• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Kannada Classic Movie: ಎಡಕಲ್ಲು ಗುಡ್ಡದ ಮೇಲೆ ಚಿತ್ರಕ್ಕೆ A ಪ್ರಮಾಣ ಪತ್ರ: ಆದರೂ ಸಿನಿಮಾ ಸೂಪರ್ ಹಿಟ್!

Kannada Classic Movie: ಎಡಕಲ್ಲು ಗುಡ್ಡದ ಮೇಲೆ ಚಿತ್ರಕ್ಕೆ A ಪ್ರಮಾಣ ಪತ್ರ: ಆದರೂ ಸಿನಿಮಾ ಸೂಪರ್ ಹಿಟ್!

ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಅಶ್ಲೀಲವಾಗಿತ್ತೇ?

ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಅಶ್ಲೀಲವಾಗಿತ್ತೇ?

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಎಂದೂ ಯಾವುದನ್ನೂಅಶ್ಲೀಲವಾಗಿ ಪರೆದ ಮೇಲೆ ಮೂಡಿಸಲಿಲ್ಲ. ಸಭ್ಯ ಪದ ಬಳಕೆಯಲ್ಲಿ, ಸಭ್ಯ ದೃಶ್ಯದಲ್ಲಿಯೇ ಅಷ್ಟೇ ಪರಿಣಾಮಕಾರಿಯಾಗಿ ಎಲ್ಲವನ್ನೂ ಬೆಳ್ಳಿ ಪರದೆ ಮೇಲೆ ತಂದಿದ್ದಾರೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಒಂದು ಕಾಲದಲ್ಲಿ ಕಾದಂಬರಿ ಓದುವುದನ್ನ ದೊಡ್ಡ (Kannada Classic Movie) ಅಪರಾಧ ಅನ್ನುವ ಸ್ಥಿತಿ ಇತ್ತು. ಅಮ್ಮಂದಿರು ಹೆಣ್ಣುಮಕ್ಕಳು ಕಾದಂಬರಿ ಓದುವುದಕ್ಕೆ ಕುಳಿತರೇ ಬೈದು ಎಬ್ಬಿಸಿ ಬಿಡೋರು, ಇಲ್ಲವೇ ಕಾದಂಬರಿಯನ್ನ ಕಸಿದುಕೊಂಡು ಬಿಡೋರು. ಆದರೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಕಾದಂಬರಿಗಳನ್ನೆ ಸಿನಿಮಾ ಮಾಡಿದರು. ಅದರಿಂದ (Edakallu Guddada Mele) ಮಡಿವಂತರ ಮನಸ್ಸು ಕದಡಿದರು. ಅವರ ಕೆಂಗಣ್ಣಿಗೆ ಗುರಿ ಆದರು. ಪುಟ್ಟಣ್ಣನವರ ರಂಗನಾಯಕಿ ಚಿತ್ರದ ಕಥೆ ಅಸಭ್ಯವಾಗಿಯೇ ಇತ್ತು. ಮಸಣದ ಹೂ ವಿಶೇಷ ಕಥೆಯನ್ನ ಹೊಂದಿತ್ತು. ಪಡವಾರಹಳ್ಳಿ ಪಾಂಡವರು ಸಿನಿಮಾ ಕಥೆನೂ ವಿಶಿಷ್ಠವಾಗಿಯೇ ಬಂದಿತ್ತು. ನಾಗರಹಾವು (Puttanna Kanagal) ಇಡೀ ಕನ್ನಡ ನಾಡಿನಲ್ಲಿ ಕೆಚ್ಚಿನ ಕಿಡಿ ಹಬ್ಬಿಸಿತ್ತು. ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಅನೈತಿಕ ಸಂಬಂಧದ ಚಿತ್ರಣವನ್ನೆ ಕಟ್ಟಿಕೊಟ್ಟಿತ್ತು. ಅಂತಹ ಈ ಚಿತ್ರಕ್ಕೆ ಅಂದು A ಪ್ರಮಾಣ ಪತ್ರವೇ ಬಂದಿತ್ತು.


ಎಲ್ಲೂ ಎಲ್ಲೆ ಮೀರದ ಪುಟ್ಟಣ್ಣನವರ ಎಡಕಲ್ಲು ಗುಡ್ಡದ ಸಿನಿಮಾ


ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಎಂದೂ ಯಾವುದನ್ನೂಅಶ್ಲೀಲವಾಗಿ ಪರೆದ ಮೇಲೆ ಮೂಡಿಸಲಿಲ್ಲ. ಸಭ್ಯ ಪದ ಬಳಕೆಯಲ್ಲಿ, ಸಭ್ಯ ದೃಶ್ಯದಲ್ಲಿಯೇ ಅಷ್ಟೇ ಪರಿಣಾಮಕಾರಿಯಾಗಿ ಎಲ್ಲವನ್ನೂ ಬೆಳ್ಳಿ ಪರದೆ ಮೇಲೆ ತಂದಿದ್ದಾರೆ.


Kannada Edakallu Guddada Mele Movie Interesting Facts
ಎಡಕಲ್ಲು ಗುಡ್ಡದ ಮೇಲೆ ಚಿತ್ರಕ್ಕೆ U ಪ್ರಮಾಣ ಪತ್ರ ಹೇಗೆ ಬಂತು?


ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲೂ ಸಭ್ಯತೆ ಎಲ್ಲೆ ಮೀರದಂತೆ ಪುಟ್ಟಣ್ಣ ಅವರು ಸಿನಿಮಾ ಮಾಡಿದ್ದರು. ಜಯಂತಿ ಮತ್ತು ಚಂದ್ರಶೇಖರ್ ಅವರ ದೃಶ್ಯಗಳನ್ನ ಅಶ್ಲೀಲವಾಗಿ ಎಲ್ಲೂ ತೋರಿಸಲಿಲ್ಲ ಬಿಡಿ. ಅದನ್ನ ನೋಡಿದ್ರೂ ಎಲ್ಲೂ ಬಿ ಗ್ರೇಡ್ ಸಿನಿಮಾ ರೀತಿ ಕಾಣಿಸಲೇ ಇಲ್ಲ.
1973 ರಲ್ಲಿ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ


ಅಷ್ಟು ಅದ್ಭುತವಾಗಿಯೇ ತೆಗೆದಿದ್ದಈ ಚಿತ್ರ 1973 ರಲ್ಲಿ ರಿಲೀಸ್ ಆಗಿತ್ತು. ಎಂ. ರಂಗ ರಾವ್ ಅವರ ಸಂಗೀತದಲ್ಲಿ ಅದ್ಭುತ ಹಾಡುಗಳು ಬಂದಿದ್ದವು. ಅದರಲ್ಲೂ ಈ ಚಿತ್ರದ ವಿರಹ ನೂರು ನೂರು ತರಹ ಅನ್ನೂವ ಹಾಡು ಸೂಪರ್ ಹಿಟ್ ಆಗಿತ್ತು.


ಅಂತಹ ಈ ಚಿತ್ರಕ್ಕೆ ಅಂದು A ಪ್ರಮಾಣ ಪತ್ರವನ್ನ ಕೊಡಲಾಗಿತ್ತು. A ಪ್ರಮಾಣ ಪತ್ರದಲ್ಲಿಯೇ ಚಿತ್ರ ತೆರೆಗೆ ಬಂದದ್ದು ಅಷ್ಟೇ ಸತ್ಯ. ಅಂತಹ ಈ ಚಿತ್ರವನ್ನ ಜನ ಒಪ್ಪಿಕೊಂಡರು. ಇನ್ನು ಕೆಲವರು ಛೀ ಅಂತಲೂ ನೋಡದೆ ಉಳಿದು ಬಿಟ್ಟರು.


ಎಡಕಲ್ಲು ಗುಡ್ಡದ ಮೇಲೆ ಅನ್ನೋದು ಒಂದು ಕಾದಂಬರಿ!


ಆದರೆ ಈ ಚಿತ್ರದ ಕಥೆ ಬೆಳ್ಳಿತೆರೆ ಮೇಲೆ ಬರೋ ಮುಂಚೆ ಒಂದು ಕಾದಂಬರಿ ಆಗಿತ್ತು. ಎಡಕಲ್ಲು ಗುಡ್ಡದ ಮೇಲೆ ಅನ್ನುವ ಹೆಸರಿನ ಕಾಂಬರಿಯಾಗಿಯೇ ಹೆಣ್ಣುಮಕ್ಕಳ ಕೈ ಸೇರಿ ಆಗಿತ್ತು. ಹಾಗೆ ಈ ಕಾದಂಬರಿಯನ್ನ ಭಾರತಿ ಸುತ ಬರೆದಿದ್ದರು.


ಇದೇ ಕಾದಂಬರಿಯ ಕಥೆಯನ್ನೆ ಸಿನಿಮ್ಯಾಟಿಕ್ ರೂಪ ಕೊಟ್ಟು ಪುಟ್ಟಣ್ಣ ಕಣಗಾಲ್ ಬೆಳ್ಳಿ ತೆರೆಗೆ ತಂದಿದ್ದರು. ಮಾಧವಿ ಹೆಸರಿನ ಪಾತ್ರವನ್ನ ಅಭಿನಯದ ಶಾರದೆ ಜಯಂತಿ ಅವರು ನಿರ್ವಹಿಸಿದ್ದರು. ಆರ್ಮಿ ಎಕ್ಸ್ ಕ್ಯಾಪ್ಟನ್ ಪಾತ್ರವನ್ನ ರಂಗ ನಿರ್ವಹಿಸಿದ್ದರು.


ಮಾಧವಿ ವಿರಹ ನೀಗಿಸಿದ ನಂಜುಂಡನ ಕಾಮ-ಪ್ರೇಮದ ಕಥೆ


ಇವರ ಜೀವನದಲ್ಲಿ ಎಲ್ಲವೂ ಸರಿ ಇದ್ರೂ, ಆ ಒಂದು ವಿಷಯದಲ್ಲಿ ಕ್ಯಾಪ್ಟನ್ ಕುಮಾರ್ ವೀಕ್ ಇರುತ್ತಾರೆ. ಅದರ ನಿರೀಕ್ಷೆಯಲ್ಲಿಯೇ ಇರೋ ಮಾಧವಿ ಪಕ್ಕದ ಮನೆ ನಂಜುಂಡ ಪ್ರೇಮದಲ್ಲಿ ಬಿದ್ದು ಹೋಗ್ತಾಳೆ. ಎಲ್ಲವನ್ನೂ ಅರ್ಪಿಸಿಬಿಡ್ತಾಳೆ.


ಇದು ಇಡೀ ಕಥೆಯ ಒಟ್ಟು ತಿರುಳು ಅಂತಲೂ ಹೇಳಬಹುದು. ನಂಜುಂಡಿ ಪಾತ್ರವನ್ನ ಇಲ್ಲಿ ಚಂದ್ರಶೇಖರ್ ನಿರ್ವಹಿಸಿದ್ದರು. ಇನ್ನೂ ಒಂದು ವಿಶೇಷ ಅಂದ್ರೆ, ಪುಟ್ಟಣ್ಣ ಅವರ ಅತಿ ಮೆಚ್ಚಿನ ನಟಿ ಆರತಿ ಕೂಡ ಈ ಚಿತ್ರದಲ್ಲಿದ್ದರು.


ಪುಟ್ಟಣ್ಣನವರ ಚಿತ್ರದಲ್ಲಿ ಆರತಿ ದೇವಕಿ ಆದಳು!


ಜಯಂತಿ ಅವರು ಮಾಧವಿ ಪಾತ್ರವನ್ನ ನಿರ್ವಹಿಸಿದ್ದರೇ, ಆರತಿ ಅವರು ಮಾಧವಿಯ ಸಹೋದರಿ ದೇವಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಕ್ಕನಂತೆ ತಂಗಿಯನ್ನೂ ಬಳಸಲು ನೋಡುವ ನಂಜುಂಡನ ಚಳಿ ಬಿಡಿಸೋದು ಕೂಡ ಇದೇ ದೇವಕಿ ಅನ್ನೋದು ನೋಡುಗರಿಗೆ ಖುಷಿ ಕೊಡುವ ವಿಷಯವೇ ಆಗಿತ್ತು.


Kannada Edakallu Guddada Mele Movie Interesting Facts
ಪುಟ್ಟಣ್ಣನವರ ಚಿತ್ರದಲ್ಲಿ ಆರತಿ ದೇವಕಿ ಆದಳು!


ಇಂತಹ ವಿಶೇಷ ಕಥೆಯ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ A ಪ್ರಮಾಣ ಪತ್ರ ಕೊಟ್ಟಿತ್ತು. ಆದರೆ ಡಿವಿಡಿಗಾಗಿಯೇ ಮರು ಸೆನ್ಸಾರ್ ಮಾಡಲಾಗಿತ್ತು. ಆಗ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಒಂದಷ್ಟು ಕಟ್ಸ್ ಕೊಟ್ಟಿತ್ತು. ಆ ಕಟ್ಸ್ ಮಾಡಿದ ಮೇಲೆ ಚಿತ್ರಕ್ಕೆ U ಪ್ರಮಾಣ ಪತ್ರ ಕೊಟ್ಟರು.


ಎಡಕಲ್ಲು ಗುಡ್ಡದ ಮೇಲೆ ಚಿತ್ರಕ್ಕೆ U ಪ್ರಮಾಣ ಪತ್ರ ಹೇಗೆ ಬಂತು?


ಹಾಗೆ ಕಟ್ಸ್‌ಗಳೊಂದಿಗೇನೆ ಡಿವಿಡಿಯಲ್ಲಿ ಈ ಚಿತ್ರವನ್ನ ಈಗಲೂ ನೋಡಬಹುದು. ಅಂತಹ ಈ ಚಿತ್ರ ಹಿಂದಿಯಲ್ಲೂ ಡಬ್ ಆಯಿತು. ಪ್ರೇಮ್ ಔರ್ ವಾಸನಾ ಅನ್ನೋ ಹೆಸರಲ್ಲಿಯೇ ಎಡಕಲ್ಲು ಗುಡ್ಡದ ಮೇಲೆ ಚಿತ್ರ ಹಿಂದಿಯಲ್ಲೂ ರಿಲೀಸ್ ಆಯಿತು.


ಪುಟ್ಟಣ್ಣನವರ ಸಿನಿಮಾಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಅವರ ರಂಗನಾಯಕಿ ಚಿತ್ರ ಈಗ ನೋಡಿದ್ರೂ ತಾಜಾ ಅನುಭವ ಕೊಡುತ್ತದೆ. ನಾಗರಹಾವು ಸಿನಿಮಾ ಎಲ್ಲರಲ್ಲಿರೋ ಆ ಆ್ಯಂಗ್ರಿ ಯಂಗ್ ಮ್ಯಾನ್‌ಗಳನ್ನ ಜಾಗೃತಿ ಗೊಳಿಸುತ್ತದೆ.


ಪುಟ್ಟಣ್ಣ ಅವರ ಸಿನಿಮಾ ಯಾಕೆ ಇಷ್ಟ ಆಗುತ್ತವೆ ಗೊತ್ತೇ?


ಪುಟ್ಟಣ್ಣ ಅವರು ಸಿನಿಮಾಗಳನ್ನ ಜೀವಿಸುತ್ತಿದ್ದರು. ಅದ್ಭುತ ಅನಿಸೋ ಕಥೆಯೊಳಗೆ ಮುಳುಗಿ ಅದರಲ್ಲಿರೋ ಆ ಜೀವಂತ ಸತ್ವಗಳನ್ನ ಬೆಳ್ಳಿ ಪರದೆ ಮೇಲೆ ಮೂಡಿಸುತ್ತಿದ್ದರು. ಅದಕ್ಕೇ ಅಲ್ವೇ ಅವರನ್ನ ಚಿತ್ರಬ್ರಹ್ಮ ಅಂತ ಕರೆಯುತ್ತಿದ್ದರು.


ಇದನ್ನೂ ಓದಿ: Sathish Ninasam: ಅಮ್ಮನಿಗಾಗಿ ಹಾಡು ಬರೆದ ನೀನಾಸಂ ಸತೀಶ್! ಆ ಗೀತೆ ಬಗ್ಗೆ ಅರ್ಜುನ್ ಜನ್ಯ ಹೇಳಿದ್ದಿಷ್ಟು


ಅದೇ ಪುಟ್ಟಣ್ಣವರ ಸಿನಿಮಾಗಳನ್ನ ನೋಡ್ತಾ ಹೋದ್ರೆ ಬದುಕಿನ ಅಸಲಿ ಸತ್ಯಗಳು ಕಣ್ಣುಂದೆ ಚಿತ್ರ ರೂಪದಲ್ಲಿಯೇ ಬಂದು ಹೋಗುತ್ತವೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು