ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರಿಗೆ ಇಂಗ್ಲೀಷ್ ಅಕ್ಷರದ ಮೇಲೆ ಭಾರೀ ಮೋಹ ಇದೆಯೇ? ಗೊತ್ತಿಲ್ಲ. ಆದರೆ ಇಂಗ್ಲೀಷ್ ಅಕ್ಷರ ಹಿಟ್ ಆಗಿದೆ. ನಿಜ A ಚಿತ್ರ (Kannada A Cinema) ಹಿಟ್ ಆಗಿ ಈಗ 25 ವರ್ಷಗಳೇ ಉರುಳಿದೆ. ಅದೇ ಖುಷಿಯಲ್ಲಿ ಉಪ್ಪಿ ಇದ್ದಾರೆ. ಸಿನಿಮಾ ತಂಡವೂ ಆ ಹಳೆಯ (A movie Completed 25 Years) ದಿನಗಳನ್ನ ನೆನಪಿಸಿಕೊಳ್ಳುತ್ತಿವೆ. ನಾಯಕಿ ಚಾಂದಿನಿಯಿಂದ ಹಿಡಿದು, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ಮಾಪಕರಾದ ಮಂಜುನಾಥ್ (A Movie Producer) ಅವರು ತಮ್ಮ ಈ ಚಿತ್ರದ ಹಳೆ ದಿನಗಳನ್ನ ಮೆಲುಕು ಹಾಕಿದ್ದಾರೆ. ಹಾಗೆ 25 ವರ್ಷ ಪೂರ್ಣ ಆದ ಈ ಸಂದರ್ಭದಲ್ಲಿ ಉಪ್ಪಿ ನಿರ್ದೇಶನದ UI ಸಿನಿಮಾ ತಂಡವು ಈ ದಿನವನ್ನ ನೆನಪಿಸಿಕೊಂಡಿದೆ. ಸೆಲೆಬ್ರೇಟ್ ಕೂಡ ಮಾಡಿದೆ.
25 ವರ್ಷದ ಹಿಂದೆ A 25 ವರ್ಷದ ಬಳಿಕ UI ಸಿನಿಮಾ
ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟರಾಗಿ ಈಗ 25 ವರ್ಷ ಆಗಿದೆ. ತಮ್ಮ ವಿಶೇಷ ಕಲ್ಪನೆಯ A ಮೂಲಕ ಹೀರೊ ಆಗಿದ್ದ ಉಪ್ಪಿ, ಕನ್ನಡ ಇಂಡಸ್ಟ್ರೀಯಲ್ಲಿ ಹೊಸ ಸಂಚಲನ ಹುಟ್ಟಿಸಿದ್ದರು.
ಉಪ್ಪಿ ತಮ್ಮ ಈ ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇಟ್ಟಿದ್ದರು. ಸಿನಿಮಾ ಇಂಡಸ್ಟ್ರೀಯ ಕಾಸ್ಟಿಂಗ್ ಕೌಚ್ ಕುರಿತು ಬೆಳಕು ಚೆಲ್ಲಿದ್ದರು. 1998 ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರ ಅಂದಿನ ದಿನಗಳಲ್ಲಿ ಹೊಸ ರೀತಿಯ ಕಿಚ್ಚು ಹಚ್ಚಿತ್ತು. ಅದೇ ಸಿನಿಮಾ ಈಗ 25 ವರ್ಷ ಪೂರ್ಣಗೊಳಿಸಿದೆ.
UI ಸಿನಿಮಾ ಸೆಟ್ನಲ್ಲಿ ಉಪ್ಪಿ A ಸಿನಿಮಾ ಸೆಲೆಬ್ರೇಷನ್!
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ವಿಶೇಷ ಕಲ್ಪನೆಯನ್ನ 25 ವರ್ಷದ ಹಿಂದೇನೆ ಬೆಳ್ಳಿ ತೆರೆ ಮೇಲೆ ತಂದಿದ್ದರು. ಆರಂಭದಲ್ಲಿ ಜನ ಇದನ್ನ ನೋಡಿ ತಲೆಕೆರೆದುಕೊಂಡಿದ್ದರು. ಅದೇ ರೀತಿ ಇಂಡಸ್ಟ್ರೀಯಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಅಭಿಪ್ರಾಯಗಳು ಇದ್ದವು. ಆದರೆ ಸಿನಿಮಾ ಇದನ್ನ ಲೆಕ್ಕಿಸದೆ ಹಿಟ್ ಆಯಿತು.
ಉಪೇಂದ್ರ ತಮ್ಮ ಈ ಚಿತ್ರದ ಮೂಲಕ ಕನ್ನಡಿಗರಿಗೆ ಹೊಸದನ್ನೆ ಕೊಡ್ತಾ ಬಂದಿದ್ದಾರೆ. ಹೊಸ ಯೋಚನೆಯನ್ನ ಬೆಳ್ಳಿತೆರೆ ಮೇಲೆ ತರುತ್ತಲೇ ರಿಯಲ್ ಸ್ಟಾರ್ ಆಗಿದ್ದಾರೆ. ಡಿಫರಂಟ್ ನಾಯಕ ಅಂತಲೂ ಉಪೇಂದ್ರ ಕರೆಸಿಕೊಂಡಿದ್ದಾರೆ.
Hi all Happy Monday # back then 25 years ago alphabet À created history # now #UI is in d making of history pic.twitter.com/FwjJrCcS4K
— Sreekanth KP (@kp_sreekanth) January 23, 2023
ಉಪ್ಪಿಯ UI ಸಿನಿಮಾ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದೆ. UI ಅನ್ನೋ ವಿಶೇಷ ಟೈಟಲ್ ಮೂಲಕವೂ ಕುತೂಹಲ ಕೆರಳಿಸುತ್ತಿದೆ. ಮತ್ತೊಂದು A ಸಿನಿಮಾ ಇದಾಗುತ್ತದೆಯೇ ಅನ್ನೋ ಕುತೂಹಲ ಕೂಡ ಮೂಡಿಸುತ್ತಿದೆ.
ಅಂದು A ಇಂದು UI-ಉಪ್ಪಿ ಇಂಗ್ಲೀಷ್ ಟೈಟಲ್ ಮ್ಯಾಜಿಕ್!
ಉಪೇಂದ್ರ ವಿಭಿನ್ನ ಮತ್ತು ವಿಶೇಷ ಟೈಟಲ್ ಇಡೋದ್ರಲ್ಲಿ ನಿಸ್ಸೀಮರು. ಇವರ ಐಡಿಯಾದಲ್ಲಿ ವಿಭಿನ್ನತೆ ಇದ್ದೇ ಇರುತ್ತದೆ. ಅದರಲ್ಲೂ ಇವರ ಚಿತ್ರಗಳ ಇಂಗ್ಲೀಷ್ ಟೈಟಲ್ಗಳು ಸಿಕ್ಕಾಪಟ್ಟೆ ವರ್ಕ್ ಆಗಿವೆ. A ಇದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಆಗಿದೆ.
UI ಸಿನಿಮಾ A ಚಿತ್ರದ ರೀತಿ ಕ್ರೇಜ್ ಹುಟ್ಟಿಸೋ ಹಾಗೆ ಇದೆ. ಅದೇ ರೀತಿನೇ ಇದು ಕೂಡ ವಿಭಿನ್ನವಾಗಿಯೇ ಚಿತ್ರೀಕರಣ ಆಗುತ್ತಿದೆ. ಇಡೀ ಸಿನಿಮಾ ತಂಡಕ್ಕೂ ಈ ಚಿತ್ರ ದಿನೇ ದಿನೇ ಭಾರೀ ದೊಡ್ಡ ಭರವಸೆ ಮೂಡಿಸುತ್ತಿದೆ.
ಇನ್ನು ಇದೇ ಚಿತ್ರ ತಂಡ ಸೆಟ್ನಲ್ಲಿ ಉಪೇಂದ್ರ ನಿರ್ದೇಶನದ A ಚಿತ್ರದ 25 ವರ್ಷ ಪೂರೈಸಿದ ಖುಷಿಯನ್ನ ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡಿದೆ. UI ಸಿನಿಮಾದ ನಿರ್ದೇಶಕ ಉಪೇಂದ್ರ, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ಇಡೀ ಟೀಮ್ ಈ ಒಂದು ಸಂದರ್ಭದಲ್ಲಿ ಹಾಜರಿದ್ದರು.
ಇದನ್ನೂ ಓದಿ: Anup Bhandari Movie: ಬಿಗ್ ಸಿನಿಮಾ ಬಿಗ್ ತಯಾರಿ, ಕಿಚ್ಚನ ಮುಂದಿನ ಚಿತ್ರಕ್ಕೆ ಎಲ್ಲ ರೆಡಿನಾ? ಏನಂತಾರೆ ಅನೂಪ್ ಭಂಡಾರಿ!
ಅಂದು A ಇಂದು UI ಅನ್ನೋ ಹಾಗೆ ಈ ಸೆಲೆಬ್ರೇಷನ್ನ ವಿಡಿಯೋ ಕೂಡ ರೆಡಿ ಮಾಡಲಾಗಿದೆ. ಇದನ್ನ ಕೆ.ಪಿ.ಶ್ರೀಕಾಂತ್ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿ ಖುಷಿಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ