Puneeth Rajkumar: ಅಪ್ಪು ಹೇಳಿದ್ದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ಈ ನಿರ್ದೇಶಕ ಮಾಡಿದ್ದೇನು ಗೊತ್ತಾ? ನೀವೇ ನೋಡಿ...

ಅಪ್ಪು ಹೇಳಿದ್ದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಿರ್ದೇಶಕ ಸತ್ಯ ಪ್ರಕಾಶ್​ ಈಗ ಸಿನಿಮಾ ವಿತರಕರಾಗಿದ್ದಾರೆ. ಸತ್ಯ ಹಾಗೂ ಇನ್ನೂ ಕೆಲವು ಸಮಾನ ಮನಸ್ಕ ಗೆಳಯರು ಸೇರಿಕೊಂಡು 'ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್'(Sathya Cinema Distributors) ಹೆಸರಿನ ಸಿನಿಮಾ ವಿತರಣೆ ಸಂಸ್ಥೆ ಆರಂಭಿಸಿದ್ದು, ಸದಭಿರುಚಿಯ ಕನ್ನಡ ಸಿನಿಮಾಗಳನ್ನು ಕರ್ನಾಟಕದ ಜನತೆಗೆ ತಲುಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.

ಪುನೀತ್​ ರಾಜ್​ಕುಮಾರ್​, ನಿರ್ದೇಶಕ ಸತ್ಯ ಪ್ರಕಾಶ್​

ಪುನೀತ್​ ರಾಜ್​ಕುಮಾರ್​, ನಿರ್ದೇಶಕ ಸತ್ಯ ಪ್ರಕಾಶ್​

  • Share this:
ಅಪ್ಪು(Appu), ಪವರ್​ ಸ್ಟಾರ್​(Power Star), ನಟಸಾರ್ವಭೌಮ, ಸರಳತೆಯ ಸಾಮ್ರಾಟ್​, ಬೆಟ್ಟದ ಹೂ, ಹೀಗೆ ಪುನೀತ್​ ರಾಜ್​ಕುಮಾರ್(Puneeth Rajkumar)​ ಅವರನ್ನು ಕರೆಯಲು ಇರುವ ಹೆಸರು ಒಂದೇ..?ಎರಡೇ..? ಕರುನಾಡಿನ ಮಗ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ದೈಹಿಕ(Physically)ವಾಗಿ ಇಂದು ನಮ್ಮ ಜೊತೆ ಇಲ್ಲ. ಅವರು ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಇಡೀ ಕರ್ನಾಟಕಕ್ಕೆ ಆವರಿಸಿರುವ ಸೂತಕ ಮಾತ್ರ ಹಾಗಯೇ ಇದೆ. ಎಷ್ಟೆ ಆದರೂ ಯಾರ ಮಗ ಹೇಳಿ.. ಡಾ.ರಾಜ್​​ಕುಮಾರ್(Dr. Rajkumar)​ ಅವರ ತೃತೀಯ ಪುತ್ರ ಪವರ್​ ಸ್ಟಾರ್​ ಅಪ್ಪನ ಹಾಗೇ ಅಪ್ಪು ಬದುಕಿದರೇ ಹೀಗೆ ಬದುಕಬೇಕು ಎಂದು ಎಲ್ಲರಿಗೂ ತೋರಿಸಿ ಇಹಲೋಕ ತ್ಯಜಿಸಿದ್ದಾರೆ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಎಲ್ಲರೂ ಒಪ್ಪಿಕೊಂಡು ಹೋಗಬೇಕು. ಅವರು ಮಾಡುತ್ತಿದ್ದ ಕೆಲಸಗಳನ್ನು ಅವರ ಅಭಿಮಾನಿಗಳು ಅಳವಡಿಸಿಕೊಂಡಿದ್ದಾರೆ. ಅವರಲ್ಲಿ ‘ರಾಮಾ ರಾಮಾ ರೇ’, 'ಒಂದಲ್ಲ ಎರಡಲ್ಲ' ಅಂಥಹಾ ಸದಭಿರುಚಿಯ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕ ಸತ್ಯ ಪ್ರಕಾಶ್(Director Sathya Prakash). ಹೌದು ಅಪ್ಪು ಹೇಳಿದ್ದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಿರ್ದೇಶಕ ಸತ್ಯ ಪ್ರಕಾಶ್​ ಈಗ ಸಿನಿಮಾ ವಿತರಕರಾಗಿದ್ದಾರೆ. ಸತ್ಯ ಹಾಗೂ ಇನ್ನೂ ಕೆಲವು ಸಮಾನ ಮನಸ್ಕ ಗೆಳಯರು ಸೇರಿಕೊಂಡು 'ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್'(Sathya Cinema Distributors) ಹೆಸರಿನ ಸಿನಿಮಾ ವಿತರಣೆ ಸಂಸ್ಥೆ ಆರಂಭಿಸಿದ್ದು, ಸದಭಿರುಚಿಯ ಕನ್ನಡ ಸಿನಿಮಾಗಳನ್ನು ಕರ್ನಾಟಕದ ಜನತೆಗೆ ತಲುಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.

ಪುನೀತ್​ ಹೇಳಿದ್ದ ಆ ಒಂದು ಮಾತು ಸ್ಫೂರ್ತಿಯಾಯ್ತು!

ಪುನೀತ್ ರಾಜ್‌ಕುಮಾರ್ ಹೇಳಿದ ಮಾತನ್ನು ಸತ್ಯ ನೆನಪು ಮಾಡಿಕೊಂಡಿದ್ದಾರೆ. ‘ಪುನೀತ್ ರಾಜ್‌ಕುಮಾರ್ ಅವರು ಹೇಳಿದ್ದರು, 'ಸಿನಿಮಾ ಕಲೆ ನಿಜ, ಆದರೆ ಅದು ವ್ಯವಹಾರವೂ ಹೌದು. ಸಿನಿಮಾಕ್ಕೆ ಹಾಕಿದ ಬಂಡವಾಳವನ್ನು ನಾವು ಮರಳಿ ಪಡೆಯಬೇಕು. ಹಾಗಿದ್ದರೆ ಮಾತ್ರವೇ ಈ ಕಲೆ ಮುಂದುವರೆಯಲು ಸಾಧ್ಯ. ಹಣ ಮರಳಿ ಬಂದಾಗಲಷ್ಟೆ ನಮಗೆ ಇನ್ನಷ್ಟು ಒಳ್ಳೆಯ ಸಿನಿಮಾ ಮಾಡಲು ಸಾಧ್ಯ. ಸಿನಿಮಾವನ್ನು ನಂಬಿಕೊಂಡಿರುವ ಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯ, ಅವರು ಮತ್ತೊಂದು ಸಿನಿಮಾಕ್ಕೆ ಸಜ್ಜಾಗುವಂತೆ ಸ್ಪೂರ್ತಿ ತುಂಬಲು ಸಾಧ್ಯ' ಎಂದಿದ್ದರು. ಆ ಮಾತು ನನಗೆ ಹಿಡಿಸಿತು, ಅವರ ಮಾತಿನ ಸ್ಪೂರ್ತಿಯೂ ಈ ವಿತರಣೆ ವ್ಯವಹಾರಕ್ಕೆ ಇಳಿಯಲು ಕಾರಣಗಳಲ್ಲಿ ಒಂದು’ ಎಂದು ಹೇಳಿದರು.

ಇದನ್ನು ಓದಿ : ಅಣ್ಣನ ಕೊನೆ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ ಧ್ರುವ: ಶೀಘ್ರವೇ ತೆರೆಗೆ ಬರಲಿದೆ ‘ರಾಜಮಾರ್ತಾಂಡ’!

ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ‘ಮ್ಯಾನ್ ಆಫ್​ ದಿ  ಮ್ಯಾಚ್​’

ಸತ್ಯ ಪ್ರಕಾಶ್, 'ಮ್ಯಾನ್ ಆಫ್‌ ದಿ ಮ್ಯಾಚ್' ಸಿನಿಮಾ ನಿರ್ದೇಶನ ಮಾಡಿದ್ದು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾಕ್ಕೆ ಪುನೀತ್ ರಾಜ್‌ಕುಮಾರ್ ಬೆಂಬಲ ಇತ್ತು. ಸಿನಿಮಾವನ್ನು ಪುನೀತ್ ಅವರ ಪಿಆರ್‌ಕೆ ಪ್ರೊಡಕ್ಷನ್ ಸಂಸ್ಥೆ ಪ್ರೆಸೆಂಟ್ ಮಾಡುತ್ತಿದೆ. ಸಿನಿಮಾವು ಕೆಲವೇ ದಿನಗಳಲ್ಲಿ ನೇರ ಒಟಿಟಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಅಪ್ಪು ಹೇಳಿದ ಮಾತಿನಂತೆ ಸತ್ಯ & ಟೀಂ ಈಗ ಸಿನಿಮಾ ವಿತರಕರಾಗಿದ್ದಾರೆ.

ಇದನ್ನು ಓದಿ : ತಮಿಳುನಾಡು ಅಧಿವೇಶನದಲ್ಲೂ `ರಾಜರತ್ನ’ನಿಗೆ ಗೌರವ: ಮನಸ್ಸು ಏಕೋ ಭಾರ.. ಅಪ್ಪು ನೆನೆದು ನಾಯಕರು ಭಾವುಕ!

ತಮಿಳುನಾಡಿನ ಅಧಿವೇಶನದಲ್ಲಿ ಅಪ್ಪು ನೆನಪು!

ತಮಿಳುನಾಡಿನ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವುದು ನಿಯಮ. ಅಂತೆಯೇ ತಮಿಳು ನಾಡು ವಿಧಾನಸಭೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು. ‘ಪವರ್​ ಸ್ಟಾರ್​’ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸ್ಮರಿಸಲಾಗಿದೆ. ಇದು ಅಪ್ಪು ಅಭಿಮಾನಿಗಳಿಗೆ ನಿಜಕ್ಕೂ ಹೆಮ್ಮೆ ಎನಿಸುವ ಕ್ಷಣ. ಪುನೀತ್​ ನಿಧನರಾದಾಗ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರು ಸಂತಾಪ ಸೂಚಿಸಿದ್ದರು. ಈಗ ಅಲ್ಲಿನ ವಿಧಾನಸಭೆಯಲ್ಲಿ ಕನ್ನಡದ ನಟನಿಗೆ ಗೌರವ ಸಲ್ಲಿಕೆ ಆಗಿದೆ.
Published by:Vasudeva M
First published: