ಕನ್ನಡ ಚಿತ್ರರಂಗದ ಹೆಮ್ಮೆಯ (Prashanth Neel New Movie) ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರಗಳ ಬಗ್ಗೆ ಒಂದು ಕುತೂಹಲ ಇರುತ್ತದೆ. ಪ್ರಶಾಂತ್ ಆ ಮಟ್ಟಿಗೆ ನಂಬಿಕೆಯನ್ನ ಹುಟ್ಟಿಸಿ ಆಗಿದೆ. ಮೊದಲ ಉಗ್ರಂ ಸಿನಿಮಾ ಮೂಲಕ (Telugu Film Project) ಒಂದು ಭರವಸೆ ಮೂಡಿಸಿದ್ದ ಪ್ರಶಾಂತ್ ನೀಲ್, ಕೆಜಿಎಫ್ನಲ್ಲಿ ಆ ಭವರಸೆಯನ್ನ ಇಷ್ಟು ಹಿಗ್ಗಿಸಿದರು. ಇದರ (Prashanth Neel Next Movie) ಫಲದಿಂದಲೇ ಕನ್ನಡ ಸಿನಿಮಾರಂಗದತ್ತ ಬೇರೆ ಭಾಷೆಯವರು ನೋಡುವಂತೆ ಆಯಿತು. ಅಂತಹ ಈ ನಿರ್ದೇಶಕರು (Prabhas Salar Movie) ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಈ ಕೂಡಲೆ ಕನ್ನಡ ಚಿತ್ರಗಳನ್ನ ಡೈರೆಕ್ಷನ್ಗೆ ಎತ್ತಿಕೊಳ್ಳುವ ಪ್ಲಾನ್ ಏನೂ ಕಾಣುತ್ತಿಲ್ಲ. ಹೊಂಬಾಳೆ ಪ್ರೋಡಕ್ಷನ್ನ ಸಲಾರ್ ಆದ್ಮೇಲೆ ಯಾವ ಕನ್ನಡದ ಚಿತ್ರ ಮಾಡ್ತಾರಾ ಅನ್ನುವ ಪ್ರಶ್ನೆ ಇತ್ತು.
ಪ್ರಶಾಂತ್ ನೀಲ್ ಸದ್ಯಕ್ಕೆ ಫ್ರೀ ಇಲ್ಲ ಬಿಡಿ!
ಆದರೆ ಪ್ರಶಾಂತ್ ನೀಲ್ ಇನ್ನು ಎರಡು ವರ್ಷ ಕನ್ನಡ ಚಿತ್ರ ಮಾಡಲು ಸಿಗೋ ಚಾನ್ಸಸ್ ಕಡಿಮೆ ಇದೆ. ಸುಮಾರು ಎರಡ್ಮೂರು ವರ್ಷಗಳಿಂದ ಸಲಾರ್ ಚಿತ್ರ ಕೆಲಸದಲ್ಲಿಯೇ ಪ್ರಶಾಂತ್ ನೀಲ್ ಬ್ಯುಸಿ ಆಗಿದ್ದಾರೆ.
ಟಾಲಿವುಡ್ನ ಡಾರ್ಲಿಂಗ್ ಪ್ರಭಾಸ್ ಅವರನ್ನ ಡೈರೆಕ್ಟ್ ಮಾಡಿದ್ದಾರೆ. ಎಲ್ಲವನ್ನೂ ಗೌಪ್ಯವಾಗಿಟ್ಟುಕೊಂಡು ಅದ್ಭುತವಾದ ಒಂದು ಚಿತ್ರವನ್ನ ತೆಗೆದಿದ್ದಾರೆ ಅನ್ನುವ ನಂಬಿಕೆ ಮೂಡಿಸಿದ್ದಾರೆ.
ಸಲಾರ್ ಸಿನಿಮಾ ಉಗ್ರಂ ರಿಮೇಕ್ ಅಲ್ವಂತೆ!
ಆದರೆ ಇದರ ಮಧ್ಯೆ ಸಲಾರ್ ಸಿನಿಮಾ ಕನ್ನಡದ ಉಗ್ರಂ ಚಿತ್ರದ ರಿಮೇಕ್ ಅನ್ನುವ ಮಾತುಗಳನ್ನು ಕೇಳಿ ಬರುತ್ತಿತ್ತು. ಇದಕ್ಕೆ ಪ್ರಶಾಂತ್ ನೀಲ್ ಕೂಡ ಉತ್ತರ ಕೊಟ್ಟಿದ್ದಾರೆ. ಉಗ್ರಂ ಚಿತ್ರಕ್ಕೂ ಸಲಾರ್ ಚಿತ್ರಕ್ಕೂ ಎಲ್ಲೂ ಸಂಬಂಧ ಇಲ್ವೇ ಅಂತಲೂ ಹೇಳಿಬಿಟ್ಟಿದ್ದಾರೆ.
ಇದರ ನಡುವೆ ಸಲಾರ್ ಸಿನಿಮಾ ಕೆಲಸ ಮುಗಿತಾ ಬಂದಿದೆ. ಶೃತಿ ಹಾಸನ್ ತಮ್ಮ ಪಾತ್ರದ ಕೆಲಸ ಮುಗಿಸಿದ್ದಾರೆ. ಸಲಾರ್ ಚಿತ್ರದ ಕೆಲಸ ಮುಗಿದ ಕೂಡಲೇ ಪ್ರಶಾಂತ್ ಏನ್ ಮಾಡ್ತಾರೆ ಅನ್ನುವ ಪ್ರಶ್ನೆ ಕೂಡ ಇದೆ.
ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು?
ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು ಅನ್ನೋದು ಈಗ ರಿವೀಲ್ ಆಗಿದೆ. ಸಲಾರ್ ಸೆಟ್ನಲ್ಲಿ ಜೂನಿಯರ್ ಎನ್ಟಿಆರ್ ಸಿನಿಮಾವನ್ನ ಶೂಟ್ ಮಾಡಲು ಪ್ರಶಾಂತ್ ನೀಲ್ ಪ್ಲಾನ್ ಮಾಡಿಕೊಂಡಿದ್ದಾರೆ.
ಸಲಾರ್ ಸಿನಿಮಾದ ಬಹುತೇಕ ಕೆಲಸ ಮುಗಿಸಿರೋ ಪ್ರಶಾಂತ್ ನೀಲ್ ಇನ್ನೂ 30 ರಿಂದ 40 ದಿನಗಳಲ್ಲಿ ಎಲ್ಲ ಕೆಲಸ ಪೂರ್ಣಗೊಳಿಸಲಿದ್ದಾರೆ. ಏಪ್ರಿಲ್ ಹೊತ್ತಿಗೆ ಸಲಾರ್ ಕೆಲಸ ಕಂಪ್ಲೀಟ್ ಆಗಲಿದೆ.
ಜೂನಿಯರ್ ಎನ್ಟಿಆರ್ ಚಿತ್ರದಲ್ಲಿ ಪ್ರಶಾಂತ್ ಬ್ಯುಸಿ
ಇದಾದ್ಮೇಲೆ ಜೂನಿಯರ್ ಎನ್ಟಿಆರ್ ಸಿನಿಮಾದ ಕೆಲಸದಲ್ಲಿ ಪ್ರಶಾಂತ್ ನೀಲ್ ತಲ್ಲೀನರಾಗಲಿದ್ದಾರೆ. ಇದು ಹೆಚ್ಚು ಕಡಿಮೆ ಎರಡು ವರ್ಷ ಆಗಬಹುದೇನೋ.
ಜೂನಿಯರ್ ಎನ್ಟಿಆರ್ ಸಿನಿಮಾ ಆದ್ಮೇಲೆ ಕನ್ನಡ ಕೆಜಿಎಫ್ ಸಿನಿಮಾ ಎತ್ತಿಕೊಳ್ಳುವ ಸಾಧ್ಯತೆ ಇದೆ. 2025ರ ಹೊತ್ತಿಗೆ ಪ್ರಶಾಂತ್ ನೀಲ್ ಕೆಜಿಎಫ್-3 ಸಿನಿಮಾವನ್ನ ಡೈರೆಕ್ಷನ್ ಮಾಡಲು ಮುಂದಾಗಲಿದ್ದಾರೆ.
ಪ್ರಶಾಂತ್ ನೀಲ್ ಕೆಜಿಎಫ್-3 ಸಿನಿಮಾ ಯಾವಾಗ?
ಕೇವಲ ಒಂದೇ ವರ್ಷದಲ್ಲಿಯೇ ಪ್ರಶಾಂತ್ ನೀಲ್, ಕೆಜಿಎಫ್-3 ಮುಗಿಸಿಕೊಡ್ತಾರೆ ಅನ್ನುವ ಮಾತಿದೆ. ಇದನ್ನ ಹೇಳಲಿಕ್ಕೆ ಕಾರಣ, ಹೊಂಬಾಳೆ ಚಿತ್ರ ನಿರ್ಮಾಣ ಸಂಸ್ಥೆ ವಿಜಯ್ ಕಿರಗಂದೂರು ಇದರ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Prabhu Deva New Movie: ಪ್ರಭು ದೇವ ಅವತಾರ ಪುರುಷ-ಬಘೀರಾ ಚಿತ್ರದಲ್ಲಿ ನಾನಾ ರೂಪ
2025 ರ ಹೊತ್ತಿಗೆ ಕೆಜಿಎಫ್-3 ಶುರು ಆಗುತ್ತದೆ. 2026 ಕ್ಕೆ ಸಿನಿಮಾ ರಿಲೀಸ್ ಅಗುತ್ತದೆ ಅನ್ನುವ ಮಾಹಿತಿಯನ್ನ ಈಗಲೇ ಕೊಟ್ಟಿದೆ. ಹಾಗಾಗಿಯೇ ಕೆಜಿಎಫ್ ಸದ್ಯ ಈಗಲೇ ಶುರು ಆಗೋದಿಲ್ಲ ಅನ್ನುವುದು ಕೂಡ ಈಗ ಸ್ಪಷ್ಟ ಆಗಿದೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ