Anchor Anushree Post: ‘ಚಿನ್ನು’ ಅಗಲಿಕೆಯ ನೋವನ್ನು ಹಂಚಿಕೊಂಡ ಆ್ಯಂಕರ್​ ಅನುಶ್ರೀ!

Anushree: ಅನುಶ್ರೀ ಅವರ ಮುದ್ದಿನ ನಾಯಿಮರಿ (Puppy) ಚಿನ್ನು ಅಗಲಿಕೆಯ ನೋವಿನ ಪೋಸ್ಟ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವರ್ಷ ಕಳೆದುಕೊಂಡವರ ದುಃಖದ ನೋವಿನ ಜೊತೆಗೆ ಮುದ್ದಿನ ನಾಯಿಮರಿಯೂ ಕೂಡ ದೂರವಾದ ಬೇಸರವನ್ನು ಅನುಶ್ರೀ ಹೇಳಿಕೊಂಡಿದ್ದಾರೆ.

ಅನುಶ್ರೀ

ಅನುಶ್ರೀ

  • Share this:
    ಆ್ಯಂಕರ್​ ಅನುಶ್ರೀ (Anchor Anushree) ಅಂದರೆ ಬಹುತೇಕರಿಗೆ ಗೊತ್ತು. ಸಿನಿಮಾ (Film), ನಟನೆಗಿಂತ (Acting) ಮಾತಿನ ಕೌಶಲ್ಯದ ಮೂಲಕ ತೆರೆ ಮೇಲೆ ರಂಜಿಸುವ ಕನ್ನಡದ ಫೇಮಸ್​ ಆ್ಯಂಕರ್​ ಆಗಿ ಅನುಶ್ರೀ ಗುರುತಿಸಿಕೊಂಡಿದ್ದಾರೆ. ಮೂಲತಃ ಮಂಗಳೂರು (Mangalore) ಮೂಲದವರಾಗಿರುವ ಅನುಶ್ರೀ ಅನೇಕ ವರ್ಷಗಳಿಂದ ಬೆಂಗಳೂರಿನಲ್ಲೇ (Bengaluru) ನೆಲೆಸಿದ್ದಾರೆ. ತಾಯಿ ಮತ್ತು ತಮ್ಮನೊಂದಿಗಿರುವ ಅನುಶ್ರೀ ತನ್ನ ಮುದ್ದಿನ ನಾಯಿಮರಿಗೆ ಅಗಲಿಕೆ ನೋವನ್ನು ಹಂಚಿಕೊಂಡಿದ್ದಾರೆ.

    ಅನುಶ್ರೀ ಅವರ ಮುದ್ದಿನ ನಾಯಿಮರಿ (Puppy) ಚಿನ್ನು ಅಗಲಿಕೆಯ ನೋವಿನ ಪೋಸ್ಟ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವರ್ಷ ಕಳೆದುಕೊಂಡವರ ದುಃಖದ ನೋವಿನ ಜೊತೆಗೆ ಮುದ್ದಿನ ನಾಯಿಮರಿಯೂ ಕೂಡ ದೂರವಾದ ಬೇಸರವನ್ನು ಅನುಶ್ರೀ ಹೇಳಿಕೊಂಡಿದ್ದಾರೆ.

    ಇನ್​​ಸ್ಟಾಗ್ರಾಂನಲ್ಲಿ ನಾಯಿ ಮರಿಯನ್ನು ತಬ್ಬಿಕೊಂಡು, ಅದಕ್ಕೊಂದು ಮುತ್ತನಿಡುವ ಪೋಸ್ಟ್​ ಅನ್ನು ಶೇರ್​ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ‘‘ದೇವರ ಬೆರಳುಗಳು ಆತನನ್ನು ಸ್ಪರ್ಶಿಸಿವೆ. ಆತನೀಗ ನಿದ್ರಿಸಿದ್ದಾನೆ’’ ಎಂದು ಬೇಸರದ ಅಡಿಬರಹವನ್ನು ನೀಡಿದ್ದಾರೆ.

    ಬಹುತೇಕರು ಮನುಷ್ಯರಿಗಿಂತ ಸಾಕು ನಾಯಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಅದರೊಂದಿಗೆ ಹೆಚ್ಚಿನ ಒಡನಾಟವಿರುತ್ತದೆ. ಅದರಲ್ಲೂ ಯುವತಿಯರಿಗೆ ಮುದ್ದಿನ ನಾಯಿ ಮರಿ ಸಾಕಬೇಕು ಎಂಬ ಕನಸಿರುತ್ತದೆ. ಅದರಂತೆ ಇಷ್ಟಪಟ್ಟು ನಾಯಿಮರಿಯನ್ನು ಸಾಕುತ್ತಿರುತ್ತಾರೆ. ಅನುಶ್ರೀ ಅವರು ಕೂಡ ಚಿನ್ನು ಹೆಸರಿನ ನಾಯಿಮರಿಯನ್ನು ಸಾಕಿದ್ದರು. ಆದರೆ ಅದರ ಸಾವಿ ನೋವಿನ ಬಗ್ಗೆ ಬೇಸರ ಹೊರಹಾಕಿದ್ದಾರೆ. ಅದರೊಂದಿಗೆ ಕಳೆದ ಕ್ಷಣವನ್ನು ಫೋಟೋದ ಮೂಲಕ ಹಂಚಿಕೊಂಡಿದ್ದಾರೆ.

    'ದೇವರ ಬೆರಳುಗಳು ಆತನನ್ನು ಸ್ಪರ್ಶಿಸಿವೆ, ಆತನೀಗ ನಿದ್ರಿಸಿದ್ದಾನೆ' ಎಂಬ ಎಮೋಶನಲ್ ಸ್ಟೇಟ್‌ಮೆಂಟ್ ಹಾಕಿದ್ದಾರೆ. ಜೊತೆಗೆ 'ಕ್ಷಮಿಸಿ ಅವನ ಅಗಲಿಕೆ ಬಗ್ಗೆ ಹೇಳಿಲ್ಲ, ಕೆಲವೊಮ್ಮೆ ನೋವನ್ನು ಕೂಡ ಮುಚ್ಚಿಡುವಷ್ಟು ಸ್ವಾಮಿತ್ವ ನಮ್ಮನ್ನು ಆವರಿಸುತ್ತವೆ' ಎಂದೂ ಅನುಶ್ರೀ ಇನ್​ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.

    ಅನುಶ್ರೀ ಅವರ ಮುದ್ದಿನ ಚಿನ್ನು ನಾಯಿ ಯಾವಾಗ ಸಾವನ್ನಪ್ಪಿದೆ ಎಂದು ತಿಳಿದಿಲ್ಲ. ಆದರೆ ಅದರೊಂದಿಗಿನ ಒಡನಾಟ ಮತ್ತು ಕಳೆದುಕೊಂಡ ನೋವನ್ನು ಅನುಶ್ರೀ ನೇರವಾಗಿ ಸಾಮಾಜಿಕ ಜಾಲತಾಣದ ಮೂಲಕ ತೋರ್ಪಡಿಸಿದ್ದಾರೆ.

    ಪ್ರತಿಭಾವಂತೆ ಆ್ಯಂಕರ್​ ಅನುಶ್ರೀ

    ಕರಾವಳಿ ಮೂಲದ ಅನುಶ್ರೀ ಸದ್ಯ ಕರ್ನಾಟಕದ ಪ್ರತಿಭಾವಂತ ಆ್ಯಂಕರ್​ ಆಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೆ ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆ ಖಾಸಗಿ ಕಾರ್ಯಕ್ರಮದ ಜೊತೆಗೆ ಜನಪ್ರಿಯ ಟಿವಿ ಶೋಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರಾರಂಭದಲ್ಲಿ ಪ್ರಾದೇಶಿಕ ಚಾನೆಲ್​ನಲ್ಲಿ ಆ್ಯಂಕರಿಂಗ್​ ಮಾಡುತ್ತಿದ್ದವರು, ತಮ್ಮ ಶ್ರಮ ಮತ್ತು ಪ್ರತಿಫಲದ ಮೂಲಕ ಸ್ಟೇಟ್​ ಲೆವೆಲ್​ ಚಾನೆಲ್​ನಲ್ಲಿ ಆ್ಯಂಕರ್​ ಆಗಿ ಗುರುತಿಸಿಕೊಳ್ಳುವಂತೆ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ.

    ಇದನ್ನು ಓದಿ:Duniya Vijay: ಸ್ಯಾಂಡಲ್ವುಡ್ ಸಲಗನಿಗೆ 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

    ವೇಗವಾಗಿ ಮತ್ತು ಪ್ರೇಕ್ಷಕರನ್ನು ನಗಿಸುತ್ತಾ ಆ್ಯಂಕರಿಂಗ್​ ಮಾಡುವ ಅನುಶ್ರೀ ಅವರು ಶೂಟಿಂಗ್​ ಸಮಯದಲ್ಲಿ ರೀಟೇಕ್​ ತೆಗೆದುಕೊಳ್ಳುವುದು ತೀರಾ ಕಡಿಮೆ. ಪಟ ಪಟ ಅಂತ ಮಾತನಾಡುತ್ತಾ ಎಲ್ಲರನ್ನು ನಗೆಗಡಲಲಲ್ಲಿ ತೇಳಿಸುವ ಕೌಶಲ್ಯ ಅವರಿಗೆ. ಅಷ್ಟು ಮಾತ್ರವಲ್ಲದೆ ಕೆಲವೊಂದು ಸನ್ನಿವೇಶಗಳನ್ನು ಲೀಲಾಜಾಲವಾಗಿ ನಿಭಾಯಿಸುತ್ತಾರೆ.






    ಕಂಬನಿ ಹಾಕಿದ ಅನುಶ್ರೀ

    ಅನಿಶ್ರೀ ನಗು ನಗುತ್ತಾ ಆ್ಯಂಕರ್​ ಮಾಡುವುದುರ ಜೊತೆಗೆ ಕೆಲವೊಂದು ಎಮೋಷನಲ್​ ಸನ್ನಿವೇಶಗಳು ಬಂದಾಗ ಕಣ್ಣೀರು ಸುರಿಸಿದ್ದು ಇದೇ. ಖ್ಯಾತ ನಟ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅವರು ಅನುಶ್ರೀ ಅವರ ಫೇವರೇಟ್​ ಆ್ಯಕ್ಟರ್​. ಆದರೆ ಫೇವರೇಟ್​ ಆ್ಯಕ್ಟರ್​ ಸಾವನ್ನಪ್ಪಿದ್ದಾಗ ಅನುಶ್ರೀ ಅವರು ವೇದಿಕೆ ಮೇಲೆ ಕಣ್ಣೀರು ಸುರಿಸಿದ್ದರು. ಮಾತ್ರವಲ್ಲದೆ ನೆಚ್ಚಿನ ನಟನ ಸಾವಿನ ಬಗ್ಗೆ ಬೇಸರ ಮಾತುಗಳನ್ನು ತೋಡಿಕೊಂಡಿದ್ದರು.

    ಇದನ್ನು ಓದಿ: Dhanush Aishwarya: ಇದು ಮಾಮೂಲಿ ಗಂಡ-ಹೆಂಡತಿ ಜಗಳ ಅಷ್ಟೇ ಎಂದ ಧನುಷ್ ತಂದೆ. ಮತ್ತೆ ಒಂದಾಗುತ್ತಾ ಜೋಡಿ?

    ಅನುಶ್ರೀ ಸಿನಿಮಾ ಕೈಹಿಡಿಯದೇ ಇದ್ದರು, ನಿರೂಪಕಿಯಾಗಿ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಏನೇ ಆದರು ಸಾಮಾಜಿಕ ಜಾಲತಾಣದಲ್ಲಿ ಅನುಶ್ರೀ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ತಮ್ಮ ಮುದ್ದಿನ ಚಿನ್ನು ನಾಯಿಯ ಅಗಲಿಕೆಯ ನೋವನ್ನು ಹಂಚಿಕೊಂಡಿದ್ದಾರೆ. ಅನೇಕರು ಅವರ ಪೋಸ್ಟ್​ ನೋಡಿ ಬೇಸರದ ಕಾಮೆಂಟ್​ ಬರೆದಿದ್ದಾರೆ.
    Published by:Harshith AS
    First published: