ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ (Baanadariyalli Movie) ಬಾನದಾರಿಯಲಿ ಸಿನಿಮಾ ರೆಡಿ ಅಗಿದೆ. ಇನ್ನೇನು ಸೆನ್ಸಾರ್ಗೂ ಹೋಗಬೇಕಿದೆ. ಅದಕ್ಕೂ ಮೊದಲೇ ಸಿನಿಮಾ ತಂಡ ಪ್ರೇಮಿಗಳ (Valentine's Day Special Teaser) ದಿನದಂದು ವಿಶೇಷವಾದ ವಿಷಯವನ್ನ ರಿವೀಲ್ ಮಾಡುತ್ತಿದೆ. ಆ ಎಲ್ಲ ಸ್ಪೆಷಲ್ ಕಂಟೆಂಟ್ನ್ನ ಟೀಸರ್ ರೂಪದಲ್ಲಿಯೇ ಡೈರೆಕ್ಟರ್ ಪ್ರೀತಂ ಗುಬ್ಬಿ ರಿವೀಲ್ ಮಾಡುತ್ತಿದ್ದಾರೆ. ಚಿತ್ರದ ಇತರ (Director Preetham Gubbi) ವಿಷಯಗಳ ಬಗ್ಗೆನೂ ಪ್ರೀತಂ ಗುಬ್ಬಿ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಕಿನ್ಯಾದ ಚಿತ್ರೀಕರಣದ ಒಂದಷ್ಟು ಅನುಭವ ಹಂಚಿಕೊಂಡಿದ್ದಾರೆ. ಬಾನದಾರಿಯಲಿ (Baanadariyalli Movie Details) ನಾಯಕ ಮತ್ತು ನಾಯಕಿ ಕುರಿತು ಹೇಳಿಕೊಂಡಿದ್ದಾರೆ. ಇವರ ಒಟ್ಟು ಮಾತಿನ ಚಿತ್ರಣ ಇಲ್ಲಿದೆ ಓದಿ.
ಪ್ರೇಮಿಗಳ ದಿನಕ್ಕೆ ಗಣಿ ಕೊಡ್ತಾರೆ ಸರ್ಪ್ರೈಜ್
ಪ್ರೇಮಿಗಳ ದಿನಕ್ಕೆ ಗಣಿ ಸರ್ಪ್ರೈಜ್ ಕೊಡ್ತಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ಪ್ರೇಮದ ಇನ್ನೂ ಒಂದು ಹೊಸ ಅನುಭವ ಕೂಡ ಬಾನದಾರಿಯಲಿ ಮೂಲಕ ಗೋಲ್ಡನ್ ಸ್ಟಾರ್ ಕೊಡ್ತಿದ್ದಾರೆ.
ಸಿನಿಮಾ ಪ್ರೇಮಿಗಳು ಫೆಬ್ರವರಿ-14 ರಂದು ಗೋಲ್ಡನ್ ಗಣಿಯ ಬಾನದಾರಿಯಲಿ ಚಿತ್ರದ ಪ್ರೇಮ ಕಥೆಯ ಒಂದು ಸಣ್ಣ ಝಲಕ್ ಅನ್ನು ನೋಡಬಹುದಾಗಿದೆ.
ಪ್ರೇಮಿಗಳ ದಿನದಂದು ಮಧ್ಯಾಹ್ನ 12.30 ರ ಹೊತ್ತಿಗೆ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. This not a love story this is story about love. ಇದು ಪ್ರೇಮ ಕಥೆಯ ಚಿತ್ರ ಅಲ್ಲ. ಇದು ಪ್ರೀತಿಯ ಕಥೆ ಚಿತ್ರ ಅಂತಲೂ ಪ್ರೀತಿಯನ್ನ ವಿಶೇಷವಾಗಿಯೇ ಡೈರೆಕ್ಟರ್ ಪ್ರೀತಂ ಗುಬ್ಬಿ ಈ ಮೂಲಕ ಇಲ್ಲಿ ಹೇಳುತ್ತಿದ್ದಾರೆ.
ಪ್ರೇಮಿಗಳ ದಿನದಂದು ಬಾನದಾರಿಯಲಿ ಟೀಸರ್ ರಿಲೀಸ್
ಪ್ರೀತಿಯ ಬಗ್ಗೆ ಇರೋ ಈ ಚಿತ್ರದ ಒಂದು ಟೀಸರ್ನ್ನ ಪ್ರೇಮಿಗಳ ದಿನದಂದು ಡೈರೆಕ್ಟರ್ ಪ್ರೀತಂ ಗುಬ್ಬಿ ರಿಲೀಸ್ ಮಾಡೋಕೆ ಪ್ಲಾನ್ ಮಾಡಿ ಆಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಜೊತೆಗೆ ಒಂದಷ್ಟು ಮಾತನಾಡಿದ್ದಾರೆ. ಚಿತ್ರದ ಅನುಭವ ಕೂಡ ಹಂಚಿಕೊಂಡಿದ್ದಾರೆ.
ನಮ್ಮ ಚಿತ್ರದ ಟೀಸರ್ ಪ್ರೀತಿಯ ಬಗ್ಗೆ ಹೇಳುತ್ತದೆ. ಪ್ರೀತಿ ಝಲಕ್ ಇಲ್ಲಿ ನಿಮಗೆ ಸಿಗುತ್ತದೆ. ಪ್ರೇಮಿಗಳ ದಿನದ ಸ್ಪೆಷಲ್ ಆಗಿಯೇ ಈ ಒಂದು ಟೀಸರ್ ರಿಲೀಸ್ ಮಾಡುತ್ತಿದ್ದೇವೆ ಎಂದು ಡೈರೆಕ್ಟರ್ ಪ್ರೀತಂ ಗುಬ್ಬಿ ಹೇಳುತ್ತಾರೆ.
ಬಾನದಾರಿಯಲಿ ಗೋಲ್ಡನ್ ಸ್ಟಾರ್ ಗಣಿ ಕ್ರಿಕೆಟರ್!
ಇನ್ನು ಬಾನದಾರಿಯಲಿ ಗೋಲ್ಡನ್ ಸ್ಟಾರ್ ಗಣೇಶ್ ಒಬ್ಬ ಕ್ರಿಕೆಟರ್ ಆಗಿ ಅಭಿನಯಿಸುತ್ತಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ ಇಲ್ಲಿ ಸ್ವಿಮ್ಮರ್ ಪಾತ್ರವನ್ನ ನಿರ್ವಹಿಸಿದ್ದಾರೆ.
ಬಾನದಾರಿಯಲಿ ನಟ ರಂಗಾಯಣ ರಘು ಒಂದು ಅದ್ಭುತವಾದ ಪಾತ್ರವನ್ನ ಮಾಡಿದ್ದಾರೆ. ಇಡೀ ಚಿತ್ರಕ್ಕೆ ಇವರ ಪಾತ್ರ ತುಂಬಾ ಪ್ರಮುಖವಾಗಿಯೇ ಇದೆ ಎಂದು ಹೇಳಲು ಮರೆಯಲಿಲ್ಲ ಡೈರೆಕ್ಟರ್ ಪ್ರೀತಂ ಗುಬ್ಬಿ.
ಮಸಾಯಿ ಮಾರ್ ಕಾಡಿನಲ್ಲಿ ಶೂಟಿಂಗ್ ವಿಭಿನ್ನ ಅನುಭವ!
ಬಾನದಾರಿಯಲಿ ಚಿತ್ರವನ್ನ ಆಫ್ರಿಕಾ ದೇಶದಲ್ಲೂ ಚಿತ್ರೀಕರಿಸಿದ್ದೇವೆ. ಇಲ್ಲಿಯ ಮಸಾಯಿ ಮಾರ್ ಕಾಡಿನಲ್ಲಿ ಚಿತ್ರೀಕರಿಸಿದ ಅನುಭವ ನಿಜಕ್ಕೂ ವಿಭಿನ್ನ ಮತ್ತು ಅಷ್ಟೇ ಕಷ್ಟಕರವಾಗಿಯೂ ಇತ್ತು.
ಅತಿದೊಡ್ಡ ಈ ಕಾಡಿನಲ್ಲಿ ದೂರ ದೂರಕ್ಕೆ ನಡೆದುಕೊಂಡೇ ಹೋಗಬೇಕಿತ್ತು. ಆದರೂ ಸಿನಿಮಾ ತುಂಬಾ ಚೆನ್ನಾಗಿಯೇ ಬಂದಿದೆ. ಚಿತ್ರದ ದ್ವಿತೀಯಾರ್ಧ ಕೀನ್ಯಾ ದೇಶದಲ್ಲಿಯೆ ಇರುತ್ತದೆ ಎಂದು ಚಿತ್ರದ ಇತರ ಮಾಹಿತಿಯನ್ನ ಹಂಚಿಕೊಂಡ್ರು ಪ್ರೀತಂ ಗುಬ್ಬಿ.
ಕೀನ್ಯಾ, ಮುಂಬೈ, ಬೆಂಗಳೂರು, ಮಂಗಳೂರಲ್ಲಿ ಶೂಟಿಂಗ್
ನಮ್ಮ ಬಾನದಾರಿಯಲಿ ಚಿತ್ರವನ್ನ ಕೀನ್ಯಾ ದೇಶ, ಮುಂಬೈ, ಮಂಗಳೂರು, ಬೆಂಗಳೂರು ಹೀಗೆ ಎಲ್ಲೆಡೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರದ ಬಹುತೇಕ ಕೆಲಸ ಮುಗಿದಿದೆ.
ಚಿತ್ರೀಕರಣದ ನಂತರದ ಕೆಲಸದಲ್ಲಿಯೇ ಸದ್ಯ ಬ್ಯುಸಿ ಇದ್ದೇವೆ. ಚಿತ್ರ ಇನ್ನಷ್ಟೆ ಸೆನ್ಸಾರ್ಗೂ ಹೋಗಬೇಕಿದೆ ಅಂತಲೂ ಮಾಹಿತಿ ಕೊಟ್ರು ಪ್ರೀತಂ ಗುಬ್ಬಿ.
ಇದನ್ನೂ ಓದಿ: Love Birds: ಮದುವೆ ಆದ್ಮೇಲೆ ಮಂಗ ಆಗಿದ್ದು ಡಾರ್ಲಿಂಗ್ ಕೃಷ್ಣನಾ, ಮಿಲನಾನಾ?
ಇನ್ನು ಅರ್ಜುನ್ ಜನ್ಯ ಸಂಗೀತ ಲಿರಿಕಲ್ ವಿಡಿಯೋ ಈಗಾಗಲೇ ರಿಲೀಸ್ ಆಗಿವೆ. ಇನ್ನುಳಿದಂತೆ ಗೆಳೆಯರಾದ ಗೋಲ್ಡನ್ ಗಣಿ ಮತ್ತು ಪ್ರೀತಂ ಗುಬ್ಬಿ ಬಾನದಾರಿಯಲಿ ಮೂಲಕ ಕನ್ನಡಿಗರನ್ನ ರಂಜಿಸೋಕೆ ಸಜ್ಜಾಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ