕೂ ರವಿ ವರ್ಮಾ ಆ್ಯಕ್ಷನ್ ಡೈರೆಕ್ಷನ್
ರಯೀಸ್ ಚಿತ್ರಕ್ಕೂ ರವಿ ವರ್ಮಾ ಸಾಹಸ ನಿರ್ದೇಶನ ಮಾಡಿದ್ದಾರೆ. ಈ ವೇಳೆ ರವಿ ವರ್ಮಾ ಸಾಹಸ ನಿರ್ದೇಶನದ ಸುದ್ದಿ ಭಾರೀ ಸದ್ದು ಮಾಡಿತ್ತು. ಇದಾದ ಮೇಲೆ ರವಿ ವರ್ಮಾ ಸಾಹಸದ ಸಿನಿಮಾಗಳು ಬಾಲಿವುಡ್ ನಲ್ಲಿ ಹಲವು ಬಂದಿವೆ. ರಾಹುಲ್ ಧೋಲಾಕಿಯಾ ಅವರ ಅಗ್ನಿ ಈಗ ರವಿ ವರ್ಮಾ ಅವರ ಲಿಸ್ಟ್ ಗೆ ಹೊಸ ಸೇರ್ಪಡೆ ಅಂತಲೇ ಹೇಳಬಹುದು.
First published: