• Home
  • »
  • News
  • »
  • entertainment
  • »
  • Matte Mayamruga: ಹಳೆ-ಹೊಸ ಕಲಾವಿದರ ಸಂಗಮ, ಶುರುವಾಗಲಿದೆ ಮತ್ತೆ ಮಾಯಾಮೃಗದ ಹಂಗಾಮ

Matte Mayamruga: ಹಳೆ-ಹೊಸ ಕಲಾವಿದರ ಸಂಗಮ, ಶುರುವಾಗಲಿದೆ ಮತ್ತೆ ಮಾಯಾಮೃಗದ ಹಂಗಾಮ

ಕಥೆಯ ವಿಸ್ತರಣೆಯಲ್ಲಿ ನನ್ನ ಮಗಳಿದ್ದಾಳೆ-ಟಿ.ಎನ್.ಎಸ್

ಕಥೆಯ ವಿಸ್ತರಣೆಯಲ್ಲಿ ನನ್ನ ಮಗಳಿದ್ದಾಳೆ-ಟಿ.ಎನ್.ಎಸ್

'ಮತ್ತೆ ಮಾಯಾಮೃಗ' ಈಗಲೇ ತನ್ನ ಪ್ರೋಮೋಗಳಿಂದ ಎಲ್ಲರಿಗೂ ಇಷ್ಟ ಆಗುತ್ತಿದೆ. ಈ ಹಿಂದೆ 'ಮಾಯಾಮೃಗ' ಸೀರಿಯಲ್ ನೋಡಿದವ್ರು ಪ್ರೋಮೋಗಳ ಮೂಲಕ ಈಗಲೇ ಕನೆಕ್ಟ್ ಆಗುತ್ತಿದ್ದಾರೆ. ಕುತೂಹಲದಿಂದಲೂ ಎದುರು ನೋಡ್ತಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಿರುತೆರೆ (Small Screen) ಲೋಕದಲ್ಲಿ ಮಾಯಾಮೃಗ ದಾಖಲೆ (Matte Mayamruga) ದೊಡ್ಡಮಟ್ಟದಲ್ಲಿಯೇ ಇದೆ. 1998 ರಲ್ಲಿ ಪ್ರಸಾರ ಆಗುತ್ತಿದ್ದ ಈ ಧಾರಾವಾಹಿ ಎಲ್ಲರ ಹೃದಯ ಕದ್ದಿತ್ತು. ಧಾರಾವಾಹಿ ಪ್ರಸಾರದ ಸಮಯ ಆದರೆ ಸಾಕು, ಇರೋ ಎಲ್ಲ ಕೆಲಸಗಳನ್ನ ಮುಗಿಸಿ ಹೆಣ್ಣುಮಕ್ಕಳು (TV Serial) ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದರು. ಗಂಡು ಮಕ್ಕಳು ಸೀರಿಯಲ್ ನೋಡಬೇಕು ಅಂತ ಬೇಗ ಮನೆಗೆ ಬಂದಿರೋ (Example) ಉದಾಹರಣೆಗಳೂ ಇವೆ. ಪುಟ್ಟ ಪರದೆಯ ಈ ಒಂದು ಧಾರಾವಾಹಿಯ ಸೆಳೆತವೇ ಹಾಗಿತ್ತು. ಕಿರುತೆರೆಯ ಲೋಕದಲ್ಲಿ ಅಂದು ಹೆಚ್ಚಿಗೆ ಸೀರಿಯಲ್​ ಗಳ ಹಾವಳಿನೂ ಇರಲಿಲ್ಲ. ಒಳ್ಳೆ ಕಥಾವಸ್ತುವಿನ ಕಥೆಗಳಲ್ಲಿ ಮಾಯಾಮೃಗ ಟಾಪ್ ಅಲ್ಲಿಯೇ ಇತ್ತು. ಸೂಪರ್ ಹಿಟ್ ಕೂಡ ಆಗಿತ್ತು. ಇದೇ ಸೀರಿಯಲ್ ಈಗ ಮತ್ತೆ ಮಾಯಾಮೃಗವಾಗಿಯೆ ಬರುತ್ತಿದೆ.


ಮತ್ತೆ ಮಾಯಾಮೃಗ ಸೀರಿಯಲ್​ನಲ್ಲಿ ಹೊಸದೇನಿದೆ?
ಮತ್ತೆ ಮಾಯಾಮೃಗ ಬದಲಾಗಿದೆ. ಹಳೆ ಬೇರು ಹೊಸ ಚಿಗುರು ಅಂತೀವಲ್ಲ. ಆ ರೀತಿ ಇಲ್ಲಿ ಹೊಸ ಕಲಾವಿದರು ಮತ್ತು ಹಳೆ ಕಲಾವಿದರು ಸೇರಿ ಹೊಸದೊಂದು ಅಧ್ಯಾಯವನ್ನೇ ಈಗ ಶುರು ಮಾಡಿದ್ದಾರೆ.


ಮತ್ತೆ ಮಾಯಾಮೃಗದ ಶಾಸ್ತ್ರಿಗಳ ಫ್ಯಾಮಿಲಿ ಇಲ್ಲಿ ದೊಡ್ಡದಾಗಿದೆ. ಅಜ್ಜ-ಅಜ್ಜಿಯ ಕಥೆ ಜೊತೆಗೆ ಮೊಮ್ಮಕ್ಕಳ ಹೊಸ ಕಥೆ ಶುರು ಆಗಿದೆ. ಅದರ ಚಿತ್ರೀಕರಣವೂ ಶುರು ಆಗಿದೆ. ಇದೇ 31 ರಿಂದ ಸಿರಿ ಕನ್ನಡದಲ್ಲಿ ಸೋಮವಾರದಿಂದ ಶುಕ್ರುವಾರದವರೆಗೂ ಸೀರಿಯಲ್ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿದೆ.


ಮತ್ತೆ ಮಯಾಮೃಗದ ಬಗ್ಗೆ ಏನಂತಾರೆ ಡೈರೆಕ್ಟರ್ ಟಿ.ಎಸ್.ಸೀತಾರಾಮ್
ಮತ್ತೆ ಮಾಯಾಮೃಗ ಬದುಕು ಬದಲಾಗಬಹುದು. ಭಾವ ಅಲ್ಲ ಅನ್ನೋ ವಾಕ್ಯದೊಂದಿಗೆ ಬರ್ತಿದೆ. ಇಲ್ಲಿ ಹೊಸ ಕಲಾವಿದರು ಇದ್ದಾರೆ. ಹಳೆ ಕಲಾವಿದರು ಇದ್ದಾರೆ.


Kannada Director T N Seetharam Talk About Matte Mayamruga
ಮತ್ತೆ ಮಯಾಮೃಗದ ಬಗ್ಗೆ ಏನಂತಾರೆ ಡೈರೆಕ್ಟರ್ ಟಿ.ಎಸ್.ಸೀತಾರಾಮ್


ಆದರೆ ಮಾಯಮೃಗದ ಎಲ್ಲ ಕಲಾವಿದರು ಈಗ ಇಲ್ಲ. ಇದ್ದವರನ್ನೆಲ್ಲ ಮತ್ತೆ ಮಾಯಾಮೃಗದಲ್ಲಿ ಕರೆತಂದಿದ್ದೇವೆ ಎಂದು ಟಿ.ಎನ್.ಸೀತಾರಾಮ್ ಹೇಳ್ತಾರೆ.


ಕಥೆಯ ವಿಸ್ತರಣೆಯಲ್ಲಿ ನನ್ನ ಮಗಳಿದ್ದಾಳೆ-ಟಿ.ಎನ್.ಎಸ್
ಮತ್ತೆ ಮಾಯಾಮೃಗದ ಕಥೆಯ ವಿಸ್ತರಣೆ ಕೆಲಸದಲ್ಲಿ ನನ್ನ ಮಗಳು ಅಶ್ವಿನಿ ಇದ್ದಾಳೆ. ಪ್ರಹ್ಲಾದ್ ಕೂಡ ನಮ್ಮೊಟ್ಟಿಗೆ ಇದ್ದಾರೆ. ಇವರ ಹೊಸ ಯೋಚನೆಯೊಂದಿಗೆ ಮತ್ತೆ ಮಾಯಾಮೃಗ ಸೀರಿಯಲ್ ಬರ್ತಾಯಿದೆ ಎಂದು ಟಿ.ಎನ್.ಸೀತಾರಾಮ್ ತಿಳಿಸಿದರು.


ಇದನ್ನೂ ಓದಿ: Kantara Abbara: ಕಾಂತಾರ ಗುಂಗಿನಲ್ಲಿ ಸಿನಿಫ್ಯಾನ್ಸ್! ಪ್ರಜ್ವಲ್ ಅಭಿನಯದ ಅಬ್ಬರ ರಿಲೀಸ್​ಗೆ ಪಕ್ಕಾ ಪ್ಲಾನ್


ಮತ್ತೆ ಮಾಯಾಮೃಗ ಸೀರಿಯಲ್ ಅನ್ನು ಈ ಹಿಂದಿನಂತೆ ಮೂವರು ನಿರ್ದೇಶಕರೇ ಡೈರೆಕ್ಟ್ ಮಾಡುತ್ತಿದ್ದಾರೆ. ಟಿ.ಎನ್.ಸೀತಾರಾಮ್, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ಇಲ್ಲೂ ಇದ್ದು, ಪಿ.ಶೇಷಾದ್ರಿ ಅವರೂ ತಮ್ಮ ಈ ಸೀರಿಯಲ್ ಬಗ್ಗೆ ಮಾತನಾಡಿದ್ದಾರೆ.
ಅಂದು ಸೀರಿಯಲ್ ಕಡಿಮೆ ಇದ್ದವು- ಈಗ ಸ್ಪರ್ಧೆ ಜಾಸ್ತಿ ಆಗಿದೆ
ಮಾಯಾಮೃಗ ಸೀರಿಯಲ್ ಪ್ರಸಾರ ಆಗುವಾಗ ಹೆಚ್ಚಿನ ಸೀರಿಯಲ್​ಗಳು ಇರಲಿಲ್ಲ. ಆದರೆ ಈಗ ಆ ಸ್ಥಿತಿ ಇಲ್ಲವೇ ಇಲ್ಲ. ಎಲ್ಲ ವಾಹಿನಿಗಳಿಂದ 60ಕ್ಕೂ ಹೆಚ್ಚು ಸೀರಿಯಲ್ ಪ್ರಸಾರ ಆಗುತ್ತಿವೆ. ಇದರಿಂದ ಈ ಒಂದು ಸ್ಪರ್ಧೆಯಲ್ಲಿಯೇ ನಾವು ನಮ್ಮ ಧಾರವಾಹಿಯನ್ನ ತರುತ್ತಿದ್ದೇವೆ ಎಂದು ಪಿ.ಶೇಷಾದ್ರಿ ಹೇಳಿದರು.


Kannada Director T N Seetharam Talk About Matte Mayamruga
ಮತ್ತೆ ಮಾಯಾಮೃಗ ಸೀರಿಯಲ್​ನಲ್ಲಿ ಹೊಸದೇನಿದೆ?


ಮತ್ತೆ ಮಾಯಾಮೃಗ ಈಗಲೇ ತನ್ನ ಪ್ರೋಮೋಗಳಿಂದ ಎಲ್ಲರಿಗೂ ಇಷ್ಟ ಆಗುತ್ತಿದೆ. ಮಾಯಾಮೃಗ ಸೀರಿಯಲ್ ನೋಡಿದವ್ರು ಪ್ರೋಮೊಗಳ ಮೂಲಕ ಈಗಲೇ ಕನೆಕ್ಟ್ ಆಗುತ್ತಿದ್ದಾರೆ. ಕುತೂಹಲದಿಂದಲೂ ಎದುರು ನೋಡ್ತಾಯಿದ್ದಾರೆ.


ಪ್ರತಿ ದಿನ ಮತ್ತೆ ಮಾಯಾಮೃಗದ ಪ್ರೋಮೋಗಳು ಪ್ರಸಾರ ಆಗುತ್ತಿವೆ. ಈ ಪ್ರೋಮೋಗಳಲ್ಲಿ  ಅಂದಿನ ಪಾತ್ರಗಳಿಗೂ ಇಂದಿನ ಪಾತ್ರಗಳಿಗೂ ರಿಲೇಟ್ ಮಾಡಿರೋ ದೃಶ್ಯಗಳನ್ನೆ ತೋರುತ್ತಿದ್ದಾರೆ.


ಇದನ್ನೂ ಓದಿ: Kantara Movie Varaha Roopam Song: ಕಾಂತಾರಕ್ಕೆ ಶಾಕ್ ಕೊಟ್ಟ ಕೇರಳ ಕೋರ್ಟ್, ವರಾಹ ರೂಪಂ ಹಾಡು ಬಳಸದಂತೆ ಸೂಚನೆ!


ಇದರಿಂದ ಸೀರಿಯಲ್  ಬಗ್ಗೆ ಈಗಲೇ ಹೆಚ್ಚು ಕುತೂಹಲ ಮೂಡುತ್ತಿದೆ. ಇದರಿಂದ ಮತ್ತೆ ಮಾಯಾಮೃಗ ಕೂಡ ಜನರ ಹೃದಯ ಗೆಲ್ಲೋದರಲ್ಲಿ ಡೌಟೆ ಇಲ್ಲ ಅನ್ನೋ ಭಾವನೆ ಕೂಡ ಮೂಡುತ್ತಲೇ ಇದೆ.

First published: