• Home
  • »
  • News
  • »
  • entertainment
  • »
  • Roopa Iyer: ಕನ್ನಡದ ನಿರ್ದೇಶಕಿಯ ಬಾಲಿವುಡ್ ಸಿನಿಮಾ! ನೀರಾ ಆರ್ಯ ಎಲ್ಲಿಗೆ ಬಂತು?

Roopa Iyer: ಕನ್ನಡದ ನಿರ್ದೇಶಕಿಯ ಬಾಲಿವುಡ್ ಸಿನಿಮಾ! ನೀರಾ ಆರ್ಯ ಎಲ್ಲಿಗೆ ಬಂತು?

ನೀರಾ ಆರ್ಯ ಪಾತ್ರದಲ್ಲಿ ರೂಪಾ ಅಯ್ಯರ್ ಅಭಿನಯ

ನೀರಾ ಆರ್ಯ ಪಾತ್ರದಲ್ಲಿ ರೂಪಾ ಅಯ್ಯರ್ ಅಭಿನಯ

ನೀರಾ ಆರ್ಯ ಚಿತ್ರದಲ್ಲಿ ಸುಭಾಷ್ ಚಂದ್ರ ಬೋಸ್ ಪಾತ್ರವನ್ನ ಬಾಲಿವುಡ್​ನಟ ಶ್ರೇಯಸ್ ತಲ್ಪಾಡೆ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲ ಓಕೆ ಆಗಿದ್ದು, ಇದೇ ತಿಂಗಳು ಬೆಂಗಳೂರಿಗೂ ಬರ್ತಿದ್ದಾರೆ. ಸುಭಾಷ್ ಚಂದ್ರ ಬೋಸ್ ಪಾತ್ರವನ್ನೆ ನಿರ್ವಹಿಸೋಕೆ ಬರ್ತಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ನಟಿ-ನಿರ್ದೇಶಕಿ ರೂಪಾ (Roopa Iyer) ಅಯ್ಯರ್ 10 ವರ್ಷದ ಬಳಿಕ ಈಗೊಂದು ಸಿನಿಮಾ ಮಾಡುತ್ತಿದ್ದಾರೆ. ಮುಖಪುಟ ಚಿತ್ರ ಆದ್ಮೇಲೆ ರೂಪಾ ಅಯ್ಯರ್ (Neera Arya Movie Director) ಈ ಚಿತ್ರವನ್ನೆ ಈಗ ಮಾಡ್ತಿರೋದು. ಈ ಚಿತ್ರದ ಬಗ್ಗೆ ಈಗಾಗಲೇ ಮಾಹಿತಿ ಕೊಟ್ಟಿದ್ದಾರೆ. ಹೌದು, ಈ ಚಿತ್ರದ ಹೆಸರು ನೀರಾ (Neer Arya Hindi Movie) ಆರ್ಯ. ಈ ನೀರಾ ಆರ್ಯ ಯಾರು? ಈ ಒಂದು ಪ್ರಶ್ನೆಗೆ ಉತ್ತರ ಎಲ್ಲರಿಗೂ ಗೊತ್ತಿಲ್ಲ. ಗೊತ್ತಿರೋರು ಅದನ್ನ ಅಷ್ಟೆ ಹಮ್ಮೆಯಿಂದಲೇ ಹೇಳಿಕೊಳ್ಳತಾರೆ. ಅಂತಹ ಮಹಾನ್ ಮಹಿಳೆ ಈ ನೀರಾ ಆರ್ಯ ಅಂತಲೇ ಹೇಳಬಹುದು. ಇವರ ಜೀವನ ಚರಿತ್ರೆ ಮೇಲೆನೇ ರೂಪಾ ಅಯ್ಯರ್  ಸಿನಿಮಾ ಮಾಡ್ತಿದ್ದಾರೆ. ಅದರ ಅಪ್​ಡೇಟ್ಸ್ ಅನ್ನ ಈಗ ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಹಂಚಿಕೊಂಡಿದ್ದಾರೆ.


ನೀರಾ ಆರ್ಯ ಜೀವನ ಎಲ್ಲ ಮಹಿಳೆಯರಿಗೂ ಸ್ಪೂರ್ತಿ
ನೀರಾ ಆರ್ಯ ಸ್ವತಂತ್ರ ಹೋರಾಟದಲ್ಲಿ ಮಡಿದ ಮಹಿಳೆ. ಸುಭಾಸ್​ ಚಂದ್ರ ಬೋಸ್ ಭಾರತೀಯ ರಾಷ್ಟ್ರೀಯ ಸೇನೆ (INA)ಕಟ್ಟಿದ್ದರು. ಇದರ ಜೊತೆ ಜೊತೆಗೆ ಮಹಿಳೆಯರ ಝಾನ್ಸಿ ರೆಜಿಮೆಂಟ್ ಕೂಡ ಇತ್ತು.


Kannada Director Roopa Iyer gave Exclusive information about Neera Arya movie
ನೀರಾ ಆರ್ಯ ಜೀವನ ಎಲ್ಲ ಮಹಿಳೆಯರಿಗೂ ಸ್ಪೂರ್ತಿ!


ಅದೇ ಝಾನ್ಸಿ ರೆಜಿಮೆಂಟ್​​ನ ರಾಣಿನೇ ಈ ನೀರಾ ಆರ್ಯ. ನೀರಾ ಆರ್ಯ ಹೋರಾಟ ಮತ್ತು ಸ್ವತಂತ್ರಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬ್ರಿಟಿಷ್ ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದ ಪತಿ, ಶ್ರೀಕಾಂತ್ ಜೈಶಂಕರ್ ದಾಸ್ ಅವರನ್ನ ಕೊಂದು ದೇಶ ಪ್ರೇಮ ಮೆರೆದ ಮಹಾನ್ ಮಹಿಳೆ ಈ ನೀರಾ ಆರ್ಯ ಅಂತಲೇ ಹೇಳಬಹುದು.




ನೀರಾ ಆರ್ಯ ಪಾತ್ರದಲ್ಲಿ ರೂಪಾ ಅಯ್ಯರ್ ಅಭಿನಯ
ನೀರಾ ಆರ್ಯ ಜೀವನ ಸ್ಪೂರ್ತಿದಾಯಕವಾಗಿಯೂ ಇದೆ. ಇದೇ ಪಾತ್ರವನ್ನೆ ನಟಿ-ನಿರ್ದೇಶಕ ರೂಪಾ ಅಯ್ಯರ್ ನಿರ್ವಹಿಸುತ್ತಿದ್ದಾರೆ. ನೀರಾ ಆರ್ಯ ಜೀವನ ಚರಿತ್ರೆಯನ್ನ ಡೈರೆಕ್ಷನ್ ಕೂಡ ಮಾಡುತ್ತಿದ್ದಾರೆ.


ಇದೇ 23 ರಿಂದ ಬೆಂಗಳೂರಿನಲ್ಲಿ ನೀರಾ ಆರ್ಯ ಶೂಟಿಂಗ್
ಈಗಾಗಲೇ ಈ ಚಿತ್ರದ ಚಿತ್ರೀಕರಣದ ಕೆಲಸ ಕೂಡ ಶುರು ಆಗಿದೆ. ಬೆಂಗಳೂರಿನಲ್ಲೂ ಚಿತ್ರೀಕರಣದ ಪ್ಲಾನ್ ಅನ್ನ ನಿರ್ದೇಶಕಿ ರೂಪಾ ಅಯ್ಯರ್ ಮಾಡಿದ್ದಾರೆ. ಇದೇ ತಿಂಗಳ 23 ರಿಂದಲೇ ಸಿನಿಮಾದ ಚಿತ್ರೀಕರಣ ಶುರು ಆಗುತ್ತದೆ. ಚಿತ್ರದ ವಿಶೇಷ ಪಾತ್ರಕ್ಕೆ ಬಾಲಿವುಡ್​ ನಟರೊಬ್ಬರು ಬೆಂಗಳೂರಿಗೂ ಬರ್ತಿದ್ದಾರೆ.


ಸುಭಾಷ್ ಚಂದ್ರ ಬೋಸ್ ಪಾತ್ರ ಯಾರ್ ಮಾಡ್ತಾರೆ?
ನೀರಾ ಆರ್ಯ ಜೀವನ ಚರಿತ್ರೆಯಲ್ಲಿ ಸುಭಾಷ್ ಚಂದ್ರ ಬೋಸ್ ಪಾತ್ರವೂ ಪ್ರಮುಖವಾಗಿಯೇ ಇದೆ. ಇದು ಇಲ್ಲದೇ ಇದ್ರೇ, ನೀರಾ ಆರ್ಯ ಕಥೆ ಪೂರ್ಣ ಆಗೋದಿಲ್ಲ. ಅಂತಹ ಮಹತ್ವದ ಈ ಪಾತ್ರಕ್ಕೆ ಬಾಲಿವುಡ್​ ನಿಂದಲೇ ಒಬ್ಬ ನಟ ಬರ್ತಿದ್ದಾರೆ.


ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ
ನೀರಾ ಆರ್ಯ ಚಿತ್ರದಲ್ಲಿ ಸುಭಾಷ್ ಚಂದ್ರ ಬೋಸ್ ಪಾತ್ರವನ್ನ ಬಾಲಿವುಡ್​ನಟ ಶ್ರೇಯಸ್ ತಲ್ಪಾಡೆ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲ ಓಕೆ ಆಗಿದ್ದು, ಇದೇ ತಿಂಗಳು ಬೆಂಗಳೂರಿಗೂ ಬರ್ತಿದ್ದಾರೆ. ಸುಭಾಷ್ ಚಂದ್ರ ಬೋಸ್ ಪಾತ್ರವನ್ನ ನಿರ್ವಹಿಸೋಕೆ ಬರ್ತಿದ್ದಾರೆ.


Kannada Director Roopa Iyer gave Exclusive information about Neera Arya movie
ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ


ನೀರಾ ಆರ್ಯ ಸಿನಿಮಾದ ಶೂಟಿಂಗ್ ಪ್ಲಾನ್ ಪಕ್ಕಾ ಆಗಿದೆ. ನೀರಾ ಆರ್ಯ ಎಲ್ಲಿ ಓಡಾಡಿದ್ದರೋ, ಎಲ್ಲಿ ಇದ್ದರೋ ಅಲ್ಲೆಡೆ ಚಿತ್ರೀಕರಣ ಮಾಡುವ ಪ್ಲಾನ್ ಅನ್ನೆ ನಟಿ-ನಿರ್ದೇಶಕಿ ರೂಪಾ ಅಯ್ಯರ್ ಹಾಕಿಕೊಂಡಿದ್ದಾರೆ. ಆ ಲೆಕ್ಕದಲ್ಲಿಯೇ ಇದೇ 23 ರಿಂದಲೇ ನೀರಾ ಆರ್ಯ ಚಿತ್ರದ ಚಿತ್ರೀಕರಣ ಪ್ಲಾನ್ ಮಾಡಿಕೊಂಡಿದ್ದಾರೆ.


ನೀರಾ ಆರ್ಯ ಚಿತ್ರಕ್ಕೆ ಯಾರ್ ಸಂಗೀತ ನಿರ್ದೇಶಕರು?
ನೀರಾ ಆರ್ಯ ಚಿತ್ರಕ್ಕೆ ಕನ್ನಡದ ಸಂಗೀತ ನಿರ್ದೇಶಕರೇ ಸಂಗೀತ ಮಾಡುತ್ತಿದ್ದಾರೆ. ಅದು ಬೇರೆ ಯಾರೋ ಅಲ್ಲ. ಗೌತಮ್ ಶ್ರೀವತ್ಸ ಈ ಚಿತ್ರಕ್ಕೆ ಸಂಗೀತ ಮಾಡುತ್ತಿದ್ದಾರೆ.


ನೀರಾ ಆರ್ಯ ಮೂಲಕ ಬಾಲಿವುಡ್​ಗೆ ರೂಪಾ ಎಂಟ್ರಿ
ನೀರಾ ಆರ್ಯ ಚಿತ್ರದ ಮೂಲಕವೇ ನಟಿ-ನಿರ್ದೇಶಕಿ ರೂಪಾ ಅಯ್ಯರ್, ಬಾಲಿವುಡ್​ಗೂ ಕಾಲಿಟ್ಟಿದ್ದಾರೆ. ವಿಶೇಷವಾಗಿ ನೀರಾ ಆರ್ಯ ಪಾತ್ರದ ಮೂಲಕವೂ ಬಾಲಿವುಡ್ ಸಿನಿಪ್ರೇಮಿಗಳ ಹೃದಯವನ್ನೂ ತಟ್ಟಲು ರೆಡಿ ಆಗಿದ್ದಾರೆ.


ಇದನ್ನೂ ಓದಿ: Head Bush Film: ಜೀ5 ಒಟಿಟಿಯಲ್ಲಿ ಬರಲಿದೆ ಹೆಡ್ ಬುಷ್, ಡಾಲಿ ನಟನೆ ನೋಡಿ ಎಂಜಾಯ್ ಮಾಡಿ!


ನೀರಾ ಆರ್ಯ ಚಿತ್ರದ ಕೆಲಸ ಈಗಾಗಲೇ ಶುರು ಆಗಿದೆ. ನೀರಾ ಆರ್ಯ ಜೀವನ ಚರಿತ್ರೆ ತುಂಬಾ ಸ್ಪೂರ್ತಿದಾಯಕವೇ ಆಗಿದೆ. ಈ ಹಿನ್ನೆಲೆಯಲ್ಲಿಯೇ ಒಂದಷ್ಟು ಸಂಶೋಧನೆ ಮಾಡಿಕೊಂಡೇ ನಿರ್ದೇಶಕಿ ರೂಪಾ ಅಯ್ಯರ್ ಸಿನಿಮಾ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಿಸೋಕೆ ಎಲ್ಲ ಪ್ಲಾನ್ ಅನ್ನೂ ಈಗಲೇ ಪ್ಲಾನ್ ಮಾಡಿಕೊಂಡಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು