ಸ್ಯಾಂಡಲ್ವುಡ್ ನ ನಿರ್ದೇಶಕ ಜೋಗಿ ಪ್ರೇಮ್ (Jogi Prem) ಸಂಗೀತ ಆರಾಧನೆ ದೊಡ್ಡ ಮಟ್ಟದಲ್ಲಿಯೇ ಇದೆ. ಹೊಸ ರೀತಿಯ ಮಧುರ (Melodies Songs) ಹಾಡುಗಳನ್ನ ಹೇಗೆ ಮಾಡಿಸಿಬೇಕು ಅನ್ನೋದು ತಿಳಿದೆ, ಅವರ ಸಿನಿಮಾಗಳಲ್ಲಿ ಸಂಗೀತಕ್ಕೆ ಹೆಚ್ಚಿನ ಮಹತ್ವಕೊಡುತ್ತಾರೆ. ಈ ಹಿಂದಿನ ಯಾವುದೇ ಸಿನಿಮಾವನ್ನ ತೆಗೆದುಕೊಳ್ಳಿ, ಅಲ್ಲಿ ಜೋಗಿ ಪ್ರೇಮ್ ಸಂಗೀತ ಪ್ರೇಮ ಎದ್ದು ಕಾಣುತ್ತದೆ. ಒಂದಲ್ಲ ಒಂದು ಹಾಡು ಹಿಟ್ (Hit Songs) ಆಗುತ್ತವೆ. ಟ್ರೆಂಡ್ ಕ್ರಿಯೆಟ್ ಮಾಡುತ್ತವೆ. ಜೋಗಿ ಪ್ರೇಮ್ ಸಿನಿಮಾದಲ್ಲಿ ಮಧುರ ಮತ್ತು ಲವ್ ಆಧರಿಸಿ ಹಾಡುಗಳು ಇದ್ದೇ ಇರುತ್ತವೆ. ಇದು ಜೋಗಿ ಪ್ರೇಮ್ ವಿಶೇಷವೇ ಆಯಿತು ಬಿಡಿ. ಆದರೆ ಜೋಗಿ ಪ್ರೇಮ್ ಬಗ್ಗೆ ಇಷ್ಟೆಲ್ಲ ಹೇಳಿದ್ಮೇಲೆ, ಮುಂದೇ ಏನೋ ಇರಬೇಕಲ್ವೆ ಅಂತ ನೀವು ಕೇಳಿದ್ರೆ, ನಮ್ಮ ಉತ್ತರ ಹೌದು ಅಂತಲೇ ಹೇಳಬಹುದು.
ಜೋಗಿ ಪ್ರೇಮ್ ತಮ್ಮ ಮುಂದಿನ ಪ್ರೋಜೆಕ್ಟ್ನ (Projects) ಸಂಗೀತಕ್ಕಾಗಿಯೇ ಮುಂಬೈನಲ್ಲಿದ್ದಾರೆ. ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಅವರ ಜೊತೆಗೂಡಿ ಒಳ್ಳೆ ಹಾಡುಗಳಿಗಾಗಿಯೆ ಲೈವ್ ಸಂಗೀತ ಸಾಧನಗಳ ಮಿಕ್ಸಿಂಗ್ ಮಾಡಿಸುತ್ತಿದ್ದಾರೆ.
ಜೋಗಿ ಪ್ರೇಮ್ ಸಿನಿಮಾಕ್ಕಾಗಿಯೇ ಮುಂಬೈನಲ್ಲಿ ಬೀಡು ಬಿಟ್ಟ ಅರ್ಜುನ್ ಜನ್ಯ
ಜೋಗಿ ಪ್ರೇಮ್ ನಿರ್ದೇಶನದ ಮತ್ತೊಂದು ಸಿನಿಮಾ ಸುದ್ದಿ ಈಗಾಗಲೇ ಗೊತ್ತಾಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆಗೆ ಜೋಗಿ ಪ್ರೇಮ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚೇನೂ ಬಿಟ್ಟುಕೊಡದ ಜೋಗಿ ಪ್ರೇಮ್, ತಮ್ಮ ಸಿನಿಮಾ ಕೆಲಸವನ್ನ ಗಪ್-ಚುಪ್ ಅನ್ನೋ ಹಾಗೆ ಮಾಡಿಕೊಂಡು ಹೋಗುತ್ತಿದ್ದಾರೆ.
ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಮೊದಲ ಬಾರಿಗೆ ಜೊತೆಯಾಗಿರೋ ಈ ಸಿನಿಮಾದ ಬಗ್ಗೆ ಒಂದು ಕುತೂಹಲ ಇದ್ದೇ ಇದೆ. ಅದು ಈಗ ದಿನೇ ದಿನೇ ನಿಧಾನಕ್ಕೆ ಹೆಚ್ಚಾಗುತ್ತಿದೆ. ಕುತೂಹಲ ಮೂಡಿಸೋದು ಜೋಗಿ ಪ್ರೇಮ್ ಸಿನಿಮಾಗಳ ಕ್ರೇಜ್ ಬಿಡಿ.
ಇಂತಹ ಟೈಮ್ನಲ್ಲಿಯೇ ಜೋಗಿ ಪ್ರೇಮ್ ಮುಂಬೈಗೆ ಹಾರಿದ್ದಾರೆ.
ಮುಂಬೈ ಯಶ್ ರಾಜ್ ಸ್ಟುಡಿಯೋದಲ್ಲಿ ಜೋಗಿ ಪ್ರೇಮ್-ಅರ್ಜುನ್ ಜನ್ಯ
ತಮ್ಮ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜೊತೆಗೆ ಮುಂಬೈಗೆ ಬಂದಿದ್ದಾರೆ. ಇಲ್ಲಿಯ ಯಶ್ ರಾಜ್ ಸ್ಟುಡಿಯೋದಲ್ಲಿ ಲೈವ್ (Live) ಸಂಗೀತ ಸಾಧನಗಳ ರೆಕಾರ್ಡಿಂಗ್ ಕೂಡ ಮಾಡಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಒಂದು ವಿಶೇಷ ಇದ್ದೇ ಇರುತ್ತದೆ. ಸಂಗೀತ ಸಾಧನಗಳನ್ನ ಲೈವ್ ಆಗಿಯೇ ನುಡಿಸಿ, ಹಾಡುಗಳನ್ನ ಮಾಡಿಕೊಳ್ಳೋರು ಈಗ ಕಡಿಮೆ ಆಗಿದ್ದಾರೆ. ಆದರೆ ಅರ್ಜುನ್ ಜನ್ಯ ಅವಕಾಶ ಬಂದ್ರೆ, ಈ ಒಂದು ಕೆಲಸ ಮಾಡುತ್ತಾರೆ.
ಇದನ್ನೂ ಓದಿ: Rana Film Hero: ವಿಷ್ಣುವರ್ಧನ್ ಅಚ್ಚುಮೆಚ್ಚಿನ ಹುಡುಗ ರಾಣಾ ಸ್ಟೈಲಿಶ್ ಅವತಾರಕ್ಕೆ ಸಖತ್ ರೆಸ್ಪಾನ್ಸ್
ಅರ್ಜುನ್ ಜನ್ಯ ಸಂಗೀತದ ಸಿನಿಮಾಕ್ಕಾಗಿಯೇ ಜಾಕೀರ್ ಹುಸೇನ್ ಸಹೋದರ ತೌಫಿಕ್ ಖುರೇಷಿ ಅವರು ರಿದಂ ಅರೇಂಜರ್ ಆಗಿಯೇ ಕೆಲಸ ಮಾಡುತ್ತಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಅಷ್ಟೂ ಹಾಡುಗಳಿಗೆ ಇಲ್ಲಿ ಲೈವ್ ಮ್ಯೂಸಿಕ್ ಮಿಕ್ಸಿಂಗ್ ಕೆಲಸ ನಡೆದಿದೆ.
ಅಲ್ಲಿಗೆ ಈ ಸಲವೂ ಒಳ್ಳೆ ಹಾಡುಗಳನ್ನ ಜೋಗಿ ಪ್ರೇಮ್ ಅವರ ಸಿನಿಮಾದಲ್ಲಿ ನೋಡಬಹುದು.
ಲೈವ್ ಸಂಗೀತ ಸಾಧನಗಳನ್ನು ಬಳಸಿದ ಹಾಡಿನ ಫೀಲ್ ಬೇರೆ
ಲೈವ್ ಸಂಗೀತ ಸಾಧನಗಳ ಫೀಲ್ ಬೇರೆ ರೀತಿನೆ ಇರುತ್ತದೆ. ಅಂತಹ ಹಾಡುಗಳಲ್ಲಿ ಜೀವಂತಿಕೆನೂ ಹೆಚ್ಚು ಇರುತ್ತದೆ. ಜೋಗಿ ಪ್ರೇಮ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ನಲ್ಲಿ ಮತ್ತಷ್ಟು ಒಳ್ಳೆ ಹಾಡುಗಳು ಬರೋ ಎಲ್ಲ ಸೂಚನೆ ಈಗಲೇ ಸಿಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ