• Home
  • »
  • News
  • »
  • entertainment
  • »
  • Kannada Pan India Cinema: ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ; ಡೈರೆಕ್ಟರ್ ಯಾರು ಗೊತ್ತಾ? ?

Kannada Pan India Cinema: ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ; ಡೈರೆಕ್ಟರ್ ಯಾರು ಗೊತ್ತಾ? ?

ಬಿಗ್ ಸ್ಟಾರ್ ಬಿಗ್ ಸಿನಿಮಾ-ಹೀರೋ ಯಾರು ಗೊತ್ತೇ?

ಬಿಗ್ ಸ್ಟಾರ್ ಬಿಗ್ ಸಿನಿಮಾ-ಹೀರೋ ಯಾರು ಗೊತ್ತೇ?

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್​​ ಕೂಡ ಇರುತ್ತಾರೆ. ಕನ್ನಡದ ಬಿಗ್ ಸ್ಟಾರ್​ ಅಭಿನಯಿಸಲಿದ್ದಾರೆ. ಮೂವರು ಹೀರೋಗಳ ಮಧ್ಯೆ ಒಬ್ಬ ನಾಯಕಿ ಇರುತ್ತಾರೆ. ಅದು ಸಮಂತಾ ರೇಂಜ್​​ನ ನಟಿನೇ ಆಗಿರುತ್ತಾರೆ. ಆದರೆ ಸ್ಟಾರ್​ ಕಾಸ್ಟ್​ ವಿಚಾರ ಇನ್ನೂ ಯಾವುದೂ ಫೈನಲ್​ ಆಗಿಲ್ಲ ಎಂದು ನಾಗಶೇಖರ್ ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಮತ್ತೊಂದು ಪ್ಯಾನ್ (Pan India Cinema) ಇಂಡಿಯಾ ಸಿನಿಮಾ ಆಗುತ್ತಿದೆ. ಈ ಚಿತ್ರಕ್ಕೆ ಅನುಭವಿಗಳಿಂದಲೇ ಸ್ಕ್ರಿಪ್ಟ್ (Script) ಮೇಲೆ ಚರ್ಚೆ ನಡೆಯುತ್ತಿದೆ. ನಿವೃತ್ತ ಪೊಲೀಸ್ ಆಫೀಸರ್ ಟೈಗರ್ ಅಶೋಕ್ ಕುಮಾರ್, ಡೈರೆಕ್ಟರ್ (Director) ಸುಮನಾ ಕಿತ್ತೂರ, ಸತ್ಯ ಹೆಗಡೆ, ರಘೂ ಕೋವಿ, ಲಾಯರ್ ದಿಲೀಪ್, ಚಕ್ರವರ್ತಿ ಚಂದ್ರಚೂಡ್ ಹೀಗೆ ಎಲ್ಲರೂ ಈ ಚಿತ್ರಕ್ಕೆ ತಮ್ಮ ಅನುಭವ ಹಂಚುತ್ತಿದ್ದಾರೆ. ಈ ಚಿತ್ರದಲ್ಲಿ (International) ಅಂತಾರಾಷ್ಟ್ರೀಯ ವಿಷಯವನ್ನೇ ತೆಗೆದುಕೊಳ್ಳಲಾಗಿದೆ. ಇಂತಹ ಈ ಒಂದು ಸಿನಿಮಾದ ಕಂಟೆಂಟ್ ಕರೆಕ್ಟ್ ಆಗಿರಬೇಕು ಎಂದು ಈ ಚಿತ್ರದ ಡೈರೆಕ್ಟರ್ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಈಗ ದಿನವೂ ಚರ್ಚೆ ನಡೆಯುತ್ತಲೇ ಇದೆ. ಇದರ ಸುತ್ತ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.


ಬಿಗ್ ಸ್ಟಾರ್ ಬಿಗ್ ಸಿನಿಮಾ-ಹೀರೋ ಯಾರು ಗೊತ್ತೇ?
ಕನ್ನಡದಲ್ಲಿ ಬಿಗ್ ಸಿನಿಮಾ ಆಗ್ತಾನೇ ಇವೆ. ಪ್ಯಾನ್ ಇಂಡಿಯಾ ಈಗ ಕನ್ನಡದಲ್ಲಿ ಕಾಮನ್ ಆಗಿ ಬಿಟ್ಟಿದೆ. ಆದರೆ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅಂತಾರಾಷ್ಟ್ರೀಯ ವಿಷಯ ತೆಗೆದುಕೊಂಡು ಬರ್ತಿರೋದು ಇದೇ ಮೊದಲು ಅಂತಲೇ ಹೇಳಬಹುದೇನೋ ಅಷ್ಟು ವಿಶೇಷ ಅನಿಸೋ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಈಗಾಗಲೇ ಆಗಿದೆ.


Kannada Director Nagashekar doing big Project with Producer Jack Manju
ಬಿಗ್ ಬಜೆಟ್ ಚಿತ್ರಕ್ಕೆ ಜಾಕ್ ಮಂಜು ನಿರ್ಮಾಪಕರು


ಕಳೆದ ಒಂದು ವಾರದಿಂದಲೇ ಈ ವಿಷಯದ ಮೇಲೆ ಚರ್ಚೆಗಳು ನಡೆಯುತ್ತಿವೆ. ದೊಡ್ಡ ಸಿನಿಮಾ ರೂಪದಲ್ಲಿ ತರ್ತಾಯಿರೋ ಈ ಕಥೆಯಲ್ಲಿ ಯಾವುದೇ ರೀತಿಯ ತಪ್ಪುಗಳು ಆಗಲೇ ಬಾರದು ಎಂದು ಡೈರೆಕ್ಟರ್ ಈ ಒಂದು ಪ್ಲಾನ್ ಮಾಡಿದ್ದಾರೆ.


ನಾಗಶೇಖರ್ ಪ್ಯಾನ್ ಇಂಡಿಯಾ ಬಿಗ್ ಸಿನಿಮಾ ಡೈರೆಕ್ಟರ್!
ಹೌದು, ಇದು ನಿಜವೇ, ಸ್ವತಃ ನಾಗೇಶೇಖೇರ್ ಈ ವಿಷಯವನ್ನ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವಿಷಯವನ್ನೇ ಈ ಬಾರಿ ಮಾಡುತ್ತಿದ್ದೇನೆ. ಇದಕ್ಕಾಗಿ ಮೂವರು ಬಿಗ್ ಸ್ಟಾರ್​ಗಳನ್ನೆ ಹಾಕಿಕೊಳ್ಳುತ್ತೇವೆ.


ಚಿತ್ರ ಅಂತಾರಾಷ್ಟ್ರೀಯ ಮಟ್ಟದ ವಿಷಯದ ಮೇಲೆನೆ ಇದೆ. ಈ ಹಿನ್ನೆಲೆಯಲ್ಲಿ ಇಂಟರ್​ ಪೋಲ್ ಹೇಗೆ ವರ್ಕ್ ಆಗುತ್ತದೆ ಅನ್ನೋ ವಿಷಯವು ಇದರಲ್ಲಿ ಬರುತ್ತದೆ.
ಬಿಗ್ ಬಜೆಟ್ ಚಿತ್ರಕ್ಕೆ ಜಾಕ್ ಮಂಜು ನಿರ್ಮಾಪಕರು
ಈ ಹಿನ್ನೆಲೆಯಲ್ಲಿ ನಿವೃತ್ತ ಪೊಲೀಸ್ ಆಫೀಸರ್ ಟೈಗರ್ ಅಶೋಕ್ ಕುಮಾರ್, ಲಾಯರ್ ದಿಲೀಪ್, ನಿರ್ದೇಶಕಿ ಸುಮನಾ ಕಿತ್ತೂರ, ಪತ್ರಕರ್ತ ಚಂದ್ರಚೂಡ್ ಎಲ್ಲರೂ ಇರೋ ಟೀಮ್ ಸ್ಕ್ರಿಪ್ಟ್​ ಮೇಲೆ ಚರ್ಚೆ ಮಾಡುತ್ತಿದೆ.


Kannada Director Nagashekar doing big Project with Producer Jack Manju
ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ


ಕಳೆದ ಒಂದು ವಾರದಿಂದಲೇ ಜಯನಗರದ ಕಚೇರಿಯಲ್ಲಿ ಈ ಡಿಸ್ಕಷನ್ ನಡೀತಾನೇ ಇದೆ. "ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಪೂಜೆ ಕೂಡ ಆಗಿದೆ. ಚಿತ್ರವನ್ನ ನಾನು ಡೈರೆಕ್ಷನ್ ಮಾಡುತ್ತಿದ್ದೇನೆ. ಜಾಕ್ ಮಂಜು ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ದೊಡ್ಡ ಬಜೆಟ್​​ನಲ್ಲಿಯೇ ಸಿನಿಮಾ ನಿರ್ಮಾಣ ಆಗುತ್ತದೆ" ಎಂದು ನಾಗಶೇಖರ್ ಹೇಳಿದರು.


ಮೂವರು ಬಿಗ್ ಹೀರೋಗಳು-ಒಬ್ಬ ನಾಯಕಿ ನಟಿ!
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್​​ ಕೂಡ ಇರುತ್ತಾರೆ. ಕನ್ನಡದ ಬಿಗ್ ಸ್ಟಾರ್​ ಅಭಿನಯಿಸಲಿದ್ದಾರೆ. ಮೂವರು ಹೀರೋಗಳ ಮಧ್ಯೆ ಒಬ್ಬ ನಾಯಕಿ ಇರುತ್ತಾರೆ. ಅದು ಸಮಂತಾ ರೇಂಜ್​​ನ ನಟಿನೇ ಆಗಿರುತ್ತಾರೆ. ಆದರೆ ಸ್ಟಾರ್​ ಕಾಸ್ಟ್​ ವಿಚಾರ ಇನ್ನೂ ಯಾವುದೂ ಫೈನಲ್​ ಆಗಿಲ್ಲ ಎಂದು ನಾಗಶೇಖರ್ ಹೇಳಿದ್ದಾರೆ.


ಆದರೆ ನಮ್ಮ ಸಿನಿಮಾದಲ್ಲಿ ಬಿಗ್ ಸ್ಟಾರ್​​ಗಳೇ ಇರುತ್ತಾರೆ. ಅದ್ಯಾರು ಅಂತಲೇ ಈಗಲೇ ಹೇಳೋದು ಕಷ್ಟ. ಎಲ್ಲವೂ ಫೈನಲ್​ ಆದ್ಮೇಲೆ ಸಿನಿಮಾದ ಇತರ ಮಾಹಿತಿ ಕೊಡ್ತೀವಿ ಅನ್ನೋ ಅರ್ಥದಲ್ಲಿಯೇ ನಾಗಶೇಖರ್ ವಿವರಿಸುತ್ತಾರೆ.


ಇದನ್ನೂ ಓದಿ: Vaishnavi Gowda: ಮದುವೆ ನಿಶ್ಚಯವಾಗಿದ್ದು ಹೌದಾ? ವೈಷ್ಣವಿ ಕೊಟ್ರು ಸ್ಪಷ್ಟನೆ


ಕನ್ನಡದಲ್ಲಿ ಬಿಗ್ ಬಜೆಟ್ ಸಿನಿಮಾಗಳು ಬರ್ತಾನೇ ಇವೆ. ಆದರೆ ಈ ಚಿತ್ರದ ಬಜೆಟ್ ದೊಡ್ಡ ಮಟ್ಟದಲ್ಲಿಯೇ ಇದೆ. ವಿಶೇಷವಾಗಿ ಇದು ಅಂತಾರಾಷ್ಟ್ರೀಯ ಮಟ್ಟದ ವಿಷಯವೇ ಆಗಿದೆ. ಅಷ್ಟೇ ಸೆನ್ಸಿಬಲ್ ವಿಷಯ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಎಲ್ಲವೂ ಪಕ್ಕಾ ಮಾಡಲು ಹೆವಿ ಡಿಸ್ಕಷನ್ ಕೂಡ ನಡೆಯುತ್ತಿದೆ. ಮಾಹಿತಿಗಾಗಿ ವೇಟ್ ಮಾಡಿ ಕೊಡ್ತಾ ಇರುತ್ತೇವೆ.

First published: