Family Pack ನಿರ್ದೇಶಕನಿಗೆ ಮೆಚ್ಚುಗೆಯ ಮಹಾಪೂರ.. ಅರ್ಜುನ್​ ಕುಮಾರ್​ಗೆ ಟಾಲಿವುಡ್​ನಿಂದ ಬಂತು ಬಿಗ್ ಆಫರ್​​!

ಕನ್ನಡದಲ್ಲಿ ಈ ವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ. ಈ ನಡುವೆ ನಿರ್ದೇಶಕ ಅರ್ಜುನ್ ಕುಮಾರ್(Director Arjun Kumar) ಅವರ ಕೆಲಸಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲ, ಸೌತ್​ ಸಿನಿ ಇಂಡಸ್ಟ್ರಿ(South Cini Industry(ಯ ಹಲವು ದಿಗ್ಗಜರಿಂದಲೂ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ.

ನಿರ್ದೇಶಕ ಅರ್ಜುನ್​ ಕುಮಾರ್​

ನಿರ್ದೇಶಕ ಅರ್ಜುನ್​ ಕುಮಾರ್​

  • Share this:
ಪಿಆರ್​ಕೆ ಬ್ಯಾನರ್​(PRK Banner)ನಲ್ಲಿ ನಿರ್ಮಾಣವಾಗಿರುವ ‘ಫ್ಯಾಮಿಲಿ ಪ್ಯಾಕ್’(Family Pack) ಸಿನಿಮಾ ಫೆ. 16ರಂದು ಅಮೆಜಾನ್ ಪ್ರೈಂ(Amazon Prime) ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಇದಷ್ಟೇ ಅಲ್ಲ ಅಮೆಜಾನ್ ಪ್ರೈಂನಲ್ಲಿ ನ್ಯಾಶನಲ್ ಟ್ರೆಂಡಿಂಗ್​​(National Trenidng)ನಲ್ಲಿ ಚಿತ್ರ ಏಳನೇ ಸ್ಥಾನ ಪಡೆದಿದೆ. ಕನ್ನಡದಲ್ಲಿ ಈ ವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ. ಈ ನಡುವೆ ನಿರ್ದೇಶಕ ಅರ್ಜುನ್ ಕುಮಾರ್(Director Arjun Kumar) ಅವರ ಕೆಲಸಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲ, ಸೌತ್​ ಸಿನಿ ಇಂಡಸ್ಟ್ರಿ(South Cini Industry(ಯ ಹಲವು ದಿಗ್ಗಜರಿಂದಲೂ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ. ಲಿಖಿತ್ ಶೆಟ್ಟಿ(Likith Shetty), ಅಮೃತಾ ಅಯ್ಯಂಗಾರ್(Amrutha Iyengar)ನಾಯಕ, ನಾಯಕಿಯಾಗಿ ನಟಿಸಿರುವ ಈ ಸಿನಿಮಾಕ್ಕೆ ತಮಿಳಿನ ರಜನಿಕಾಂತ್(Rajinikanth) ಅವರ ಪಿಆರ್​ಒ(PRO_ ಆಗಿರುವ ರಿಯಾಜ್ ಕೆ ಅಹ್ಮದ್ ಅವರು ಗುಡ್ ಜಾಬ್ ಅರ್ಜುನ್ ಕುಮಾರ್ ಮತ್ತು ಪಿಆರ್​ಕೆ ಸಂಸ್ಥೆ ಆಯ್ಕೆಯೂ ಅಷ್ಟೇ ಚೆನ್ನಾಗಿದೆ ಎನ್ನುವ ಮೂಲಕ ತಂಡದ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ.

ಫ್ಯಾಮಿಲಿ ಪ್ಯಾಕ್​ ನಿರ್ದೇಶಕನಿಗೆ ಮೆಚ್ಚುಗೆಯ ಮಹಾಪೂರ.

‘ಬಾಹುಬಲಿ’ ಮತ್ತು ‘ಆರ್​ಆರ್​ಆರ್’ ಸಿನಿಮಾ ತಂಡದ ಜತೆ ಗುರುತಿಸಿಕೊಂಡಿರುವ ವಂಶಿ ಕಾಕಾ ಮಜವಾದ ಸ್ಕ್ರಿಪ್ಟ್ ಮತ್ತು ಅದನ್ನು ಹೇಳಿರುವ ರೀತಿಯೂ ಅಷ್ಟೇ ಸರಳವಾಗಿದೆ ಎಂದಿದ್ದಾರೆ. ಸೌತ್ ಸಿನಿ ದುನಿಯಾದ ಇನ್ಫೂಯೆನ್ಸರ್ ರಮೇಶ್ ಬಾಲ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಅರ್ಜುನ್ ಕುಮಾರ್ ಒಂದೊಳ್ಳೆ ಮನರಂಜನಾತ್ಮಕ ಚಿತ್ರವನ್ನೇ ನೀಡಿದ್ದಾರೆ ಎಂದಿದ್ದಾರೆ.

ಟಾಲಿವುಡ್​ನಿಂದ ಅರ್ಜುನ್​ ಕುಮಾರ್​ಗೆ ಬುಲಾವ್​!

ಇದಷ್ಟೇ ಅಲ್ಲು ಅರ್ಜುನ್ ಒಡೆತನದ ಆಹಾ ಓಟಿಟಿ ಮೀಡಿಯಾದ ಪ್ರಣೀತಾ ಸಿನಿಮಾ ನೋಡಿ, ಸ್ವತಃ ನಿರ್ದೇಶಕರನ್ನೇ ಹೈದರಾಬಾದ್​ಗೆ ಆಹ್ವಾನ ನೀಡಿದ್ದಾರೆ. ವಿಜಯ್ ದೇವರಕೊಂಡ ಅವರ ಪಿಆರ್​ಒ ಆಗಿರುವ ಸುರೇಶ್ ಕೊಂಡ, ತೆಲುಗಿನಲ್ಲಿಯೂ ಈ ಸಿನಿಮಾ ಮಾಡುವಂತೆ, ಇಲ್ಲಿನ ಮಾರುಕಟ್ಟೆಗೆ ಈ ಥರದ ಸಿನಿಮಾಗಳು ಬೇಕಿವೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತೆ ಡೈರೆಕ್ಟರ್​ ಕ್ಯಾಪ್​ ತೊಟ್ಟ ಸ್ಯಾಂಡಲ್​ವುಡ್ `ಸಲಗ’, ಶಿವರಾತ್ರಿಗೆ ಟೈಟಲ್​ ಲಾಂಚ್​!

ಈವರೆಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ ಆಗಿವೆ. ಆದರೆ, ಸಿನಿಮಾದ ಜತೆಗೆ ನಿರ್ದೇಶಕರಿಗೆ ಈ ಮಟ್ಟದ ಮೆಚ್ಚುಗೆ ಸಿಕ್ಕಿರಲಿಲ್ಲ. ಇದೀಗ ಫ್ಯಾಮಿಲಿ ಪ್ಯಾಕ್ ಚಿತ್ರದಿಂದ ನಿರ್ದೇಶಕ ಅರ್ಜುನ್ ಕುಮಾರ್ ಅವರನ್ನು ಬೇರೆ ಬೇರೆ ಇಂಡಸ್ಟ್ರಿಯವರೂ ಗುರುತಿಸುತ್ತಿದ್ದಾರೆ.

ತೆಲುಗಿನ 2 ಚಿತ್ರ ನಿರ್ಮಾಣ ಸಂಸ್ಥೆಯಿಂದ ಬಿಗ್​ ಆಫರ್​!

ವಿಶೇಷ ಏನೆಂದರೆ ತೆಲುಗಿನ ಎರಡು ಚಿತ್ರ ನಿರ್ಮಾಣ ಸಂಸ್ಥೆಗಳು ಅರ್ಜುನ್​ಗೆ ಸಿನಿಮಾ ಅವಕಾಶವನ್ನೂ ನೀಡಿವೆಯಂತೆ. ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ, ಮಾತುಕತೆಗಳು ನಡೆಯುತ್ತಿವೆ. ಆದರೆ, ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಈಗಲೇ ಅದೆಲ್ಲವನ್ನು ನಾನು ರಿವೀಲ್ ಮಾಡುವುದಿಲ್ಲ. ಸದ್ಯ ಪಿಆರ್​ಕೆ ಸಂಸ್ಥೆ ವತಿಯಿಂದ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅದೇ ಖುಷಿಯ ವಿಚಾರ ಎಂಬುದು ಅವರ ಮಾತು.

ಇದನ್ನೂ ಓದಿ: ನಿಮ್ಮ ಅಂಗಡಿ ಉದ್ಘಾಟನೆಗೆ ಸಮಂತಾ ಬರ್ಬೇಕಾ? ಇಷ್ಟು ಹಣ ರೆಡಿ ಇಟ್ಕೊಳಿ, ಪಕ್ಕಾ ಬರ್ತಾರೆ!

ಪಕ್ಕಾ ಕೌಟುಂಬಿಕ ಸಿನಿಮಾ ‘ಫ್ಯಾಮಿಲಿ ಪ್ಯಾಕ್​’

ಶೀರ್ಷಿಕೆ ನೋಡಿ ಇದೊಂದು ಡಬಲ್ ಮೀನಿಂಗ್ ಇರುವಂತಹ ಸಿನಿಮಾ ಎದೆನಿಸಬಹುದು. ಆದರೆ ಇದೊಂದು ಪಕ್ಕಾ ಕೌಟುಂಬಿಕ ಸಿನಿಮಾ ಎಂದು ತಂಡ ಹೇಳಿಕೊಂಡಿದೆ. ಪಿಆರ್​ಆಕೆ ಸಿನಿಮಾ ಸಂಸ್ಥೆ ವಜ್ರೇಶ್ವರಿ ಸಂಸ್ಥೆ ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯಲಿದೆ. ಆ ಸಂಸ್ಥೆ ಸಾಗಿ ಬಂದ ರೀತಿಯಲ್ಲಿಯೇ ಮನರಂಜನಾತ್ಮಕ ಸಿನಿಮಾಗಳನ್ನು ನೀಡುವುದು ಸಂಸ್ಥೆಯ ಉದ್ದೇಶ
Published by:Vasudeva M
First published: