Mandya Ravi: ನನ್ನ ಮಗ ಸತ್ತಿಲ್ಲ, ಆರೋಗ್ಯ ಸ್ಥಿತಿ ಗಂಭೀರ ಇದೆ ಅಷ್ಟೇ - ಮಂಡ್ಯ ರವಿ ತಂದೆ ಸ್ಪಷ್ಟನೆ

Mandya Ravi: ಕನ್ನಡದ ಖ್ಯಾತ ಕಿರುತೆರೆ ನಟ ಮಗಳು ಜಾನಕಿ ಸೀರಿಯಲ್ ಕಲಾವಿದ ಮಂಡ್ಯ ರವಿ ಆರೋಗ್ಯ ಸ್ಥಿತಿ ಬಗ್ಗೆ ಅವರ ತಂದೆ ಸ್ಪಷ್ಟನೆ ಕೊಟ್ಟಿದ್ದಾರೆ.

ಮಂಡ್ಯ ರವಿ

ಮಂಡ್ಯ ರವಿ

  • Share this:
ಮಗಳು ಜಾನಕಿ ಧಾರವಾಹಿ (Serial) ಮೂಲಕ ಕನ್ನಡಿಗರ ಮನಸು ಗೆದ್ದ ಖ್ಯಾತ ಕಿರುತೆರೆ ಕಲಾವಿದ (Small Screen Actor) ಮಂಡ್ಯ ರವಿ (Mandya Ravi) ಅವರು ನಿಧನರಾಗಿದ್ದಾರೆ (Death) ಎಂಬ ಸುದ್ದಿ ಹರಿದಾಡುತ್ತಿದ್ದು ಇದು ಸುಳ್ಳು ಸುದ್ದಿ ಎಂದು ಖುದ್ದು ಮಂಡ್ಯ ರವಿ ಅವರ ತಂದೆಯೇ ಸ್ಪಷ್ಟನೆ ಕೊಟ್ಟಿದ್ದಾರೆ. ಎಕ್ಸ್​ಕ್ಲೂಸಿವ್ ಆಗಿ ನ್ಯೂಸ್ 18 ಕನ್ನಡ ಡಿಜಿಟಲ್ (News18 Kannada Digital) ಜೊತೆ ಮಾತನಾಡಿದ ನಟ ಮಂಡ್ಯ ರವಿ ಅವರ ತಂದೆ ಈ ಬಗ್ಗೆ ಸ್ಪಷ್ಟನೆ ಕೊಟ್ಟು ತಮ್ಮ ಮಗ ಸತ್ತಿಲ್ಲ, ಆರೋಗ್ಯ ಸ್ಥಿತಿ ಗಂಭೀರವಾಗಿದೆ (Health Serious) ಎಂದಿದ್ದಾರೆ. ಟಿ.ಎನ್ ಸೀತಾರಾಮ್ ಅವರ ಪ್ರಸಿದ್ಧ ಧಾರವಾಹಿಗಳಲ್ಲಿ ನಟಿಸುತ್ತಾ ಬಂದಿರುವ ಹಿರಿಯ ಕನ್ನಡ ಕಿರುತೆರೆ ಕಲಾವಿದ ಮಂಡ್ಯ ರವಿ ಅವರು ನಟನೆಯಿಂದ ಕನ್ನಡಿಗರ ಮೆಚ್ಚುಗೆ ಗಳಿಸಿದ್ದಾರೆ. ಕನ್ನಡ ಕಿರುತೆರೆ ಪ್ರೇಕ್ಷಕರ ಫೇವರೇಟ್ ನಟನಾಗಿದ್ದ ಅವರು ಇಂದಿಗೂ ಫೇಮಸ್ ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಾ ಕಿರುತೆರೆಯಲ್ಲಿ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ. ಅನಾರೋಗ್ಯದಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿರುವ ನಟ ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಅವರ ತಂದೆ ಎಚ್​.ಎಸ್. ಮುದ್ದೇಗೌಡ ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆ ಹೇಳಿದ್ದಾರೆ.

ಮಂಡ್ಯ ರವಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಮಂಡ್ಯದತ್ತ ಅವರ ಮೃತದೇಹವನ್ನು ಕೊಂಡೊಯ್ಯಲಾಗುತ್ತಿದೆ. ಅವರ ಕುಟುಂಬ ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ- ಎಂದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳು ಹರಡಿದ್ದು ಇದು ನಿಜವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Published by:Divya D
First published: