• Home
  • »
  • News
  • »
  • entertainment
  • »
  • Rishab Bell Bottom-2: ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ? ಕಾಂತಾರ-2 ಮಾಡ್ತಾರಾ? ಬೆಲ್ ಬಾಟಂ-2 ಗೆ ರೆಡಿ ಆಗ್ತಾರಾ?

Rishab Bell Bottom-2: ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ? ಕಾಂತಾರ-2 ಮಾಡ್ತಾರಾ? ಬೆಲ್ ಬಾಟಂ-2 ಗೆ ರೆಡಿ ಆಗ್ತಾರಾ?

ರಿಷಬ್ ಕಾಂತಾರ-2 ಮಾಡ್ತಾರಾ? ಬೆಲ್ ಬಾಟಂ-2 ಗೆ ರೆಡಿ ಆಗ್ತಾರಾ?

ರಿಷಬ್ ಕಾಂತಾರ-2 ಮಾಡ್ತಾರಾ? ಬೆಲ್ ಬಾಟಂ-2 ಗೆ ರೆಡಿ ಆಗ್ತಾರಾ?

ನಿರ್ದೇಶಕ ಜಯತೀರ್ಥ ನ್ಯೂಸ್ 18 ಕನ್ನಡ ಡಿಜಿಟಲ್ ಗೆ ಒಂದಷ್ಟು ಅಧಿಕೃತ ಮಾಹಿತಿಯನ್ನ ಕೊಟ್ಟಿದ್ದಾರೆ. ತಮ್ಮ ಬೆಲ್ ಬಾಟಂ-2 ಸಿನಿಮಾದ ಸ್ಕ್ರಿಪ್ಟ್ ಎಲ್ಲ ಈಗಾಗಲೇ ರೆಡಿ ಇದೆ. ಇನ್ನೇನು ಶೂಟಿಂಗ್ ಹೋಗಬೇಕಷ್ಟೇ ಅಂತಲೇ ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್​ ನಲ್ಲಿ (Kantara) ಕಾಂತಾರ ಚಿತ್ರದ ಹವಾ ಜೋರಾಗಿದೆ. ಇದರ ಸುತ್ತವೇ ರಿಷಬ್ (Rishab Shetty) ಶೆಟ್ಟಿ ಸಂಬಂಧಿಸಿದ ಹತ್ತು ಹಲವು ವಿಷಯಗಳು ವೈರಲ್​ (Viral) ಕೂಡ ಆಗಿವೆ. ರಿಷಬ್ ಅಭಿನಯದ ಹಳೆ ಸಿನಿಮಾಗಳ ಬಗ್ಗೇನೂ ಕುತೂಹಲ ಹೆಚ್ಚಿದೆ. ಇದರ ಹಿಂದೇನೆ ಕಾಂತಾರ-2 (Kantara-2) ಸಿನಿಮಾ ಕೂಡ ಬರುತ್ತದೆಯೇ? ಅನ್ನೋ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಇದೇನೋ ಸರಿ, ಬೆಲ್ (Bell Bottom-2) ಬಾಟಂ-2 ಸಿನಿಮಾ ಯಾವಾಗ ಅನ್ನೋ ಕ್ವಶ್ಚನ್ ಕೂಡ ಹುಟ್ಟಿಕೊಂಡಿದೆ. ಕಾಂತಾರ ಸಿನಿಮಾ ಹಿಟ್ ಆಗಿದ್ದೇ ತಡ, ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲವು ಈಗ ದಿನೇ ದಿನೆ ಹೆಚ್ಚಾಗುತ್ತಿದೆ. ಒಂದು ಸಿನಿಮಾ ಹಿಟ್ ಆದ್ರೆ ಮುಗಿತು. ಆ ಚಿತ್ರದ ಸಣ್ಣ ಸಣ್ಣ ವಿಷಯಗಳು ಫುಲ ಹೈಪ್ ತೆಗೆದುಕೊಂಡು ಬಿಡುತ್ತವೆ. ಅದರಲ್ಲೂ ಹೀರೋ ಬಗ್ಗೆ ಇರೋ ಕುತೂಹ ಡಬಲ್ ಆಗಿರುತ್ತದೆ.


ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಹಿಟ್​ ಆಗಿದೇ ಬಂತು ನೋಡಿ, ಚಿತ್ರದ ಎಲ್ಲ ವಿಷಯಗಳೂ ಭಾರಿ ಪೀಕ್ ಅಲ್ಲಿಯೆ ಇವೆ. ಕಾಂತಾರ ಸಿನಿಮಾದ ಎಲ್ಲ ಭಾಷೆಯಲ್ಲೂ ಓಡ್ತಿರೋದ್ರಿಂದ, ಸದ್ಯಕ್ಕೆ ಇದರ ಹೈಪ್ ಕಡಿಮೆ ಆಗೋವು ಯಾವುದೆ ಲಕ್ಷಣಗಳೂ ಕಾಣುತ್ತಿಲ್ಲ.


ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಕನ್ನಡದಲ್ಲಿ ಹಿಟ್ ಆದ ಕೂಡಲೇ, ಪಾರ್ಟ್-2 ಯಾವಾಗ ಅನ್ನೋ ಪ್ರಶ್ನೆಗಳು ಕೂಡ ಕೇಳಿ ಬಂದವು. ಆಗಲೇ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಅದು ಕೂಡ ದೈವದ ಇಚ್ಛೆ ಅಂತಲು ಹೇಳಿದ್ದರು.


Kannada Director Jayatheertha Shared Bell Bottom-2 Film Some Latest updates
ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ?


ಕಾಂತಾರ ಸಿನಿಮಾ ಮುಂಚೆ ಬಂದ ಹರಿ ಕಥೆಯಲ್ಲ ಗಿರಿ ಕಥೆ ಸಿನಿಮಾ ಅಷ್ಟೇನೂ ಜನರಿಗೆ ರೀಚ್ ಆಗಲಿಲ್ಲ. ಜನರಿಗೂ ಅಷ್ಟೇನೂ ಚಿತ್ರ ಇಷ್ಟವಾಗಲಿಲ್ಲ ಅನಿಸುತ್ತದೆ. ಆದರೆ ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಂ ಸಿನಿಮಾ ಸೂಪರ ಹಿಟ್ ಆಗಿರೋದು ಇತಿಹಾಸ.


ಬೆಲ್ ಬಾಟಂ-2 ಚಿತ್ರದ ಕೆಲಸ ಯಾವ ಹಂತಕ್ಕಿದೆ?
ಬೆಲ್ ಬಾಟಂ ಚಿತ್ರ ಸಖತ್ ಹಿಟ್ ಆಗಿತ್ತು. ಕನ್ನಡದ ಮಟ್ಟಿಗೆ ಈ ಸಿನಿಮಾ ಅದ್ಭುತ ಕಥೆಯನ್ನೆ ಹೊಂದಿತ್ತು. ಇದೇ ಕಥೆ ಬೇರೆ ಭಾಷೆಯಲ್ಲೂ ರಿಮೇಕ್ ಆಗಿರೋದು ಕನ್ನಡದ ಹೆಮ್ಮೆಯ ವಿಷಯವೇ ಸರಿ. ಆದರೆ ಬೆಲ್ ಬಾಟಂ-2 ಸಿನಿಮಾ ಯಾವಾಗ ಬರುತ್ತೆ?


ಬೆಲ್​ ಬಾಟಂ-2 ಎಲ್ಲ ರೆಡಿ ಇದೆ ಶುರು ಆಗ್ಬೇಕಷ್ಟೆ
ಈ ಒಂದು ಪ್ರಶ್ನೆಗೆ ಚಿತ್ರದ ನಿರ್ದೇಶಕ ಜಯತೀರ್ಥ ನ್ಯೂಸ್ 18 ಕನ್ನಡ ಡಿಜಿಟಲ್ ಗೆ ಒಂದಷ್ಟು ಅಧಿಕೃತ ಮಾಹಿತಿಯನ್ನ ಕೊಟ್ಟಿದ್ದಾರೆ. ತಮ್ಮ ಬೆಲ್ ಬಾಟಂ-2 ಸಿನಿಮಾದ ಸ್ಕ್ರಿಪ್ಟ್ ಎಲ್ಲ ಈಗಾಗಲೇ ರೆಡಿ ಇದೆ. ಇನ್ನೇನು ಶೂಟಿಂಗ್ ಹೋಗಬೇಕಷ್ಟೇ ಅಂತಲೇ ಹೇಳಿಕೊಂಡಿದ್ದಾರೆ.


ಇದನ್ನು ಓದಿ: Rashmika Mandanna: ರಶ್ಮಿಕಾ ಮಂದಣ್ಣ ನನ್ನ ಕ್ರಶ್​ ಎಂದ್ರು ಟಾಲಿವುಡ್​ ಸೂಪರ್​ ಸ್ಟಾರ್​ ಬಾಲಯ್ಯ


ಬೆಲ್ ಬಾಟಂ-2 ಸಿನಿಮಾ ಯಾವಾಗ ಶುರು?
ಹೌದು, ಬೆಲ್ ಬಾಟಂ-2 ಸಿನಿಮಾ ಬಹುತೇಕ ಎಲ್ಲ ರೆಡಿ ಇದೆ. ಸ್ಕ್ರಿಪ್ಟ್ ಆಗಿದೆ. ಕಳೆದ ವರ್ಷವೇ ಚಿತ್ರ ಶುರು ಆಗಬೇಕಿತ್ತು. ಕಾಂತಾರ ಸಿನಿಮಾದ ಕೆಲಸದಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಾದರು. ಆ ಗ್ಯಾಪ್​ ನಲ್ಲಿ ನಾನು ಕೈವ್ ಚಿತ್ರದ ಶುರು ಮಾಡಿದೆ.
ಕಾಂತಾರ ಚಿತ್ರದಿಂದ ರಿಷಬ್ ಶೆಟ್ಟಿ ಪ್ರೀ ಆಗಬೇಕು. ಕೈವ ಚಿತ್ರಗಳ ಕೆಲಸವನ್ನ ನಾನು ಮುಗಿಸಬೇಕು. ಹರಿಪ್ರಿಯಾ ಸೇರಿದಂತೆ ಈ ಹಿಂದೆ ಇದ್ದ ಪಾತ್ರಗಳೇ ಪಾರ್ಟ್​-2 ದಲ್ಲೂ ಮುಂದುವರೆಯುತ್ತವೆ.


ಬೆಲ್ ಬಾಟಂ-2 ದಲ್ಲಿ ಹೊಸ ಪಾತ್ರಗಳ ಸೇರ್ಪಡೆ
ಬೆಲ್ ಬಾಟಂ-2 ಸಿನಿಮಾದಲ್ಲಿ ಒಂದಷ್ಟು ಹೊಸ ಪಾತ್ರಗಳು ಸೇರ್ಪಡೆಯಾಗುತ್ತವೆ. ಇನ್ನೇನೂ ಸಿನಿಮಾ ಕೂಡ ಶುರು ಮಾಡಬೇಕಿದೆ ಎಂದು ಡೈರೆಕ್ಟರ್ ಜಯತೀರ್ಥ ಹೇಳಿದ್ದಾರೆ


ಇದನ್ನೂ ಓದಿ: Kangana Ranaut: ಬಾಲಿವುಡ್ ನಟಿ ಕಂಗನಾ ತೊಟ್ಟ ಈ ಸೀರೆ ಬೆಲೆ ಎಷ್ಟು? ನೀವು ಕೂಡ ಖರೀದಿಸಬಹುದು!


ಬೆಲ್ ಬಾಟ್-2 ಸಿನಿಮಾದ ಬಗ್ಗೆನೂ ಭಾರೀ ನಿರೀಕ್ಷೆ ಇದೆ. ಕಾಂತಾರ ಸಿನಿಮಾದ ಮುಂಚೇನೆ ಈ ಚಿತ್ರ ಸೂಪರ್ ಹಿಟ್ ಆಗಿದೆ. ಈಗ ಕಾಂತಾರ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ.


ಅಲ್ಲಿಗೆ ಕಾಂತಾರ-2 ಮತ್ತು ಬೆಲ್ ಬಾಟಂ-2 ಎರಡೂ ಸಿನಿಮಾ ಕುರಿತು ಈಗಲೇ ಭಾರೀ ಕುತೂಹಲ ಹುಟ್ಟಿಕೊಂಡಿದೆ. ಯಾವುದಕ್ಕೂ ವೇಟ್ ಮಾಡಿ, ಈ ಚಿತ್ರಗಳ ಅಪ್​ ಡೇ ಕೊಡ್ತಾಯಿರ್ತಿವಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು