• Home
  • »
  • News
  • »
  • entertainment
  • »
  • Weekend Planner: ರೈಡರ್ ವರ್ಸಸ್ ರೇಮೊ, ಸಿನಿಪ್ರಿಯರಿಗೆ ಈ ವಾರ ಡಬಲ್ ರಸದೌತಣ!

Weekend Planner: ರೈಡರ್ ವರ್ಸಸ್ ರೇಮೊ, ಸಿನಿಪ್ರಿಯರಿಗೆ ಈ ವಾರ ಡಬಲ್ ರಸದೌತಣ!

ತ್ರಿಬಲ್ ರೈಡರ್ ತ್ರಿಬಲ್ ಧಮಾಕಾ ಸಿನಿಮಾ

ತ್ರಿಬಲ್ ರೈಡರ್ ತ್ರಿಬಲ್ ಧಮಾಕಾ ಸಿನಿಮಾ

ಕನ್ನಡದಲ್ಲಿ ಎರಡು ಸಿನಿಮಾಗಳು ಭಾರೀ ಸದ್ದು ಮಾಡುತ್ತಿವೆ. ಎರಡೂ ಸಿನಿಮಾಗಳ ಜಾನರ್ ಬೇರೆನೆ ಇದೆ. ಎರಡು ಚಿತ್ರದಲ್ಲಿ ಲವ್ ಇದೆ. ಆದರೆ ಹೇಳಿದ ರೀತಿ ಭಿನ್ನ ವಿಭಿನ್ನವಾಗಿಯೇ ಇದೆ. ಈ ಎರಡು ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿವೆ. ಅದರ ವಿವರ ಇಲ್ಲಿದೆ ಓದಿ.

  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​ವುಡ್ (Sandalwood Samachar) ಸಮಾಚಾರ್ ಸೂಪರ್ ಆಗಿದೆ. ಸಿನಿ ಪ್ರೇಕ್ಷಕರಿಗೆ ಈ ಶುಕ್ರವಾರ ಡಬಲ್ ಧಮಾಕಾ ಇದೆ. ತ್ರಿಬಲ್ ರೈಡಿಂಗ್ ಮೂಲಕ ಗೋಲ್ಡನ್ (Golden Star Ganesh) ಸ್ಟಾರ್ ಗಣೇಶ್ ಹೊಸ ರಂಗು ಏರಿಸಲು ಬರ್ತಿದ್ದಾರೆ. ಸಂಗೀತಮಯ ರೇಮೊ (Raymo) ಮೂಲಕ ಆಶಿಕಾ ರಂಗನಾಥ್ ಮತ್ತು ಇಶಾನ್ ಹೊಸ ಸಂಗೀತ ಲೋಕವನ್ನೆ ಸೃಷ್ಟಿಸಿದ್ದಾರೆ. ಈ ಎರಡು (Two Film Release) ಸಿನಿಮಾಗಳಲ್ಲಿ ಯಾವುದೇ ರೀತಿಯ ಸಾಮ್ಯತೆ ಇಲ್ಲ. ಎರಡು ಸಿನಿಮಾಗಳು ವಿಭಿನ್ನವಾಗಿಯೇ ಇವೆ. ಇವುಗಳು ತಮ್ಮದೇ ರೀತಿಯಲ್ಲಿ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿವೆ. ಇದನ್ನ ನೋಡ್ತಾ ಹೋದ್ರೆ, ಎರಡು ಸಿನಿಮಾ ಜನಕ್ಕೆ ಇಷ್ಟ ಆಗೋ ಸಾಧ್ಯೆ ಇದೆ. ಇದರ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.


ಸಿನಿಮಾ ಬರ್ತಿವೆ ಹೋಗ್ತಾ ಇವೆ-ಯಾವುದು ನಿಲ್ತಾನೆ ಇಲ್ಲ


ಕನ್ನಡದಲ್ಲಿ ಸಿನಿಮಾ ಬರ್ತಾನೇ ಇವೆ. ವಾರಕ್ಕೆ ನಾಲ್ಕೈದು ಸಿನಿಮಾಗಳು ರಿಲೀಸ್ ಆಗುತ್ತಿವೆ. ವಾರ ಕಳೆಯೋದ್ರೊಳಗೆ ಥಿಯೇಟರ್​​ನಿಂದಲೇ ಸಿನಿಮಾ ಹೋಗಿ ಬಿಡುತ್ತವೆ.
ಸಿನಿಮಾಗಳ ಫ್ಲೋ ಜಾಸ್ತಿ ಆಗಿದೆ.


ವಾರ ವಾರಕ್ಕೂ ಇವುಗಳ ರಿಲೀಸ್ ಲೆಕ್ಕ ಹೆಚ್ಚಾಗುತ್ತಿದೆ. ಇವುಗಳನ್ನ ನೋಡ್ತಾ ಹೋದ್ರೆ, ಸಿನಿಮಾಗಳು ಥಿಯೇಟರ್ ನಲ್ಲಿ ನಿಲ್ತವೆಯೇ ಅನ್ನೋ ಅನುಮಾನವೂ ವಾರ ವಾರಕ್ಕೂ ಮೂಡುತ್ತಲೇ ಇವೆ. ಆದರೆ ಈ ವಾರ ಬರ್ತಿರೋ ಸಿನಿಮಾಗಳು ಥಿಯೇಟರ್​​ನಲ್ಲಿ ನಿಲ್ಲುತ್ತವೆ ಅನ್ನೋ ನಂಬಿಕೆ ಮೂಡಿಸಿವೆ.


Kannada Expected two films are going to release this Friday
ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಸಂಗೀತದ ರೇಮೊ


ತ್ರಿಬಲ್ ರೈಡರ್ ತ್ರಿಬಲ್ ಧಮಾಕಾ ಸಿನಿಮಾ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಎಂಟರ್​ಟೈನಿಂಗ್ ಆಗಿದೆ. ಸಿನಿಮಾದ ಟ್ರೈಲರ್ ಆ ಒಂದು ಭರವಸೆಯನ್ನ ಮೂಡಿಸಿದೆ. ಈ ಸಿನಿಮಾದಲ್ಲಿ ಒಬ್ಬರಲ್ಲ ಇಬ್ಬರಲ್ಲ ಮೂವರು ನಾಯಕಿಯರು ಅಭಿನಯಿಸಿದ್ದಾರೆ.


ಅದಿತಿ ಪ್ರಭುದೇವಾ, ಮೇಘಾ ಶೆಟ್ಟಿ, ರಚನಾ ಇಂದರ್ ಹೀಗೆ ಕನ್ನಡದ ನಟಿಯರೇ ಇಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಿರ್ವಹಿಸಿರೋ ರಾಮನ ಪಾತ್ರದ ಜೊತೆಗೆ ಅಭಿನಯಸಿದ್ದಾರೆ. ನಿರ್ದೇಶಕ ಮಹೇಶ್ ಗೌಡ ಅವರ ಕಲ್ಪನೆಯಲ್ಲಿ ಬರ್ತಿರೋ ತ್ರಿಬಲ್ ರೈಡರ್ ಪಕ್ಕಾ ಎಂಟರ್ ಟೈನಿಂಗ್ ಸಿನಿಮಾ ಅನ್ನೋ ನಂಬಿಕೆಯನ್ನ ಮೂಡಿಸಿದೆ. ಸಾಯಿ ಕಾರ್ತಿಕ್ ಅವರ ಸಂಗೀತವೂ ಇಲ್ಲಿ ಹೊಸ ಕಿಕ್ ಕೊಡುವಂತೇನೆ ಇದೆ.




ತ್ರಿಬಲ್ ರೈಡರ್ ಎದುರು ರೇಮೊ ಸಿನಿಮಾ ರಿಲೀಸ್
ತ್ರಿಬಲ್ ರೈಡರ್ ಸಿನಿಮಾದ ಎದುರು ಇನ್ನೂ ಒಂದು ಸಿನಿಮಾ ಕೂಡ ಇದೆ. ಇದು ಈಗಾಗಲೇ ತನ್ನ ಕಂಟೆಂಟ್ ನಿಂದಲೇ ಗಮನ ಸೆಳೆದಿದೆ. ಚಿತ್ರದ ನಟಿಯ ಸಿನಿಮಾ ವೀಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಧಮಾಕಾನೂ ಮಾಡಿದೆ.


ಹೌದು, ರೇಮೊ ಸಿನಿಮಾ ವಿಶೇಷ ಕಂಟೆಂಟ್ ಹೊಂದಿದೆ. ಸಂಗೀತಮಯ ಸಿನಿಮಾ ಇದಾಗಿದ್ದು, ನಾಯಕ ಮತ್ತು ನಾಯಕಿ ಈ ಚಿತ್ರದಲ್ಲಿ ಗಾಯಕ-ಗಾಯಕಿ ಪಾತ್ರದ ಮೂಲಕ ಸಂಗೀತಮಯ ಲೋಕವನ್ನೆ ಸೃಷ್ಟಿಸಿದ್ದಾರೆ.


ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಸಂಗೀತದ ರೇಮೊ
ರೇಮೊ ಸಂಗೀತದ ಸಿನಿಮಾನೇ ಆಗಿದೆ. ನಾಯಕ ಇಶಾನ್ ಈ ಚಿತ್ರದಲ್ಲಿ ಹೆಸರಾಂತ ಗಾಯಕನ ರೋಲ್​ ಅಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಆಶಿಕಾ ರಂಗನಾಥ್ ಕೂಡ ಈ ಗಾಯಕನ ವಿರುದ್ದ ಗೆದ್ದು ಬೀಗುವ ರೋಲ್​ ನಲ್ಲಿಯೇ ಮಿಂಚುತ್ತಿದ್ದಾರೆ.


Kannada Expected two films are going to release this Friday
"ಸದ್ದು ವಿಚಾರಣೆ ನಡೆಯುತ್ತಿದೆ" ಕೂಡ ಈ ವಾರ ರಿಲೀಸ್


ಹೀಗೆ ತನ್ನ ಟ್ರೈಲರ್ ಮತ್ತು ಟೀಸರ್ ಮೂಲಕ ಹೆಚ್ಚು ಭರವಸೆ ಮೂಡಿಸಿರೋ ಈ ಚಿತ್ರವನ್ನ, ಡೈರೆಕ್ಟರ್ ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ಒಂದು ಒಳ್ಳೆ ಕಂಟೆಂಟ್ ನೊಂದಿಗೆ ಈ ಬಾರಿಯೂ ಸಿನಿಮಾ ಮಾಡಿದ್ದಾರೆ ಅನ್ನೋ ಭರವಸೆ ಕೂಡ ಮೂಡಿಸಿದ್ದಾರೆ.


"ಸದ್ದು ವಿಚಾರಣೆ ನಡೆಯುತ್ತಿದೆ" ಕೂಡ ಈ ವಾರ ರಿಲೀಸ್
ಈ ಎರಡು ಸಿನಿಮಾದ ಜೊತೆಗೆ ಇನ್ನೂ ಒಂದು ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. "ಸದ್ದು ವಿಚಾರಣೆ ನಡೆಯುತ್ತಿದೆ" ಅನ್ನುವ ಈ ಸಿನಿಮಾದಲ್ಲಿ ಹೊಸಬರು ಇದ್ದಾರೆ. ಹಳಬರೂ ಇದ್ದಾರೆ. ಭಾಸ್ಕರ್ ಆರ್.ರಾವ್ ನಿರ್ದೇಶನದ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಪೊಲೀಸ್ ಆಫೀಸರ್ ಕ್ಯಾರೆಕ್ಟರ್ ಮಾಡಿದ್ದಾರೆ.


ಭಾಸ್ಕರ್ ಆರ್​.ರಾವ್ ಅವರ ಈ ಮೊದಲ ಸಿನಿಮಾದಲ್ಲಿ ನಟಿ ಪಾವನಾ ಗೌಡ, ರಾಕೇಶ್ ಮಯ್ಯ, ಮಧುನಂದನ್ ಅಭಿನಯಿಸಿದ್ದಾರೆ. ಇದು ತನ್ನ ಟೈಟಲ್ ನಿಂದಲೇ ಗಮನ ಸೆಳೆಯುತ್ತಿದೆ.


ಇದನ್ನೂ ಓದಿ: Rashmika-Vijay Deverakonda: ಗುಟ್ಟಾಗಿ ಮದುವೆ ಆದ್ರಾ ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ? ಫೋಟೋ ಅಸಲಿಯತ್ತು ಏನು?


ಇದರ ಕಂಟೆಂಟ್ ಕೂಡ ಸ್ಟ್ರಾಂಗ್ ಇರೋ ಹಾಗೆ ಕಾಣುತ್ತಿದೆ. ಆ ನಂಬಿಕೆಯನ್ನ ಟ್ರೈಲರ್ ಮೂಡಿಸಿದೆ. ಉಳಿದಂತೆ ಕನ್ನಡ ಸಿನಿ ಪ್ರೇಮಿಗಳಿಗೆ ಈ ಶುಕ್ರವಾರ ಒಳ್ಳೆ ಕಂಟೆಂಟ್​​ನ ರಸದೌತಣ ಸಿಗೋ ಭರವಸೆ ಮೂಡಿದೆ.

First published: