• Home
  • »
  • News
  • »
  • entertainment
  • »
  • Yogaraj Bhat Audio Viral: ಶಾಂತ ಮನಸ್ಸಿನ ಯೋಗರಾಜ್ ಭಟ್ಟರು ಫುಲ್ ಗರಂ-ರೊಚ್ಚಿಗೆದ್ದು ಉಗಿದು ಉಪ್ಪು ಹಾಕಿದ್ಯಾರಿಗೆ ಗೊತ್ತೇ?

Yogaraj Bhat Audio Viral: ಶಾಂತ ಮನಸ್ಸಿನ ಯೋಗರಾಜ್ ಭಟ್ಟರು ಫುಲ್ ಗರಂ-ರೊಚ್ಚಿಗೆದ್ದು ಉಗಿದು ಉಪ್ಪು ಹಾಕಿದ್ಯಾರಿಗೆ ಗೊತ್ತೇ?

ರೊಚ್ಚಿಗೆದ್ದು ಉಗಿದು ಉಪ್ಪು ಹಾಕಿದ್ಯಾರಿಗೆ? ಗೊತ್ತೇ?

ರೊಚ್ಚಿಗೆದ್ದು ಉಗಿದು ಉಪ್ಪು ಹಾಕಿದ್ಯಾರಿಗೆ? ಗೊತ್ತೇ?

"ನೀನು ಕೆಳಗೆ ಬೀಳ್ತೀಯಾ. ಪರ್ಸ್ನಲಿ, ಪ್ರೋಫೆಸ್ನಲಿ, ಸೆಕ್ಸಿಯೋಲಿ ಹೀಗೆ ಬಿದ್ದು ಹಾಳಾಗಿ ಹೋಗ್ತೀಯಾ" ಅಂತಲೇ ಭಟ್ಟರು ಹಿಗ್ಗಾ-ಮುಗ್ಗಾ ಬೈದು ಹಾಕಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಇಂಡಸ್ಟ್ರಿಯಲ್ಲಿ (Kannada Film Industry) ಎಲ್ಲವೂ ಚೆನ್ನಾಗಿದೆಯೇ? ಇಲ್ಲ. ಯೋಗರಾಜ್ ಭಟ್ಟರ ಆಡಿಯೋ (Yogaraj Bhat Audio Viral) ಒಂದು ವೈರಲ್ ಆಗಿದೆ. ಇದನ್ನ ಕೇಳಿದ್ರೆ ಒಮ್ಮೆ ಕಿವಿ ಮುಚ್ಚಿಕೊಳ್ಳಬೇಕು. ಕಿರಿತೆರೆ ಮತ್ತು ಹಿರಿತೆರೆಯ ನಡುವಿನ ಸಂಬಂಧದ ಕಥೆಯನ್ನೆ ಯೋಗರಾಜ್ ಭಟ್ಟರು ಹಸಿಹಸಿಯಾಗಿಯೇ ಈ (Audio) ಆಡಿಯೋದಲ್ಲಿ ಹೇಳಿದ್ದಾರೆ. ಇದು ವೈರಲ್ ಆಗೋಕೂ ಭಟ್ಟರು ಹೇಳಿರೋ ಅಸಲಿ ಸತ್ಯಗಳು ಅಂತಲೇ ಹೇಳಬಹುದೇನೋ. ಆದರೆ ವಿವಾದಗಳಿಂದ (controversy) ದೂರವೇ ಇರುವ ಯೋಗರಾಜ್ ಭಟ್ಟರು, ಎಂತಹ ಸೀರಿಯಸ್ ಸಮಯದಲ್ಲೂ ಹಾಸ್ಯ ರೂಪದಲ್ಲಿಯೇ ಮಾತನಾಡಿ ಎದ್ದು ಹೋಗುತ್ತಿದ್ದರು. ಆದರೆ ಅದೇನ್ ಆಗಿದಿಯೋ ಏನೋ. ಯೋಗರಾಜ್ ಭಟ್ಟರು ರೊಚ್ಚಿಗೆದ್ದು ಬಿಟ್ಟಿದ್ದಾರೆ. ಅವರ ಆಡಿಯೋ ಕೇಳಿದ್ರೆ ಆ ವ್ಯಕ್ತಿ ಬಗ್ಗೆ ನಿಮ್ಮ ಅಭಿಪ್ರಾಯ ಒಂದೊಮ್ಮೆ ಬದಲಾಗಬಹುದು.


ಶಿವ ಶಿವ..ರಾಘವೇಂದ್ರ ಏನಪ್ಪ ಇದು?
ಯೋಗರಾಜ್ ಭಟ್ಟರು ಆಳವಾಗಿಯೇ ಡೈಲಾಗ್ ಬರೆಯುತ್ತಾರೆ. ತಮಗನಿಸಿದ್ದನ್ನ ಸಾಹಿತಿಕವಾಗಿಯೂ ಬರೆಯುತ್ತಾರೆ. ಆದರೆ ಎಂದೂ ಸಹ ಕೆಟ್ಟ ಪದಗಳನ್ನ ಬಳಸಿರೋದು ಇಲ್ಲವೇ ಇಲ್ಲ. ಅದೇ ರೀತಿ ಸಭ್ಯತೆ ಚೌಕಟ್ಟಿನಲ್ಲಿಯೇ ರಾಯರ ಹೆಸರು ಇಟ್ಟುಕೊಂಡ ರಾಘವೇಂದ್ರಗೆ ಬೈದು ಹಾಕಿದ್ದಾರೆ.


ಭಟ್ಟರ ಈ ಆಕ್ರೋಶಕ್ಕೆ ಅಸಲಿ ಕಾರಣ ಏನು?
ಯೋಗರಾಜ್ ಭಟ್ಟರು ಮತ್ತು ಜೀಟಿವಿ ರಾಘವೇಂದ್ರ ಹುಣಸೂರು ಚೆನ್ನಾಗಿಯೇ ಇದ್ದೋರು. ರಾಘವೇಂದ್ರಗಾಗಿಯೇ ಯೋಗರಾಜ್ ಭಟ್ಟರು ತಮ್ಮ ಸಿನಿಮಾ ಕೆಲಸ ಪಕ್ಕಕ್ಕಿಟ್ಟು ಕಾಮಿಡಿ ಕಿಲಾಡಿಗೆ ಬಂದೋರು. ಅಷ್ಟು ಚೆನ್ನಾಗಿಯೇ ಇತ್ತು ಯೋಗರಾಜ್ ಭಟ್ ಮತ್ತು ರಾಘವೇಂದ್ರ ಅವರ ರಿಲೇಷನ್.




ಆದರೆ ಈಗ ಎಲ್ಲವೂ ಉಲ್ಟಾ ಹೊಡೆದಂತಿದೆ. ಯೋಗರಾಜ್ ಭಟ್ಟರು ರೊಚ್ಚಿಗೆದ್ದು ಬಿಟ್ಟಿದ್ದಾರೆ. ಮನಸ್ಸಿನಲ್ಲಿರೋ ಅಷ್ಟೂ ಸಿಟ್ಟನ್ನ ಆಡಿಯೋ ರೂಪದಲ್ಲಿಯೇ ಈಗ ಹೊರಹಾಕಿ ಬಿಟ್ಟಿದ್ದಾರೆ.


ರಾಘವೇಂದ್ರ ಮತ್ತು ಯೋಗರಾಜ್ ಭಟ್ಟರ ಗೆಳೆತನ ಹಳಸಿತೆ?
ಹೌದು, ಈ ಒಂದು ಪ್ರಶ್ನೆ ಈಗ ಎದ್ದು ಬಿಟ್ಟಿದೆ. ರಾಘವೇಂದ್ರ ಹುಣಸೂರು ಮತ್ತು ಯೋಗರಾಜ್ ಭಟ್ಟರು ಚೆನ್ನಾಗಿಯೇ ಇದ್ದೋರು. ಆದರೆ ಈಗ ಎಲ್ಲವೂ ಹಳಸಿದಂತೆ ಭಾಸವಾಗುತ್ತದೆ. ಭಟ್ಟರು ಬೈದಿರೋ ಮಾತು ಕೇಳಿದ್ರೆ ಎಲ್ಲವೂ ಕಿತ್ತು ಹೋಗಿದೆ ಅನಿಸುತ್ತದೆ. ಭಟ್ಟರ ಮಾತಿನ ಅಕ್ಷರ ರೂಪ ಒಂದಷ್ಟು ಝಲಕ್ ಇಲ್ಲಿದೆ. ಓದಿ.


"ರಾಘು ನೀನು ಇನ್ನೂ ಬೆಳೆದಿಲ್ಲ. ನಿನಗೆ ಬೇಕಾದಾಗ ನಮ್ಮನ್ನ ಬಳಸಿಕೊಳ್ತೀಯಾ. ನಮಗೆ ಬೇಕಾದಾಗ ನೀನು ಫೋನ್ ಎತ್ತೋದೇ ಇಲ್ಲ. ಕಳೆದ 15 ದಿನದಿಂದಲೇ ಫೋನ್ ಮಾಡುತ್ತಿದ್ದೇನೆ. ಯಾಕೆ ಫೋನ್ ಎತ್ತುತ್ತಿಲ್ಲ. ರಿಪ್ಲೈ ಕೂಡ ಮಾಡ್ತಿಲ್ಲಾ ಈಗ ನೋಡು ನಿನಗೆ ಹಾಗೆ ಬೈತೀನಿ. ನೀನು ಕೇಳಿ ನೇಣು ಹಾಕಿಕೊಳ್ಳಬೇಕು".


ರಾಘವೇಂದ್ರ, ನೀನು ಬಹಳ ಕೆಟ್ಟು ರೀತಿಯಲ್ಲಿಯೇ ಕೆಳಗೆ ಬೀಳುತ್ತೀಯಾ. ನಿನ್ನ ಅವನತಿ ಶುರು ಆಗಿದೆ. ನೀನು ಬಹಳ ಎತ್ತರದಿಂದಲೇ ಬೀಳ್ತೀಯಾ. ಬಿದ್ದು ಸತ್ತು ಹೋಗುತ್ತೀಯಾ. ಆಗ ನಾಲ್ಕು ಜನ ನಿನ್ನ ಹೊರೊಕೆ ಬರ್ತಾರೆ. ನನ್ನ ಕರ್ಮ ಆ ನಾಲ್ಕು ಜನರಲ್ಲಿ ನಾನೂ ಒಬ್ಬನಾಗಿರ್ತೀನಿ. ಅದು ನನ್ನ ಕರ್ಮ.


"ನೀನು ಕೆಳಗೆ ಬೀಳ್ತೀಯಾ. ಪರ್ಸ್ನಲಿ, ಪ್ರೋಫೆಸ್ನಲಿ, ಸೆಕ್ಸಿಯೋಲಿ ಹೀಗೆ ಬಿದ್ದು ಹಾಳಾಗಿ ಹೋಗ್ತೀಯಾ" ಅಂತಲೇ ಭಟ್ಟರು ಹಿಗ್ಗಾ-ಮುಗ್ಗಾ ಬೈದು ಹಾಕಿದ್ದಾರೆ. ಇವರ ಈ ರೀತಿಯ ಬೈಗುಳಕ್ಕೆ ಕಾರಣ ಆ ಸಿನಿಮಾಗಳು. ಆ ಸಿನಿಮಾಗಳು ಯಾವುವು ಗೊತ್ತೇ? ಇಲ್ಲಿದೆ ಮುಂದಿದೆ ಓದಿ.


ಯೋಗರಾಜ್ ಭಟ್ಟರು ಆರೋಪ ಏನು ಗೊತ್ತೇ?
ಯೋಗರಾಜ್ ಭಟ್ಟರ ಪದವಿಪೂರ್ವ, ಗರಡಿ, ಶಿವಣ್ಣ ಅಭಿನಯದ ಕರಕಟ ದಮನಕ ಚಿತ್ರಗಳ ಬಗ್ಗೇನೆ ಯೋಗರಾಜ್ ಭಟ್ಟ ಆಡಿಯೋದಲ್ಲಿ ಮಾತನಾಡಿದ್ದಾರೆ.


ಇದನ್ನೂ ಓದಿ: Kantara-Pushpa: ಪುಷ್ಪಾಗಿಂತ ಸೂಪರ್ ಸಿನಿಮಾವೇ ಕಾಂತಾರ? ಪ್ರೇಕ್ಷಕರ ಚರ್ಚೆಗಳೇನು?


ಈ ಸಿನಿಮಾಗಳನ್ನ ಜಿ ಟಿವಿಗೆ ತೆಗೆದುಕೊಳ್ಳುತ್ತೇನೆ ಎಂದು ಪ್ರಪೋಸಲ್ ತೆಗೆದುಕೊಂಡು ಈಗ ನೋಡಿದ್ರೆ ರಾಘವೇಂದ್ರ ಹುಣಸೂರು ಫೋನ್ ಎತ್ತುತ್ತಿಲ್ಲ ಅಂತಲೇ ಯೋಗರಾಜ್​ ಭಟ್ಟ ಆರೋಪಿಸಿದ್ದಾರೆ.


Kannada Director Yogaraj Bhat Audio Now Got Viral
ಭಟ್ಟರ ಈ ಆಕ್ರೋಶಕ್ಕೆ ಅಸಲಿ ಕಾರಣ ಏನು?


ರಾಘವೇಂದ್ರ, ನನಗೊಬ್ಬನಿಗೆ ನೀನು ಈ ರೀತಿ ಮಾಡ್ತಿಲ್ಲ. ಇಂಡಸ್ಟ್ರೀಯ ಅನೇಕರು ಇದೇ ಮಾತನ್ನ ಹೇಳುತ್ತಿದ್ದಾರೆ. ನೀನು ಬೆಳೆಯಬೇಕು. ಇಂಡಸ್ಟ್ರೀಯನ್ನೂ ಬೆಳೆಸಬೇಕಪ್ಪ ಅಂತಲೇ ಭಟ್ಟರು, ರಾಘವೇಂದ್ರ ಹುಣಸೂರುಗೆ ಬುದ್ದಿ ಮಾತನ್ನೂ ಹೇಳಿದ್ದಾರೆ.


ಭಟ್ಟರ ಆಡಿಯೋ ವೈರಲ್-ರಾಘವೇಂದ್ರ ಏನಂದ್ರು?
ಯೋಗರಾಜ್ ಭಟ್ಟರ ಆಡಿಯೋ ವೈರಲ್ ಆಗ್ತಾನೇ ಇದೆ. ಆದರೆ ಈ ಬಗ್ಗೆ ರಾಘವೇಂದ್ರ ಹುಣಸೂರು ಎಲ್ಲೂ ಏನೂ ರಿಯಾಕ್ಟ್ ಮಾಡ್ತಿಲ್ಲ. ಭಟ್ಟರ ಫೋನ್​ ಅನ್ನೇ ರಾಘವೇಂದ್ರ ಎತ್ತುತ್ತಿಲ್ಲ. ಇನ್ನು ನಮ್ಮ ಫೋನ್ ರಿಸೀವ್ ಮಾಡ್ತಾರಾ ಅನ್ನೋ ಮಾತು ಈಗ ಹರಿದಾಡುತ್ತಿದೆ.


ಇದನ್ನೂ ಓದಿ: Bad Manners Release: ಬ್ಯಾಡ್​​ ಮ್ಯಾನರ್ಸ್ ರಿಲೀಸ್ ಯಾವಾಗ? 2023 ರ ಫೆಬ್ರವರಿ 16ಕ್ಕೆ ರಿಲೀಸ್ ಗ್ಯಾರಂಟಿನಾ?


ಒಟ್ಟಾರೆ, ಯೋಗರಾಜ್ ಭಟ್ಟರ ಹಾಗೂ ರಾಘವೇಂದ್ರ ಹುಣಸೂರು ಸ್ನೇಹದ ಮಧ್ಯೆ ಬಿರುಕು ಬಿದ್ದು ಬಿಟ್ಟಿದೆ ಅನ್ನೋ ಸತ್ಯ ಇಷ್ಟು ದಿನ ತೆರೆ ಮರೆಯಲ್ಲಿತ್ತು. ಅದು ಈಗ ಭಟ್ಟರ ಮೂಲಕ ಜಗಜ್ಜಾಹೀರಾಗಿದೆ.

First published: