ಕನ್ನಡದ ಡೈರೆಕ್ಟರ್ ಪವನ್ ಒಡೆಯರ್ಗೆ (Special Day) ಇವತ್ತು ಸ್ಪೆಷಲ್ ಡೇ. ಈ ದಿನ ಪ್ರತಿ ವರ್ಷ ಬರುತ್ತದೆ. ವರ್ಷ ವರ್ಷಕ್ಕೂ ಒಂದೊಂದು ವರ್ಷ ಹೆಚ್ಚಾಗುತ್ತಿದೆ. ಬದುಕಿನಲ್ಲಿ ಸಾಧಿಸಿದ್ದೇನೆ, ಸಾಧಿಸಬೇಕಿರೋದು ಏನು? ಹೀಗೆ ಲೆಕ್ಕಾಚಾರ ಹಾಕೋ ದಿನವೂ ಇದಾಗಿದೇಯೋನೋ. ಇಂತಹ ಈ ದಿನದಲ್ಲಿ ಕೇಕ್ ಕಟ್ಟಿಂಗ್ (Birthday) ಕೂಡ ಇರುತ್ತದೆ. ಸೆಲೆಬ್ರೇಷನ್ (Celebration) ಕೂಡ ಇರುತ್ತದೆ. ಇಂತಹ ಈ ದಿನದ ಬಗ್ಗೆ ಏನ್ ಸ್ಪೆಷಲ್? ಈ ವರ್ಷ ಡೈರೆಕ್ಟರ್ ಪವನ್ (Pawan Wadeyar) ಒಡೆಯರ್ ಏನ್ ಮಾಡ್ತಿದ್ದಾರೆ? ಬಾಲಿವುಡ್ಗೂ ಕಾಲಿಟ್ಟಿರೋ ಪವನ್ ಒಡೆಯರ್ ಈ ಸಿನಿಮಾ ಕೆಲಸ ಎಲ್ಲಿಗೆ ಬಂತು? ಏನೆಲ್ಲ ಅಪ್ಡೇಟ್ ಇದೆ. ಈ ಎಲ್ಲ ಡಿಟೈಲ್ಸ್ ಇರೋ ಒಂದು ಸ್ಟೋರಿ ಇಲ್ಲಿದೆ ಓದಿ.
ಗೂಗ್ಲಿ ಡೈರೆಕ್ಟರ್ಗೆ ಈ ದಿನ ಜನ್ಮ ದಿನ ಸಂಭ್ರಮ
ಡೈರೆಕ್ಟರ್ ಪವನ್ ಒಡೆಯರ್ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಒಂದು ರೀತಿ ಖುಷಿ ಇತ್ತು. ಡೊಳ್ಳು ಸಿನಿಮಾಕ್ಕೆ ದುಡ್ಡು ಹಾಕಿ ಒಳ್ಳೆ ಚಿತ್ರ ಕೊಟ್ಟ ಸಂತೋಷವೇ ಅದಾಗಿತ್ತು. ಇದೇ ಡೊಳ್ಳು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಾಗ ಇನ್ನಿಲ್ಲದಂತಹ ಖುಷಿ ತಂದಿತ್ತು.
ಇದೇ ಡೊಳ್ಳು ಸಿನಿಮಾ 2022 ರಲ್ಲಿ ರಿಲೀಸ್ ಆಗಿತ್ತು. ಆ ಹ್ಯಾಪಿನೆಸ್ ಕೂಡ ಇನ್ನೂ ಇದೆ. ಈ ಚಿತ್ರದ ವಿಶೇಷ ವಿಚಾರ ಮನಸ್ಸಿನಲ್ಲಿ ಇರೋವಾಗ್ಲೇ, ಗೂಗ್ಲಿ ಡೈರೆಕ್ಟರ್ಗೆ ಮತ್ತೊಂದು ಖುಷಿ ಬಂದೇ ಬಿಡ್ತು. ಈ ಖುಷಿ ಏನು ಗೊತ್ತೇ?
ರೇಮೊ ರಿಲೀಸ್ ಆಯಿತು ಡಬಲ್ ಖುಷಿ ತಂತು
ಡೈರೆಕ್ಟರ್ ಪವನ್ ಒಡೆಯರ್ ಚಿತ್ರ ಜೀವನದಲ್ಲಿ ರೇಮೊ ಸಿನಿಮಾ ಕೂಡ ವಿಶೇಷವಾದ ಚಿತ್ರವೇ ಆಗಿದೆ. ದೊಡ್ಡ ಬಜೆಟ್ನ ಈ ಚಿತ್ರ ಮ್ಯೂಸಿಕಲಿ ಸಾಕಷ್ಟು ಗಮನ ಸೆಳೆಯಿತು.
ಆಶಿಕಾ ರಂಗನಾಥ್ ಅಭಿನಯದ ಇಶಾನ್ ನಟನೆ ಎರಡೂ ಇಲ್ಲಿ ಸೂಪರ್ ಅನಿಸಿಬಿಟ್ಟದ್ದವು. ಈ ಚಿತ್ರವೂ ಪವನ್ ಒಡೆಯರ್ ಪ್ರಯತ್ನದ ಚಿತ್ರಗಳ ಲಿಸ್ಟ್ ನಲ್ಲಿಯೇ ಸೇರಿದೆ.
ಬಾಲಿವುಡ್ಗೆ ಕಾಲಿಟ್ಟ ಕನ್ನಡದ ಪವನ್ ಒಡೆಯರ್
ಪವನ್ ಒಡೆಯರ್ ಪರ ಭಾಷೆಯಲ್ಲಿ ಈಗಾಗಲೇ ಸಿನಿಮಾ ಮಾಡಿದ್ದಾರೆ. ಗೋವಿಂದಾಯ ನಮಃ ಮೂಲಕ ತೆಲುಗು ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಅಲ್ಲಿ ಗೋವಿಂದಾಯ ನಮಃ ರಿಮೇಕ್ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಆದರೆ ಇದೇ ಪವನ್ ಒಡೆಯರ್ ಹೊಸದೊಂದು ಕಥೆ ಮೂಲಕ ಬಾಲಿವುಡ್ಗೂ ಕಾಲಿಟ್ಟಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರು ಆಗಿದೆ. ಚಿತ್ರಕ್ಕೆ ಮುಹೂರ್ತ ಆದ ದಿನದಿಂದಲೇ ಈ ಸಿನಿಮಾದ ಶೂಟಿಂಗ್ ಭರದಿಂದಲೇ ಸಾಗುತ್ತಿದೆ.
"ನೋಟರಿ" ಮೂಲಕ ಪವನ್ ಬಾಲಿವುಡ್ ಎಂಟ್ರಿ
ಹೌದು, ಪವನ್ ಒಡೆಯರ್ ಈಗಾಗಲೇ ನೋಟರಿ ಹೆಸರಿನ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಶೇಷ ಚಿತ್ರದಲ್ಲಿ ಬೆಂಗಾಲಿ ಹೆಸರಾಂತ ನಟ ಪರಂಬ್ರತಾ ಚಟ್ಟೋಪಾಧ್ಯಾಯ ಅಭಿನಯಿಸ್ತಿದ್ದಾರೆ.
ಈ ಮೂಲಕ ಇಬ್ಬರು ಪ್ರತಿಭಾವಂತರು ಕೆಲಸ ಮಾಡುತ್ತಿದ್ದಾರೆ. ಸದ್ಯ ಇದೇ ಚಿತ್ರದ ಕೆಲಸದಲ್ಲಿಯೇ ಬ್ಯುಸಿ ಇರೋ ಪವನ್ ಒಡೆಯರ್, ಮೊನ್ನೆ ತಮ್ಮ ರೇಮೊ ಸಿನಿಮಾದ ರಿಲೀಸ್ ಖುಷಿಯಲ್ಲಿದ್ದರು.
ಇದನ್ನೂ ಓದಿ: Haripriya-Vasishta Simha Marriage: ಹರಿಪ್ರಿಯಾ-ವಸಿಷ್ಠ ಸಿಂಹ ಮ್ಯಾರೇಜ್ ಯಾವಾಗ? ಇದೇ ವರ್ಷವೇ ಇಲ್ಲ ಮುಂದಿನ ವರ್ಷವೇ?
ಡೈರೆಕ್ಟರ್ ಪವನ್ ಒಡೆಯರ್ಗೆ ಈಗ ಎಷ್ಟು ವಯಸ್ಸು?
ಪವನ್ ಒಡೆಯರ್ ಇನ್ನೂ ಯಂಗ್ ಆಗಿಯೇ ಇದ್ದಾರೆ. ಇವರ ಸಿನಿ ಜರ್ನಿಯಲ್ಲಿ ಒಳ್ಳೆ ಸಿನಿಮಾಗಳನ್ನ ಕೊಡ್ತಾನೇ ಬಂದಿದ್ದಾರೆ. ಗೂಗ್ಲಿ, ನಟಸಾರ್ವಭೌಮ, ಗೋವಿಂದಾಯ ನಮಃ ಜೆಸ್ಸಿ ಹೀಗೆ ಉತ್ತಮ ಚಿತ್ರಗಳನ್ನ ಕೊಟ್ಟ ಪವನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಪವನ್ ಒಡೆಯರ್ ಈ ವರ್ಷ 35 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಇವರ ಈ ಜನ್ಮ ದಿನಕ್ಕೆ ನಮ್ಮ ಕಡೆಯಿಂದಲೂ ಹ್ಯಾಪಿ ಬರ್ತ್ ಡೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ