‘ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು.. ಎಲ್ಲ ಎಲ್ಲೆ ಮೀರಿದಾಗಲೂ ಪಯಣ ನಿಲ್ಲದೂ.. ಜರಿವಾ.. ಜನರೆದುರಿನಲ್ಲಿ ನಿನ್ನಾ.. ನೆರಳಾಗಿ ನಿಲ್ಲುವೆ..’ ಈ ಸಾಂಗ್(Song) ಕೇಳಿದ ಕೂಡಲೇ ನಿಮಗೆ ಇದು ಜೊತೆ ಜೊತೆಯಲಿ(Jothe Jotheyali) ಕನ್ನಡ ಧಾರಾವಾಹಿ(Kannada Serial) ಹಾಡು ಅಂತ ಗೊತ್ತಾಗುತ್ತೆ. ಅಂಕಲ್ನ ಕೇಳಿದ್ರು ಜೊತೆ ಜೊತೆಯಲಿ, ಆಂಟಿನ ಕೇಳಿದ್ರೂ ಜೊತೆ ಜೊತೆಯಲಿ. ತಾತ-ಅಜ್ಜಿನ ಕೇಳಿದ್ರೂ ಹೇಳ್ತಾರೆ ಜೊತೆ ಜೊತೆಯಲಿ ಅಂತ. ಸರಿ ಇವರನ್ನು ಬಿಡಿ ಪುಟ್ಟ ಪುಟ್ಟ ಮಕ್ಕಳು ಬಾಯಲ್ಲೂ ಇದೇ ಸಾಂಗ್. ಸಿನಿಮಾ(Cinema) ಹಾಡುಗಳು ಫೇಮಸ್(Famous) ಆಗಿರುವುದನ್ನ ನಾವು ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಅನ್ನಿಸುತ್ತೆ ಕನ್ನಡ ಧಾರಾವಾಹಿ ಹಾಡು ಇಷ್ಟು ಫೇಮಸ್ ಆಗಿದೆ. ಹೌದು, ಮೊದಲೆಲ್ಲಾ ಎಲ್ಲರ ಮನೆಲೂ ದೋಸೆ(Dose) ತೂತು ಅಂತ ಗಾದೆ ಇತ್ತ. ಈಗ ಅದನ್ನು ಎಲ್ಲರೂ ಮನೆಲೂ ಜೊತೆ ಜೊತೆಯಲಿ ಸೀರಿಯಲ್ ಅನ್ನುವ ಹಾಗೇ ಆಗಿದೆ. ಅಷ್ಟೇ ಯಾಕೆ ನಿಮ್ಮ ತಾಯಂದಿರ ಬಳಿ ಸುಮ್ಮನೆ ಈ ಸೀರಿಯಲ್ ಹೆಸರು ಹೇಳಿ ಸಾಕು, ಇಷ್ಟು ದಿನದ ಎಪಿಸೋಡ್(Episode)ಗಳ ಕಥೆಯನ್ನೇ ಹೇಳಿ ಬಿಡುತ್ತಾರೆ. ನಟ ಅನಿರುದ್ಧ(Aniruddha)- ಮೇಘಾ ಶೆಟ್ಟಿ(Megha Shetty) ಅಭಿನಯದ 'ಜೊತೆ ಜೊತೆಯಲಿ' ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ಮುನ್ನುಗ್ಗುತ್ತಿದೆ.
ಎಲ್ಲರ ಮನಸ್ಸು ಗೆದ್ದ ಜೊತೆ ಜೊತೆಯಲಿ ಧಾರಾವಾಹಿ
ಕನ್ನಡ ಕಿರುತರೆಯಲ್ಲೇ ಡಿಫ್ರೆಂಟ್ ಕಥೆ ಇಟ್ಟುಕೊಂಡು ಈ ಧಾರಾವಾಹಿ ಬಂದಿತ್ತು. ಹೆಚ್ಚಿನ ವಯಸ್ಸಿನ ವ್ಯಕ್ತಿ ಜೊತೆ ಯುವತಿಗೆ ಪ್ರೇಮಾಂಕುರವಾಗುವುದೆ ಈ ಧಾರವಾಹಿ ಕಥೆ. ಇದೆಲ್ಲ ಯಾರು ನೋಡುತ್ತಾರೆ ಅಂತ ಮಾತಾಡಿದ್ದವರೇ, ಈಗ ಒಂದು ಎಪಿಸೋಡ್ ಮಿಸ್ ಮಾಡದೇ ನೋಡುತ್ತಿದ್ದಾರೆ. ನಟ ಅನಿರುದ್ಧ್ಗೂ ಈ ಸೀರಿಯಲ್ನಿಂದ ಜೀವದಾನ ಸಿಕ್ಕಿತ್ತು. ಈ ಸೀರಿಯಲ್ನಿಂದ ಕಿರುತರೆಗೆ ಮೇಘಾ ಶೆಟ್ಟಿ ಎಂಬ ಚೆಲುವೆ ಚಂದನವನಕ್ಕೆ ಕಾಲಿಟ್ಟಿದ್ದರು. ಮಧ್ಯಮ ವರ್ಗದ ಕುಟುಂಬದ ಮಗಳಾಗಿ ಮೇಘಾ ಶೆಟ್ಟಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದರು. ಈ ಸೀರಿಯಲ್ನಿಂದಲೇ ಮೇಘಾ ಶೆಟ್ಟಿ ಸಖತ್ ಫೇಮಸ್ ಆಗಿದ್ದಾರೆ. ಆಕೆ ಊಹಿಸಿಕೊಂಡಿರದಷ್ಟು ಯಶಸ್ಸು ಈ ನಟಿಯನ್ನು ಹುಡುಕಿಕೊಂಡು ಬಂತು. ಇದ್ದರೆ ಮೇಘಾ ಶೆಟ್ಟಿಯಂತೆ ಮಗಳು ಇರಬೇಕು ಅಂತ ಕರುನಾಡಿನ ತಾಯಂದಿರು ಹೇಳುತ್ತಿದ್ದರು.
ಸೀರಿಯಲ್ ಬಿಟ್ಟು ಸಿನಿಮಾ ಕಡೆ ಹೊರಟಿದ್ರಂತೆ ಮೇಘಾ ಶೆಟ್ಟಿ!
ಜೊತೆ ಜೊತೆಯಲಿ ಧಾರಾವಾಹಿ ಕೆಲವೇ ದಿನಗಳಲ್ಲಿ ಕನ್ನಡದ ನಂಬರ್ 1 ಸೀರಿಯಲ್ ಪಟ್ಟಕ್ಕೆ ಬಂದು ನಿಂತಿತ್ತು. ಈ ಸೀರಿಯಲ್ ನಟಿ ಮೇಘಾ ಶೆಟ್ಟಿಗೆ ಸಿನಿಮಾದಿಂದ ಆಫರ್ ಬರಲು ಶುರುವಾಯಿತು. ಲಕ್ ಅನ್ನೋದು ಹಾಗೆ ಹೇಳದೇ ಕೇಳದೆ ಬರುತ್ತೆ. ಮೊದಲ ಸಿನಿಮಾದಲ್ಲೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ ಮತ್ತೆರಡು ಸಿನಿಮಾಗಳಿಂದ ಆಫರ್ ಬಂದಿತ್ತು. ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಮೇಘಾ ಶೆಟ್ಟಿಯವರಿಗೆ ಜೊತೆ ಜೊತೆಯಲಿ ಸೀರಿಯಲ್ ಮೇಲೆ ಆಸಕ್ತಿ ಕಡಿಮೆಯಾಗಿದ್ದಂತೆ. ಹೆಚ್ಚು ಡೇಟ್ಸ್ಗಳನ್ನು ಸಿನಿಮಾಗೆ ನೀಡಿ, ಉಳಿದ ಡೇಟ್ಸ್ ಗಳನ್ನು ಈ ಸೀರಿಯಲ್ಗೆ ನೀಡುತ್ತಿದ್ದರಂತೆ. ಇದರಿಂದ ಈ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರಿಗೆ ಟೆನ್ಶನ್ ತಂದಿತ್ತಂತೆ.
ಇದನ್ನು ಓದಿ : ನೀವು ಧಾರಾವಾಹಿಗಳಲ್ಲಿ ಆಕ್ಟ್ ಮಾಡಬೇಕಾ? ಕಲಾವಿದರಿಗೆ ಇಲ್ಲಿದೆ ಸುವರ್ಣ ಅವಕಾಶ!
ಹೊಸ ನಟಿಯನ್ನು ಫೈನಲ್ ಮಾಡಿದ್ದರಂತೆ ನಿರ್ದೇಶಕರು!
ಮೇಘಾ ಶೆಟ್ಟಿಯವರಿಗೆ ದಿನಕಳೆದಂತೆ ಸೀರಿಯಲ್ ಮೇಲಿರುವ ಆಸಕ್ತಿ ಕಡಿಮೆ ಆಗುತ್ತಲೆ ಇತ್ತು. ಹೀಗಾಗಿ ನಿರ್ದೇಶಕರು ಮೇಘಾ ಶೆಟ್ಟಿ ಅವರ ಜಾಗಕ್ಕೆ ಮತ್ತೊಬ್ಬ ಹೀರೋಯಿನ್ ತರಲು ಮುಂದಾಗಿದ್ದರಂತೆ. ರಕ್ಷಾ ಶೆಟ್ಟಿ ಎಂಬ ಯುವತಿಯನ್ನು ಆಡಿಷನ್ ನಡೆಸಿ ಫೈನಲ್ ಕೂಡ ಮಾಡಿದ್ದರಂತೆ. ಇತ್ತ ಇದರ ಬಗ್ಗೆ ತಿಳಿಯದ ಮೇಘಾ ಶೆಟ್ಟಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದರಂತೆ. ತ್ರಿಬಲ್ ರೈಡಿಂಗ್ ಸಿನಿಮಾ ಶೂಟಿಂಗ್ ಮುಗಿದ ಮೇಲೂ ಮತ್ತೆರಡು ಸಿನಿಮಾಗಳಿಗೆ ಸಹಿ ಹಾಕಿದ್ದರಂತೆ.
ಇದನ್ನು ಓದಿ: Bachelorette Partyಯಲ್ಲಿ ಎಂಜಾಯ್ ಮಾಡಿದ ಕಿರುತೆರೆ ನಟಿ Kavya Gowda
ವಿಚಾರ ತಿಳಿದು ಓಡೋಡಿ ಬಂದ್ರಂತೆ ಮೇಘಾ ಶೆಟ್ಟಿ
ಜೊತೆ ಜೊತೆಯಲಿ ಸೀರಿಯಲ್ ನಟಿ ಬದಲಾವಣೆ ವಿಚಾರ ತಿಳಿದು ಮೇಘಾ ಶೆಟ್ಟಿ ನಿರ್ದೇಶಕ ಬಳಿ ಓಡೋಡಿ ಬಂದಿದ್ದರಂತೆ. ಈಕೆ ಒಪ್ಪಿಕೊಂಡಿದ್ದ ಎರಡು ಸಿನಿಮಾವನ್ನು ಕೈಬಿಟ್ಟು ಸೀರಿಯಲ್ನಲ್ಲಿ ನಾನು ಮುಂದುವರೆಯುತ್ತೇನೆ ಎಂದು ಹೇಳಿದ್ದರಂತೆ. ತಮ್ಮ ತಪ್ಪಿನ ಅರಿವಾಗಿ ಮತ್ತೆ ಜೊತೆ ಜೊತೆಯಲಿ ಸೀರಿಯಲ್ನ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದರಂತೆ. ಎಷ್ಟೇ ಸಿನಿಮಾ ಮಾಡಿದರೂ ನನಗೆ ಮೊದಲು ಜೊತೆ ಜೊತೆಯಲಿ ಎಂದು ಸ್ವತಃ ಮೇಘಾ ಶೆಟ್ಟಿ ಹೇಳಿದ್ದರು. ಇನ್ನೂ ಮೇಘಾ ಶೆಟ್ಟಿ ಜಾಗಕ್ಕೆ ಕರೆತರಲಾಗಿದ್ದ ರಕ್ಷಾ ಶೆಟ್ಟಿ ಎಂಬ ನಟಿ, ಸ್ಟಾರ್ ಸುವರ್ಣದಲ್ಲಿ ಬರುತ್ತಿರುವ ಹೊಸ ಸೀರಿಯಲ್ವೊಂದರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ