• Home
  • »
  • News
  • »
  • entertainment
  • »
  • Director Pawan: ರೇಮೊ ಮೂಲಕ ಆಶಿಕಾಗೆ ಗೂಗ್ಲಿ, ಡೈರೆಕ್ಟರ್ ಪವನ್ Sorry ಕೇಳಿದ್ಯಾಕೆ?

Director Pawan: ರೇಮೊ ಮೂಲಕ ಆಶಿಕಾಗೆ ಗೂಗ್ಲಿ, ಡೈರೆಕ್ಟರ್ ಪವನ್ Sorry ಕೇಳಿದ್ಯಾಕೆ?

ಆಶಿಕಾ ರಂಗನಾಥ್ ವೀಡಿಯೋ ಅಸಲಿನಾ ನಕಲಿನಾ?

ಆಶಿಕಾ ರಂಗನಾಥ್ ವೀಡಿಯೋ ಅಸಲಿನಾ ನಕಲಿನಾ?

ಆಶಿಕಾ ರಂಗನಾಥ್ ವೀಡಿಯೋ ವೈರಲ್ ಆಗಿದೆ. ನಿನ್ನೆಯಿಂದಲೇ ಈ ಸುದ್ದಿ ಕಾಡ್ಗಿಚ್ಚಿನಂತೆ ಹರೆದಾಡುತ್ತಿದೆ.ಆದರೆ ಡೈರೆಕ್ಟರ್ ಪವನ್ ಒಡೆಯರ್ ಇಂದು ವೀಡಿಯೋ ಮೂಲಕವೇ ಆಶಿಕಾ ರಂಗನಾಥ್ ಅವರಿಗೆ ಕ್ಷಮೆ ಕೇಳಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ರೇಮೊ ಸಿನಿಮಾ (Raymo film) ರಿಲೀಸ್​​ಗೆ ರೆಡಿ ಇದೆ. ಇದೇ ತಿಂಗಳ 25 ರಂದು ರಿಲೀಸ್ ಆಗುತ್ತಿದೆ. ಅಷ್ಟರಲ್ಲಿಯೇ ಚಿತ್ರದ ನಾಯಕಿ ಆಶಿಕಾ (Ashika Ranganath) ರಂಗನಾಥ್ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದಾರೆ. ಕುಡಿದ ಮತ್ತಿನಲ್ಲಿ ತೂರಾಡಿ ರಂಪಾಟ ಮಾಡಿಕೊಂಡಿದ್ದಾರೆ. ಮದ್ಯದ ಏಟಿನಲ್ಲಿ ಮಧ್ಯೆ ಬೆರಳು ತೋರಿಸಿ ವೈರಲ್ ಆಗಿದ್ದಾರೆ. ಇದು ನಿನ್ನೆಯಿಂದಲೇ (18.11.22) ವೈರಲ್ ಆಗ್ತಿರೋ ವೀಡಿಯೋ ಕಥೆ. ಆದರೆ ಇಂದು ರೇಮೊ ಚಿತ್ರದ ಡೈರೆಕ್ಟರ್ ಪವನ್ (Pawan Wadeyar) ಒಡೆಯರ್ ನಟಿ ಆಶಿಕಾಗೆ Sorry ಕೇಳಿದ್ದಾರೆ. ಆಶಿಕಾ ಎಣ್ಣೆ ಏಟಿನಲ್ಲಿ ತೂರಾಡಿದ್ದಕ್ಕೂ ಪವನ್ ಒಡೆಯರ್ ಸಾರಿ ಕೇಳಿದ್ದಕ್ಕು ಏನ್ ಸಂಬಂಧ.? ಈ ಪ್ರಶ್ನೆಯ ಸುತ್ತ ಇಲ್ಲೊಂದಿಷ್ಟು ವಿಶ್ಲೇಷಣೆ ಇದೆ ಓದಿ.


ರೇಮೊ ಪ್ರಚಾರದ ಎಡವಟ್ಟು-ನಾಯಕ ನಟಿ ಆಶಿಕಾ ಬಲಿ?
ಆಶಿಕಾ ರಂಗನಾಥ್ ಒಳ್ಳೆ ಹುಡುಗಿ. ಎಣ್ಣೆ ಹೊಡೆದು ತೂರಾಡೋ ಹುಡುಗಿ ಅಲ್ವೇ ಅಲ್ಲ. ನಮ್ಮಿಂದ ತಪ್ಪಾಗಿದೆ. ಈ ತಪ್ಪಿಗಾಗಿ ಸಾರಿ ಕೇಳುತ್ತೇನೆ. ಆಶಿಕಾ ರಂಗನಾಥ್ ಹರ್ಟ್ ಆಗಿದ್ದಾರೆ. ಅವರಿಗೂ ನಾನು ಸಾರಿ ಕೇಳ್ತಾ ಇದ್ದೇನೆ.
ಹೀಗೆ ಡೈರೆಕ್ಟರ್ ಪವನ್ ಒಡೆಯರ್ ಸಾರಿ ಕೇಳಿದರು. ಇವರು ಕ್ಷಮೆ ಕೇಳಿರೋದಕ್ಕೆ ಕಾರಣ ಇದೆ. ಆ ಕಾರಣದ ಹೆಸರು ಎಣ್ಣೆ ಏಟಿನ ಆಶಿಕಾ ವೀಡಿಯೋ ವೈರಲ್ ಆಗಿರೋದು, ಈ ವೀಡಿಯೋ ಅಸಲಿನಾ? ನಕಲಿನಾ ಅನ್ನೋದೇ ಈಗ ಅತಿ ಹೆಚ್ಚು ಚರ್ಚೆ ಆಗುತ್ತಿದೆ.


Kannada Director Pawan Wadeyar openly ask apology to Actress Ashika Ranganath
ಮದ್ಯದ ಅಮಲಿನಲ್ಲಿ ಮಧ್ಯೆದ ಬೆರಳು ತೋರಿದ ಆಶಿಕಾ!


ಆಶಿಕಾ ರಂಗನಾಥ್ ವೀಡಿಯೋ ಅಸಲಿನಾ ನಕಲಿನಾ?
ಆಶಿಕಾ ರಂಗನಾಥ್ ಒಳ್ಳೆಯ ನಟಿ ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಬೋಲ್ಡ್ ಹುಡುಗಿಯ ಪಾತ್ರವನ್ನೂ ಅಷ್ಟೇ ಅದ್ಭುತವಾಗಿಯೇ ನಿರ್ವಹಿಸುತ್ತಾರೆ ಅನ್ನೋದನ್ನ ವೈರಲ್ ವೀಡಿಯೋ ಹೇಳುತ್ತಿದೆ. ನಿಜ, ವೈರಲ್ ಆಗಿರೋ ಆಶಿಕಾ ರಂಗನಾಥ ವೀಡಿಯೋ ಅಸಲಿನೇ. ಆದರೆ ಇದು ಸಿನಿಮಾ ವೀಡಿಯೋನೇ ಆಗಿದೆ.


ರೇಮೊ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಬೋಲ್ಡ್ ಕ್ಯಾರೆಕ್ಟರ್ ಮಾಡಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿರೋ ಗರ್ವದ ಗಾಯಕಿಯಾಗಿ ಅಭಿನಯಿಸಿದ್ದಾರೆ. ಆ ಒಂದು ಪಾತ್ರಕ್ಕಾಗಿಯೇ ಎಣ್ಣೆ ಹೊಡೆದು ಮಧ್ಯೆದ ಬೆರಳು ತೋರಿಸೋ ಮಟ್ಟಿಗೆ ಅಭಿನಯಿಸಿದ್ದಾರೆ. ಪಾತ್ರವೂ ಅದನ್ನೆ ಡಿಮ್ಯಾಂಡ್ ಮಾಡಿದೆ. ಅದಕ್ಕೆ ಅಭಿಯಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಮಧ್ಯೆದ ಬೆರಳು ತೋರಿದ ಆಶಿಕಾ!
ಆಶಿಕಾ ವೈರಲ್ ವೀಡಿಯೋ ಹಿಂದಿನ ಅಸಲಿ ವಿಷಯವನ್ನ ಡೈರೆಕ್ಟರ್ ಪವನ್ ಒಡೆಯರ್ ಹೇಳಿಕೊಂಡಿದ್ದಾರೆ. "ಆಶಿಕಾ ರಂಗನಾಥ್ ವೀಡಿಯೋ ಲೀಕ್ ಆಗಿದ್ದು ಹೇಗೆ? ಇದು ಮಾರ್ಕೆಟಿಂಗ್ ಟೀಮ್​​ನಿಂದಲೇ ಆಗಿದೆ. ನಾವು ಸಿನಿಮಾದ ವೀಡಿಯೋ ಇರೋ ಹಾರ್ಡ್​ ಡಿಸ್ಕ್ ಅನ್ನ ಕೊಟ್ಟಿದ್ದೇವೆ.


ಅದರಲ್ಲಿ ಯಾವುದನ್ನ ತೆಗೆದುಕೊಳ್ಳಬೇಕು. ಯಾವುದನ್ನ ಬಿಡಬೇಕು. ಇದನ್ನ ನಾವು ಹೇಳೋದಿಲ್ಲ. ಅದನ್ನ ಅವರೇ ಮಾಡಿದ್ದಾರೆ. ಈ ಕಾರಣಕ್ಕೇನೆ ಈ ಒಂದು ವೀಡಿಯೋ ಹೊರ ಬಂದಿದೆ ಅಷ್ಟೆ.


ನಮ್ಮಿಂದ ಈಗ ತಪ್ಪಾಗಿದೆ. ಆಶಿಕಾ ಕೂಡ ಹರ್ಟ್ ಆಗಿದ್ದಾರೆ. ಚಿತ್ರದ ಪ್ರಚಾರಕ್ಕೇನೆ ಬರೋದಿಲ್ಲ ಅಂತಲೂ ಹೇಳುತ್ತಿದ್ದಾರೆ. ಆದರೆ ನಮ್ಮಿದ ತಪ್ಪಾಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ " ಎಂದು ಡೈರೆಕ್ಟರ್ ಪವನ್ ಒಡೆಯರ್ ಹೇಳಿದ್ದಾರೆ.


ವೀಡಿಯೋ ಮೂಲಕ ಕ್ಷಮೆ ಕೇಳಿದ ಪವನ್ ಒಡೆಯರ್
ಆಶಿಕಾ ರಂಗನಾಥ್ ವೀಡಿಯೋ ವೈರಲ್ ಆಗಿದೆ. ನಿನ್ನೆಯಿಂದಲೇ ಈ ಸುದ್ದಿ ಕಾಡ್ಗಿಚ್ಚಿನಂತೆ ಹರೆದಾಡುತ್ತಿದೆ. ಆದರೆ ಡೈರೆಕ್ಟರ್ ಪವನ್ ಒಡೆಯರ್ ಇಂದು ವೀಡಿಯೋ ಮೂಲಕವೇ ಆಶಿಕಾ ರಂಗನಾಥ್ ಅವರಿಗೆ ಕ್ಷಮೆ ಕೇಳಿದ್ದಾರೆ.
ಇದೇ ತಿಂಗಳ 25 ರಂದು ರೇಮೊ ಸಿನಿಮಾ ರಿಲೀಸ್ ಆಗುತ್ತಿದೆ. ಇಷಾನ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ. ಗಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಗಾಯಕನಾಗಿ ಇಷಾನ್ ಇಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ: Shivaraj Kumar: ಹ್ಯಾಟ್ರಿಕ್ ಹೀರೋ ಫುಲ್ ಬ್ಯುಸಿ! ಜೈಲರ್ ಚಿತ್ರದಲ್ಲಿ ಶಿವನ ಹೊಸ ರೂಪ


ಇವರ ಜೋಡಿಯ ಈ ಚಿತ್ರ ಸಂಗೀತಮವಾಗಿಯೇ ಇದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಇಡೀ ಮ್ಯೂಸಿಕಲಿ ಮ್ಯಾಜಿಕ್ ಮಾಡಲಿದೆ. ಅಷ್ಟರಲ್ಲಿಯೇ ಆಶಿಕಾ ವೀಡಿಯೋ ವೈರಲ್ ಆಗಿದೆ.

First published: