• Home
  • »
  • News
  • »
  • entertainment
  • »
  • Pawan Wadeyar: ಬಾಲಿವುಡ್​ಗೆ ಕಾಲಿಟ್ಟ ಪವನ್ ಒಡೆಯರ್! ಕ್ರಿಕೆಟರ್ ಹರ್ಭಜನ್ ಪತ್ನಿ ಗೀತಾ ಬಸ್ರಾ ಹೀರೋಯಿನ್

Pawan Wadeyar: ಬಾಲಿವುಡ್​ಗೆ ಕಾಲಿಟ್ಟ ಪವನ್ ಒಡೆಯರ್! ಕ್ರಿಕೆಟರ್ ಹರ್ಭಜನ್ ಪತ್ನಿ ಗೀತಾ ಬಸ್ರಾ ಹೀರೋಯಿನ್

ಬಾಲಿವುಡ್ ಗೂ ಕಾಲಿಟ್ಟ ಕನ್ನಡದ ಪವನ್ ಒಡೆಯರ್

ಬಾಲಿವುಡ್ ಗೂ ಕಾಲಿಟ್ಟ ಕನ್ನಡದ ಪವನ್ ಒಡೆಯರ್

ನೋಟರಿ ಸಿನಿಮಾದ ವಿಶೇಷ ಏನಪ್ಪ ಅಂದ್ರೆ, ನಿರ್ದೇಶಕ ಪವನ್ ಒಡೆಯರ್ ಈ ಮೂಲಕ ನಿರ್ಮಾಪಕರೂ ಆಗಿದ್ದಾರೆ. ತಮ್ಮ ಒಡೆಯರ್ ಮ್ಯೂವೀಸ್ ಬ್ಯಾನರ್ ಮೂಲಕವೇ ಚಿತ್ರ ನಿರ್ಮಿಸುತ್ತಿದ್ದಾರೆ.

  • Share this:

ಕನ್ನಡದ ನಟ-ನಿರ್ದೇಶಕ ಪವನ್ ಒಡೆಯರ್ (Pawan Wadeyar) ಒಳ್ಳೆ ಅವಕಾಶ ಪಡೆದಿದ್ದಾರೆ. ವಿಜಯದಶಮಿ ದಿನವೇ ತಮ್ಮ ಬಾಲಿವುಡ್ (Bollywood) ಪಯಣವನ್ನೂ ಆರಂಭಿಸಿದ್ದಾರೆ. ಚಿತ್ರ ಜೀವನದಲ್ಲಿ ಕನ್ನಡದಲ್ಲಿಯೇ ದಶಕಗಳಿಂದಲೂ ಉಳಿದುಕೊಂಡು ಅತ್ಯುತ್ತಮ ಸಿನಿಮಾ (Cinema) ಮಾಡಿದ ಖ್ಯಾತಿನೂ ಪವನ್​ ಒಡೆಯರ್​ಗೆ ಹೋಗ್ಬೇಕು. ತಮ್ಮ ನಿರ್ಮಾಣದ ಡೊಳ್ಳು ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಖುಷಿನೂ ಇದೆ. ಅದೇ ಸಂತೋಷದಲ್ಲಿಯೇ ಇದ್ದ ಪವನ್ ಒಡೆಯರ್, ಕನ್ನಡದಿಂದ ನೇರವಾಗಿ ಬಾಲಿವುಡ್​ ಗೂ ಕಾಲಿಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಚಿತ್ರ ನಿರ್ಮಿಸೋದ್ರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ.


ಬಾಲಿವುಡ್​ ಗೆ ಹಾರಿದ ಕನ್ನಡದ ಡೈರೆಕ್ಟರ್ ಪವನ್ ಒಡೆಯರ್
ಬಾಲಿವುಡ್ ಅನ್ನೋದು ದೊಡ್ಡ ಸಾಗರವೇ ಆಗಿದೆ. ಇಲ್ಲಿ ಈಜೋದು ಸರಳವಲ್ಲ. ಈಜಿ ದಡ ಸೇರೋದು ಸುಲಭವಲ್ಲ. ಕನ್ನಡದ ನಿರ್ಮಾಪಕ-ನಿರ್ದೇಶಕ ಪವನ್ ಒಡೆಯರ್ ಅಂತಹ ಒಂದು ಸಾಹಸ ಮಾಡುತ್ತಿದ್ದಾರೆ. ವಿಜಯ ದಶಮಿ ದಿನವೇ ತಮ್ಮ ಬಾಲಿವುಡ್ ಪಯಣವನ್ನ ಆರಂಭಿಸಿದ್ದಾರೆ.


ಪವನ್ ಒಡೆಯರ್ ಚಿತ್ರದಲ್ಲಿ ಕ್ರಿಕೆಟರ್ ಹರ್ಭಜನ್ ಸಿಂಗ್ ಪತ್ನಿ ಅಭಿನಯ
ಕ್ರಿಕೆಟ್ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ನಾಯಕಿಗೆ ಬೆಂಗಾಲಿ ಹೆಸರಾಂತ ನಟ ಪರಂಬ್ರತಾ ಉಪಾಧ್ಯಾಯ ಜೋಡಿಯಾಗಿದ್ದಾರೆ.
ಚಿತ್ರದಲ್ಲಿ ಹಾಸ್ಯ ಇರೋದು ವಿಶೇಷವೇ ಆಗಿದೆ.




ಪವನ್ ಒಡೆಯರ್ ಹಾಸ್ಯ ಬರೆಯೋದ್ರಲ್ಲಿ ಎತ್ತಿದ ಕೈ ಅಲ್ವೇ? ಕನ್ನಡದ ಗೋವಿಂದಾಯನಮಃ ಅದಕ್ಕೆ ಸಾಕ್ಷಿನೇ ಅಲ್ವಾ? ಬಾಲಿವುಡ್​ ಅಂಗಳದಲ್ಲೂ ಕನ್ನಡಿಗ ಪವನ್ ಒಡೆಯರ್ ಹಾಸ್ಯಭರಿತ ಚಿತ್ರವನ್ನೆ ಮಾಡುತ್ತಿದ್ದಾರೆ. ಆದರೆ ಇದನ್ನ ಹೇಳಲಿಕ್ಕೆ ಬಳಸಿರೋ ಟೈಟಲ್ ಸೀರಿಯೆಸ್ ಆಗಿಯೇ ಇದೆ.


ಇದನ್ನೂ ಓದಿ: Kantara Song: ನಂಬರ್ ವನ್ ಆದ ಸಿಂಗಾರ ಸಿರಿಯೇ! ಕಾಂತಾರದ ರೊಮ್ಯಾಂಟಿಕ್ ಸಾಂಗ್ ವೈರಲ್


ಪವನ್ ಮೊದಲ ಹಿಂದಿ ಸಿನಿಮಾದ ಹೆಸರು ನೋಟರಿ
ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದ ಹೆಸರು ನೋಟರಿ. ಇದೇನೂ ಅಂತ ಹೇಳೋದೇ ಬೇಡ. ಆದರೆ ನಾಯಕ ನಟ ಇದೇ ಕ್ಷೇತ್ರದಲ್ಲಿರೋ ಒಬ್ಬ ಪ್ರಾಮಾಣಿಕ ವ್ಯಕ್ತಿ ಎಂದೂ ಸುಳ್ಳು ಹೇಳೋದೇ ಇಲ್ಲ. ಇದುವೇ ಈ ನಾಯಕನ ವ್ಯಕ್ತಿತ್ವದ ಪರಮ ಸತ್ಯ.


Kannada Director Pawan Wadeyar First Hindi Movie Launched
ಪವನ್ ಒಡೆಯರ್ ಹಿಂದಿ ಸಿನಿಮಾ ಟೈಟಲ್


ಆದರೆ ಇರೋ ಕ್ಷೇತ್ರದಲ್ಲಿ ಒಂದಿಲ್ಲ ಒಂದು ಸುಳ್ಳು ಹೇಳೋ ಪರಿಸ್ಥಿತಿ ಬರುತ್ತದೆ. ಸುಳ್ಳು ಹೇಳದೇನೆ ಅದನ್ನ ಹೇಗೆ ನಿಭಾಯಿಸುತ್ತಾನೆ ಅನ್ನೋದನ್ನೆ ಇಲ್ಲಿ ಹಾಸ್ಯದ ಚೌಕಟ್ಟಿನಲ್ಲಿ ಪವನ್ ಒಡೆಯರ್ ಹೇಳೋಕೆ ಆರಂಭಿಸಿದ್ದಾರೆ.


ವಿಜಯದಶಮಿ ದಿನ ಭೂಪಾಲ್​ನಲ್ಲಿ ಚಿತ್ರದ ಚಿತ್ರೀಕರಣ ಆರಂಭ
ದೂರದ ಭೂಪಾಲ್​ನಲ್ಲಿ ಚಿತ್ರಕ್ಕೆ ಮುಹೂರ್ತ ಆಗಿದೆ. ಈಗ ಅಲ್ಲಿಯೇ ಚಿತ್ರೀಕರಣ ಕೂಡ ಶುರು ಆಗಿದೆ. ಹೆಚ್ಚು ಕಡಿಮೆ 20 ದಿನ ಈ ಭೂಪಾಲ್​ ನಲ್ಲಿಯೇ ಸಿನಿಮಾ ಶೂಟಿಂಗ್ ನಡೆಯಲಿದೆ.


ಭೂಪಾಲ್ ಸ್ಕೆಡ್ಯೂಲ್ ಮುಗಿದ ಬಳಿಕ ಇಡೀ ಟೀಮ್ ಮುಂಬೈಗೂ ಬರುತ್ತದೆ. ಇಲ್ಲಿಯೂ ಒಂದಷ್ಟು ಪ್ರಮುಖ ಸೀನ್​ಗಳ ಶೂಟಿಂಗ್ ಕೂಡ ಮಾಡಿಕೊಳ್ಳಲಿದೆ.


Kannada Director Pawan Wadeyar First Hindi Movie Launched
ಪವನ್ ಒಡೆಯರ್ ಹಿಂದಿ ಸಿನಿಮಾ ಸಿಂಪಲ್ ಪೂಜೆ


ನೋಟರಿ ಚಿತ್ರಕ್ಕೆ ಬಂಡವಾಳ ಹೂಡಿದ ಪವನ್ ಒಡೆಯರ್
ನೋಟರಿ ಸಿನಿಮಾದ ವಿಶೇಷ ಏನಪ್ಪ ಅಂದ್ರೆ, ನಿರ್ದೇಶಕ ಪವನ್ ಒಡೆಯರ್ ಈ ಮೂಲಕ ನಿರ್ಮಾಪಕರೂ ಆಗಿದ್ದಾರೆ. ತಮ್ಮ ಒಡೆಯರ್ ಮ್ಯೂವೀಸ್ ಬ್ಯಾನರ್ ಮೂಲಕವೇ ಚಿತ್ರ ನಿರ್ಮಿಸುತ್ತಿದ್ದಾರೆ.


ಪವನ್ ಒಡೆಯರ್ ಈ ಮೊದಲ ಹೆಜ್ಜೆಗೆ, ಬೌಂಡ್ ಲೆಸ್ ಮೀಡಿಯಾ, ಕಾಶ್ ಎಂಟರ್​ಟೈನಮೆಂಟ್ ಪ್ರೋಡಕ್ಷನ್ ಕೂಡ ಸಾಥ್ ಕೊಟ್ಟಿದೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡ್ತಿರೋ ಪವನ್ ಒಡೆಯರ್ ಹಿಂದೆ ಒಂದ್ ಒಳ್ಳೆ ಟೀಮ್ ಕೂಡ ಇದೆ.


ಇದನ್ನೂ ಓದಿ: Daali Dhananjay: ಉನ್ಮಾದದ ಲಿರಿಕ್ಸ್ ಬರೆದ ಡಾಲಿ ಧನಂಜಯ್! ಇದು ಹೆಡ್ ಬುಷ್ ಹಬೀಬಿ!


ಚಿತ್ರಕಥೆ ಬರೆಯಲು ಪವನ್ ಒಡೆಯರ್​ಗೆ ಮುಂಬೈ ಮೂಲದ ತಶಾ ಭಂಬ್ರಾ, ಸ್ಪರ್ಶ್ ಖೆಟರ್ ಪಾಲ್ ಜೊತೆಯಾಗಿದ್ದಾರೆ. ಇವರೆಲ್ಲ ಈ ಚಿತ್ರಕಥೆಯ ಚಿತ್ರದ ಚಿತ್ರೀಕರಣ ಈಗಾಗಲೇ ಶುರು ಆಗಿದೆ.


ವೈದಿ ಎಸ್.ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ರೋಹಿತ್ ಕುಲಕರ್ಣಿ ಹಾಗೂ ಮೌಸಿನ್ ಜಾವೇದ್ ಸಂಗೀತ ನೀಡುತ್ತಿದ್ದಾರೆ. ಇನ್ನುಳಿದಂತೆ ಈ ಮೂಲಕ ಕನ್ನಡದ ನಿರ್ದೇಶಕ ಪವನ್ ಒಡೆಯರ್ ಬಾಲಿವುಡ್​ ಅಂಗಳಕ್ಕೂ ಕಾಲಿಟ್ಟಿದ್ದಾರೆ.

First published: