ಕನ್ನಡದ ಡೈರೆಕ್ಟರ್ ಪ್ರೀತಂ ಗುಬ್ಬಿ (Director Preetham Gubbi) ಒಳ್ಳೆ ಸಿನಿಮಾಗಳನ್ನೆ ಮಾಡಿದ್ದಾರೆ. ಅವರ ಕಥೆಯ ಮುಂಗಾರು (Mungaru Male)ಮಳೆಯ ಸೆಳೆತ ಇನ್ನೂ ಇದೆ. ಪ್ರೀತಂ ಈ ಹಿಂದೆ 99 (99 Cinema) ಸಿನಿಮಾ ಮಾಡಿದ್ದರು. ಇದು ಕೂಡ ಒಳ್ಳೆ ಕಥೆಯ ಸಿನಿಮಾನೇ ಆಗಿತ್ತು. ರಿಮೇಕ್ ಅನ್ನೋದು ಬಿಟ್ಟರೇ,ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh)ಅವರನ್ನ ಹಾಕಿಕೊಂಡು ಪ್ರೀತಂ ಅದ್ಭುತವಾಗಿಯೇ ಸಿನಿಮಾ ಮಾಡಿದ್ದರು. ಇದರ ಹಾಡುಗಳೂ ಕೂಡ ಚೆನ್ನಾಗಿಯೇ ಮೂಡಿ ಬಂದಿದ್ದವು. ಅದೇ ಪ್ರೀತಂ ಗುಬ್ಬಿ ಮತ್ತೊಂದು ಸಿನಿಮಾ ಡೈರೆಕ್ಟ್ ಮಾಡುತ್ತಿದ್ದಾರೆ. ಮೊನ್ನೆ ಮಂಗಳೂರಲ್ಲಿ ಈ ಚಿತ್ರದ ಎರಡನೇ ಹಂತ ಚಿತ್ರೀಕರಣ ಪೂರ್ಣಗೊಂಡಿದೆ. ಮೂರನೇ ಹಂತದ ಶೂಟಿಂಗ್ಗಾಗಿಯೇ ಆಫ್ರಿಕಾಗೆ ಹಾರಿ ಹೋಗಿದ್ದಾರೆ. ಅಲ್ಲಿಂದಲೇ ಒಂದಷ್ಟು ಮಾಹಿತಿ ಕೊಟ್ಟಿರೋ ಪ್ರೀತಂ ಗುಬ್ಬಿ ಅಲ್ಲಿ ಏನೆಲ್ಲ ನಡೀತಿದೆ ಅಂತಲೂ ಒಂಚೂರು ಬಿಟ್ಟುಕೊಟ್ಟಿದ್ದಾರೆ.
ಡೈರೆಕ್ಟರ್ ಪ್ರೀತಂ ಗುಬ್ಬಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಒಳ್ಳೆ ಸ್ನೇಹಿತರು. ಒಳ್ಳೆ ಕಥೆ ಬಂದ್ರೆ, ಗಣೇಶ್ ಅವರ ಬಳಿ ಬಂದು ಪ್ರೀತಂ ಹೇಳೋದು ಉಂಟು. ಅಂತಹ ಈ ದೋಸ್ತ್ಗಳು ಈಗ ಬಾನದಾರಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕ್ರೀಡೆ ಇದೆ. ನಾಯಕ-ನಾಯಕಿ ಕ್ರೀಡಾಪಟುಗಳೂ ಆಗಿದ್ದಾರೆ.
ಒಂದು ವಿಶೇಷ ಕಥೆಯೊಂದಿಗೆ ಸಿನಿಮಾ ಮಾಡ್ತಿರೋ ಪ್ರೀತಂ ಗುಬ್ಬಿ ತಮ್ಮ ಈ ಚಿತ್ರವನ್ನ ಆಫ್ರಿಕಾ ದೇಶದಲ್ಲಿ ಶೂಟ್ ಮಾಡಬೇಕು ಅಂತಲೇ ಪ್ಲಾನ್ ಮಾಡಿದ್ದಾರೆ. ಆ ಪ್ಲಾನಿಂಗ್ ಈಗ ಕಾರ್ಯರೂಪಕ್ಕೆ ಬಂದಿದೆ. ಬಾನದಾರಿಯಲ್ಲಿ ಸಿನಿಮಾ ತಂಡ ಸದ್ಯ ಆಫ್ರಿಕಾದ ಕೀನ್ಯಾ ದೇಶದಲ್ಲಿಯೇ ಬೀಡು ಬಿಟ್ಟಿದೆ.
ಆಫ್ರಿಕಾದ ಕೀನ್ಯಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್-ಡೈರೆಕ್ಟರ್ ಪ್ರೀತಂ ಗುಬ್ಬಿ
ಕಳೆದ ಶನಿವಾರವೇ ಸಿನಿಮಾ ತಂಡ ಇಲ್ಲಿ ಚಿತ್ರೀಕರಣ ಆರಂಭಿಸಿದೆ. ಚಿತ್ರದ ಚಿತ್ರೀಕರಣವನ್ನೂ ಇಲ್ಲಿ ಶುರು ಮಾಡಿದೆ. ಇಲ್ಲಿಯ ಶೂಟಿಂಗ್ ಪ್ಲಾನಿಂಗ್ ಏನೂ ಅನ್ನೋದನ್ನ ಡೈರೆಕ್ಟರ್ ಪ್ರೀತಂ ಗುಬ್ಬಿ ಬಿಟ್ಟುಕೊಟ್ಟಿಲ್ಲ ಬಿಡಿ. ಆದರೆ ಸಿನಿಮಾದಲ್ಲಿ ಆಫ್ರಿಕನ್ಸ್ ಕೂಡ ಇರುತ್ತಾರೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ವರದಕ್ಷಿಣೆಗೆ ಉತ್ತೇಜನ ನೀಡಿದ್ರಾ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್?
ಬಾನದಾರಿಯಲ್ಲಿ ಸಿನಿಮಾ ಒಂದು ಕ್ರೀಡಾಧಾರಿತ ಸಿನಿಮಾ ಅಂತಲೇ ಈಗ ಅನಿಸುತ್ತಿದೆ. ನಾಯಕ ಗಣೇಶ್ ಇಲ್ಲಿ ಕ್ರಿಕೆಟ್ ಆಗಿದ್ದಾರೆ ಅನ್ನೊದೇ ಒಟ್ಟು ಸದ್ಯದ ಮಾಹಿತಿ. ನಾಯಕಿ ರುಕ್ಷ್ಮಿಣಿ ವಸಂತ್ ಇಲ್ಲಿ ಈಜುಗಾರ್ತಿ ಅಂತಲೇ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಮಂಗಳೂರಿನಲ್ಲಿ ಚಿತ್ರೀಕರಿಸಿದ ದೃಶ್ಯಗಳ ಒಂದಷ್ಟು ಫೋಟೋ ಆ ಸತ್ಯ ಹೇಳುತ್ತವೆ.
ಬಾನದಾರಿಯಲ್ಲಿ ಸಿನಿಮಾ ಯಾವ ಜಾನರ್ನ ಸಿನಿಮಾ
ಗೋಲ್ಡನ್ ಸ್ಟಾರ್ ಗಣೇಶ್ ನಿರ್ವಹಿಸಿದ ಪಾತ್ರದ ಇತರ ಡಿಟೈಲ್ಸ್ ಇನ್ನಷ್ಟೇ ರಿವೀಲ್ ಆಗಬೇಕಿದೆ. ಇದರ ಹೊರತಾಗಿ ಸಿನಿಮಾದಲ್ಲಿ ಇನ್ನೂ ಏನೆಲ್ಲ ಇದೆ ಅಂತ ಡೈರೆಕ್ಟರ್ ಪ್ರೀತಂ ಗುಬ್ಬಿ ಅವರನ್ನ ಕೇಳಿದ್ರೆ, ಇಲ್ಲ ಇದು ಕ್ರೀಡಾಧಾರಿತ ಸಿನಿಮಾ ಅಲ್ಲ. ಇದು ಒಂದು ಲವ್ ಸ್ಟೋರಿ ಸಿನಿಮಾ ಅಂತಲೇ ತಿಳಿಸಿ ಬಿಡ್ತಾರೆ.
ಬಾನದಾರಿಯಲ್ಲಿ ಸಿನಿಮಾದ ಟೈಟಲ್ ಕೂಡ ಪ್ರೀತಂ ಗುಬ್ಬಿ ಹೇಳಿಕೆಗೆ ಪೂರಕವಾಗಿಯೇ ಇದೆ. ಬಾನದಾರಿಯಲ್ಲಿ ಅನ್ನೋದನ್ನ ಒಮ್ಮೆ ಸೂಕ್ಷ್ಮವಾಗಿಯೇ ಗಮನಿಸಿ ನೋಡಿ, ಈ ಟೈಟಲ್ ನಲ್ಲಿರೋ ದಾ ಅಕ್ಷರ ಹಾರ್ಟ್ ರೂಪದಲ್ಲಿಯೇ ಇದೆ. ಅದು ರೆಡ್ ಕಲರ್ ಆಗಿಯೇ ಇದೆ. ಅಲ್ಲಿಗೆ ಇದು ಪಕ್ಕಾ ಲವ್ ಸ್ಟೋರಿ ಸಿನಿಮಾ ಅಂತಲೇ ಹೇಳಬಹುದು.
ಬಾನದಾರಿಯಲ್ಲಿ ಸಿನಿಮಾದ ಕೆಲಸ ಭರ್ಜರಿಯಾಗಿಯೆ ನಡೆಯುತ್ತಿದೆ. ಆಫ್ರಿಕಾ ದೇಶದ ಕೀನ್ಯಾದಲ್ಲಿ ಕನ್ನಡದ ತಂಡ ಚಿತ್ರೀಕರಣ ಮಾಡುತ್ತಿದೆ. ಹೆಚ್ಚು ಕಡಿಮೆ ಒಂದು ವಾರದಿಂದಲೇ ಇಲ್ಲಿಯೇ ಬಾನದಾರಿಯಲ್ಲಿ ಶೂಟಿಂಗ್ ನಡೆಯುತ್ತಿದ್ದು, ಇಡೀ ಸಿನಿಮಾ ತಂಡವೂ ಒಳ್ಳೇ ಲೋಕೇಷನ್ಗಳಲ್ಲಿ ಚಿತ್ರೀಕರಣ ಮಾಡೋದರಲ್ಲಿ ಬ್ಯುಸಿ ಇದೆ.
ಇದನ್ನೂ ಓದಿ: Hitler Kalyana Lakshmi: ಚಿತ್ರರಂಗದ ಅಸಲಿ ಸತ್ಯ ಬಿಚ್ಚಿಟ್ಟ ನೇಹಾ ಪಾಟೀಲ್!
ಬಾನದಾರಿಯಲ್ಲಿ ಕೀನ್ಯಾ ದೇಶಕ್ಕೆ ಹಾರಿ ಹೋದ ಚಿತ್ರ ತಂಡ
ಬಾನದಾರಿಯಲ್ಲಿ ಸಿನಿಮಾದ ಟೈಟಲ್ಗೆ ಸ್ಪೂರ್ತಿ ಏನೂ ಅನ್ನೋದು ಕೇಳೋದೇ ಬೇಡ. ಪವರ್ ಸ್ಟಾರ್ ಪುನಿತ್ ರಾಜಕುಮಾರ್, ಬಾಲ್ಯದಲ್ಲಿ ಅಭಿನಯಸಿದ್ದ ಭಾಗ್ಯವಂತ ಸಿನಿಮಾದಲ್ಲಿ ಬಾನದಾರಿಯಲ್ಲಿ ಅನ್ನೋ ಹಾಡಿದೆ. ಅಲ್ಲಿಂದಲೇ ಈ ಚಿತ್ರಕ್ಕೆ ಸ್ಪೂರ್ತ ಆಗಿದೆ.
ಅದೇ ಇಲ್ಲಿ ಟೈಟಲ್ ಕೂಡ ಆಗಿದೆ. ಪ್ರೀತಾ ಜಯರಾಂ ಬರೆದ ಕಥೆಯನ್ನೆ ಪ್ರೀತಂ ಗುಬ್ಬಿ ಇಲ್ಲಿ ಡೈರೆಕ್ಷನ್ ಮಾಡುತ್ತಿದ್ದಾರೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಮೂರನೇ ಹಂತದ ಚಿತ್ರೀಕರಣಕ್ಕಾಗಿಯೇ ಸಿನಿಮಾ ಟೀಮ್ ಕೀನ್ಯಾ ದೇಶಕ್ಕೆ ಹಾರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ