• Home
  • »
  • News
  • »
  • entertainment
  • »
  • Director Jayatheertha: ಸಿನಿಮಾ ರಿಲೀಸ್ ಆಗುವ ಮುನ್ನವೇ ಹೀರೋನ ಮೈನಸ್ ಪಾಯಿಂಟ್ ಹೇಳಿದ ಕನ್ನಡದ ಡೈರೆಕ್ಟರ್ !

Director Jayatheertha: ಸಿನಿಮಾ ರಿಲೀಸ್ ಆಗುವ ಮುನ್ನವೇ ಹೀರೋನ ಮೈನಸ್ ಪಾಯಿಂಟ್ ಹೇಳಿದ ಕನ್ನಡದ ಡೈರೆಕ್ಟರ್ !

ಬನಾರಸ್ ಹೀರೋನಲ್ಲಿ ಆ ಒಂದು ಕೊರತೆ ಇದೆ

ಬನಾರಸ್ ಹೀರೋನಲ್ಲಿ ಆ ಒಂದು ಕೊರತೆ ಇದೆ

ಬನಾರಸ್ ಹೀರೋ ಸಖತ್ ಆಗಿಯೇ ಫೈಟ್ ಮಾಡ್ತಾರೆ. ಡೈಲಾಗ್ ಹೊಡೆಯೋ ರೀತಿನೂ ಸೂಪರ್ ಅನಿಸುತ್ತದೆ. ಆದರೆ ಅದ್ಯಾಕೋ ಈ ನಟನಿಗೆ ರಿಷಬ್ ಶೆಟ್ಟಿ ರೀತಿ ಕಾಮಿಡಿ ಟೈಮ್​ ಬರಲೇ ಇಲ್ಲ. ಇದನ್ನ ಝೈದ್ ಖಾನ್ ಇನ್ನೂ ಕಲಿಯಬೇಕಿದೆ ಎಂದು ಜಯತೀರ್ಥ ಹೇಳುತ್ತಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದಲ್ಲಿ ಹೊಸಬರ (New comer) ಸಿನಿಮಾಗಳು ಚೆನ್ನಾಗಿಯೇ ಬರ್ತಿವೆ. ಸುಮಾರು ಸಿನಿಮಾಗಳ (Cinema Hero) ಹೀರೋಗಳು ತಮ್ಮ ಮೊದಲ ಸಿನಿಮಾದಲ್ಲಿಯೇ ತಮ್ಮ ಪ್ರತಿಭೆಯನ್ನ (Talented) ಸಾಬೀತು ಪಡಿಸಿದ್ದಾರೆ.ಆದರೆ ಕನ್ನಡದಲ್ಲಿ ಇಲ್ಲಿವರೆಗೂ ತಮ್ಮ ಸಿನಿಮಾದ ನಾಯಕರ ಬಗ್ಗೆ ನಿರ್ದೇಶಕರಾರು ಮೈನಸ್ ಪಾಯಿಂಟ್​ಗಳನ್ನ ಹೇಳಿದ್ದಿಲ್ಲ. ಹೇಳಿರೋದೆಲ್ಲ ಪ್ಲಸ್ ಪಾಯಿಂಟ್​ಗಳೇ ಆಗಿವೆ. ಆದರೆ ಕನ್ನಡದ ಹೆಸರಾಂತ (Director) ನಿರ್ದೇಶಕರೊಬ್ಬರು ತಮ್ಮ ಚಿತ್ರದ ನಾಯಕನ ಪ್ಲಸ್ ಪಾಯಿಂಟ್​ಗಳನ್ನ ನೇರವಾಗಿ ಹೇಳಿದ್ದಾರೆ. ಮೈನಸ್ ಪಾಯಿಂಟ್​ಗಳನ್ನೂ ಓಪನ್ ಆಗಿಯೇ ಹೇಳಿ ಬಿಟ್ಟಿದ್ದಾರೆ. ಆ ಹೀರೋ ಯಾರು? ಆ ಸಿನಿಮಾ ಯಾವುದು? ಆ ಡೈರೆಕ್ಟರ್ ಯಾರು? ಇದೆಲ್ಲ ಡಿಟೈಲ್ಸ್ ಇಲ್ಲಿದೆ.


ಚಿತ್ರದ ಮೂಲಕ ಝೈದ್ ಖಾನ್ ಎಂಬ ಹೊಸ ಹುಡುಗ ಕನ್ನಡ ಇಂಡಸ್ಟ್ರೀಗೆ ಕಾಲಿಡುತ್ತಿದ್ದಾರೆ. ಈ ಹುಡುಗನ ಲಕ್ ಚೆನ್ನಾಗಿಯೇ ಇದೆ. ಮೊದಲ ಚಿತ್ರವೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.


ಬನಾರಸ್ ಹೀರೋಗೆ ಸಿಕ್ಕ ಅದ್ಭುತ ಡೈರೆಕ್ಟರ್ ಕಮ್ ಆ್ಯಕ್ಟಿಂಗ್ ಟೀಚರ್
ಈ ಹುಡುಗನ ಇನ್ನೂ ಒಂದು ಲಕ್ ಕೂಡ ವಿಶೇಷವಾಗಿಯೇ ಇದೆ. ಆ ಲಕ್ ಬೇರೆ ಏನೋ ಅಲ್ಲ. ಅದು ಚಿತ್ರದ ಡೈರೆಕ್ಟರ್ ಅಂದ್ರೆ ತಪ್ಪೇ ಇಲ್ಲ. ಆ ಡೈರೆಕ್ಟರ್ ಅದ್ಭುತ ನಟನೆಯನ್ನ ಕಲಿಸಿಕೊಡುವ ಸ್ಟ್ರೀಕ್ಟ್ ಮೇಷ್ಟ್ರು ಕೂಡ ಹೌದು.


ನಿಜ, ಬೆಲ್ ಬಾಟಂ ಡೈರೆಕ್ಟರ್ ಜಯತೀರ್ಥ ಅವ್ರೇ ಈ ಹುಡುಗನ ಶಿಕ್ಷಕರೂ ಹೌದು, ಬನಾರಸ್ ಸಿನಿಮಾದ ನಿರ್ದೇಶಕರೂ ಇವರೇನೆ. ಈ ವಿಶೇಷ ನಿರ್ದೇಶಕರ ಕೈಯಲ್ಲಿಯೇ ಬನಾರಸ್ ಹೀರೋ ಪಳಗಿದ್ದಾರೆ.


Kannada Director Jayatheertha talk about his Banaras film Hero
ಬನಾರಸ್ ಝೈದ್ ಖಾನ್ ಗೆ ಹೇಳಿ ಮಾಡಿಸಿದ ಸಿನಿಮಾ


ಝೈದ್ ಖಾನ್ ಮೊದಲ ಸಿನಿಮಾದಲ್ಲಿಯೇ ಎಲ್ಲ ಕಲಿತು ಬಿಟ್ಟಿದ್ದಾರೆ. ಬನಾರಸ್ ಚಿತ್ರದ ಟ್ರೈಲರ್ ಅನ್ನ ಒಮ್ಮೆ ಗಮನಿಸಿದ್ರೆ ಸಾಕು, ಝೈದ್ ಖಾನ್ ಶ್ರಮ ತಿಳಿದು ಬಿಡುತ್ತಿದೆ. ಡೈರೆಕ್ಟರ್ ಜಯತೀರ್ಥ ಅವರು ಝೈದ್ ಖಾನ್ ನನ್ನ ಅಷ್ಟೊಂದು ಪಳಗಿಸಿ ಬಿಟ್ಟಿದ್ದಾರೆ.
ಬನಾರಸ್ ಹೀರೋನಲ್ಲಿ ಆ ಒಂದು ಕೊರತೆ ಇದೆ


ಬನಾರಸ್ ಹೀರೋನ ಮೈನಸ್ ಪಾಯಿಂಟ್ಸ್ ಏನು?
ಬನಾರಸ್ ಹೀರೋ ಸಖತ್ ಆಗಿಯೇ ಫೈಟ್ ಮಾಡ್ತಾರೆ. ಡೈಲಾಗ್ ಹೊಡೆಯೋ ರೀತಿನೂ ಸೂಪರ್ ಅನಿಸುತ್ತದೆ. ಆದರೆ ಅದ್ಯಾಕೋ ಈ ನಟನಿಗೆ ರಿಷಬ್ ಶೆಟ್ಟಿ ರೀತಿ ಕಾಮಿಡಿ ಟೈಮ್​ ಬರಲೇ ಇಲ್ಲ. ಇದನ್ನ ಝೈದ್ ಖಾನ್ ಇನ್ನೂ ಕಲಿಯಬೇಕಿದೆ ಎಂದು ಜಯತೀರ್ಥ ಹೇಳುತ್ತಾರೆ.


ಇದನ್ನೂ ಓದಿ: Rajinikanth: ಅಪ್ಪು ದೇವರ ಮಗು ಎಂದ ರಜನಿಕಾಂತ್, ವೇದಿಕೆ ಮೇಲೆ ರಾಜ್‌ ಸ್ಮರಿಸಿಕೊಂಡ ಸೂಪರ್ ಸ್ಟಾರ್ 


ನ್ಯೂಸ್-18 ಡಿಜಿಟಲ್ ಕನ್ನಡದ ಫೇಸ್ ಬುಕ್ ಲೈವ್ ನಲ್ಲಿ ಈ ಅಸಲಿ ವಿಚಾರವನ್ನ ಜಯತೀರ್ಥ ಹೇಳಿಕೊಂಡಿದ್ದಾರೆ. ಝೈದ್ ಖಾನ್ ಒಳ್ಳೆ ಹುಡುಗ, ಆತನಲ್ಲಿ ಪ್ಲಸ್ ಪಾಯಿಂಟ್​ಗಳೂ ಸಾಕಷ್ಟಿವೆ.


ಹೊಸದನ್ನ ಕಲಿಯಬೇಕು ಅನ್ನೋ ಡೆಡಿಕೇಷನ್ ಇದೆ. ಎಲ್ಲವನ್ನೂ ಹೇಳಿದಾಗ ಅಷ್ಟೇ ಸಹನೆಯಿಂದಲೇ ಕೇಳಿ ಕಲಿಯುತ್ತಾನೆ. ಅಂತಹ ಈ ಹುಡುಗ ಬನಾರಸ್ ಸಿನಿಮಾದಲ್ಲಿ ಚೆನ್ನಾಗಿಯೇ ಕೆಲಸ ಮಾಡಿದ್ದಾನೆ.


ಬನಾರಸ್ ಚಿತ್ರಕ್ಕೂ ದೈವಿ ಶಕ್ತಿ ಬಂದು ಬಿಟ್ಟಿದೆ
ಇನ್ನು ಬನಾರಸ್ ಚಿತ್ರದಲ್ಲಿ ಒಳ್ಳೆ ಜಾಗಳನ್ನ ತೋರಿಸಿದ್ದೇವೆ. ಇಲ್ಲಿವರೆಗೂ ಯಾರೂ ಆ ಒಂದು ಪ್ರಯತ್ನವನ್ನ ಮಾಡಿರಲೇ ಇಲ್ಲ. ಅದನ್ನ ಇಲ್ಲಿ ಟ್ರೈ ಮಾಡಿದ್ದೇವೆ. ಇನ್ನು ಬನಾರಸ್ ನಂತಹ ಶಕ್ತಿ ಕೇಂದ್ರದಲ್ಲಿಯೇ ನಮ್ಮ ಸಿನಿಮಾ ಮಾಡಿದ್ದೇವೆ.


Kannada Director Jayatheertha talk about his Banaras film Hero


ಈ ಚಿತ್ರಕ್ಕೂ ದೈವಿ ಶಕ್ತಿ ಬಂದು ಬಿಟ್ಟಿದೆ. ಮಹಾದೇವನೆ ಈ ಒಂದು ಚಿತ್ರಕ್ಕೆ ಸಾಥ್ ಕೊಟ್ಟಿದ್ದಾನೆ ಅನ್ನೋ ಅರ್ಥದಲ್ಲಿಯೇ ಜಯತೀರ್ಥ ತಮ್ಮ ಬನಾರಸ್ ಸಿನಿಮಾದ ಬಗ್ಗೆ ಹೇಳ್ತಾ ಹೋಗಿದ್ದಾರೆ.


ಬನಾರಸ್ ಝೈದ್ ಖಾನ್ ಗೆ ಹೇಳಿ ಮಾಡಿಸಿದ ಸಿನಿಮಾ
ಬನಾರಸ್ ಸಿನಿಮಾ ಝೈದ್ ಖಾನ್ ಗೆ ಟೇಲರ್​ ಮೇಡ್ ಸಿನಿಮಾ ಆಗಿದೆ. ಇದನ್ನ ಕನ್ನಡಕ್ಕೆ ಮಾತ್ರ ಮಾಡಬೇಕು ಅಂತಲೇ ಮಾಡಿದ್ದೇವೆ. ಆದರೆ ಈಗ ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ.


ಇದನ್ನೂ ಓದಿ: Puneeth Rajkumar: ನಗು ಮುಖದಲ್ಲೇ ಇಡೀ ರಾಜ್ಯ ಗೆದ್ದ ರಾಜ ಅಪ್ಪು, ಗೆಳೆಯನ ನೆನೆದು Jr NTR ಭಾವುಕ! 


ಇದೇ ನವೆಂಬರ್-04 ರಂದು ಚಿತ್ರ ರಿಲೀಸ್ ಆಗುತ್ತಿದೆ. ಥಿಯೇಟರ್​ ಗೆ ಬಂದು ದುಡ್ಡು ಕೊಟ್ಟು ಚಿತ್ರ ನೋಡುವವರಿಗೆ ಟೈಮ್ ವೇಸ್ಟ್ ಆಗೋದಿಲ್ಲ. ಅವರು ಒಂದ್ ಒಳ್ಳೆ ಸಿನಿಮಾ ನೋಡಿದ ಫೀಲ್​ ಅಲ್ಲಿಯೇ ಹೊರಗೆ ಹೋಗ್ತಾರೆ ಎಂದು ಜಯತೀರ್ಥ ವಿಶ್ವಾಸದಲ್ಲಿಯೇ ಹೇಳಿಕೊಂಡಿದ್ದಾರೆ.

First published: