ಸ್ಯಾಂಡಲ್ವುಡ್ ಮಂದಿಗೆ (Bollywood Movie) ಬಾಲಿವುಡ್ ಈ ಹಿಂದೆ ದೊಡ್ಡ ಸಾಗರದ ರೀತಿ ಕಾಣ್ತಾ ಇತ್ತು. ಇದರಲ್ಲಿ ಈಜೋದು ಅಸಾಧ್ಯ ಅನ್ನುವ ಮನೋಭಾವನೆ ಇತ್ತು. ಆದರೆ ಕನ್ನಡದ (Kannada Cinema) ಸಿನಿಮಾಗಳು ಆ ಒಂದು ಭಾವನೆಯನ್ನ ಚೇಂಜ್ ಮಾಡಿವೆ. ಕಂಟೆಂಟ್ ಚೆನ್ನಾಗಿದ್ದರೇ ಎಲ್ಲೆಡೆ ಈಜಬಹುದು ಎಂಬ ಧೈರ್ಯ ಕೊಟ್ಟಿವೆ. ಅದೇ ಮನೋ ಬಲದಿಂದಲೇ ಕನ್ನಡದ ಡೈರೆಕ್ಟರ್ ಪವನ್ ಒಡೆಯರ್ (Director Pawan Wadeyar) ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ನೋಟರಿ ಹೆಸರಿನ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಪವನ್ ಒಡೆಯರ್, ಅಂದುಕೊಂಡ ಕೆಲಸವನ್ನ ಈಗ ಸಾಧಿಸಿದ್ದಾರೆ. ತಮ್ಮ ಮೊದಲ ಸಿನಿಮಾದ (Cinema Shooting) ಚಿತ್ರೀಕರಣವನ್ನ ಪೂರ್ಣಗೊಳಿಸಿದ್ದಾರೆ. ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.
ತಮ್ಮ ಈ ಚಿತ್ರದ ಅನುಭವದ ಬಗ್ಗೆ ಪವನ್ ಒಡೆಯರ್ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಒಂದಷ್ಟು ಮಾತನಾಡಿದ್ದಾರೆ. ಅವರ ಮಾತಿನ ಒಟ್ಟು ಚಿತ್ರಣ ಇಲ್ಲಿದೆ ಓದಿ.
ಗೂಗ್ಲಿ ಡೈರೆಕ್ಟರ್ ಫಸ್ಟ್ ಹಿಂದಿ ಸಿನಿಮಾ ಶೂಟಿಂಗ್ ಕಂಪ್ಲೀಟ್
ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಕನ್ನಡದಲ್ಲಿ ವಿಶೇಷ ಸಿನಿಮಾಗಳನ್ನ ಮಾಡಿದ್ದಾರೆ. ರಾಕಿ ಭಾಯ್ ಯಶ್ ಅಭಿನಯದ ಗೂಗ್ಲಿ ಆ ಸಾಲಿನ ಅದ್ಭುತ ಸಿನಿಮಾ ಆಗಿದೆ. ಈ ಚಿತ್ರ ಅಲ್ಲದೇ ಹಾಸ್ಯಭರಿತ ಗೋವಿಂದಾಯ ನಮಃದ ಮೂಲಕವೂ ಪವನ್ ಕನ್ನಡಿಗರ ಹೃದಯದಲ್ಲಿ ಜಾಗ ಮಾಡಿಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕವೂ ಪವನ್ ಒಡೆಯರ್ ಕನ್ನಡಿಗರಿಗೆ ಭೂತ-ಪ್ರೇಮತದ ಕಥೆಯನ್ನ ಲಾಜಿಕಲ್ ಆಗಿಯೇ ಹೇಳಿ ಗೆದ್ದಿದ್ದರು.
ಬಾಲಿವುಡ್ನಲ್ಲಿ ಸದ್ಯ ಬೀಡು ಬಿಟ್ಟ ಪವನ್ ಒಡೆಯರ್
ಅದೇ ಪವನ್ ಒಡೆಯರ್ ಬಾಲಿವುಡ್ಗೂ ಈಗಾಗಲೇ ಕಾಲಿಟ್ಟಿದ್ದಾರೆ. ಇವರ ನಿರ್ದೇಶನದ ಮೊದಲ ಹಿಂದಿ ನೋಟರಿ ಚಿತ್ರದ ಬಹುತೇಕ ಶೂಟಿಂಗ್ ಕೆಲಸ ಪೂರ್ಣಗೊಂಡಿದೆ. ಬಾಲಿವುಡ್ನಲ್ಲಿ ಸದ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಂಬೈಯಲ್ಲಿ ಈಗ ಜೋರಾಗಿಯೇ ನಡೆಯುತ್ತಿದೆ. ಇದರ ಬಗ್ಗೆ ಅಲ್ಲಿಂದಲೇ ಡೈರೆಕ್ಟರ್ ಪವನ್ ಒಡೆಯರ್, ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ.
ನಾನು ಸದ್ಯ ಮುಂಬೈಯಲ್ಲಿಯೇ ಇದ್ದೇನೆ- ಪವನ್ ಒಡೆಯರ್
ನನ್ನ ಮೊದಲ ಸಿನಿಮಾ ಈಗ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿ ಇದೆ. ಸದ್ಯ ನಾನು ಮುಂಬೈಯಲ್ಲಿಯೇ ಇದ್ದೇನೆ. ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸ ಇಲ್ಲಿ ನಡೆಯುತ್ತಿದೆ.
ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ಬಾಲಿವುಡ್ನಲ್ಲಿ ಕೆಲಸ ಮಾಡಿದ ಅನುಭವ ಕೂಡ ತುಂಬಾ ಚೆನ್ನಾಗಿತ್ತು ಎಂದು ಪವನ್ ಒಡೆಯರ್ ಹೇಳಿದ್ದಾರೆ.
ಪಾತ್ರಕ್ಕೆ ಜೀವ ತುಂಬಿದ ನಾಯಕ ಪರಂಬ್ರತಾ ಚಟರ್ಜಿ
ನಮ್ಮ ಚಿತ್ರದ ನಾಯಕ ನಟ ಪರಂಬ್ರತಾ ಚಟರ್ಜಿ ಅದ್ಭುತ ಕಲಾವಿದರು. ನಮ್ಮ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗಾಗಲೇ ಇವರು ಹಲವು ಹಿಂದಿ ಚಿತ್ರಗಳನ್ನ ಮಾಡಿದ್ದಾರೆ.
ಬೆಂಗಾಲಿಯಲ್ಲಿ ಪರಂಬ್ರತಾ ಚಟರ್ಜಿ ಒಬ್ಬ ಸ್ಟಾರ್ ನಟ ಆಗಿದ್ದಾರೆ. ಇವರ ಜೊತೆಗಿನ ಕೆಲಸ ತೃಪ್ತಿ ತಂದಿದೆ ಎಂದು ನಟ-ನಿರ್ದೇಶಕ ಪವನ್ ಒಡೆಯರ್ ವಿವರಿಸುತ್ತಾರೆ.
ಇದನ್ನೂ ಓದಿ: Rocking Star Yash: ವರ್ಲ್ಡ್ ಲೆವೆಲ್ ಸಿನಿಮಾ ಸಿದ್ಧತೆ! ಯಶ್ ಬಿಗ್ ಅನೌನ್ಸ್ಮೆಂಟ್ ಯಾವಾಗ?
ನೋಟರಿ ಸಿನಿಮಾ ರಿಲೀಸ್ ಆಗೋದು ಯಾವಾಗ?
ನೋಟರಿ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸ ಇನ್ನು ನಡೆಯುತ್ತಿದೆ. ಆದರೆ ಚಿತ್ರದ ರಿಲೀಸ್ ಡೇಟ್ ಇನ್ನು ಫಿಕ್ಸ್ ಆಗಿಲ್ಲ ಅಂತ ಡೈರೆಕ್ಟರ್ ಪವನ್ ಒಡೆಯರ್ ಹೇಳುತ್ತಾರೆ.
ಒಟ್ಟಾರೆ, ಕನ್ನಡದ ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ತಮ್ಮ ಮೊದಲ ಹಿಂದಿ ಚಿತ್ರದ ಚಿತ್ರೀಕರಣವನ್ನ ಯಶಸ್ವಿಯಾಗಿ ಮುಗಿಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕಾಗಿ ಸದ್ಯಕ್ಕೆ ಮುಂಬೈಯಲ್ಲಿ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ