• Home
  • »
  • News
  • »
  • entertainment
  • »
  • Ghost-Shiva Rajkumar: ಶಿವಣ್ಣ ಚಿತ್ರಕ್ಕೆ ಕೋಟಿ ಬೆಲೆಯ ಸೆಟ್ ಹಾಕಿದ ಘೋಸ್ಟ್ ತಂಡ!

Ghost-Shiva Rajkumar: ಶಿವಣ್ಣ ಚಿತ್ರಕ್ಕೆ ಕೋಟಿ ಬೆಲೆಯ ಸೆಟ್ ಹಾಕಿದ ಘೋಸ್ಟ್ ತಂಡ!

ಘೋಸ್ಟ್ ಮೂಲಕ ಕನ್ನಡಕ್ಕೆ ಬಂದ ಮಲೆಯಾಳಂ ನಟ ಜಯರಾಮ್

ಘೋಸ್ಟ್ ಮೂಲಕ ಕನ್ನಡಕ್ಕೆ ಬಂದ ಮಲೆಯಾಳಂ ನಟ ಜಯರಾಮ್

ಘೋಸ್ಟ್ ಸಿನಿಮಾದಲ್ಲಿ ಆ್ಯಕ್ಷನ್ ಜಾಸ್ತಿ ಇದೆ. ಇದು ಆ್ಯಕ್ಷನ್ ಸಿನಿಮಾನೇ ಅಂತಲೇ ಡೈರೆಕ್ಟರ್ ಶ್ರೀನಿ ಮಾಹಿತಿ ಕೊಟ್ಟಿದ್ದಾರೆ. ಇವರ ಚಿತ್ರದಲ್ಲಿ ಭಾರೀ ಆ್ಯಕ್ಷನ್​ಗಳ ಸುರಿ ಮಳೆನೆ ಆಗೋ ಹಾಗಿದೆ.

  • Share this:

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಅಭಿನಯದ ಘೋಸ್ಟ್ 127 ನೇ ಸಿನಿಮಾಗಾಗಿಯೇ 3 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಜೈಲ್ ಸೆಟ್ ನಿರ್ಮಿಸಲಾಗುತ್ತಿದೆ. ಬೆಂಗಳೂರಿನ (Bangalore) ಮಿನರ್ವ ಮಿಲ್ಸ್ ನಲ್ಲಿಯೇ ಅದ್ದೂರಿ ಜೈಲ್ (Jail Set) ಸೆಟ್ ನಿರ್ಮಿಸಲಾಗುತ್ತಿದೆ. ಕನ್ನಡದ ಈ ಚಿತ್ರದಲ್ಲಿ ಮಲೆಯಾಳಂ ಹೀರೋ ಒಬ್ಬರು ಕೂಡ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಸಿನಿಮಾದ ಮುಹೂರ್ತ ಶೀಘ್ರದಲ್ಲಿಯೇ ಆಗಲಿದೆ. ಡೈರೆಕ್ಟರ್ ಶ್ರೀನಿ ಅವರಿಗೆ ಇದು ಐದನೇ ಸಿನಿಮಾ. ಈ ಹಿಂದೆ ಟೋಪಿವಾಲಾ, ಬೀರ್​ಬಲ್, ಓಲ್ಡ್ ಮಾಂಕ್ ಸಿನಿಮಾ ಮಾಡಿದ್ದಾರೆ. ಈಗ ಘೋಸ್ಟ್  ಚಿತ್ರ ಮಾಡುತ್ತಿದ್ದಾರೆ.  ಇದರ ಬಗ್ಗೆ ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅದರ ವಿವರಣೆ ಇಲ್ಲಿದೆ ಓದಿ.


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದಲ್ಲಿ ಇಲ್ಲಿವರೆಗೂ ಒಟ್ಟು 100ಕ್ಕೂ ಅಧಿಕ ಸಿನಿಮಾಗಳು ಬಂದಿವೆ. ಕೆಲವು ಜನರಿಗೆ ಇಷ್ಟಾ ಆಗಿವೆ. ಇನ್ನು ಕೆಲವು ನಿರ್ಮಾಪಕರನ್ನ ದಿಲ್ ಖುಷ್ ಮಾಡಿವೆ.


ಕನ್ನಡದ ಈ ಸೂಪರ್ ಸ್ಟಾರ್​ಗೆ ಸಿನಿಮಾ ಜೀವನದಲ್ಲಿ 125 ನೇ ಸಿನಿಮಾ ತುಂಬಾ ವಿಶೇಷ. ಇದನ್ನ ಡೈರೆಕ್ಟರ್ ಎ.ಹರ್ಷ ವೇದ ಹೆಸರಲ್ಲಿಯೇ ಮಾಡಿದ್ದಾರೆ. 126 ನೇ ಚಿತ್ರವನ್ನ ಯಾರು ಮಾಡ್ತಾರೆ.? ಈ ಲೆಕ್ಕದ ಮಾಹಿತಿ ಸದ್ಯಕ್ಕಿಲ್ಲ.


Kannada Director Srini is Going to Direct Shivaraj kumar for his Ghost Movie
ಕನ್ನಡದ ಘೋಸ್ಟ್ ಅಪ್ಪಟ ಆ್ಯಕ್ಷನ್ ಸಿನಿಮಾ


ಆದರೆ ಶಿವರಾಜ್ ಕುಮಾರ್ 127 ನೇ ಸಿನಿಮಾವನ್ನ ಡೈರೆಕ್ಟ್ ಮಾಡೋ ಚಾನ್ಸ್ ನಟ-ನಿರ್ದೇಶಕ ಶ್ರೀನಿಗೆ ಸಿಕ್ಕಿದೆ. ಶ್ರೀನಿ ಯಾರೂ ಅಂತ ಹೇಳೋದೇ ಬೇಡ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಟೋಪಿವಾಲಾ ಹಾಗೂ ಇತ್ತೀಚಿಗೆ ಬಂದ ಓಲ್ಡ್ ಮಾಂಕ್ ಸಿನಿಮಾಗಳನ್ನ ಇವರೇ ಡೈರೆಕ್ಟ್ ಮಾಡಿರೋದು.


ಹೊಸ ಕಲ್ಪನೆಯ ಹೊಸ ರೀತಿಯ ಸಿನಿಮಾ ಮಾಡೋ ಶ್ರೀನಿ, ಈಗ ತಮ್ಮ ಚಿತ್ರ ಜೀವನದ ಐದನೇ ಸಿನಿಮಾ ಡೈರೆಕ್ಟ್ ಮಾಡುತ್ತಿದ್ದಾರೆ. ಅದುವೇ ಈ ಕನ್ನಡದ ಘೋಸ್ಟ್ ಸಿನಿಮಾ.
ಘೋಸ್ಟ್ ಸಿನಿಮಾ ಹಾರರ್ ಸಿನಿಮಾ ಅಲ್ಲವೇ ಅಲ್ಲ


ಇದನ್ನೂ ಓದಿ: Ganesh-Kantara: ಕಾಂತಾರ ಚಿತ್ರ ವೀಕ್ಷಿಸಲು ಕಾತರಿಸ್ತಿರೋ ಗೋಲ್ಡನ್ ಸ್ಟಾರ್!


ಘೋಸ್ಟ್ ಸಿನಿಮಾ ಒಂದು ಹಾರರ್ ಸಿನಿಮಾ. ಇದರಲ್ಲಿ ಭೂತ-ಪ್ರೇತ ಇರುತ್ತದೆ ಅಂತಲೇ ಟೈಟಲ್ ನೋಡಿದಾಕ್ಷಣ ಹೇಳಿ ಬಿಡಬಹುದು. ಆದರೆ ಡೈರೆಕ್ಟರ್ ಶ್ರೀನಿ ಇಲ್ಲಿ ಭೂತ-ಪ್ರೇತದ ಕಥೆಯನ್ನ ಹೇಳೋಕೆ ಹೊರಟ್ಟಿಲ್ಲ. ಬದಲಾಗಿ ಬೇರೆ ಕಥೆಯನ್ನೆ ಘೋಸ್ಟ್​ಗಾಗಿ ಹೆಣೆದಿದ್ದಾರೆ.


ಘೋಸ್ಟ್ ಒಂದು ಭರ್ಜರಿ ಆ್ಯಕ್ಷನ್ ಸಿನಿಮಾ
ಹೌದು, ಘೋಸ್ಟ್ ಸಿನಿಮಾದಲ್ಲಿ ಆ್ಯಕ್ಷನ್ ಜಾಸ್ತಿ ಇದೆ. ಇದು ಆ್ಯಕ್ಷನ್ ಸಿನಿಮಾನೇ ಅಂತಲೇ ಡೈರೆಕ್ಟರ್ ಶ್ರೀನಿ ಮಾಹಿತಿ ಕೊಟ್ಟಿದ್ದಾರೆ. ಇವರ ಚಿತ್ರದಲ್ಲಿ ಭಾರೀ ಆ್ಯಕ್ಷನ್​ಗಳ ಸುರಿ ಮಳೆನೆ ಆಗೋ ಹಾಗಿದೆ.


ಘೋಸ್ಟ್ ಚಿತ್ರಕ್ಕಾಗಿಯೇ 3 ಕೋಟಿ ವೆಚ್ಚದಲ್ಲಿ ಜೈಲ್ ಸೆಟ್ ನಿರ್ಮಾಣ
ಘೋಸ್ಟ್ ಚಿತ್ರದ ಚಿತ್ರೀಕರಣ ಬಹುತೇಕ ಜೈಲಿನಲ್ಲಿಯೇ ನಡೆಯುತ್ತದೆ. ಇದಕ್ಕಾಗಿಯೇ ಹೆಚ್ಚು ಕಡಿಮೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಲಾಗುತ್ತಿದೆ. ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಚಿತ್ರಕ್ಕಾಗಿ ಮಿನರ್ವ ಮಿಲ್ಸ್​ ನಲ್ಲಿ ಸೆಟ್ ಹಾಕುತ್ತಿದ್ದಾರೆ.


Kannada Director Srini is Going to Direct Shivaraj kumar for his Ghost Movie
ಘೋಸ್ಟ್ ಸಿನಿಮಾ ಡೈರೆಕ್ಟರ್ ಶ್ರೀನಿ


ಅಕ್ಟೋಬರ್-12 ರಂದು ಘೋಸ್ಟ್ ಸಿನಿಮಾದ ಮುಹೂರ್ತ
ಇದೇ ಅಕ್ಟೋಬರ್-12 ರಂದು ಘೋಸ್ಟ್ ಚಿತ್ರಕ್ಕೆ ಮುಹೂರ್ತ ನೆರವೇರುತ್ತದೆ. ಈ ದಿನದಿಂದಲೇ ಬರೋಬ್ಬರಿ 26 ದಿನಗಳ ಮೊದಲ ಹಂತದ ಚಿತ್ರೀಕರಣವೂ ಆರಂಭಗೊಳ್ಳುತ್ತದೆ.


ಕನ್ನಡಕ್ಕೆ ಬರ್ತಿದ್ದಾರೆ ಮಲೆಯಾಳಂ ನಟ ಜಯರಾಮ್
ಒಟ್ಟು ಮೂರು ಹಂತದಲ್ಲಿ ಸಿನಿಮಾದ ಶೂಟಿಂಗ್ ಪ್ಲಾನ್ ಆಗಿದೆ. ಮಲೆಯಾಳಂನ ಹೆಸರಾಂತ ನಟ ಜಯರಾಮ್ ಈ ಮೂಲಕ ಕನ್ನಡಕ್ಕೂ ಈಗ ಕಾಲಿಡುತ್ತಿದ್ದಾರೆ.
ಶಿವರಾಜ್ ಅಭಿನಯದ ಚಿತ್ರದಲ್ಲಿ ಜಯರಾಮ್ ಅಭಿನಯಿಸುತ್ತಿದ್ದಾರೆ.


ಇಷ್ಟು ಬಿಟ್ಟರೇ, ಇವರ ಕ್ಯಾರೆಕ್ಟರ್ ಏನೂ ಅನ್ನೋದನ್ನ ಕಾದು ನೋಡಬೇಕಿದೆ. ಉಳಿದಂತೆ ಕನ್ನಡದ ಘೋಸ್ಟ್ ಸಿನಿಮಾದ ಇತರ ಮಾಹಿತಿ ಹೊರ ಬೀಳಬೇಕಿದೆ.


ಇದನ್ನೂ ಓದಿ: Bigg Boss Season 9: ಏನೋ ಬಟ್ಟೆ ಇಲ್ವಾ ಅಂತಿದ್ರು ಜನ! ಹೊಸ ಉಡುಪು ನೋಡಿ ನವಾಜ್ ಭಾವುಕ


ಡೈರೆಕ್ಟರ್ ಶ್ರೀನಿ ಸದ್ಯಕ್ಕೆ ಇಷ್ಟು ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ಚಿತ್ರದ
ಮುಹೂರ್ತದ ದಿನ ಸಿನಿಮಾದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ರಿವೀಲ್ ಆಗಬಹುದು. ಅವುಗಳನ್ನೂ ಹೇಳುತ್ತೇವೆ ವೇಟ್ ಮಾಡಿ.

First published: