• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Adha Sharma: ದಿ ಕೇರಳ ಸ್ಟೋರಿ ಅದಾ ಶರ್ಮಾ ಸೀಕ್ರೆಟ್ ರಿವೀಲ್ ಮಾಡಿದ ರಣವಿಕ್ರಮ ಡೈರೆಕ್ಟರ್!

Adha Sharma: ದಿ ಕೇರಳ ಸ್ಟೋರಿ ಅದಾ ಶರ್ಮಾ ಸೀಕ್ರೆಟ್ ರಿವೀಲ್ ಮಾಡಿದ ರಣವಿಕ್ರಮ ಡೈರೆಕ್ಟರ್!

ಅದಾ ಶರ್ಮಾಗೆ ಬರ್ತ್ ಡೇ ವಿಶ್ ತಿಳಿಸಿದ ಪವನ್ ಒಡೆಯರ್

ಅದಾ ಶರ್ಮಾಗೆ ಬರ್ತ್ ಡೇ ವಿಶ್ ತಿಳಿಸಿದ ಪವನ್ ಒಡೆಯರ್

ಅದಾ ಶರ್ಮಾ ಅಭಿನಯದಲ್ಲಿ ಈ ಹಿಂದೆ 2008 ರಲ್ಲಿ1920 ಅನ್ನುವ ಸಿನಿಮಾ ಬಂದಿತ್ತು. ವಿಕ್ರಮ್ ಭಟ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ಈ ಚಿತ್ರವನ್ನ ಸ್ಯಾಂಡಲ್‌ವುಡ್‌ ಪವನ್ ಒಡೆಯರ್ ನೋಡಿದ್ದರು. ಈ ಚಿತ್ರದ ಅದಾ ಶರ್ಮಾ ಅಭಿನಯವನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದರು.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬಾಲಿವುಡ್ ದಿ ಕೇರಳ ಸ್ಟೋರಿ ಚಿತ್ರದ ನಟಿ ಅದಾ (Rana Vikrama Actress) ಶರ್ಮಾ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಅದಾ ಇಬ್ಬರು ನಾಯಕಿಯರಲ್ಲಿ ಒಬ್ಬ (Director Pawan Wadeyar) ನಾಯಕಿಯಾಗಿ ಕಂಗೊಳಿಸಿದ್ದರು. ಅತ್ಯುತ್ತಮ ನೃತ್ಯಗಾರ್ತಿ ಕೂಡ ಆಗಿರೋ ಅದಾ ಶರ್ಮಾ, ಕನ್ನಡದ ರಣವಿಕ್ರಮ ಚಿತ್ರಕ್ಕೆ ಯಾಕೆ ಆಯ್ಕೆ ಆಗಿದ್ದರು? ಶೂಟಿಂಗ್ ಟೈಮ್‌ (Adah Sharma Updates) ಅಲ್ಲಿ ಅದಾ ಶರ್ಮಾ ಹೇಗೆಲ್ಲ ನಡೆದುಕೊಂಡಿದ್ದರು. ಅದಾ ಶರ್ಮಾ ಅಭಿನಯದ ಅದ್ಯಾವ ಸಿನಿಮಾ ನೋಡಿ ರಣವಿಕ್ರಮ್ ಡೈರೆಕ್ಟರ್‌ ಇಟ್ಟಪಟ್ಟಿದ್ದರು. ಅದಾ ಶರ್ಮಾ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಹಂಚಿಕೊಂಡ ಆ ವಿಶೇಷ ವಿಚಾರ ಏನು? ಆ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.


ಅದಾ ಶರ್ಮಾ ಸೀಕ್ರೆಟ್ ರಿವೀಲ್ ಮಾಡಿದ ಪವನ್ ಒಡೆಯರ್


ಬಾಲಿವುಡ್‌ನಲ್ಲಿ ಸದ್ಯ ದಿ ಕೇರಳ ಸ್ಟೋರಿ ಸಿನಿಮಾದ ಟಾಕ್ ಇದೆ. ಬಾಕ್ಸ್ ಆಫೀಸ್‌ನಲ್ಲಿ ದಿ ಕೇರಳ ಸ್ಟೋರಿ ಬೇಜಾನ್ ಸೌಂಡ್ ಮಾಡುತ್ತಿದೆ. ದಿನೇ ದಿನೇ ಈ ಚಿತ್ರದ ಹವಾ ಜೋರಾಗಿಯೇ ಕ್ರಿಯೇಟ್ ಆಗುತ್ತಿದೆ. ಈ ಚಿತ್ರದ ನಾಯಕಿ ಅದಾ ಶರ್ಮಾ ಈ ಚಿತ್ರದ ಮುಖಾಂತರ ಎಲ್ಲರ ಹೃದಯದಲ್ಲಿ ಹೊಸ ಜಾಗ ಮಾಡಿಕೊಂಡಿದ್ದಾರೆ.


Kannada Director Pawan Wadeyar Reveal Secrets of Rana Vikrama Actress Adah Sharma
1920 ಚಿತ್ರದಲ್ಲಿ ಅದಾ ಶರ್ಮಾ ಅಭಿನಯ ಅದ್ಭುತ


ಅದಾ ಶರ್ಮಾ ಕೀ ಅದಾ ಸೂಪರೋ ಸೂಪರ್


ಅದಾ ಶರ್ಮಾ ಟ್ಯಾಲೆಂಟೆಡ್ ನಟಿನೇ ಆಗಿದ್ದಾರೆ. ಆದರೆ ನೋಡಿದಾಕ್ಷಣ ಹಾಗೇನೂ ಅನಿಸೋದಿಲ್ಲ ಬಿಡಿ. ತುಂಟ ಹುಡುಗಿ, ಸೀರಿಯೆಸ್‌ನೆಸ್ ಇಲ್ವೇ ಇಲ್ಲ ಅನಿಸುತ್ತದೆ. ಆದರೆ ಅದಾ ಶರ್ಮಾ ತುಂಬಾನೇ ಪ್ರತಿಭಾವಂತ ನಟಿ ಆಗಿದ್ದಾರೆ.




1920 ಚಿತ್ರದಲ್ಲಿ ಅದಾ ಶರ್ಮಾ ಅಭಿನಯ ಅದ್ಭುತ


ಅದಾ ಶರ್ಮಾ ಅಭಿನಯದಲ್ಲಿ ಈ ಹಿಂದೆ 2008 ರಲ್ಲಿ1920 ಅನ್ನುವ ಸಿನಿಮಾ ಬಂದಿತ್ತು. ವಿಕ್ರಮ್ ಭಟ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ಈ ಚಿತ್ರವನ್ನ ಸ್ಯಾಂಡಲ್‌ವುಡ್‌ ನಟ-ನಿರ್ದೇಶಕ ಪವನ್ ಒಡೆಯರ್ ನೋಡಿದ್ದರು. ಈ ಚಿತ್ರದ ಅದಾ ಶರ್ಮಾ ಅಭಿನಯವನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದರು.




ಅಪ್ಪು ಸಿನಿಮಾದಲ್ಲಿ ಅದಾ ಶರ್ಮಾ ಅಭಿನಯ


ಇದಾದ್ಮೇಲೆ ಪವನ್ ಒಡೆಯರ್ ಅಪ್ಪು ಜೊತೆಗೆ ಒಂದು ಸಿನಿಮಾ ಮಾಡಿದ್ದರು. ಆ ಚಿತ್ರಕ್ಕೆ ರಣವಿಕ್ರಮ ಅಂತ ಶೀರ್ಷಿಕೆ ಇಟ್ಟಿದ್ದರು. ಈ ಚಿತ್ರದಲ್ಲಿ ಪಾರು ಅನ್ನುವ ಪಾತ್ರವನ್ನ ಬರೆದರು. ಗೌರಿ ಅನ್ನುವ ಇನ್ನೂ ಒಂದು ಪಾತ್ರವನ್ನೂ ಬರೆದರು.


Kannada Director Pawan Wadeyar Reveal Secrets of Rana Vikrama Actress Adah Sharma
ಅದಾ ಶರ್ಮಾ ಕೀ ಅದಾ ಸೂಪರೋ ಸೂಪರ್


ರಣವಿಕ್ರಮ ಚಿತ್ರದ ಪಾರು ಪಾತ್ರಕ್ಕೆ ಅದಾ ಶರ್ಮಾ ಆಯ್ಕೆ ಆಗಿದ್ದು ಹೇಗೆ?


ಗೌರಿ ಹೆಸರಿನ ಪಾತ್ರಕ್ಕೆ ಮಾಲಿವುಡ್ ನಟಿ ಅಂಜಲಿಯನ್ನ ಸೆಲೆಕ್ಟ್ ಮಾಡಿದ್ದರು. ಆದರೆ ಪಾರು ಹೆಸರಿನ ಪಾತ್ರಕ್ಕೆ ಬಾಲಿವುಡ್ ನಟಿ ಅದಾ ಶರ್ಮಾ ಅವರನ್ನ ಆಯ್ಕೆ ಮಾಡಿದ್ದರು. ಹಾಗೆ ಪಾರು ಪಾತ್ರಕ್ಕೆ ಅದಾ ಶರ್ಮಾ ಆಯ್ಕೆ ಮಾಡಲು 1920 ಸಿನಿಮಾನೇ ಕಾರಣ ಆಗಿತ್ತು.




ಅದಾ ಶರ್ಮಾ ತುಂಬಾ ಒಳ್ಳೆ ನಟಿ ಎಂದ ಪವನ್ ಒಡೆಯರ್


ಈ ಚಿತ್ರದ ಪಾತ್ರವನ್ನ ಮೆಚ್ಚಿಕೊಂಡು ಪವನ್ ಒಡೆಯರ್ ಕನ್ನಡದ ರಣವಿಕ್ರಮ ಸಿನಿಮಾಕ್ಕೆ ಅದಾ ಶರ್ಮಾ ಆಯ್ಕೆ ಮಾಡಿದ್ದರು. ಅದಾ ಶರ್ಮಾ ತುಂಬಾನೇ ಒಳ್ಳೆ ನಟಿ ಅಂತ ಹೇಳುವ ಪವನ್ ಒಡೆಯರ್, ಅದಾ ಶರ್ಮಾ ಒಳ್ಳೆ ಡ್ಯಾನ್ಸರ್ ಕೂಡ ಹೌದು ಅಂತ ಬಣ್ಣಿಸುತ್ತಾರೆ.


ಇದನ್ನೂ ಓದಿ: Matte Maduve: ಪವಿತ್ರಾ ಲೋಕೇಶ್-ನರೇಶ್ ರಿಯಲ್ ಸ್ಟೋರಿ ರಿವೀಲ್! ಟ್ರೈಲರ್ ರಿಲೀಸ್


ಅದಾ ಶರ್ಮಾಗೆ ಬರ್ತ್ ಡೇ ವಿಶ್ ತಿಳಿಸಿದ ಪವನ್ ಒಡೆಯರ್


ಅದಾ ಶರ್ಮಾ ಅಭಿನಯದ ದಿ ಕೇರಳ ಸ್ಟೋರಿ ಸಿನಿಮಾ ನೋಡೊಕೆ ನನಗೆ ಇನ್ನೂ ಆಗಿಲ್ಲ. ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದೇನೆ. ಹಾಗೇನೆ ಮೇ-11 ರಂದು ಅವರ ಜನ್ಮ ದಿನ, ಅವರಿಗೆ ನನ್ನ ಬೆಸ್ಟ್ ವಿಶಸ್ ತಿಳಿಸುತ್ತೇನೆ. ಅವರಿಗೆ ಒಳ್ಳೆಯದಾಗಲಿ ಅಂತ ಪವನ್ ಒಡೆಯರ್ ಮನಸಾರೆ ಹರಸಿದ್ದಾರೆ.

First published: