• Home
  • »
  • News
  • »
  • entertainment
  • »
  • Sanjay Dutt: ಮತ್ತೆ ಕನ್ನಡಕ್ಕೆ ಬರ್ತಾರಾ ಸಂಜಯ್ ದತ್? ಕುತೂಹಲ ಹೆಚ್ಚಿಸಿದ ಜೋಗಿ ಪ್ರೇಮ್ ಭೇಟಿ

Sanjay Dutt: ಮತ್ತೆ ಕನ್ನಡಕ್ಕೆ ಬರ್ತಾರಾ ಸಂಜಯ್ ದತ್? ಕುತೂಹಲ ಹೆಚ್ಚಿಸಿದ ಜೋಗಿ ಪ್ರೇಮ್ ಭೇಟಿ

ಕುತೂಹಲ ಹೆಚ್ಚಿಸಿದ ಜೋಗಿ ಪ್ರೇಮ್-ಸಂಜಯ್ ದತ್ ಭೇಟಿ

ಕುತೂಹಲ ಹೆಚ್ಚಿಸಿದ ಜೋಗಿ ಪ್ರೇಮ್-ಸಂಜಯ್ ದತ್ ಭೇಟಿ

ಜೋಗಿ ಪ್ರೇಮ್ ಚಿತ್ರದಲ್ಲಿ ಸಂಜಯ್ ದತ್ ಅಭಿನಯಿಸ್ತಾರೋ ಇಲ್ವೋ ಗೊತ್ತಿಲ್ಲ. ಅದು ಅಧಿಕೃತವಾಗಿಯೂ ಇನ್ನೂ ಅನೌನ್ಸ್ ಆಗಿಲ್ಲ. ಬಹುಶಃ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಅದು ರಿವೀಲ್ ಆದರೂ ಆಗಬಹುದು.

  • Share this:

ಡೈರೆಕ್ಟರ್ ಜೋಗಿ ಪ್ರೇಮ್ (Director Prem) ತಮ್ಮ ಚಿತ್ರ ಜೀವನದಲ್ಲಿ ಹೊಸ ಹೊಸ ಪ್ರಯತ್ನಗಳನ್ನ ಮಾಡ್ತಾನೇ ಬಂದಿದ್ದಾರೆ. ಸಿನಿಮಾ (Cinema) ಬರುವ ಮುಂಚೇ ಒಂದು ಲೆಕ್ಕ, ಬಂದ್ಮೇಲೆ ಇನ್ನೂ ಒಂದು ಲೆಕ್ಕ ಅಂತಾರಲ್ವೆ? ಆ ಲೆಕ್ಕದಲ್ಲಿ ಡೈರಕ್ಟರ್ ಜೋಗಿ ಪ್ರೇಮ್ (Jogi Prem) ಸಿದ್ದ ಹಸ್ತರು ನೋಡಿ. ಇವರ ಸಿನಿಮಾ ಸಂಗೀತದ ಕ್ರೇಜ್ ಒಂದು ರೀತಿ ಇದ್ರೆ, ಇವರ ಸಿನಿಮಾ ಪ್ರಮೋಷನ್​ ಹವಾ ಬೇರೆ ಲೆವಲ್​​ಗೇನೆ ಇರುತ್ತದೆ. ಇದಕ್ಕೆ ಹತ್ತು ಹಲವು ಸಾಕ್ಷಿಗಳಿವೆ. ಈಗ ಡೈರೆಕ್ಟರ್ ಜೋಗಿ ಪ್ರೇಮ್ ಮತ್ತು (Dhruva Sarja) ಧ್ರುವ ಸರ್ಜಾ ಕಾಂಬಿನೇಷನ್​ನ ಸಿನಿಮಾದ ಕ್ರೇಜ್ ಕ್ರಿಯೇಟ್ ಮಾಡುತ್ತಿದ್ದಾರೆ. ಮೊನ್ನೆ ಸೂಪರ್ ಸ್ಟಾರ್ ಮೋಹನ್​ ಲಾಲ್ ಭೇಟಿಯಾಗಿ ಬಂದಿದ್ದರು. ಆ ಫೋಟೋ ಕೂಡ ವೈರಲ್ ಆಗಿತ್ತು. ಅದಾದ್ಮೇಲೆ ಬಾಲಿವುಡ್​ ನಟ ಹಾಗೂ ಕೆಜಿಎಫ್ ಚಿತ್ರದ ವಿಲನ್ (Sanjay Dutt) ಸಂಜಯ್ ದತ್ ರನ್ನ ಜೋಗಿ ಪ್ರೇಮ್ ಮೀಟ್ ಆಗಿದ್ದಾರೆ.


ಡೈರೆಕ್ಟರ್ ಜೋಗಿ ಪ್ರೇಮ್ ಸಿನಿಮಾದಲ್ಲಿ ಸಂಜಯ್ ದತ್?
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಸಿನಿಮಾದ ಹೈಪ್ ಈಗಲೇ ಕ್ರಿಯೇಟ್ ಆಗುತ್ತಿದೆ. ಡೈರೆಕ್ಟರ್ ಜೋಗಿ ಪ್ರೇಮ್ ಇದ್ದಾರೆ ಅಂದ್ಮೇಲೆ ಅದು ಕಾಮನ್ ಬಿಡಿ.
ಅದರಂತೆ ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅಭಿನಯಿಸುತ್ತಾರೆ ಅನ್ನೋ ಸುದ್ದಿ ಇದೆ. ಆದರೆ ಅಧಿಕೃತವಾಗಿ ಎಲ್ಲೂ ಅದು ಅನೌನ್ಸ್ ಆಗಿಯೇ ಇಲ್ಲ.


Kannada Director Jogi Prem Meets Bollywood Actor Sanjay Dutt
ಕನ್ನಡಕ್ಕೆ ಬಂದ್ರೇ ಸಂಜಯ್ ದತ್


ಜೋಗಿ ಪ್ರೇಮ್ ಚಿತ್ರದಲ್ಲಿ ಸಂಜಯ್ ದತ್ ಅಭಿನಯಿಸ್ತಾರಾ?
ಆದರೆ ಈಗ ಜೋಗಿ ಪ್ರೇಮ್ ಬಿಟ್ಟಿರೋ ಫೋಟೋ ಆ ಮಾಹಿತಿಗೆ ಅಧಿಕೃತ ಅನೌನ್ಸ್ ಮೆಂಟ್ ಇದ್ದ ಹಾಗೆ ಕಾಣಿಸುತ್ತದೆ. ಹಾಗೇನೆ ಈ ಒಂದು ಫೋಟೋ ಇನ್ನೂ ಒಂದಷ್ಟು ಕುತೂಹಲವನ್ನೂ ಹುಟ್ಟು ಹಾಕಿದೆ.


ಇದನ್ನೂ ಓದಿ:  Kantara: 'ಸಿಂಗಾರ ಸಿರಿಯೇ'ನೂ ಕದ್ದ ಟ್ಯೂನಾ? ವಿಡಿಯೋ ನೋಡಿ ನೀವೇ ಡಿಸೈಡ್​ ಮಾಡಿ ಅಂತಿದ್ದಾರೆ ನೆಟ್ಟಿಗರು!


ಜೋಗಿ ಪ್ರೇಮ್ ತಮ್ಮ ಚಿತ್ರದ ಟೈಟಲ್ ಅನ್ನ ಇನ್ನೂ ಅನೌನ್ಸ್ ಮಾಡಿಲ್ಲ. ಯಾವ ಟೈಟಲ್ ಇರಬಹುದು ಅಂತ ಅಂದಾಜಿಸಲು ಕೂಡ ಯಾವುದೇ ಹಿಂಟ್ ಕೂಡ ಕೊಟ್ಟಿಲ್ಲ. ಆದರೆ ಈ ಸಿನಿಮಾದ ಟೈಟಲ್ ರಿವೀಲ್ ಮಾಡೋಕೆ ಒಂದು ದಿನ ಫಿಕ್ಸ್ ಮಾಡಿದ್ದಾರೆ.


ಅಕ್ಟೋಬರ್-20 ರಂದು ಸಿನಿಮಾ ಟೈಟಲ್ ರಿವೀಲ್
ಹೌದು, ಜೋಗಿ ಪ್ರೇಮ್ ತಮ್ಮ ಚಿತ್ರದ ಟೈಟಲ್ ಅನ್ನ ಅದ್ಧೂರಿಯಾಗಿಯೇ ರಿಲೀಸ್ ಮಾಡುತ್ತಿದ್ದಾರೆ. ಇದಕ್ಕೊಂದು ದೊಡ್ಡ ಫಂಕ್ಷನ್ ಪ್ಲಾನ್ ಕೂಡ ಮಾಡಿದಂತೆ ಇದೆ.
ಚಿತ್ರದ ಟೈಟಲ್ ರಿವೀಲ್​ಗಾಗಿಯೇ ಎಲ್ಲ ಪ್ಲಾನ್ ಮಾಡಿಕೊಂಡಂತಿದೆ. ಈ ಒಂದು ಟೈಟಲ್ ರಿವೀಲ್ ಕಾರ್ಯಕ್ರಮಕ್ಕೆ ಸಂಜಯ್ ದತ್ ರನ್ನ ಆಹ್ವಾನಿಸಲು ಜೋಗಿ ಪ್ರೇಮ್ ಈಗ ಮೀಟ್ ಆಗಿದ್ದಾರೆ ಅನ್ನೋ ಇನ್ನೂ ಒಂದು ಸುದ್ದಿ ಕೂಡ ಇದೆ.


Kannada Director Jogi Prem Meets Bollywood Actor Sanjay Dutt
ಮೋಹನ್​ ಲಾಲ್ ಭೇಟಿಯಾದ ಜೋಗಿ ಪ್ರೇಮ್


ಜೋಗಿ ಪ್ರೇಮ್ ಚಿತ್ರದಲ್ಲಿ ಸಂಜಯ್ ದತ್ ಅಭಿನಯಿಸ್ತಾರೋ ಇಲ್ವೋ ಗೊತ್ತಿಲ್ಲ. ಅದು ಅಧಿಕೃತವಾಗಿಯೂ ಇನ್ನೂ ಅನೌನ್ಸ್ ಆಗಿಲ್ಲ. ಬಹುಶಃ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಅದು ರಿವೀಲ್ ಆದರೂ ಆಗಬಹುದು.


ಸೂಪರ್ ಸ್ಟಾರ್ ಮೋಹನ್​ ಲಾಲ್ ಭೇಟಿಯಾದ ಜೋಗಿ ಪ್ರೇಮ್
ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ರನ್ನ ಕೂಡ ಜೋಗಿ ಪ್ರೇಮ್ ಭೇಟಿಯಾಗಿದ್ದಾರೆ. ಅವರೊಟ್ಟಿಗೆ ಮಾತನಾಡಿಕೊಂಡು ಬಂದಿದ್ದಾರೆ. ಈ ವಿಶೇಷ ಭೇಟಿಯ ಫೋಟೋವನ್ನ ಕೂಡ ಜೋಗಿ ಪ್ರೇಮ್ ಶೇರ್ ಮಾಡಿದ್ದರು. ಇದು ಕೂಡ ಅಷ್ಟೇ ಕುತೂಹಲ ಮೂಡಿಸಿತ್ತು.


ಆದರೆ ಈ ಭೇಟಿಯ ಹಿಂದಿನ ವಿಶೇಷತೆಯನ್ನ ಜೋಗಿ ಪ್ರೇಮ್ ಇಲ್ಲೂ ರಿವೀಲ್ ಮಾಡಲೇ ಇಲ್ಲ. ಯಾಕೆ ಅನ್ನೋದು ಕೂಡ ಈಗ ಮತ್ತೊಂದು ಕುತೂಹಲವೇ ನೋಡಿ.


ಇದನ್ನೂ ಓದಿ: Subhamangala Film Review: ಮದುವೆ ಮನೆಯ ಶುಭಮಂಗಳ ಚಿತ್ರಕ್ಕೆ ಇದುವೇ ಜೀವಾಳ


ಹೀಗಿರೋವಾಗ ಚಿತ್ರದಲ್ಲಿ ಯಾರೆಲ್ಲ ಇರುತ್ತಾರೆ? ಸಿನಿಮಾದ ಟೈಟಲ್ ಏನು? ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿ ಈಗಲೇ ಕೊಡ್ತಾರೋ ಇಲ್ವೋ? ಧ್ರುವ ಸರ್ಜಾ ಅಭಿನಯದ ಸಿನಿಮಾ ಕೂಡ ಇದಾಗಿದೆ. ಅಲ್ಲಿಗೆ ಈ ಸಿನಿಮಾದ ಫ್ಯಾನ್ ಫಾಲೋಯಿಂಗ್ ಇನ್ನೂ ಒಂದು ಲೆವಲ್ ಹೆಚ್ಚು ಇರುತ್ತದೆ.


ಹಾಗಾಗಿಯೇ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಅವರ ಕಾಂಬಿನೇಷನ್​ನ ಈ ಚಿತ್ರದ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಇದೆ.

First published: