ಕನ್ನಡದ ಡೈರೆಕ್ಟರ್ ಸಿಂಪಲ್ (Director Simple Suni) ಸುನಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾದ ಅಧಿಕೃತ ಮಾಹಿತಿ ಕೂಡ ಈಗ ಹೊರ ಬಿದ್ದಿದೆ. ಸಿನಿಮಾದ ಹೀರೋನ ಆಯ್ಕೆ ಕೂಡ ಆಗಿದೆ. ಈ ಮೂಲಕ (Simple Suni New Film) ಸುನಿ ಜೊತೆಗೆ ಡಾಕ್ಟರ್ ರಾಜ್ಕುಮಾರ್ ಮೊಮ್ಮಗ (Vinay Rajkumar New Film) ವಿನಯ್ ರಾಜ್ಕುಮಾರ್ ಫಸ್ಟ್ ಟೈಮ್ ಕೆಲಸ ಮಾಡುತ್ತಿದ್ದಾರೆ. ಇಲ್ಲಿವರೆಗೂ ವಿನಯ್ ಮತ್ತು ಸುನಿ ಎಲ್ಲೂ ಕೆಲಸ ಮಾಡಿಲ್ಲ. ಇನ್ನೂ ಹೆಸರು ಇಡದೇ ಇರೋ ಈ ಚಿತ್ರದ ಮೂಲಕ ಒಂದಾಗಿದ್ದಾರೆ. ಸಿನಿಮಾ (Simple Suni New Movie) ಒಂದಷ್ಟು ಮಾಹಿತಿಯನ್ನ ಡೈರೆಕ್ಟರ್ ಸುನಿ, ನ್ಯೂಸ್-18 ಕನ್ನಡ ಡಿಜಿಟಲ್ಗೂ ಹೇಳಿದ್ದಾರೆ. ಅದರ ಸುತ್ತ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಡೈರೆಕ್ಟರ್ ಸಿಂಪಲ್ ಸುನಿ ಹೊಸ ಸಿನಿಮಾ ಹೇಗಿರುತ್ತದೆ?
ಡೈರೆಕ್ಟರ್ ಸಿಂಪಲ್ ಸುನಿ ಮುಂದಿನ ಸಿನಿಮಾ ಯಾವುದು? ಈ ಒಂದು ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅವತಾರಪುರುಷ ಮೂಲಕ ಹೊಸ ಅಲೆ ಎಬ್ಬಿಸಿದ್ದ ಸಿಂಪಲ್ ಸುನಿ, ಈಗ ಹೊಸದೊಂದು ಕಥೆ ಮೂಲಕ ಮತ್ತೊಮ್ಮ ರೆಡಿ ಆಗಿದ್ದಾರೆ.
ಸಿಂಪಲ್ ಸುನಿ ಒಳ್ಳೆ ಕಥೆಗಳನ್ನೆ ಆಯ್ಕೆ ಮಾಡಿಕೊಳ್ತಾರೆ. ಆಯಾ ಕಥೆಗಳನ್ನ ಅಷ್ಟೇ ಅಚ್ಚುಕಟ್ಟಾಗಿಯೇ ಸಿನಿಮಾ ಮಾಡ್ತಾರೆ. ಒಳ್ಳೆ ಚಿತ್ರಕಥೆಯನ್ನ ಕೂಡ ಮಾಡಿಕೊಳ್ತಾರೆ. ಆ ವಿಚಾರದಲ್ಲಿ ಹಲವು ಸಿನಿಮಾಗಳು ಇವೆ. ಈಗ ಸುನಿ ಮತ್ತೊಂದು ಕಥೆಯನ್ನ ಡೈರೆಕ್ಟ್ ಮಾಡುತ್ತಿದ್ದಾರೆ.
ಪ್ರಸನ್ನ ಬರೆದ ಕಥೆಗೆ ಸಿಂಪಲ್ ಸುನಿ ಡೈರೆಕ್ಷನ್
ಸಿಂಪಲ್ ಸುನಿ ಈಗ ಡೈರೆಕ್ಷನ್ ಮಾಡೋಕೆ ಒಪ್ಪಿರೋ ಸಿನಿಮಾದ ಹೆಸರೇನೂ ಅನ್ನೋದು ಇನ್ನಷ್ಟೇ ರಿವೀಲ್ ಆಗಬೇಕಿದೆ. ಆದರೆ ಈ ಕಥೆಯನ್ನ ಯಾರು ಬರೆದಿರೋದು ಅನ್ನೋ ವಿಚಾರ ಈಗ ಗೊತ್ತಾಗಿದೆ.
ನಿಜ, ಪ್ರಸನ್ನ ಬರೆದ ಕಥೆಯನ್ನೇ ಡೈರೆಕ್ಷರ್ ಸುನಿ ಡೈರೆಕ್ಷನ್ ಮಾಡುತ್ತಿದ್ದಾರೆ. ಚಿತ್ರಕಥೆಯನ್ನೂ ಈಗ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಡೈಲಾಗ್ ಅನ್ನೂ ಇವರೇ ಬರೆಯುತ್ತಿದ್ದಾರೆ. ಜೊತೆಗೆ ಒಂದ್ ಅದ್ಭುತ ಕಥೆಯನ್ನೆ ಸಿನಿಮಾ ಮಾಡ್ತಿರೋ ಖುಷಿಯಲ್ಲೂ ಇದ್ದಾರೆ.
ವಿನಯ್ ರಾಜ್ಕುಮಾರ್-ಸುನಿ ಮೊದಲ ಕಾಂಬಿನೇಷನ್
ವಿನಯ್ ರಾಜ್ಕುಮಾರ್ ಈಗಾಗಲೇ ಹಲವು ಸಿನಿಮಾ ಮಾಡಿದ್ದಾರೆ. ಆದರೆ ಸುನಿ ಜೊತೆಗೆ ಇದೇ ಮೊದಲ ಬಾರಿಗೆ ವಿನಯ್ ರಾಜ್ಕುಮಾರ್ ಚಿತ್ರ ಮಾಡುತ್ತಿದ್ದಾರೆ. ಸಿನಿಮಾ ಕಥೆಯನ್ನ ಕೂಡ ಕೇಳಿದ್ದಾರೆ.
ಸಿಂಪಲ್ ಸುನಿ ಹೇಳಿದ ಕಥೆ ಕೇಳಿ ವಿನಯ್ ಹೇಳಿದ್ದೇನು?
ಡೈರೆಕ್ಟರ್ ಸಿಂಪಲ್ ಸುನಿ ಹೇಳಿದ ಕಥೆಯನ್ನ ವಿನಯ್ ಕೇಳಿದ್ದಾರೆ. ಕೇಳಿದಾಕ್ಷಣ ಅಷ್ಟೆ ಖುಷಿ ಪಟ್ಟಿದ್ದಾರೆ. ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ. ಹಾಗಾಗಿಯೇ ಸಿಂಪ್ ಸುನಿ ಮತ್ತು ವಿನಯ್ ರಾಜ್ಕುಮಾರ್ ಕಾಂಬಿನೇಷನ್ನ ಸಿನಿಮಾ ಈಗ ಅನೌನ್ಸ್ ಆಗಿದೆ.
ಡೈರೆಕ್ಟರ್ ಸುನಿ ಚಿತ್ರದಲ್ಲಿ ವಿನಯ್ ಮ್ಯೂಜಿಸಿಯನ್
ಸಿಂಪಲ್ ಸುನಿ ಡೈರೆಕ್ಟ್ ಮಾಡ್ತಿರೋ ಈ ಚಿತ್ರದಲ್ಲಿ ವಿನಯ್ ಒಬ್ಬ ಮ್ಯೂಜಿಸಿಯನ್ ಪಾತ್ರವನ್ನೆ ಮಾಡುತ್ತಿದ್ದಾರೆ. ಆದರೆ ಈ ಪಾತ್ರಕ್ಕೂ ಲವ್ಲಿ ಕಥೆ ಕೂಡ ಇದೆ. ಈ ಹಿನ್ನೆಲೆಯಲ್ಲಿ ಈ ಚಿತ್ರವನ್ನ ಮ್ಯೂಜಿಸಿಯನ್ ಲವ್ ಸ್ಟೋರಿ ಅಂತಲೇ ಡೈರೆಕ್ಟರ್ ಸಿಂಪಲ್ ಸುನಿ ನ್ಯೂಸ್-18 ಕನ್ನಡಕ್ಕೆ ತಿಳಿಸಿದ್ದಾರೆ.
ಇದೇ ಫೆಬ್ರವರಿ ತಿಂಗಳಲ್ಲಿ ಸೆಟ್ಟೇರಲಿದೆ ಸಿನಿಮಾ
ವಿನಯ್ ರಾಜ್ಕುಮಾರ್ ಮತ್ತು ಸಿಂಪಲ್ ಸುನಿಯ ಈ ಚಿತ್ರಕ್ಕೆ ವೀರ್ ಸಮರ್ಥ ಸಂಗೀತ ಕೊಡುತ್ತಿದ್ದಾರೆ. ಸಭಾ ಛಾಯಾಗ್ರಹಣ ಮಾಡುತ್ತಿದ್ದಾರೆ. ಮೈಸೂರು ರಮೇಶ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾದ ಟೈಟಲ್ ಅನೌನ್ಸ್ ಆಗುತ್ತಿದೆ. ಸದ್ಯಕ್ಕೆ ಈ ಚಿತ್ರದ ಮಾಹಿತಿ ಇಷ್ಟೇ ರಿವೀಲ್ ಆಗಿದೆ.
ಇದನ್ನೂ ಓದಿ: Ramachari Reels: ಶಿವಣ್ಣನ ಗಿಲ್ಲಕ್ಕೋ ಹಾಡಿಗೆ ರಾಮಾಚಾರಿಯ ರೀಲ್ಸ್ ವೈರಲ್
ವಿನಯ್ ರಾಜ್ಕುಮಾರ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಆ ಚಿತ್ರಗಳಲ್ಲಿ ಕೆಲವನ್ನ ಈಗಾಗಲೇ ವಿನಯ್ ಮುಗಿಸಿಕೊಟ್ಟಿದ್ದಾರೆ. ಪೆಪೆ ಆ ಸಾಲಿನ ಒಂದು ಚಿತ್ರವೇ ಆಗಿದೆ. ಇದು ಕೂಡ ವಿಶೇಷವಾಗಿಯೇ ಇದೆ. ಗ್ರಾಮಾಯಣ, ಅದೊಂದಿತ್ತು ಕಾಲ ಚಿತ್ರಗಳೂ ರಿಲೀಸ್ ಆಗಬೇಕಿವೆ. ಅದಕ್ಕೂ ಮೊದಲೇ ಸುನಿ ಜೊತೆಗೆ ವಿನಯ್ ಹೊಸ ಸಿನಿಮಾ ಅನೌನ್ಸ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ