• Home
  • »
  • News
  • »
  • entertainment
  • »
  • Zee Picchar: 2ನೇ ವರ್ಷದ ಸಂಭ್ರಮದಲ್ಲಿ ಜೀ ಪಿಚ್ಚರ್​​​, ವೀಕ್ಷಕರಿಗೆ ಕೊಡಲಿದೆ ಕೆಜಿಎಫ್​-2 ಪ್ರೀಮಿಯರ್​​ ಗಿಫ್ಟ್​!

Zee Picchar: 2ನೇ ವರ್ಷದ ಸಂಭ್ರಮದಲ್ಲಿ ಜೀ ಪಿಚ್ಚರ್​​​, ವೀಕ್ಷಕರಿಗೆ ಕೊಡಲಿದೆ ಕೆಜಿಎಫ್​-2 ಪ್ರೀಮಿಯರ್​​ ಗಿಫ್ಟ್​!

2ನೇ ವರ್ಷದ ಸಂಭ್ರಮದಲ್ಲಿ ಜೀ ಪಿಚ್ಚರ್​

2ನೇ ವರ್ಷದ ಸಂಭ್ರಮದಲ್ಲಿ ಜೀ ಪಿಚ್ಚರ್​

ಶುರುವಿನಲ್ಲೇ ಭರ್ಜರಿ 12 ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌(12 World Television Premier), ದಿನಕ್ಕೊಂದು ಒನ್‌ ಬ್ರೇಕ್‌ ಪಿಚ್ಚರ್‌(One Break Pictur)ಗಳ ಮೂಲಕ ನಂ.2 ಸ್ಥಾನಕ್ಕೇರಿ ಇಂದಿಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಹೆಸರಾಗಿ ಉಳಿದು ಬಿಟ್ಟಿದೆ.

  • Share this:

ರಾಜನ ಹಿಂದೆಯೆ ರಾಜ ಬೀದಿಯಲ್ಲಿ ನಡೆದರೆ ರಾಜ ಮರ್ಯಾದೆನೇ ಸಿಗುತ್ತೆ, ಅನ್ನುವುದಕ್ಕೆ ಉತ್ತಮ ಉದಾಹರಣೆ ಎಂದರೆ ಅದು ಜೀ ಪಿಚ್ಚರ್(Zee Picchar). ಕನ್ನಡಿಗರ ಪ್ರೀತಿ ಅಭಿಮಾನದ ಹಾದಿಯಲ್ಲಿ ಸಾಗುತ್ತಿರುವ ಜೀ ಕನ್ನಡ(Zee Kannada)ದ ಕೈ ಹಿಡಿದು ನಡೆಯುತ್ತಿರುವ ಜೀ ಪಿಚ್ಚರ್ ಇದೀಗ ತನ್ನ ಎರಡನೇ ವರ್ಷದ ಹುಟ್ಟು ಹಬ್ಬವನ್ನು(2nd Birthday) ಆಚರಿಸಿಕೊಳ್ಳುತ್ತಿದೆ. ಕನ್ನಡದ ಎಂಟರ್‌ಟೈನ್‌ಮೆಂಟ್‌ ಇಂಡಸ್ಟ್ರಿ(Kannada Entertainment Industry)ಯ ನಂ.1 ಪಟ್ಟದಲ್ಲಿ ಪಡೆದ ದಿನದಿಂದ ಇಂದಿನವರೆಗೂ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಜೀ ಕನ್ನಡದ ಹೆಮ್ಮೆಯ ಭಾಗವಾಗಿದೆ ಜೀ ಪಿಚ್ಚರ್. ಶುರುವಿನಲ್ಲೇ ಭರ್ಜರಿ 12 ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌(12 World Television Premier), ದಿನಕ್ಕೊಂದು ಒನ್‌ ಬ್ರೇಕ್‌ ಪಿಚ್ಚರ್‌(One Break Pictur)ಗಳ ಮೂಲಕ ನಂ.2 ಸ್ಥಾನಕ್ಕೇರಿ ಇಂದಿಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಹೆಸರಾಗಿ ಉಳಿದು ಬಿಟ್ಟಿದೆ.


‘ಜೀ ಪಿಕ್ಚರ್​’ಗೆ ಎರಡನೇ ವರ್ಷದ ಸಂಭ್ರಮ!


ಲಾಕ್‌ಡೌನ್‌ ಟೈಮ್‌ನಲ್ಲಿ ಕನ್ನಡಿಗರು ಹೆಚ್ಚು ಇಷ್ಟ ಪಟ್ಟು ನೋಡಿದ ಪಿಚ್ಚರ್‌ ಚಾನೆಲ್‌ ವೀಕ್ಷಕರ ಅಭಿರುಚಿಯ ತಕ್ಕಂತ ಪಿಚ್ಚರ್ ಗಳನ್ನು ನೀಡುತ್ತಾ ಪ್ರತಿ ಮನೆಯ ಸಂಬಂಧಗಳನ್ನು ಸಂಭ್ರಮಿಸುವ , ಬಂಧಗಳನ್ನ ಬಿಗಿಯಾಗಿಸುವ ಮಹತ್ವದ ಕಾರ್ಯ ಮಾಡಿದೆ. ಪ್ರತಿ ಪಿಚ್ಚರ್‌ ಅನ್ನೂ ಭಿನ್ನ ಭಿನ್ನ ರೂಪದಲ್ಲಿ ನೋಡುಗರ ಮನೆಗೆ ತಲುಪಿಸಿ, ಮತ್ತೆ ಮತ್ತೆ ಕನ್ನಡದ ಬೆಸ್ಟ್‌ ಪಿಚ್ಚರ್‌ಗಳನ್ನ ನೋಡುವಂತೆ ಮಾಡಿದ ಹಿರಿಮೆ ಜೀ ಪಿಚ್ಚರ್‌ ನದ್ದು.


ಮನರಂಜನೆಯಲ್ಲಿ ಜೀ ಪಿಚ್ಚರ್​ ಸದಾ ಮುಂದೆ!


ವರನಟ ಡಾ.ರಾಜ್‌ಕುಮಾರ್​ ಅವರ ಕಪ್ಪು ಬಿಳುಪು ಸಿನಿಮಾಗಳ ಸಾಮ್ರಾಜ್ಯದಿಂದ ಹಿಡಿದು, ಇತ್ತಿಚೆಗೆ ತೆರೆಗೆ ಬಂದ ಬ್ಲಾಕ್‌ ಬಸ್ಟರ್‌ ಹಾಗೂ ಹೊಸಬರ ಬೆಸ್ಟ್‌ ಪ್ರಯತ್ನಗಳನ್ನ ಜನರಿಗೆ ತಲುಪಿಸಿ, ತನ್ನ ಮನರಂಜನೆಯ ವ್ಯಾಪ್ತಿ ಎಷ್ಟು ವಿಶಾಲವಾಗಿದೆ ಅನ್ನೋದನ್ನ ತೋರಿಸಿಕೊಟ್ಟಿದೆ ಜೀ ಪಿಚ್ಚರ್‌. ಕನ್ನಡಿಗರ ನೆಚ್ಚಿನ ವಾಹಿನಿ ಜೀ-ಕನ್ನಡ, ಹೆಮ್ಮೆಯಿಂದ ಕನ್ನಡ ಸಿನಿರಸಿಕರಿಗಾಗಿ ನೀಡಿದ ಅಪ್ಪಟ ಪಿಚ್ಚರ್‌ಗಳ ವಾಹಿನಿ ʻಜೀ ಪಿಚ್ಚರ್‌ʼ 2020 ಮಾರ್ಚ್‌ 1ನೇ ತಾರೀಖು ಪ್ರಸಾರ ಆರಂಭಿಸಿತ್ತು.


ಇದನ್ನೂ ಓದಿ: ಕಿರುತೆರೆ ನಟಿ ಕಾವ್ಯಾ ಗೌಡ ಫೋನಿನಲ್ಲಿ ಏನೇನಿದೆ ಗೊತ್ತಾ? ಗಂಡನ ಹೆಸರನ್ನ ಹೀಗೂ ಸೇವ್ ಮಾಡ್ಕೊತಾರಾ?


ಕನ್ನಡದ ನಂ.1 ಎಂಟರ್‌ಟೈನ್‌ಮೆಂಟ್‌ ಚಾನೆಲ್‌ ಜೀ ಕನ್ನಡದ ಕೊಡುಗೆಯಾಗಿದ್ದಿರಿಂದ, ನಿರೀಕ್ಷೆಗಳು ಅಗಾಧವಾಗಿದ್ವು, ಪ್ರೇಕ್ಷಕರ ನಿರೀಕ್ಷೆಯಂತೆ, ವಿಭಿನ್ನ ಹಾಗು ಅಪರೂಪದ ಪಿಚ್ಚರ್‌ಗಳ ಮೂಲಕ ಎಂಟರ್‌ಟೈನ್‌ ಮಾಡಲು ಶುರು ಮಾಡಿತು ಜೀ ಪಿಚ್ಚರ್‌.
ಆರಂಭದಿಂದ ಇಂದಿನವರೆಗೂ ಕನ್ನಡದ ಸಿನಿಮಾ ಚಾನೆಲ್‌ಗಳ ಪಟ್ಟಿಯಲ್ಲಿ ನಂ.2 ನೇ ಸ್ಥಾನಕ್ಕೇರಿದ ಜೀ ಪಿಚ್ಚರ್‌, ಅಲ್ಲೇ ಗಟ್ಟಿಯಾಗಿ ನೆಲೆಯೂರಿದೆ. ಪ್ರತಿದಿನ ಬರೀ ಸಿನಿಮಾಗಳನ್ನ ಪ್ರಸಾರ ಮಾಡದೇ, ಪ್ರತಿ ವಾರ ಹೊಸ ಹೊಸ ಕಾನ್ಸೆಪ್ಟ್‌ಗಳ ಮೂಲಕ ಎಂಟರ್‌ಟೈನ್‌ ಮಾಡ್ತಿದೆ.


8 ವರ್ಲ್ಡ್​​​ ಟೆಲಿವಿಷಿನ್​ ಪ್ರೀಮಿಯರ್​!


ಇದು ಪ್ರೇಕ್ಷಕರನ್ನ ಜೀ ಪಿಚ್ಚರ್‌ ಅನ್ನುಆಯ್ಕೆ ಮಾಡಲು ಪ್ರೇರೇಪಿಸುತ್ತಿದೆ. ಐಪಿಎಲ್‌ ಸಮಯದಲ್ಲಿ ಆಕ್ಷನ್‌ ಪಿಚ್ಚರ್‌ ಲೀಗ್‌, ಕ್ಲಾಸಿಕ್‌ ಪಿಚ್ಚರ್‌ ಲೀಗ್‌, ಫ್ಯಾಮಿಲಿ ಪಿಚ್ಚರ್‌ ಲೀಗ್‌ನಲ್ಲಿ ಹೀಗೆ ವಿಭಿನ್ನ ಬಗೆಯ ಸಿನಿಮಾಗಳನ್ನು ಪ್ರಸಾರ ಮಾಡಿ ಸೈ ಎನಿಸಿಕೊಳ್ಳುತ್ತಿದೆ .ದಸರಾ ಹಬ್ಬದ ಪ್ರಯುಕ್ತ ಸಂಭ್ರಮದ ಹತ್ತೂ ದಿನ 8 ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ಹಾಗೂ 2 ಜೀ ಪಿಚ್ಚರ್‌ ಚಾನೆಲ್‌ ಪ್ರೀಮಿಯರ್‌ ಮೂಲಕ ಮತ್ತೊಂದು ದಾಖಲೆ ಬರೆಯಿತು.


ಹೊಸ ಸಿನಿಮಾಗಳ ಟಿವಿ ರೈಟ್ಸ್​ ಖರೀದಿಸಿರುವ ಜೀ ಪಿಕ್ಚರ್​!


ಇನ್ನು ಈ ವರ್ಷ ಜೀ ಪಿಚ್ಚರ್ ಹಲವಾರು ಚಲನಚಿತ್ರಗಳನ್ನು ಪ್ರೀಮಿಯರ್ ಆಗಿದ್ದರೇ ಇನ್ನೂ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳು ಮಾಡಲು ಸಜ್ಜಾಗಿವೆ ಅವುಗಳಲ್ಲಿ ಕೆ ಜಿ ಎಫ್​ -2 , ಗರುಡ ಗಮನ ವೃಷಭ ವಾಹನ, ವಿಕ್ರಾಂತ್ ರೋಣ ಸೇರಿದಂತೆ ಹೊಸ ಚಲನಚಿತ್ರಗಳನ್ನು ಪ್ರೀಮಿಯರ್ ಮಾಡಲು ಸಜ್ಜಾಗಿದೆ.


ಇದನ್ನೂ ಓದಿ: ಟ್ರೆಂಡ್​ ಸೃಷ್ಟಿಸಿದ `ಟ್ರೇಡ್​ ಮಾರ್ಕ್’ ಸಾಂಗ್​​, ಅಪ್ಪು.. ನಿಮ್ಮನ್ನು ವರ್ಣಿಸೋಕೆ ಪದಗಳೇ ಸಾಲದು!


ಜೀ ಪಿಚ್ಚರ್ ನ ಜನಪ್ರಿಯತೆಯಿಂದ ಕನ್ನಡದ ಮೂವಿ ವಾಹಿನಿಗಳ ಇತಿಹಾಸದಲ್ಲಿ ಮೊದಲ ಬಾರಿಗೆ #ZeePiccharHD ಯ ಶುಭಾರಂಭವಾಗಿದೆ. ಸೆಲೆಬ್ರಿಟಿ ತಾರೆಯರ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಆ ನಟ / ನಟಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಂಚಿಕೆಯ ಪ್ರಸಾರದಿಂದ ವಾಹಿನಿಯ ಘನತೆಯ ಜೊತೆಗೆ ಜನಪ್ರಿಯತೆ ಇನ್ನಷ್ಟು ಹೆಚ್ಚಿದೆ.
ಚಲನಚಿತ್ರ ವಾಹಿನಿಗಳ ಪೈಕಿಯಲ್ಲಿ ಮೊದಲ ಬಾರಿಗೆ ಒಂದು ಚಲನಚಿತ್ರ ವಾಹಿನಿಯು ದೊಡ್ಮನೆ ಪಿಚ್ಚರ್ ವೀಕೆಂಡ್, ಪ್ಯಾಂಟೆಸಿ ವೀಕೆಂಡ್, ಬ್ಲ್ಯಾಕ್ ಅಂಡ್ ವೈಟ್ ವೀಕೆಂಡ್ ಹೀಗೆ ಮುಂತಾದ ವೀಕೆಂಡ್ ಕಾರ್ಯಕ್ರಮಗಳನ್ನು ನೀಡಿದೆ.


ವೀಕ್ಷಕರಿಗೆ ಹಿಟ್​ ದಿನದ ಫೀಲಿಂಗ್​ ನೀಡಲು ಸಜ್ಜು!


ZeePicchar ಪ್ರತಿ ದಿನ ವೀಕ್ಷಕರಿಗೆ ಹಿಟ್ ದಿನದ ಫೀಲಿಂಗ್ ನೀಡಲು ಜೀ಼ ಪಿಚ್ಚರ್ ರೆಡಿ...ಎರಡನೇ ವರ್ಷದ ಸಂಭ್ರಮದಲ್ಲಿರುವ ಜೀ ಪಿಚ್ಚರ್‌ ವಾಹಿನಿಯ ಯಶಸ್ವಿ ಪ್ರದರ್ಶನಕ್ಕೆ ಕಾರಣರಾದ, ನಂ.2 ಸ್ಥಾನಕ್ಕೇರಲು ಜೊತೆಗಿದ್ದು, ನಂ.1 ದಾರಿಯಲ್ಲಿ ಜೊತೆಯಿರುವ ವೀಕ್ಷಕರಿಗೆ, ವಿತರಕರಿಗೆ, ಕೇಬಲ್‌ ಆಪರೇಟರ್‌ಗಳಿಗೆ, ಜಾಹೀರಾತುದಾರರಿಗೆ, ಕನ್ನಡ ಚಿತ್ರರಂಗಕ್ಕೆ, ಮಾಧ್ಯಮ ಮಿತ್ರರಿಗೆ, ಹಿತೈಶಿಗಳಿಗೆ ಮನಃಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದೆ.

Published by:Vasudeva M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು