• Home
  • »
  • News
  • »
  • entertainment
  • »
  • Director Satya Prakash New Film: ರಾಮಾ ರಾಮಾ ರೇ ಡೈರೆಕ್ಟರ್ ಸತ್ಯಪ್ರಕಾಶ್ ಈಗ ಕಾಮನ್ ಮ್ಯಾನ್! ಏನ್ ಇದರ ಹಿಂದಿನ ರಹಸ್ಯ?

Director Satya Prakash New Film: ರಾಮಾ ರಾಮಾ ರೇ ಡೈರೆಕ್ಟರ್ ಸತ್ಯಪ್ರಕಾಶ್ ಈಗ ಕಾಮನ್ ಮ್ಯಾನ್! ಏನ್ ಇದರ ಹಿಂದಿನ ರಹಸ್ಯ?

ಕಾಮನ್ ಮ್ಯಾನ್ ಆದ್ರು ಡೈರೆಕ್ಟರ್ ಸತ್ಯ ಪ್ರಕಾಶ್

ಕಾಮನ್ ಮ್ಯಾನ್ ಆದ್ರು ಡೈರೆಕ್ಟರ್ ಸತ್ಯ ಪ್ರಕಾಶ್

ಸತ್ಯ ಪ್ರಕಾಶ್ ತಮ್ಮ ಜೀವನದಲ್ಲಿ ನಡೆದ ಒಂದಷ್ಟು ಘಟನೆಗಳನ್ನ ಹೇಳಿದ್ದಾರೆ. ಆ ಘಟನೆಗಳೆಲ್ಲ ಚಿತ್ರ ರೂಪವೂ ಪಡೆದಿವೆ. ಕೊನೆಗೆ ಈ ಚಿತ್ರದಲ್ಲಿ ಬರುವ ಪಾತ್ರವನ್ನ ನೀವು ಮಾಡಿದ್ರೆ ಚೆನ್ನಾಗಿರುತ್ತದೆ ಅನ್ನುವ ಒಮ್ಮತ ಅಭಿಪ್ರಾಯವೂ ಬಂದಿದೆ. ಆಗಲೇ ಸತ್ಯ ಪ್ರಕಾಶ್ ಅಭಿನಯಿಸೋಕೆ ಒಪ್ಪಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್​​ನಲ್ಲಿ (Sandalwood) ಅದ್ಭುತ ಸಿನಿಮಾಗಳು ರೆಡಿ ಆಗುತ್ತಿವೆ. ಈ ಹಿಂದೇನೆ ಇಲ್ಲಿ ಒಳ್ಳೆ ಕಂಟೆಂಟ್ ಇರೋ ಚಿತ್ರಗಳು ಬಂದಿವೆ. ಒಂದಲ್ಲ ಎರಡಲ್ಲ ಸಿನಿಮಾ ಕೂಡ ಈ ಸಾಲಿನ ವಿಶೇಷ (Special Cinema) ಸಿನಿಮಾನೇ ಆಗಿದೆ. ರಾಮಾ ರಾಮಾ ರೇ ಚಿತ್ರವೂ ಕನ್ನಡದ ಮತ್ತೊಂದು ಸ್ಪೆಷಲ್ ಸಿನಿಮಾ ಆಗಿತ್ತು. ಮೊನ್ನೆ ಮೊನ್ನೆ ಓಟಿಟಿಯಲ್ಲೂ (OTT) ಮ್ಯಾನ್ ಆಫ್ ದಿ ಮ್ಯಾಚ್ ಹೆಸರಿನ ಸಿನಿಮಾ ಬಂತು. ಇದಕ್ಕೂ ಒಳ್ಳೆ ರೆಸ್ಪಾನ್ಸ್ ಬಂದಿದೆ. ಇಷ್ಟೆಲ್ಲ ಚಿತ್ರದ ಹಿಂದೆ ಇದ್ದ ವ್ಯಕ್ತಿ ಯಾರು? ಅಲ್ಲಿ ಬರುವ ಹೆಸರು ಸತ್ಯ ಪ್ರಕಾಶ್. ಹೌದು, ಡೈರೆಕ್ಟರ್ ಸತ್ಯ (Saty Prakash) ಪ್ರಕಾಶ್ ತಮ್ಮ ಚಿತ್ರ ಜೀವನದಲ್ಲಿ ಅದ್ಭುತ ಚಿತ್ರಗಳನ್ನ ಕೊಡುತ್ತಲೇ ಬಂದಿದ್ದಾರೆ.


ತುಂಬಾ ವಿಶೇಷ ಅನಿಸೋ ಸಿನಿಮಾವನ್ನ ಈಗ ಬರೆದಿದ್ದಾರೆ. ಈ ಸಿನಿಮಾದ ವಿಶೇಷಗಳನ್ನ ನ್ಯೂಸ್​​-18 ಕನ್ನಡ ಡಿಜಿಟಲ್​ ಜೊತೆಗೆ ಹಂಚಿಕೊಂಡಿದ್ದಾರೆ. ಆ ವಿವರ ಇಲ್ಲಿದೆ ಓದಿ.


ಕಾಮನ್ ಮ್ಯಾನ್ ಡೈರೆಕ್ಟರ್ ಸತ್ಯ ಪ್ರಕಾಶ್
ಡೈರೆಕ್ಟರ್ ಸತ್ಯ ಪ್ರಕಾಶ್ ಸಿನಿಮಾದಲ್ಲಿ ಆಡಂಬರ ಇರೋದಿಲ್ಲ. ರಿಯಲಿಸ್ಟಿಕ್ ಕಥೆಗಳನ್ನ ಸಿನಿಮ್ಯಾಟಿಕ್ ಫಾರ್ಮ್ಯಾಟ್​​ ನಲ್ಲಿಯೇ ಅದ್ಭುತವಾಗಿಯೇ ಕಟ್ಟಿಕೊಡ್ತಾರೆ. ರಾಮಾ ರಾಮಾ ರೇ ಸಿನಿಮಾ ಅದಕ್ಕೊಂದು ಒಳ್ಳೆ ಉದಾಹರಣೆನೆ ಆಗಿದೆ.


Kannada Director Satya Prakash New Project Announced
ಹಾಸ್ಯದ ಚೌಕಟ್ಟಿನಲ್ಲಿ ಡೈರೆಕ್ಟರ್ ಸತ್ಯ ಪ್ರಕಾಶ್ ಸಿನಿಮಾ


ರಾಮಾ ರಾಮಾ ರೇ ಆದ್ಮೇಲೆ ಒಂದಲ್ಲ ಎರಡಲ್ಲ ಸಿನಿಮಾ ಮಾಡಿದ್ದರು ಸತ್ಯ ಪ್ರಕಾಶ್, ಈ ಚಿತ್ರ ಕೂಡ ಒಳ್ಳೆ ಸಿನಿಮಾನೇ ಆಗಿತ್ತು. ಇದಾದ್ಮೇಲೆ ಮ್ಯಾನ್ ಆಫ್​ ದಿ ಮ್ಯಾಚ್ ಹೆಸರಿನ ಚಿತ್ರ ಮಾಡಿದರು.


ಅದು ಕೂಡ ಸ್ಪೆಷಲ್ ಆಗಿಯೇ ಇತ್ತು. ಆದರೆ ಇದನ್ನ ಓಟಿಟಿಯಲ್ಲಿ ಮಾತ್ರ ರಿಲೀಸ್ ಮಾಡಲಾಯಿತು. ಅಲ್ಲೂ ಕೂಡ ಸೂಪರ್ ರೆಸ್ಪಾನ್ಸ್ ಪಡೆದಿರೋದು ವಿಶೇಷವೇ ಸರಿ.




ಸತ್ಯ ಪ್ರಕಾಶ್ ಮುಂದಿನ ಸಿನಿಮಾ ಹೇಗಿರುತ್ತದೆ?
ಡೈರೆಕ್ಟರ್ ಸತ್ಯ ಪ್ರಕಾಶ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನೈಜ ಘಟನೆಗಳನ್ನೆ ಕಥೆ ಮಾಡಲಾಗಿದೆ. ವಿಶೇಷವಾಗಿ ಈ ಚಿತ್ರದಲ್ಲಿಯ ಘಟನೆಗಳು ಡೈರೆಕ್ಟರ್ ಸತ್ಯ ಪ್ರಕಾಶ್ ಜೀವನದಲ್ಲಿ ನಡೆದಿರೋ ಘಟನೆಗಳೇ ಆಗಿವೆ.


ಸತ್ಯ ಪ್ರಕಾಶ್ ಅವರ ಈ ಮುಂದಿನ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುತ್ತಿದೆ. ಫ್ಯಾಮಿಲಿ, ರಾಜಕೀಯ, ಕ್ರೀಡೆ ಹೀಗೆ ಎಲ್ಲವೂ ಈ ಚಿತ್ರದಲ್ಲಿದೆ. ಆದರೆ ಎಲ್ಲವೂ ಇಲ್ಲಿ ಬೇರೆ ರೀತಿಯಲ್ಲಿಯೇ ಹೇಳಲಾಗುತ್ತಿದೆ. ಅದೇನು ಅನ್ನೋದನ್ನ ಇಲ್ಲಿ ಹೇಳ್ತಿವಿ ಓದಿ.


ಹಾಸ್ಯದ ಚೌಕಟ್ಟಿನಲ್ಲಿ ಡೈರೆಕ್ಟರ್ ಸತ್ಯ ಪ್ರಕಾಶ್ ಸಿನಿಮಾ
ಹೌದು, ಸತ್ಯ ಪ್ರಕಾಶ್ ತಮ್ಮ ಈ ಚಿತ್ರವನ್ನ ಹಾಸ್ಯದ ಚೌಕಟ್ಟಿನಲ್ಲಿಯೇ ಹೇಳುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ರಾಮಾ ರಾಮಾ ರೇ ಚಿತ್ರದ ಧರ್ಮಣ್ಣ, ನಟರಾಜ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಇನ್ನೂ ಒಂದು ವಿಶೇಷ ಇದೆ.


Kannada Director Satya Prakash New Project Announced
ಸತ್ಯ ಪ್ರಕಾಶ್ ಮುಂದಿನ ಸಿನಿಮಾ ಹೇಗಿರುತ್ತದೆ?


ಕಾಮನ್ ಮ್ಯಾನ್ ಆದ್ರು ಡೈರೆಕ್ಟರ್ ಸತ್ಯ ಪ್ರಕಾಶ್
ಡೈರೆಕ್ಟರ್ ಸತ್ಯ ಪ್ರಕಾಶ್ ಈ ಮೂಲಕ ಇನ್ನೂ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಇಲ್ಲಿವರೆಗೂ ನಿರ್ದೇಶನ ಮತ್ತು ಚಿತ್ರ ನಿರ್ಮಾಣ ಮಾಡಿದ್ದ ನಿರ್ದೇಶಕ ಸತ್ಯ ಪ್ರಕಾಶ್ ಈಗ ನಟನೆಗೂ ಮುಂದಾಗಿದ್ದಾರೆ. ತಮ್ಮ ಈ ಚಿತ್ರದಲ್ಲಿ ಒಂದು ರಿಯಲಿಸ್ಟಿಕ್ ಕಾಮನ್ ಮ್ಯಾನ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.


ಕಥೆಯ ಚರ್ಚೆಗೆ ಕುಳಿತಾಗ ಸತ್ಯ ಪ್ರಕಾಶ್ ತಮ್ಮ ಜೀವನದಲ್ಲಿ ನಡೆದ ಒಂದಷ್ಟು ಘಟನೆಗಳನ್ನ ಹೇಳಿದ್ದಾರೆ. ಆ ಘಟನೆಗಳೆಲ್ಲ ಚಿತ್ರ ರೂಪವೂ ಪಡೆದಿವೆ. ಕೊನೆಗೆ ಈ ಚಿತ್ರದಲ್ಲಿ ಬರುವ ಪಾತ್ರವನ್ನ ನೀವು ಮಾಡಿದ್ರೆ ಚೆನ್ನಾಗಿರುತ್ತದೆ ಅನ್ನುವ ಒಮ್ಮತ ಅಭಿಪ್ರಾಯವೂ ಬಂದಿದೆ. ಆಗಲೇ ಸತ್ಯ ಪ್ರಕಾಶ್ ಅಭಿನಯಿಸೋಕೆ ಒಪ್ಪಿದ್ದಾರೆ.


ಸತ್ಯ ಪ್ರಕಾಶ್ ನಟನೆಯ ಈ ಚಿತ್ರದ ಟೈಟಲ್ ಏನು?
ಸತ್ಯ ಪ್ರಕಾಶ್ ನಿರ್ಮಾಣದ ಈ ಚಿತ್ರದ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಆದರೆ ಒಂದಷ್ಟು ಟೈಟಲ್ ಈಗಾಗಲೇ ಪ್ಲಾನ್ ಆಗಿವೆ. ಅವುಗಳಲ್ಲಿ ಒಂದನ್ನ ಆಯ್ದುಕೊಂಡು ಶೀಘ್ರದಲ್ಲಿಯೇ ಅನೌನ್ಸ್ ಮಾಡಲಿದ್ದಾರೆ.


ಇದನ್ನೂ ಓದಿ: Regional Content Cinema: ಕಾಂತಾರ ಬಳಿಕ ಮತ್ತೊಂದು ಸ್ಥಳೀಯ ಕಥೆ! ಉತ್ತರ ಕನ್ನಡ ಭಾಷೆಯಲ್ಲಿ ಬರ್ತಿದೆ ಶ್ರೀ ಬಾಲಾಜಿ Photo ಸ್ಡುಡಿಯೋ ಸಿನಿಮಾ!


ಜನವರಿ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ. ರಾಮಾ ರಾಮಾ ರೇ ಚಿತ್ರದ ವಾಸುಕಿ ವೈಭವ್ ಈ ಚಿತ್ರಕ್ಕೂ ಸಂಗೀತ ಕೊಡಲಿದ್ದಾರೆ. ಇನ್ನುಳಿದಂತೆ ರಾಮಾ ರಾಮಾ ರೇ ಟೀಮ್ ಇಲ್ಲಿ ಮತ್ತೊಮ್ಮೆ ಒಂದಾಗುತ್ತಿದೆ. ಮತ್ತೊಂದು ಒಳ್ಳೆ ಸಿನಿಮಾ ಕೊಡಲುವ ರೆಡಿ ಆಗುತ್ತಿದೆ.

First published: