Nanda Kishore: ಪೊಗರು ಬಳಿಕ ನಂದ ಕಿಶೋರ್ ಏನ್ ಮಾಡಿದ್ರು ಗೊತ್ತೇ? ಸೆಟ್ಟೇರುತ್ತಿದೆ ಮತ್ತೊಂದು ಸೂಪರ್ ಸಿನಿಮಾ

ಪೊಗರು ಸಿನಿಮಾ ಆದ್ಮೇಲೆ ನಂದ್ ಕಿಶೋರ್ ಏನ್ ಮಾಡ್ತಾರೆ ಅನ್ನೋ ಪ್ರಶ್ನೆ ಇತ್ತು. ಆದರೆ ಅದೇ ನಂದ್​ ಕಿಶೋರ್ ಅದಾಗಲೇ ಮತ್ತೊಂದು ಚಿತ್ರಕ್ಕೆ ರೆಡಿ ಆಗಿದ್ದರು. ಆ ಸಿನಿಮಾದ ಹೆಸರೇ ರಾಣಾ

ಡೈರೆಕ್ಟರ್ ನಂದ್ ಕಿಶೋರ್ ರಾಣಾ ರೆಡಿ ಟು ರಿಲೀಸ್

ಡೈರೆಕ್ಟರ್ ನಂದ್ ಕಿಶೋರ್ ರಾಣಾ ರೆಡಿ ಟು ರಿಲೀಸ್

  • Share this:
ಒಂದು ಒಳ್ಳೆ ಸಿನಿಮಾಗೋಸ್ಕರ ಡೈರೆಕ್ಟರ್ ಕನಸು ಕಾಣುತ್ತಾರೆ. ಆ ಕನಸಿಗೆ ರೆಕ್ಕೆ ಪುಕ್ಕ ಎಲ್ಲವನ್ನೂ ಕಲ್ಪನೆಯಲ್ಲಿಯೇ ಕಟ್ಟಿಕೊಂಡು ಬಿಡ್ತಾರೆ. ಅದು ಅಕ್ಷರ ರೂಪದಲ್ಲಿ ಹಾಳೆ ಮೇಲೆ ಕೂಡ ಅದ್ಭುತವಾಗಿಯೇ ಮೂಡಿ ಬಿಡುತ್ತದೆ. ಆದರೆ ಅದನ್ನ ಚಿತ್ರ ರೂಪದಲ್ಲಿ ತೆರೆ ಮೇಲೆ ತರಲು ಒಬ್ಬ ನಿರ್ಮಾಪಕರು ಬೇಕೇ ಬೇಕು. ನಿರ್ಮಾಪಕರ (Producer) ದುಡ್ಡು, ನಿರ್ದೇಶಕರ ಕನಸು ಇವರೆಡು ಒಟ್ಟಾದಾಗಲೇ ಎಲ್ಲವೂ ಸಾಕಾರಗೊಳ್ಳುತ್ತೆ. ಆದರೆ ಇವರ ಈ ಶ್ರಮಕ್ಕೆ ದುಡ್ಡು ವಾಪಸ್ ಬಂದಾಗಲೇ ಎಲ್ಲವೂ ಹ್ಯಾಪಿ ಹ್ಯಾಪಿ. ಹೌದು, ನಿರ್ದೇಶಕ ನಂದ್ ಕಿಶೋರ್ (Nanda Kishore) ನಿರ್ದೇಶನದ ರಾಣಾ (Raana) ಈಗ ಅಂತಹ ಒಂದು ಖುಷಿಯನ್ನ ಕೊಟ್ಟಿದೆ.  ನಿರ್ಮಾಪಕರ ಮೊಗದಲ್ಲಿ ಈಗಲೇ ಮಂದಹಾಸ ಮೂಡಿದೆ. ರಿಲೀಸ್ ಗೂ ಮುಂಚೇನೆ ಸೇಫ್ ಆಗಿದ್ದೇವೆ ಅನ್ನೋದೇ ರಾಣಾ ಸಿನಿಮಾ ತಂಡದ ಹಿಂದಿನ ಖುಷಿಗೆ ಕಾರಣವಾಗಿದೆ.

ಈ ಎಲ್ಲ ವಿಚಾರವನ್ನ ನಿರ್ದೇಶಕ ನಂದ್ ಕಿಶೋರ್ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ.
ಡೈರೆಕ್ಟರ್ ನಂದ್ ಕಿಶೋರ್ ತಮ್ಮ ಚಿತ್ರ ಜೀವನದಲ್ಲಿ ಒಳ್ಳೆ ಸಿನಿಮಾಗಳನ್ನ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ರನ್ನ ಸಿನಿಮಾ ಸೂಪರ್ ಆಗಿಯೇ ಬಂದಿತ್ತು. ಗಳಿಕೆಯಲ್ಲೂ ಒಳ್ಳೆ ಕಲೆಕ್ಷನ್ ಬಂದಿತ್ತು. ಹಿಟ್ ಮೇಲೆ ಹಿಟ್ ಅನ್ನೋ ಹಾಗೆ ರನ್ನ ಹಿಟ್ ಆಗಿತ್ತು.

ರನ್ನ ಸಿನಿಮಾ ಬಂದ್ಮೇಲೆ ನಂದ್ ಕಿಶೋರ್ ಬೇರೆ ಬೇರೆ ಸಿನಿಮಾಗಳನ್ನೂ ಮಾಡಿದ್ದಾರೆ. ಆ ಸಿನಿಮಾಗಳ ಹೊರತಾಗಿ ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಭಾರೀ ಸಂಚಲನ ಸೃಷ್ಟಿಸಿತ್ತು. ಧ್ರುವ ಸರ್ಜಾ ಸಿನಿ ಕರೀಯರ್ ನಲ್ಲಿ ಈ ಚಿತ್ರ ಬೇರೆ ಕಿಕ್ ಅನ್ನೇ ಕೊಟ್ಟಿತ್ತು.

Director Nanda Kishore talks about his New film Raana
ರಾಣಾ ಚಿತ್ರದ ಡೈರೆಕ್ಟರ್ ನಂದ್ ಕಿಶೋರ್


ಪೊಗರು ಸಿನಿಮಾ ಬಳಿಕ ನಂದ್ ಕಿಶೋರ್ ಏನ್ ಮಾಡಿದ್ರು
ಹೌದು, ಪೊಗರು ಸಿನಿಮಾ ಆದ್ಮೇಲೆ ನಂದ್ ಕಿಶೋರ್ ಏನ್ ಮಾಡ್ತಾರೆ ಅನ್ನೋ ಪ್ರಶ್ನೆ ಇತ್ತು. ಆದರೆ ಅದೇ ನಂದ್​ ಕಿಶೋರ್ ಅದಾಗಲೇ ಮತ್ತೊಂದು ಚಿತ್ರಕ್ಕೆ ರೆಡಿ ಆಗಿದ್ದರು. ಆ ಸಿನಿಮಾದ ಹೆಸರೇ ರಾಣಾ, ಈ ಚಿತ್ರದಲ್ಲಿ ಸಖತ್ ಆ್ಯಕ್ಷನ್ ಇವೆ. ರೋಮ್ಯಾಂಟಿಕ್ ಅನಿಸೋ ಲವ್ ಸ್ಟೋರಿನೂ ಇದೆ.

ಪ್ರೀತಿ-ಪ್ರೇಮ ಮತ್ತು ಆ್ಯಕ್ಷನ್ ಥ್ರಿಲ್ಲರ್ ಇರೋ ರಾಣಾ ಸಿನಿಮಾವನ್ನ ಡೈರೆಕ್ಟರ್ ನಂದ್ ಕಿಶೋರ್ ಮಾಡಿದರು. ಈ ಸಿನಿಮಾ ಈಗ ಕಂಪ್ಲೀಟ್ ಆಗಿದೆ. ಯುವ ನಾಯಕ ನಟ ಶ್ರೇಯಸ್ ಮಂಜು, ರಿಷ್ಮಾ ನಾಣಯ್ಯ ಅಭಿನಯಿಸಿದ್ದಾರೆ.

ಇದನ್ನೂ ಓದಿ: Malaika Arora: ಬಾಲಿವುಡ್ ಚೆಲುವೆಗೆ 48 ಅಂದ್ರೆ ನಂಬ್ತೀರಾ, ನಿಮ್ಗೆ ವಯಸ್ಸೇ ಆಗಲ್ವಾ ಅಂತಿದ್ದಾರೆ ನೆಟ್ಟಿಗರು

ರಾಣಾ ಚಿತ್ರದ ಮಳ್ಳಿ ಮಳ್ಳಿ ಹಾಡು ಸೂಪರ್ ಹಿಟ್
ಈ ಚಿತ್ರ ಈಗಾಗಲೇ ಹಾಡಿನಿಂದಲೂ ಗಮನ ಸೆಳೆಯುತ್ತಿದೆ. ಮಳ್ಳಿ ಮಳ್ಳಿ ಅನ್ನೋ ಹಾಡಲ್ಲಿ ಸಂಯುಕ್ತಾ ಹೆಗಡೆ ಕಾಣಿಸಿಕೊಂಡು ಹೊಸ ಕಿಕ್ ಅನ್ನ ಕೊಟ್ಟಿದ್ದಾರೆ. ಟ್ರೈಲರ್ ಮತ್ತು ಹಾಡಿನಿಂದಲೂ ರಾಣಾ ಎಲ್ಲರ ಗಮನ ಸೆಳೆಯುತ್ತಲೇ ಇದೆ.

ರಾಣಾ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಲ್ಲಿ ಬಾಯ್ ಹಾಡಿಗೆ ಸ್ವತಃ ಚಂದನ್ ಶೆಟ್ಟಿ ಲಿರಿಕ್ಸ್ ಕೂಡ ಮಾಡಿದ್ದಾರೆ. ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಹಾಗೂ ಅನಿರುದ್ಧ ಶಾಸ್ತ್ರಿ ಈ ಹಾಡನ್ನ ಹಾಡಿದ್ದಾರೆ. ಇದು ಕೂಡ ಈಗ ಗಮನ ಸೆಳೆಯುತ್ತಿದೆ.

ಕನ್ನಡದ ರಾಣಾ ರಿಲೀಸ್ ಮುಂಚೇನೆ ಸೇಫ್
ನಿಜ, ಈ ಸೇಫ್ ಅನ್ನೋ ಪದ ಕನ್ನಡ ಇಂಡಸ್ಟ್ರೀಯಲ್ಲಿ ತುಂಬಾ ಖುಷಿ ಕೊಡುವ ಪದವೇ ಆಗಿದೆ. ಕೋಟಿ ಗಟ್ಟಲೆ ದುಡ್ಡು ಹಾಕಿ, ಅದು ವಾಪಸ್ ಬಂದ್ರೆ ಯಾರಿಗೆ ಖುಷಿ ಆಗೋದಿಲ್ಲ ಹೇಳಿ?

Director Nanda Kishore talks about his New film Raana
ಪೊಗರು ಡೈರೆಕ್ಟರ್ ನಂದ್ ಕಿಶೋರ್


ರಾಣಾ ಸಿನಿಮಾದ ವಿಷಯದಲ್ಲೂ ಅದು ನಿಜವಾಗಿದೆ. ಎಲ್ಲ ಅರ್ಥದಲ್ಲೂ ರಾಣಾ ಸೇಫ್ ಆಗಿದೆ. ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಕೂಡ ಖುಷಿ ಆಗಿದ್ದಾರೆ. ನಿರ್ಮಾಪಕರು ಸೇಫ್ ಆಗಿರೋದಲ್ಲದೇ, ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯ ಕೂಡ ಈಗಲೇ ಮೂಡಿದೆ.

ಇದನ್ನೂ ಓದಿ: Bhushan Choreographer ಅಂದು ಡ್ಯಾನ್ಸರ್, ಇಂದು ಹೀರೋ! ಭೂಷಣ್ ಬೆಳವಣಿಗೆ ಸೂಪರೋ ಸೂಪರ್!

ಸೆನ್ಸಾರ್ ಅಂಗಳದಲ್ಲಿ ಕನ್ನಡದ ರಾಣಾ ಸಿನಿಮಾ
ರಾಣಾ ಸಿನಿಮಾ ಎಲ್ಲ ಕೆಲಸವನ್ನೂ ಮುಗಿಸಿಕೊಂಡಿದೆ. ಸೆನ್ಸಾರ್​ಗೂ ಹೋಗ್ತಾ ಇದೆ. ಸೆಪ್ಟೆಂಬರ್​ 21 ರಂದು ಬೆಳಗ್ಗೆ 10.30ಕ್ಕೆ ಸೆನ್ಸಾರ್ ಕೂಡ ಆಗುತ್ತಿದೆ. ಎರಡು ಗಂಟೆಯ ರಾಣಾ ಪ್ರೇಕ್ಷಕರ ರಂಜಿಸೋ ದಿನ ಕೂಡ ಫಿಕ್ಸ್ ಆಗಿದೆ.

ಇದೇ 11.11.2022 ರಂದು ರಾಣಾ ರಿಲೀಸ್
ಶ್ರೇಯಸ್ ಕೆ. ಮಂಜು ಅಭಿನಯದ ರಾಣಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ವರ್ಷ ನವೆಂಬರ್ 11 ರಂದು ಸಿನಿಮಾ ಬಿಡುಗಡೆ ಆಗುತ್ತಿದ್ದು, ಚಿತ್ರದ ನಿರೀಕ್ಷೆ ಹೆಚ್ಚಿಸೋ ಕೆಲಸವನ್ನ ಹಾಡುಗಳು ಈಗಲೇ ಮಾಡುತ್ತವೆ.
First published: