• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • KD Film Updates: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಡಿ ಚಿತ್ರದ ಆ ಸತ್ಯವತಿ ಯಾರು? ಶಿಲ್ಪಾಶೆಟ್ಟಿನಾ ಈ ಸತ್ಯವತಿ? ಫುಲ್ ಡಿಟೈಲ್ಸ್ ಇಲ್ಲಿದೆ

KD Film Updates: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಡಿ ಚಿತ್ರದ ಆ ಸತ್ಯವತಿ ಯಾರು? ಶಿಲ್ಪಾಶೆಟ್ಟಿನಾ ಈ ಸತ್ಯವತಿ? ಫುಲ್ ಡಿಟೈಲ್ಸ್ ಇಲ್ಲಿದೆ

ಬಾಲಿವುಡ್‌ನ ಶಿಲ್ಪಾಶೆಟ್ಟಿನಾ ಈ ಚಿತ್ರದ ರಾಣಿ ಸತ್ಯವತಿ?

ಬಾಲಿವುಡ್‌ನ ಶಿಲ್ಪಾಶೆಟ್ಟಿನಾ ಈ ಚಿತ್ರದ ರಾಣಿ ಸತ್ಯವತಿ?

"ರಾಜ್ಯ ರಾಜ್ಯಗಳ ನಡುವೆ ಮಹಾ ಯುದ್ಧ, ಒಂದು ರಾಜ್ಯಕ್ಕೆ ಶಕ್ತಿಯುತ ಸತ್ಯವತಿ ಬೇಕಲ್ಲವೇ? ಹೌದು. ಈ ಸತ್ಯವತಿಯನ್ನ ನಾವು ವೆಲ್‌ಕಮ್ ಮಾಡೋಣ ಬನ್ನಿ" ಹೀಗೆ ಕೆಡಿ ಕಿಂಗ್‌ಡಮ್‌ಗೆ ಪವರ್‌ಫುಲ್ ಮಹಿಳೆಯ ಆಗಮನ ಆಗಲಿದೆ ಅನ್ನೋದನ್ನ ಜೋಗಿ ಪ್ರೇಮ್ ಇಲ್ಲಿ ಹೇಳಿದ್ದಾರೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ (KD New Movie Updates) ಕೆಡಿ ಚಿತ್ರದ ಹೊಸ ಅಪ್‌ಡೇಟ್ಸ್ ಏನು? ಸಿನಿಮಾದ ಹೊಸ ಮಾಹಿತಿಯನ್ನ ಡೈರೆಕ್ಟರ್ ಯಾಕೋ ಏನೂ ಬಿಟ್ಟುಕೊಟ್ಟೇ ಇಲ್ಲ. ಸಿನಿಮಾ ಶೂಟಿಂಗ್ (Action Prince Dhruva Movie) ಏನ್ ಆಯಿತು? ಎಲ್ಲಿಗೆ ಬಂದಿದೆ ಕೆಡಿ ಚಿತ್ರದ ಶೂಟಿಂಗ್? ಹೀಗೆ ಹಲವು ಪ್ರಶ್ನೆಗಳು ಇದ್ದೇ ಇವೆ. ಅಷ್ಟರಲ್ಲಿಯೇ ಅದನ್ನೆಲ್ಲ ಗಮನಸಿಸುತ್ತಲೇ ಇರೋ ಅಭಿಮಾನಿಗಳಿಗೆ ಕೆಡಿ ಡೈರೆಕ್ಟರ್ (KD Film Latest Updates) ಜೋಗಿ ಪ್ರೇಮ್ ಈಗೊಂದು ಅಪ್‌ಡೇಟ್‌ ಕೊಟ್ಟಿದ್ದಾರೆ. ಈ ಒಂದು ಮಾಹಿತಿಯಲ್ಲಿ ಸದ್ಯಕ್ಕೆ ಡೇಟ್ ಇದೆ. ಟೈಮ್ ಕೂಡ ಇದೆ. ಒಂದು ಅದ್ಭುತವಾದ ಹೆಸರು ಕೂಡ ಇದೆ. ಒಂದೆರಡು ಸೂಪರ್ ಲೈನ್ (Kannada KD Movie Updates) ಕೂಡ ಇವೆ ಓದಿ.


ಜೋಗಿ ಪ್ರೇಮ್ ನಿರ್ದೇಶನದಲ್ಲಿ ಕೆಡಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರದ ಚಿತ್ರೀಕರಣದಲ್ಲೂ ಭಾಗಿ ಆಗಿದ್ದಾರೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಕೂಡ ಬಹುತೇಕ ಪೂರ್ಣಗೊಂಡಿರೋ ಹಾಗೆ ಕಾಣುತ್ತಿದೆ.


Kannada Director Jogi Prem Released New Poster of KD Movie
ಕೆಡಿ ಚಿತ್ರದ ಸತ್ಯವತಿ ಯಾರು, ಮಾರ್ಚ್‌-22 ರಂದು ರಿವೀಲ್ ಆಗೋದೇನು?


ಸಂಜಯ್ ದತ್ ಪಾತ್ರದ ಚಿತ್ರೀಕರಣ ಮುಗೀತಾ?


ಬಾಲಿವುಡ್‌ನಿಂದ ಸಂಜಯ್ ದತ್ ಕೂಡ ಬಂದು ಹೋಗಿದ್ದಾರೆ. ಚಿತ್ರದ ತಮ್ಮ ವಿಶೇಷ ಪಾತ್ರದ ಚಿತ್ರೀಕರಣ ಕೂಡ ಮುಗಿಸಿಕೊಟ್ಟಿದ್ದಾರೆ. ಆದರೆ ಪೂರ್ತಿ ಇನ್ನೂ ಮುಗಿದಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯ. ಯಾಕೆಂದ್ರೆ ಸಂಜಯ್ ದತ್ ಬರೋಬ್ಬರಿ ಒಂದೂವರೆ ತಿಂಗಳು ಕೆಡಿ ಚಿತ್ರಕ್ಕೆ ಡೇಟ್ಸ್‌ ಕೊಟ್ಟಿದ್ದಾರೆ.
ಕೆಡಿ ಚಿತ್ರದಲ್ಲೂ ಸಾಕಷ್ಟು ಪಾತ್ರಗಳು ಡಿಸೈನ್ ಆಗಿವೆ. ಒಂದೊಂದೇ ಪಾತ್ರದ ಪರಿಚಯ ಈಗ ಆಗ್ತಾನೇ ಇದೆ. ಚಿತ್ರದಲ್ಲಿಯ ಸಂಜಯ್ ದತ್ ಪಾತ್ರ ಒಂದು ರೀತಿ ಸೆಳೆದ್ರೆ, ಕ್ರೇಜಿ ಸ್ಟಾರ್ ರವಿಚಂದ್ರನ್ ರೋಲ್ ಇನ್ನೂ ಸಾಕಷ್ಟು ಗಮನ ಸೆಳೆಯುತ್ತಿದೆ.


ಬಾಲಿವುಡ್‌ನ ಶಿಲ್ಪಾಶೆಟ್ಟಿನಾ ಈ ಚಿತ್ರದ ರಾಣಿ ಸತ್ಯವತಿ?


ಇದರ ಮಧ್ಯೆ ಬಾಲಿವುಡ್‌ನಿಂದ ಶಿಲ್ಪಾಶೆಟ್ಟಿ ಕೂಡ ಚಿತ್ರದಲ್ಲಿ ಬರ್ತಾರೆ ಅನ್ನೋ ಸುದ್ದಿನೂ ಇದೆ. ಅದಕ್ಕೆ ಪೂರಕ ಅನ್ನೋ ಹಾಗೆ ಜೋಗಿ ಪ್ರೇಮ್ ಈಗ ಚಿತ್ರದ ಒಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ಸ್ಪೆಷಲ್ ಆಗಿಯೇ ಇದೆ. ಇದರಲ್ಲಿ ಒಂದಷ್ಟು ಲೈನ್ ಕೂಡ ಇವೆ. ಅವು ಇಂತಿವೆ ನೋಡಿ.


"ರಾಜ್ಯ ರಾಜ್ಯಗಳ ನಡುವೆ ಮಹಾ ಯುದ್ಧ, ಒಂದು ರಾಜ್ಯಕ್ಕೆ ಶಕ್ತಿಯುತ ಸತ್ಯವತಿ ಬೇಕಲ್ಲವೇ? ಹೌದು. ಈ ಸತ್ಯವತಿಯನ್ನ ನಾವು ವೆಲ್‌ಕಮ್ ಮಾಡೋಣ ಬನ್ನಿ" ಹೀಗೆ ಕೆಡಿ ಕಿಂಗ್‌ಡಮ್‌ಗೆ ಪವರ್‌ಫುಲ್ ಮಹಿಳೆಯ ಆಗಮನ ಆಗಲಿದೆ ಅನ್ನೋದನ್ನ ಜೋಗಿ ಪ್ರೇಮ್ ಇಲ್ಲಿ ಹೇಳಿದ್ದಾರೆ.


Kannada Director Jogi Prem Released New Poster of KD Movie
ಬಾಲಿವುಡ್‌ನ ಶಿಲ್ಪಾಶೆಟ್ಟಿನಾ ಈ ಚಿತ್ರದ ರಾಣಿ ಸತ್ಯವತಿ?


ಕೆಡಿ ಚಿತ್ರದ ಸತ್ಯವತಿ ಯಾರು, ಮಾರ್ಚ್‌-22 ರಂದು ರಿವೀಲ್ ಆಗೋದೇನು?


ಹೌದು, ಕೆಡಿ ಚಿತ್ರದ ಹೊಸ ಪಾತ್ರಧಾರಿಯ ಪರಿಚಯ ಇನ್ನೇನೂ ಆಗಲಿದೆ. ಮಾರ್ಚ್‌-22 ಬೆಳಗ್ಗೆ 11.31 ಈ ಒಂದು ಅದ್ಭುತ ಕೆಲಸಕ್ಕೆ ಟೈಮ್ ಫಿಕ್ಸ್ ಆಗಿದೆ. ಅಂದ್ಹಾಗೆ ಈ ಚಿತ್ರದ ನಾಯಕಿ ಯಾರೂ ಅನ್ನುದು ಇನ್ನೂ ರಿವೀಲ್ ಆಗಿಲ್ಲ. ಆದರೆ ಈ ಸತ್ಯವತಿ ಪಾತ್ರಧಾರಿ ಯಾರು ಅನ್ನೋ ಕುತೂಹಲ ಈಗಲೇ ಮೂಡಿದೆ.


ಇದನ್ನೂ ಓದಿ: Rishab Shetty: ವಿಶ್ವಸಂಸ್ಥೆಯಲ್ಲಿ ರಿಷಬ್ ಭಾಷಣಕ್ಕೆ ತಡೆ! ಕಾಂತಾರ ಹೀರೋ ಮಾತಾಡಿದ್ದು ಬರೀ 12 ಸೆಕೆಂಡ್ಸ್


ಸತ್ಯವತಿನೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೋಡಿ ಆಗುತ್ತಾರೆಯೇ? ಇಲ್ಲವೇ ರಾಣಿ ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಬರ್ತಾರೋ ಅನ್ನೋದೇ ಈಗೀನ ಕುತೂಹಲ ಆಗಿವೆ. ಇನ್ನುಳಿದಂತೆ ಕೆಡಿ ಚಿತ್ರದ ಮಾಹಿತಿ ಈಗ ಇಷ್ಟು ಹೊರ ಬಿದ್ದಿದೆ. ಸತ್ಯವತಿ ಯಾರು ಅನ್ನೋದನ್ನ ತಿಳಿಯಲು ಇನ್ನು ಕೆಲವು ದಿನ ಕಾಯಬೇಕು, ಕಾಯ್ತಾಯಿರಿ.

First published: