ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ (Pawan Wadeyar First Hindi Movie) ಕನ್ನಡದ ಡೈರೆಕ್ಟರ್ ಪವನ್ ಒಡೆಯರ್ ತಮ್ಮ ಮೊದಲ ಹಿಂದಿ ಚಿತ್ರದ ಟೈಟಲ್ ಚೇಂಜ್ ಮಾಡಿದ್ದಾರೆ. ನೋಟರಿ ಅನ್ನುವ ಶೀರ್ಷಿಕೆ ಮೂಲಕವೇ (Bollywood Movie Title Change) ಸಿನಿಮಾ ಸೆಟ್ಟೇರಿತ್ತು. ಚಿತ್ರೀಕರಣ ಕೂಡ ಇದೇ ಹೆಸರಿನಲ್ಲಿಯೇ ಪೂರ್ಣಗೊಳಿಸಲಾಗಿದೆ. ಆದರೆ ಸಡನ್ ಆಗಿ ಈ ಸಿನಿಮಾದ ಟೈಟಲ್ ಬದಲಾಗಿದೆ. ಇದಕ್ಕೆ (Awasthy vs Awasthy Movie) ಏನೂ ಕಾರಣ ಅನ್ನೋದನ್ನ ಪವನ್ ಒಡೆಯರ್ ರಿವೀಲ್ ಮಾಡಿದ್ದಾರೆ. ತಮ್ಮ ಈ ಸಿನಿಮಾಕ್ಕೆ ಹೊಸದಾಗಿ ಇಟ್ಟ ಟೈಟಲ್ ಏನು ಅನ್ನೋದನ್ನ ಕೂಡ ನ್ಯೂಸ್-18 ಕನ್ನಡ (Awasthy vs Awasthy Updates) ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
ಪವನ್ ಒಡೆಯರ್ ಹಿಂದಿ ಚಿತ್ರದ ಟೈಟಲ್ ಏನು ?
ಡೈರೆಕ್ಟರ್ ಪವನ್ ಒಡೆಯರ್ ತಮ್ಮ ಮೊದಲ ಹಿಂದಿ ಸಿನಿಮಾದ ಚಿತ್ರೀಕರಣದ ಕೆಲಸವನ್ನ ಪೂರ್ಣಗೊಳಿಸಿದ್ದಾರೆ. ಪೋಸ್ಟ್ ಪ್ರೋಡಕ್ಷನ್ ಕೆಲಸವನ್ನೂ ಕಂಪ್ಲೀಟ್ ಮಾಡಿದ್ದಾರೆ. ಅಷ್ಟರಲ್ಲಿಯೇ ಇದೀಗ ಸಿನಿಮಾ ಟೈಟಲ್ ಅನ್ನು ಕೂಡ ಬದಲಿಸಿ ಬಿಟ್ಟಿದ್ದಾರೆ.
ಪವನ್ ಒಡೆಯರ್ ಹಿಂದಿ ಚಿತ್ರದ ಟೈಟಲ್ ಬದಲಾಗಿದ್ದೇಕೆ ?
ಪವನ್ ಒಡೆಯರ್ ಅವರ ಮೊದಲ ಹಿಂದಿ ಚಿತ್ರ ಯಾವುದು? ಹೀಗೆ ಕೇಳುವ ಪ್ರಶ್ನೆಗೆ ನೋಟರಿ ಅನ್ನುವ ಉತ್ತರ ಬರುತ್ತಿತ್ತು. ಚಿತ್ರ ಇದೇ ಹೆಸರಿನಲ್ಲಿಯೇ ಸೆಟ್ಟೇರಿತ್ತು. ಆದರೆ ರಿಲೀಸ್ ಹಂತಕ್ಕೆ ಬರೋ ಹೊತ್ತಿಗೆ ಡೈರೆಕ್ಟರ್ ಪವನ್ ಒಡೆಯರ್ ಚಿತ್ರದ ಟೈಟಲ್ ಬದಲಿಸಿದ್ದಾರೆ.
ಈ ಒಂದು ಬದಲಾವಣೆಗೆ ಇರೋ ಕಾರಣ ಏನೂ ಅನ್ನೋದನ್ನ ಕೂಡ ಪವನ್ ಒಡೆಯರ್ ಹೇಳಿಕೊಂಡಿದ್ದಾರೆ. ಹೌದು, ನಮ್ಮ ಚಿತ್ರದ ನಾಯಕನ ಹೆಸರು ಕಿಶೋರ್ ಅವಸ್ಥಿ ಅಂತ ಇದೆ. ಈ ಅವಸ್ಥಿಯ ಅವಸ್ತೆ ಅಷ್ಟಿಷ್ಟಲ್ಲ.
ನಾಯಕನ ಹೆಸರೆ ಚಿತ್ರಕ್ಕೆ ಸೂಪರ್ ಟೈಟಲ್
ತನ್ನೊಂದಿಗೇನೆ ತಾನು ಹೋರಾಡುವ ಕಥೆ ಇದಾಗಿದೆ. ಆದರೆ ಇಲ್ಲಿ ವಿಡಂಬನೆ ಕೂಡ ಇದೆ. ಹಾಗಾಗಿಯೇ ಈ ಚಿತ್ರಕ್ಕೆ ಈ ಹಿಂದೆ ಇಟ್ಟ ನೋಟರಿ ಅನ್ನೊದು ತುಂಬಾನೇ ಸೀರಿಯೆಸ್ ಟೈಟಲ್ ಆಗುತ್ತದೆ ಅಂತ ಡೈರೆಕ್ಟರ್ ಪವನ್ ಒಡೆಯರ್ ಅವರಿಗೆ ಅನಿಸಿದೆ.
ಅವಸ್ಥಿ ವರ್ಸಸ್ ಅವಸ್ಥಿ ಅನ್ನುವ ಟೈಟಲ್ ಫಿಕ್ಸ್
ಈ ಹಿನ್ನೆಲೆಯಲ್ಲಿ ಕಿಶೋರ್ ಅವಸ್ಥಿ ಪಾತ್ರದ ಹೆಸರನ್ನೆ ಇಲ್ಲಿ ಟೈಟಲ್ ಮಾಡಿದ್ದಾರೆ. ಆ ಕಾರಣಕ್ಕೇನೆ ಈ ಚಿತ್ರಕ್ಕೆ Awasthy vs Awasthy ಅಂತ ಶೀರ್ಷಿಕೆ ಇಡಲಾಗಿದೆ. ಇದರ ಹೊರತಾಗಿ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸವೆಲ್ಲ ಪೂರ್ಣಗೊಂಡಿದೆ. ಜುಲೈ ತಿಂಗಳಲ್ಲಿ ಈ ಸಿನಿಮಾ ತೆರೆಗೆ ತರೋಕೆ ಪ್ಲಾನ್ ಕೂಡ ಇದೆ.
ಬಾಲಿವುಡ್ ಸಿನಿಮಾದ ಕೆಲಸದಲ್ಲಿ ಪವನ್ ಒಡೆಯರ್ ಬ್ಯುಸಿ
ಅವಸ್ಥಿ ಪಾತ್ರದಲ್ಲಿ ಬಂಗಾಳಿ ನಟ ಪರಂಬ್ರತಾ ಚಟರ್ಜಿ ಅಭಿನಯಿಸಿದ್ದಾರೆ. ಗೀತಾ ಬಸ್ರಾ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಿನಿಮಾದಲ್ಲಿ ಕೋರ್ಟ್ ರೂಮ್ ಡ್ರಾಮ್ ಕಥೆ ಕೂಡ ಇದೆ. ಆದರೆ ಅದರ ಹೊರತಾಗಿ ಇಲ್ಲಿ ಬೇರೆ ಬೇರೆ ವಿಚಾರವೂ ಇದೆ ಎಂದು ಹೇಳುವ ಡೈರೆಕ್ಟರ್ ಪವನ್ ಒಡೆಯರ್ ಸದ್ಯ, ಚಿತ್ರದ ಪೊಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದಾರೆ.
ಪವನ್ ಒಡೆಯರ್ ಬಾಲಿವುಡ್ ಸಿನಿಮಾದಲ್ಲಿ ಇನ್ನು ಏನಿದೆ ?
ಪವನ್ ಒಡೆಯರ್ ಈ ಸಿನಿಮಾ ಮೂಲಕ ಬಾಲಿವುಡ್‌ನಲ್ಲೂ ಹೊಸದೊಂದು ಅಲೆ ಎಬ್ಬಿಸೋ ಹಾಗೆ ಕಾಣುತ್ತಿದೆ. ಸಿನಿಮಾದಲ್ಲಿ ಅದ್ಭುತ ಕಥೆ ಕೂಡ ಇದ್ದು, ಅದ್ಭುತ ಕಲಾವಿದರ ಸಿನಿಮಾ ಇದಾಗಿದೆ.
ಇದನ್ನೂ ಓದಿ: Adah Sharma: ದಿ ಕೇರಳ ಸ್ಟೋರಿ ನಟಿ ಅದಾ ಶರ್ಮಾ ಎನರ್ಜಿ ಸೀಕ್ರೆಟ್ ರಿವೀಲ್
ಈ ಚಿತ್ರದಲ್ಲಿ ಇನ್ನೂ ಸಾಕಷ್ಟು ವಿಷಯ ಇದೆ. ಆದರೆ ಅವುಗಳನ್ನ ಒಂದೊಂದಾಗಿಯೇ ಪವನ್ ಒಡೆಯರ್ ರಿವೀಲ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ