ಕನ್ನಡದ ಚಿತ್ರ ಬ್ರಹ್ಮ ಪುಟ್ಟಣ್ಣ (Puttanna Kanagal) ಕಣಗಾಲರಿಗೆ ಅದ್ಭುತವಾದ ಕಲ್ಪನೆ ಇತ್ತು. ಸಿನಿಮಾಗಳಲ್ಲಿಯೇ ಎಲ್ಲವನ್ನೂ ಹೇಳಿ ಬಿಡುತ್ತಿದ್ದರು. ಅವರು ನಿರ್ದೇಶಿಸುವ ಚಿತ್ರಗಳ ಪಾತ್ರಕ್ಕೆ ಕಲಾವಿದರನ್ನ ಆಯ್ಕೆ ಮಾಡು ಪರಿ ಕೂಡ ವಿಶೇಷವಾಗಿಯೇ ಇತ್ತು. ಅವರ ಆಯ್ಕೆಯ ಕಲಾವಿದರು ದೊಡ್ಡಮಟ್ಟದಲ್ಲಿಯೇ ಬೆಳೆದರು. ತಮ್ಮ ಚಿತ್ರಗಳ (Kannada Ranganayaki Movie) ಪಾತ್ರಕ್ಕೆ ಈ ನಟ-ನಟಿ ಸರಿ ಹೋಗ್ತಾರೆ ಅನ್ನೊದರ ಬಗ್ಗೆ ತುಂಬಾ ಸ್ಪಷ್ಟತೆ ಇತ್ತು. ಪ್ರತಿಭಾನ್ವಿತರನ್ನ ಕಂಡ ಕೂಡಲೇ ಸಿಕ್ಕೇ ಬಿಟ್ಟ ನನ್ನ ಜಲೀಲಾ ಅನ್ನೋಮಟ್ಟಿಗೆ ಕ್ಲಾರಿಟಿ (Ranganayaki film Unkown Facts) ಇರುತ್ತಿತ್ತು. ಹಾಗೆ ಅನೇಕ ಕಲಾವಿದರನ್ನ ಹುಡುಕಿ ತಮ್ಮ ಚಿತ್ರದ ಪಾತ್ರಗಳನ್ನ ಮಾಡಿಸಿದ ಖ್ಯಾತಿ ಇವರಿಗೆ ಸಲ್ಲಬೇಕು.
ಅಷ್ಟೊಂದು ದೂರ ದೃಷ್ಟಿಯ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ರಿಗೆ ಆ ಪುಟ್ಟ ಹುಡುಗಿ ನೋಡಿದಾಕ್ಷಣ ಅನಿಸಿ ಬಿಟ್ಟಿತ್ತು. ಈ ಹುಡುಗಿನೇ (Kannada Actress Sudha Rani) ನನ್ನ ರಂಗನಾಯಕಿ, ಅದು ಪುಟ್ಟ ರಂಗನಾಯಕಿ ಅಂತ ಹೇಳಿಬಿಟ್ಟಿದ್ದರು.
ರಂಗನಾಯಕಿ ಚಿತ್ರದಲ್ಲಿ ಆರತಿ ಅವರೇ ರಂಗನಾಯಕಿ
ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ರಂಗನಾಯಕಿ ವಿಶೇಷ ಸಿನಿಮಾನೇ ಆಗಿದೆ. ಈ ಚಿತ್ರದಲ್ಲಿ ನಾಟಕ ಕಂಪನಿಯ ಕಥೆ ಮತ್ತು ವ್ಯಥೆ ಇದೆ. ಅಮ್ಮನ್ನೆ ಪ್ರೀತಿಸೋ ಅಮ್ಮನ್ನೆ ಮೋಹಿಸೋ ಮಗನ ಕಥೆ ಕೂಡ ಇದೆ. ಅಂತಹ ಈ ಕಥೆ 1981 ಸಮಯದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು.
ಪುಟ್ಟಣ್ಣ ಕಣಗಾಲ್ ಅವರು ಆಯ್ಕೆ ಮಾಡುತ್ತಿದ್ದ ವಿಷಯಗಳೇ ಹೀಗಿರುತ್ತಿದ್ದವು. ಸಮಾಜ ಅವುಗಳನ್ನ ಅಷ್ಟು ಬೇಗ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೂ ಪುಟ್ಟಣ್ಣ ಸಿನಿಮಾ ಮಾಡುತ್ತಲೇ ಬಂದಿದ್ದರು. ಜನರ ಮನದಲ್ಲೂ ಇನ್ನೂ ತಮ್ಮ ಚಿತ್ರದ ಮೂಲಕ ಇದ್ದಾರೆ.
ರಂಗನಾಯಕಿ ಚಿತ್ರದಲ್ಲಿ ಸುಧಾರಾಣಿ ಇದ್ದಾರೆ ನಿಮ್ಗೆ ಗೊತ್ತೇ?
ರಂಗನಾಯಕಿ ಚಿತ್ರದಲ್ಲಿ ಆರತಿ ಒಬ್ರೇ ಅಲ್ಲ ಇನ್ನೂ ಒಬ್ಬ ನಾಯಕಿ ಇದ್ದಾರೆ. ಆ ನಾಯಕಿ ಯಾರೂ ಅನ್ನೋದು ಗೊತ್ತೇ ಇದೆ. ಹೌದು, ರಂಗನಾಯಕಿ ಚಿತ್ರದಲ್ಲಿ ನಟಿ ಸುಧಾ ರಾಣಿ ಕೂಡ ಇದ್ದಾರೆ. ಹೌದೇ ಅಂತ ಹುಬ್ಬೇರಿಸಬೇಡಿ. ಇದು ನಿಜ.
ರಂಗನಾಯಕಿ ಚಿತ್ರದಲ್ಲಿ ಸುಧಾರಾಣಿ ಕೂಡ ರಂಗನಾಯಕಿನೇ!
ಹೌದು, ಈ ವಿಷಯವನ್ನ ನೀವು ನಂಬಲೇಬೇಕು. ರಂಗನಾಯಕಿ ಚಿತ್ರವನ್ನ ಆರಂಭದಿಂದಲೂ ನೋಡ್ತಾ ಹೋದ್ರೆ, ಅಲ್ಲಿ ನಿಮಗೆ ಸುಧಾರಾಣಿ ಕಂಡಿತಾ ಸಿಗ್ತಾರೆ. ಅದ್ಹೇಗೆ ಅಂತ ನೀನು ಕೇಳಿದ್ರೆ ಇಲ್ಲಿ ಆ ವಿವರ ಇದೆ ಓದಿ.
ರಂಗನಾಯಕಿ ಸಿನಿಮಾದಲ್ಲಿ ಸುಧಾರಾಣಿ ಅಭಿನಯಿಸಿದ್ದಾರೆ. ಆ ಟೈಮ್ನಲ್ಲಿ ಸುಧಾರಾಣಿ ಹೇಗಿದ್ದರು? ಆರತಿ ಇದ್ದರೂ ಕೂಡ ಸುಧಾರಾಣಿ ಏನ್ ಪಾತ್ರ ಮಾಡಿದ್ದರು. ಈ ಎಲ್ಲ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಸುಧಾರಾಣಿ ಬಾಲ ನಟಿಯಾಗಿ ಚಿತ್ರದಲ್ಲಿ ಅಭಿನಯ
ಸುಧಾರಾಣಿ 1981 ರಲ್ಲಿ ಬಂದ ರಂಗನಾಯಕಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ರಂಗನಾಯಕಿ ಚಿತ್ರದಲ್ಲಿ ಬಾಲ ರಂಗನಾಯಕಿ ಆಗಿ ನಟಿಸಿದ್ದಾರೆ. ಬಾಲ್ಯದಲ್ಲಿ ನಟನೆ ಆರಂಭಿಸಿದ್ದ ಸುಧಾರಾಣಿ, ಇದಕ್ಕೂ ಮುಂಚೇನೆ ಕಿಲಾಡಿ ಕಿಟ್ಟು, ಕುಳ್ಳಾ ಕುಳ್ಳಿ, ಅನುಪಮಾ, ಭಾಗ್ಯವಂತ ಚಿತ್ರದಲ್ಲೂ ಬಾಲ ನಟಿಯಾಗಿಯೇ ಅಭಿನಯಿಸಿದ್ದರು.
ಅದೇ ಸುಧಾರಾಣಿ ರಂಗನಾಯಕಿ ಚಿತ್ರದಲ್ಲಿ ಬಾಲ ರಂಗನಾಯಕಿ ಆಗಿಯೇ ನಟಿಸಿದ್ದರು. ಆಗ ಪುಟ್ಟಣ್ಣ ಅವ್ರು ಆಯ್ಕೆ ಮಾಡಿದ್ದ ಸುಧಾರಾಣಿ, ತಮ್ಮ 13ನೇ ವಯಸ್ಸಿನಲ್ಲಿಯೇ ಹೀರೋಯಿನ್ ಆಗಿಯೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಇದನ್ನೂ ಓದಿ: Rashmika-Vijay Deverakonda: ಲೈವ್ ಮಾಡಿ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ! ವಿಜಯ್ ದೇವರಕೊಂಡ ಜೊತೆ ಫುಲ್ ಡೇಟಿಂಗ್!?
ಶಿವರಾಜ್ ಕುಮಾರ್ ಅಭಿನಯದ ಆನಂದ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಹೀರೋಯಿನ್ ಆಗಿಯೇ ಸುಧಾರಾಣಿ ಬಂದ್ರು. ಅಲ್ಲಿಂದ ಇಲ್ಲಿವರೆಗೂ ಬಣ್ಣದ ಲೋಕದಲ್ಲಿಯೇ ಇದ್ದಾರೆ. ಈಗಲೂ ಬೇಡಿಕೆಯನ್ನ ಉಳಿಸಿಕೊಂಡಿದ್ದಾರೆ. ಬೆಳ್ಳಿ ತೆರೆಯಿಂದ ಈಗ ಕಿರುತೆರೆಗೂ ಬಂದಿದ್ದಾರೆ. ಬಂದು ತಮ್ಮದೇ ರೀತಿಯಲ್ಲಿಯೇ ಕಿರುತೆರೆ ಪ್ರೇಕ್ಷಕರನ್ನ ಕೂಡ ಸೆಳೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ