• Home
  • »
  • News
  • »
  • entertainment
  • »
  • Jogi Prem Birthday: ಮಧ್ಯ ರಾತ್ರಿಯೇ ಜೋಗಿ ಪ್ರೇಮ್ ಜನ್ಮ ದಿನ ಆಚರಣೆ! ಬರ್ತ್​ಡೇ ದಿನ ಊರಲ್ಲೇ ಇರಲ್ಲ K.D ಡೈರೆಕ್ಟರ್

Jogi Prem Birthday: ಮಧ್ಯ ರಾತ್ರಿಯೇ ಜೋಗಿ ಪ್ರೇಮ್ ಜನ್ಮ ದಿನ ಆಚರಣೆ! ಬರ್ತ್​ಡೇ ದಿನ ಊರಲ್ಲೇ ಇರಲ್ಲ K.D ಡೈರೆಕ್ಟರ್

ನಾಳೆ ಊರಲ್ಲೇ ಇರಲ್ಲ K.D ಡೈರೆಕ್ಟರ್ ಪ್ರೇಮ್

ನಾಳೆ ಊರಲ್ಲೇ ಇರಲ್ಲ K.D ಡೈರೆಕ್ಟರ್ ಪ್ರೇಮ್

ನಾನು ಊರಲ್ಲಿ ಇರೋದಿಲ್ಲ. ರಾತ್ರಿ 12 ಗಂಟೆಗೆ ಸೆಲೆಬ್ರೇಷನ್ ಮುಗಿಸಿಕೊಂಡು ಹೊರಟು ಬಿಡುತ್ತೇನೆ ಅಂತಲೇ ಡೈರೆಕ್ಟರ್ ಜೋಗಿ ಪ್ರೇಮ್, ನ್ಯೂಸ್ 18 ಕನ್ನಡ ಡಿಜಿಟಲ್ ಗೆ ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಡೈರೆಕ್ಟರ್ ಜೋಗಿ (Jogi Prem) ಪ್ರೇಮ್ ಈಗ ಕೆ.ಡಿ.ಚಿತ್ರದ (KD Title) ಟೈಟಲ್ ಟೀಸರ್ ರಿಲೀಸ್ ಸಂಭ್ರಮವನ್ನ ಯಶಸ್ವಿಯಾಗಿಯೇ ಮಾಡಿರೊ ಖುಷಿಯಲ್ಲಿ ಇದ್ದಾರೆ. ಬಾಲಿವುಡ್​ನ (Bollywood) ಸಂಜಯ್ ದತ್ ರನ್ನ ಬೆಂಗಳೂರಿಗೂ ಕರೆಸಿಕೊಂಡು ತಮ್ಮ ಪವರ್ ಅನ್ನು ಇಡೀ ಇಂಡಸ್ಟ್ರಿಗೂ ಈ ಮೂಲಕ ತೋರಿದ್ದಾರೆ. K.D ಚಿತ್ರದ (Teaser) ಟೀಸರ್ ಕಂಡ ಜನ ವಾರೇ ವಾ ಅಂತಲೇ ಹೇಳುತ್ತಿದ್ದಾರೆ. ಧ್ರುವ ಸರ್ಜಾ ಫ್ಯಾನ್ಸ್ ಅಂತಲೂ ಫುಲ್ ಹಬ್ಬ ಮಾಡುತ್ತಿದ್ದಾರೆ. ಈ ಒಂದು ಹ್ಯಾಪಿ ಮೊಮೆಂಟ್​​ನಲ್ಲಿಯೇ ಕೆ.ಡಿ.ಡೈರೆಕ್ಟರ್ ಜೋಗಿ ಪ್ರೇಮ್ ಪತ್ನಿ, ರಕ್ಷಿತಾ ಪ್ರೇಮ್ ಈಗೊಂದು ಸರ್ಪೈಜ್ ಕೊಡ್ತಿದ್ದು, ರಾತ್ರಿ 12 ಗಂಟೆ ಹೊತ್ತಿಗೆ ಜೋಗಿ ಪ್ರೇಮ್ ಜನ್ಮ ದಿನ ಆಚರಣೆ ಇರೋದು ವಿಶೇಷ. ಇದಾದ್ಮೇಲೆ ಜೋಗಿ ಪ್ರೇಮ್ ಊರಲ್ಲಿ ಇರ್ತಾರೇಯೇ ? ಬನ್ನಿ, ಹೇಳ್ತೀವಿ.


ಕೆ.ಡಿ.ಡೈರೆಕ್ಟರ್ ಜೋಗಿ ಪ್ರೇಮ್ ಫುಲ್ ಖುಷ್ ಹುವಾ


ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆ.ಡಿ.ಸಿನಿಮಾದ ಟೈಟಲ್ ಸಖತ್ ಸೌಂಡ್ ಮಾಡುತ್ತಿದೆ. ಟಾಕ್ ಆಫ್ ದಿ ಟೌನ್ ಅನ್ನೋ ಹಾಗೆ ಕೆ.ಡಿ ಚಿತ್ರದ ಟೈಟಲ್ ಕಂಡು ಬೆಂಕಿ ಅಂತಲೂ ಕಾಮೆಂಟ್ ಹೊಡೆಯುತ್ತಿದ್ದಾರೆ.


ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್ ಅಂತೂ ಫುಲ್ ಹಬ್ಬ ಮಾಡುತ್ತಿದ್ದಾರೆ. ಅಣ್ಣನ ಜಬರ್​ದಸ್ತ್ ಟೀಸರ್ ನೋಡಿ ಮಂತ್ರ ಮುಗ್ಧಗೊಂಡಿದ್ದಾರೆ. ಧ್ರುವ ಸರ್ಜಾ ಬೆಂಕಿಯಂತಹ ಎಂಟ್ರಿಯನ್ನ ಕಂಡು ಸಿಕ್ಕಾಪಟ್ಟೆ ಖುಷಿ ಕೂಡ ಆಗಿದ್ದಾರೆ. ಇದರಿಂದ ಕೆ.ಡಿ. ಡೈರೆಕ್ಟರ್ ಜೋಗಿ ಪ್ರೇಮ್ ಕೂಡ ಫುಲ್ ಹ್ಯಾಪಿ ಆಗಿದ್ದಾರೆ.


K.D ಡೈರೆಕ್ಟರ್ ಜೋಗಿ ಪ್ರೇಮ್ ಜನ್ಮ ಆಚರಣೆ ಹೇಗಿರುತ್ತದೆ?
ಡೈರೆಕ್ಟರ್ ಜೋಗಿ ಪ್ರೇಮ್ ಅವರು ಪ್ರತಿ ವರ್ಷ ತಮ್ಮ ಜನ್ಮ ದಿನವನ್ನ ಅಕ್ಟೋಬರ್-22 ರಂದು ಆಚರಿಸಿಕೊಳ್ತಾರೆ. ಈ ವರ್ಷ ಕೊಂಚ ಸ್ಪೆಷಲ್ ಅಂತಲೇ ಹೇಳಬಹುದು. K.D ಸಿನಿಮಾದ ಟೈಟಲ್ ಭರ್ಜರಿಯಾಗಿಯೇ ರೆಸ್ಪಾನ್ಸ್ ಪಡೆಯುತ್ತಿದೆ.


Kannada Director Jogi Prem Celebrating Birthday
ರಾತ್ರಿ 12 ಗಂಟೆಗೆ ಜೋಗಿ ಪ್ರೇಮ್ ಜನ್ಮ ದಿನ ಸೆಲೆಬ್ರೇಷನ್


ಇದೇ ವೇಳೆನೆ ಡೈರೆಕ್ಟರ್ ಪ್ರೇಮ್ ತಮ್ಮ ಜನ್ಮ ದಿನವನ್ನ ಮಧ್ಯ ರಾತ್ರಿ 12 ಗಂಟೆಗೆ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಜೋಗಿ ಪ್ರೇಮ್ ಐಡಿಯಾ ಅಲ್ಲವೇ ಅಲ್ಲ. ಜೋಗಿ ಪ್ರೇಮ್ ಪತ್ನಿ ಹಾಗೂ ನಟಿ-ನಿರ್ಮಾಪಕಿ ರಕ್ಷಿತಾ ಪ್ರೇಮ್ ಈಗ ಪ್ಲಾನ್ ಮಾಡಿದ್ದಾರೆ.


ಇದನ್ನೂ ಓದಿ: Puneetha Parva: ಫ್ಲೇವರ್ಸ್ ಆಫ್ ಗಂಧದ ಗುಡಿ! ಅಪ್ಪು ಫೇವರೇಟ್ ಬಿರಿಯಾನಿ ಸವಿದ ರಾಜ್ ಬಿ. ಶೆಟ್ಟಿ


ಮಧ್ಯ ರಾತ್ರಿ 12 ಗಂಟೆಗೆ ಜೋಗಿ ಪ್ರೇಮ್ ಜನ್ಮ ದಿನ ಸೆಲೆಬ್ರೇಷನ್


ಹೌದು, ಜೋಗಿ ಪ್ರೇಮ್ ತಮ್ಮ ಜನ್ಮ ದಿನವನ್ನ 21 ರಾತ್ರಿ 12 ಗಂಟೆಗೆ ಆಚರಿಸಿಕೊಳ್ಳುತ್ತಿದ್ದಾರೆ. ಚಂದ್ರಾ ಲೇಔಟ್​ನ ಪ್ರೇಮ್ ಮನೆಯಲ್ಲಿಯೇ ಈ ಆಚರಣೆ ಪ್ಲಾನ್ ಆಗಿದೆ. ಕೇಕ್ ಕಟ್ಟಿಂಗ್ ಪ್ಲಾನ್ ಕೂಡ ಇದೆ. ರಾತ್ರಿ ಕೇಕ್ ಕಟ್ ಮಾಡಿ ಪ್ರೇಮ್, ತಮ್ಮ ಜನ್ಮ ದಿನ ಆಚರಣೆ ಮಾಡುತ್ತಿದ್ದಾರೆ.


ನಾಳೆ ಊರಲ್ಲೇ ಇರಲ್ಲ K.D ಡೈರೆಕ್ಟರ್ ಪ್ರೇಮ್!


ಜೋಗಿ ಪ್ರೇಮ್ ರಾತ್ರಿ ಜನ್ಮ ದಿನ ಆಚರಿಸಿಕೊಳ್ತಾರೆ. ರಕ್ಷಿತಾ ಕೇಕ್ ಕಟ್ಟಿಂಗ್ ಪ್ಲಾನ್ ಇರೋದ್ರಿಂದಲೇ ರಾತ್ರಿ ಸೆಲೆಬ್ರೇಷನ್​ಗೆ ಮಾತ್ರ ಇರುತ್ತಾರೆ. ಇದಾದ ಮೇಲೇ ಜೋಗಿ ಪ್ರೇಮ್ ಬೆಂಗಳೂರಿನಿಂದ ಹೊರಗಡೆ ಹೋಗುವ ಪ್ಲಾನ್ ಮಾಡಿದ್ದಾರೆ.


ಜನ್ಮ ದಿನದ ಹಿನ್ನೆಲೆಯಲ್ಲಿ ಜೋಗಿ ಪ್ರೇಮ್ ಊರಲ್ಲಿಯೇ ಇರ್ತಾರೆ ಅಂತ ನಂಬಿದವರಿಗೆ ಜೋಗಿ ಪ್ರೇಮ್ ನಿರಾಸೆ ಮಾಡಿದ್ದಾರೆ. ನಾಳೆ ಅಂದರೆ 22 ರಂದು ಇಡೀ ದಿನ ಬೆಂಗಳೂರಿನಲ್ಲಿಯೇ ಜೋಗಿ ಪ್ರೇಮ್ ಇರೋದಿಲ್ಲ. ಹಾಗಾಗಿಯೇ ಬೆಳಗ್ಗೆ ಬರೋ ಫ್ಯಾನ್ಸ್ ಬೇಸರ ಮೂಡೋದಂತು ಸತ್ಯ.


ಇದನ್ನೂ ಓದಿ: Head Bush Review: ಹೆಡ್ ಬುಷ್ ಸಿನಿಮಾ ಹೇಗಿದೆ? ಇಲ್ಲಿದೆ ನೋಡಿ ರಗಡ್ ರೌಡಿಸಂ ಚಿತ್ರದ ರಿವ್ಯೂ


ಆದರೆ ಜೋಗಿ ಪ್ರೇಮ್ ಎಲ್ಲಿಗೆ ಹೋಗ್ತಾಯಿದ್ದಾರೆ ಅನ್ನೋ ವಿಚಾರ ಹೇಳಿಕೊಂಡಿಲ್ಲ. ಬದಲಾಗಿ ನಾನು ಊರಲ್ಲಿ ಇರೋದಿಲ್ಲ. ರಾತ್ರಿ 12 ಗಂಟೆಗೆ ಸೆಲೆಬ್ರೇಷನ್ ಮುಗಿಸಿಕೊಂಡು ಹೊರಟು ಬಿಡುತ್ತೇನೆ ಅಂತಲೇ ನ್ಯೂಸ್ 18 ಕನ್ನಡ ಡಿಜಿಟಲ್ ಗೆ ಹೇಳಿಕೊಂಡಿದ್ದಾರೆ. ಉಳಿದಂತೆ ಜೋಗಿ ಪ್ರೇಮ್ 46 ಜನ್ಮ ದಿನವನ್ನ ಆಚರಿಸಿಕೊಂಡು ಖುಷಿಪಡುತ್ತಿದ್ದಾರೆ.

First published: