ಸ್ಯಾಂಡಲ್‌ವುಡ್‌ನಲ್ಲಿ ಕಾಂತಾರ ಚಿತ್ರ (Director Sudhir Attavar) ಬಂದ್ಮೇಲೆ ಕರಾವಳಿಯ ದೈವಗಳ ಬಗ್ಗೆ ಅತಿ ಹೆಚ್ಚು ವಿಷಯ ಜನರಿಗೆ ಪರಿಚಯ ಆಗಿದೆ. ಇಲ್ಲಿವರೆಗೂ ಕರಾವಳಿ ಜನ ಮಾತ್ರ ನಂಬಿದ್ದ ಈ (Sudhir Attavar ) ದೈವಗಳನ್ನ ಈಗ ಎಲ್ಲರೂ ಆರಾಧಿಸುತ್ತಿದ್ದಾರೆ. ಗುಳಿಗ ದೈವ, ಪಂಜುರ್ಲಿ, ಕೊರಗಜ್ಜ ಹೀಗೆ ಇಲ್ಲಿರೋ ದೈವಗಳ ಮೇಲೆ ಸಿನಿಮಾ ಕೂಡ ಬರ್ತಿವೆ. ಡೈರೆಕ್ಟರ್ ಸುಧೀರ್ ಅತ್ತಾವರ್ (Koragajja Movie Updates) ಅವರು ಕೊರಗಜ್ಜನ ಮೇಲೆ ಒಂದು ಸಿನಿಮಾ ಮಾಡಿದ್ದಾರೆ. ಕೊರಗಜ್ಜನ ಜೀವನ ಚರಿತ್ರೆ ಹೇಳುವ ಈ ಚಿತ್ರ ಬಿಗ್ ಬಜೆಟ್‌ನ ಸಿನಿಮಾ ಆಗಿದೆ. ಆದರೆ ಇಲ್ಲಿ ವಿಷಯ ಬೇರೆನೆ ಇದೆ. ಡೈರೆಕ್ಟರ್ ಸುಧೀರ್ ಅತ್ತಾವರ್ ತಮ್ಮ ಈ ಚಿತ್ರವನ್ನ ನಿರ್ದೇಶಿಸೋ ಸಮಯದಲ್ಲಿ ಅನೇಕ ಸಮಸ್ಯೆಗಳೂ (Director Sudhir Attavar) ಆಗಿವೆ.
ಸೆಟ್ ನಿರ್ಮಾಣದ ವೇಳೆ ಕೂಡ ಕಾರ್ಮಿಕರು ಸಮಸ್ಯೆ ಎದರುಸಿದ್ದಾರೆ. ಇದಕ್ಕೆ ಇರೋ ಕಾರಣ ಏನೂ? ಇಲ್ಲಿದೆ ಓದಿ.
ಗುಳಿಗ ದೈವಕ್ಕೆ ಡೈರೆಕ್ಟರ್ ಸುಧೀರ್ ಅತ್ತಾವರ್ ಗುಡಿ ನಿರ್ಮಿಸಿದ್ಯಾಕೆ?
ಕೊರಗಜ್ಜನ ಮೇಲೆ ಡೈರೆಕ್ಟರ್ ಸುಧೀರ್ ಅತ್ತಾವರ್ ಕರಿ ಹೈದ ಕೊರಗಜ್ಜ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಬಹುತೇಕ ಕೆಲಸ ಕೂಡ ಪೂರ್ಣಗೊಂಡಿದೆ. ಆದರೆ ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಒಂದಷ್ಟು ಸಮಸ್ಯೆಗಳೂ ಆಗಿವೆ.
ಈ ಒಂದು ಸತ್ಯ ಈಗ ಹೊರ ಬೀಳುತ್ತಿದೆ. ಇದಕ್ಕೆ ಕಾರಣ ಏನೂ ಅನ್ನೋದು ಕೂಡ ಇದೀಗ ರಿವೀಲ್ ಆಗಿದೆ. ಸಿನಿಮಾ ತಂಡ ಕರಿ ಹೈದ ಕೊರಗಜ್ಜ ಚಿತ್ರಕ್ಕೆ ಸೆಟ್ ಹಾಕುತ್ತಿತ್ತು. ಆದರೆ ಆ ಜಾಗದಲ್ಲಿ ಕೆಲಸ ಮಾಡೋ ಕಾರ್ಮಿಕರಿಗೆ ಏನೇನೋ ಸಮಸ್ಯೆ ಕೂಡ ಆಗಿದೆ.
ಗುಳಿಗ ದೈವದ ಜಾಗದಲ್ಲಿ ಸೆಟ್ ಹಾಕಲು ಹೋದಾಗ ಏನಾಗಿತ್ತು ಗೊತ್ತೇ!
ಇದಕ್ಕೆ ಕಾರಣ ಏನೂ ಅಂತ ಆ ಬಳಿಕವೇ ತಿಳಿದಿದೆ. ಹೌದು, ಕೊರಗಜ್ಜ ಚಿತ್ರಕ್ಕೆ ಸೆಟ್ ನಿರ್ಮಾಣ ಆಗ್ತಿದ್ದ ಜಾಗ ಗುಳಿಗ ದೈವದ ಜಾಗವೇ ಆಗಿತ್ತು. ಗುಳಿಗ ದೈವವನ್ನ ಆರಾಧಿಸೊ ಡೈರೆಕ್ಟರ್ ಸುಧೀರ್ ಅತ್ತಾವರ್ ಕೂಡ ಈ ಸಮಸ್ಯೆಯನ್ನ ಅರ್ಥ ಮಾಡಿಕೊಂಡರು.
ಆ ಬಳಿಕ ಗುರು-ಹಿರಿಯರ ಮೂಲಕ ವಿಷಯವನ್ನ ತಿಳಿದುಕೊಂಡರು. ಡೈರೆಕ್ಟರ್ ಸುಧೀರ್ ಅತ್ತಾವರ್ ಅವರ ಪುರ್ವಜರ ಮನೆ ಕೂಡ ಇದೇ ಕರಾವಳಿ ಪ್ರದೇಶದಲ್ಲಿಯೇ ಇದೆ. ಆ ಮನೆಯಲ್ಲಿ ಹಿಂದಿನಿಂದ ಗುಳಿಗ ದೈವದ ಆರಾಧನೆ ಕೋಲ ಸೇವೆ ನಡೆಯಿತ್ತಿದೆ.
ಗುಳಿಗ ದೈವದ ದೇವಸ್ಥಾನ ನಿರ್ಮಿಸಿದ ಡೈರೆಕ್ಟರ್ ಸುಧೀರ್ ಅತ್ತಾವರ್
ಆದರೆ ಆ ಮನೆ ಈಗ ಪಾಳು ಬಿದ್ದಿದೆ. ಅಲ್ಲಿ ಗುಳಿಗ ದೈವಕ್ಕೆ ಪೂಜೆ ಮಾಡೋರೂ ಇಲ್ಲ. ಹಾಗಾಗಿಯೇ ಗುಳಿಗೆ ದೈವ ಸಿಟ್ಟಾಗಿದ್ದಾನೆ ಅನ್ನೋದು ನಂಬಿಕೆ. ಹಾಗಾಗಿಯೇ ನಿರ್ದೇಶಕ ಕೊರಗಜ್ಜನ ಸಿನಿಮಾ ಮಾಡೋವಾಗ ಅನೇಕ ಸಮಸ್ಯೆ ಎದುರಿಸಿದ್ರು ಅನ್ನೋ ಮಾತು ಇದೆ.
ಹಾಗಾಗಿಯೇ ಸುಧೀರ್ ಅತ್ತಾವರ್ ಈಗ ತಮ್ಮ ಗುಳಿಗ ದೈವಕ್ಕೆ ದೇವಸ್ಥಾನ ನಿರ್ಮಿಸಿಕೊಟ್ಟಿದ್ದಾರೆ. ಅದ್ಧೂರಿಯಾಗಿಯೇ ಕೋಲ ಸೇವೆ ಕೂಡ ಮಾಡಿದ್ದಾರೆ. ಈ ಮೂಲಕ ತಮ್ಮ ದೈವಕ್ಕೆ ಸುಧೀರ್ ಅತ್ತಾವರ್ ಸೇವೆ ಸಲ್ಲಿಸಿದ್ದಾರೆ.
ಕರಿ ಹೈದ ಕೊರಗಜ್ಜ ಸಿನಿಮಾ ಹೊಸ ಅಪ್‌ಡೇಟ್ಸ್
ಕೊರಗಜ್ಜನ ಸಿನಿಮಾ ಮಾಡಿರೋದ್ರಿಂದ ಕೊರಗಜ್ಜನಿಗೂ ಇಡೀ ಸಿನಿಮಾ ತಂಡ ಕೋಲ ಸೇವೆ ಮಾಡಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ಕಬೀರ್ ಬೇಡಿ, ನಟಿ ಶೃತಿ, ಭವ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Radhika Kumaraswamy: ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ! 7 ಭಾಷೆಯಲ್ಲಿ ರಿಲೀಸ್
ಹಾಲಿವುಡ್-ಫ್ರೆಂಚ್ ಚಿತ್ರದಲ್ಲೂ ಗುರುತಿಸಿಕೊಂಡ ನಟ ಸಂದೀಪ್ ಸೋಪರ್ಕರ್ ಈ ಚಿತ್ರದಲ್ಲಿ ಗುಳಿಗ ದೈವದ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಿಗ್ ಬಜೆಟ್‌ನ ಈ ಚಿತ್ರಕ್ಕೆ ತ್ರಿವಿಕ್ರಮ್ ಸಾಫಲ್ಯ ದುಡ್ಡು ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ