• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Hemanth Rao: ಅಪ್ಪು-ಯಶ್ ಮೆಚ್ಚಿದ ಕಥೆಗೆ ರಕ್ಷಿತ್ ಶೆಟ್ಟಿ ನಾಯಕ; ಹೊರಬಿತ್ತು ರೋಚಕ ಸ್ಟೋರಿ!

Hemanth Rao: ಅಪ್ಪು-ಯಶ್ ಮೆಚ್ಚಿದ ಕಥೆಗೆ ರಕ್ಷಿತ್ ಶೆಟ್ಟಿ ನಾಯಕ; ಹೊರಬಿತ್ತು ರೋಚಕ ಸ್ಟೋರಿ!

ಗೋಧಿ ಬಣ್ಣ ಚಿತ್ರಕ್ಕೂ ಮುಂಚೆ ರೆಡಿ ಆದ ಕಥೆ!

ಗೋಧಿ ಬಣ್ಣ ಚಿತ್ರಕ್ಕೂ ಮುಂಚೆ ರೆಡಿ ಆದ ಕಥೆ!

ಅಪ್ಪು ಆದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಅವರಿಗೂ ಹೇಮಂತ್​ ರಾವ್ ಈ ಕಥೆಯನ್ನ ಹೇಳಿದ್ದರು. ಆದರೆ ಅದು ಗೂಗ್ಲಿ ಸಿನಿಮಾ ಬರುವ ಮೊದಲು ಅನ್ನುವುದು ಕೂಡ ಅಷ್ಟೇ ಸತ್ಯವಾದ ಮಾತಾಗಿದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಒಂದು ಒಳ್ಳೆ ಕಥೆಯ ಎಳೆ ಹೊಳೆದಿದೆ. ಅದನ್ನ ಬರೆದು ಅದ್ಭುತ ಸಿನಿಮಾ ಮಾಡುತ್ತೇನೆ. ಹಾಗಂತ ಕಥೆ (Kannada Movie Director) ಮಾಡಿಕೊಂಡು ಕುಳಿತ ನಿರ್ದೇಶಕನಿಗೆ, ಕನಸು ಕಂಡಷ್ಟು ಸುಲಭವಾಗಿ ಸಿನಿಮಾ ಮಾಡಲು ಸಾಧ್ಯ ಆಗೋದಿಲ್ಲ. ಕಂಡ ಕನಸನ್ನ ಕಥೆ ಮಾಡಿಕೊಂಡು ನಿರ್ಮಾಪಕರನ್ನ (Kannada Producer) ಹುಡುಕುವ ಅನಿವಾರ್ಯತೆ ಇದ್ದೇ ಇರುತ್ತದೆ. ಈ ಮಧ್ಯ ಕಥೆ ಬರೆಯುವಾಗ ಅಂದು ಕಂಡ ನಾಯಕನಿಗೂ ಕಥೆ ಹೇಳಿ ಆಗುತ್ತದೆ. ಅದು ಸಾಧ್ಯ (Rakshit Sheety Movie) ಆಗೋದು ಡೌಟು ಅನಿಸೋಕೆ ಶುರು ಆದ್ಮೇಲೆ ಮತ್ತೊಬ್ಬ ನಾಯಕನಿಗೆ ಕಥೆ ಹೇಳೋಕೆ ಹೋಗೋದು ಇದ್ದೇ ಇರುತ್ತದೆ. ಇಂತಹ ಸ್ಥಿತಿ ಪ್ರತಿ (Film Industries) ಇಂಡಸ್ಟ್ರೀಯಲ್ಲೂ ಇರುತ್ತದೆ.


ಕನ್ನಡ ಸ್ಟಾರ್​ ನಟರೂ ಕೇಳಿದ್ದರು ಹೇಮಂತ್ ಹೇಳಿದ ಕಥೆ
ಕನ್ನಡ ಸಿನಿಮಾರಂಗದಲ್ಲೂ ಇದು ಹೊರತಾಗಿಲ್ಲ ಬಿಡಿ. ಗೋಧಿ ಬಣ್ಣ ಸಾಧಾರಣ ಮೈಕಟ್ಟುದಂತಹ ಯಶಸ್ವಿ ಚಿತ್ರಕೊಟ್ಟ ಡೈರೆಕ್ಟರ್ ಹೇಮಂತ್ ರಾವ್ ಕೂಡ ಅದ್ಭುತ ಕಥೆ ಮಾಡಿಕೊಂಡು ಓಡಾಡಿದ್ದಾರೆ.


Kannada Director Hemanth Rao Reveal Sapta Sagaradaache Ello Movie Secrets
ದೇಹದ ತೂಕ ಹೆಚ್ಚಿಸಿಕೊಂಡು ಅಭಿನಯಿಸಿದ ರಕ್ಷಿತ್


ಆದರೆ ಅದು ಅಷ್ಟು ಬೇಗ ಸಾಧ್ಯವಾಗಲೇ ಇಲ್ಲ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಗೆದ್ದ ಮೇಲೆ ಎಲ್ಲವೂ ಬದಲಾಗಿದೆ. ರಕ್ಷಿತ್ ಶೆಟ್ಟಿ ಆ ಚಿತ್ರದ ನಾಯಕರಾಗಿರೋದು ಈಗ ಹಳೆ ಸುದ್ದಿನೇ ಆಗಿದೆ.
ಆ ದಿನಗಳನ್ನ ನೆನಪಿಸಿಕೊಂಡ ಡೈರೆಕ್ಟರ್ ಹೇಮಂತ್​
ಆದರೆ ಈ ಚಿತ್ರದ ಹಿಂದೆ ಒಂದು ಕಥೆ ಇದೆ ಅನ್ನೋದು ಈಗ ಹೆಚ್ಚು ವೈರಲ್ ಆಗುತ್ತಿದೆ. ಡೈರೆಕ್ಟರ್ ಹೇಮಂತ್ ರಾವ್ ಕೂಡ ಈ ಒಂದು ವಿಷಯವನ್ನ ಖಾಸಗಿ ಚಾನಲ್​ವೊಂದರಲ್ಲಿ ಹೇಳಿಕೊಂಡಿದ್ದಾರೆ.


ಅಂದ್ಹಾಗೆ ಆ ಚಿತ್ರದ ಹೆಸರು ಸಪ್ತಸಾಗರದಾಚೆ ಎಲ್ಲೋ ಅನ್ನೋದು ಈಗ ಎಲ್ಲರಿಗೂ ಗೊತ್ತಾಗಿದೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಕಥೆಯನ್ನ ಡೈರೆಕ್ಟರ್ ಹೇಮಂತ್ ರಾವ್ ತುಂಬಾ ಹಿಂದೇನೆ ಬರೆದಿದ್ದಾರೆ.


ಗೋಧಿ ಬಣ್ಣ ಚಿತ್ರಕ್ಕೂ ಮುಂಚೆ ರೆಡಿ ಆದ ಕಥೆ!
ಗೋಧಿ ಬಣ್ಣ ಸಾದಾರಣ ಮೈಕಟ್ಟು ಚಿತ್ರ ಆಗೋ ಮುಂಚೇನೆ ಈ ಕಥೆಯನ್ನ ಡೈರೆಕ್ಟರ್ ಹೇಮಂತ್​ ರಾವ್ ಮಾಡಿಕೊಂಡಿದ್ದರು. ಅದೇ ಕಥೆ ಈ ಸಪ್ತಸಾಗರದಾಚೆ ಎಲ್ಲೋ ರೂಪದಲ್ಲಿ ಬಹುತೇಕ ರೆಡಿ ಆಗಿದೆ.


ಆದರೆ ಹೇಮಂತ್ ರಾವ್ ಈ ಒಂದು ಕಥೆಯನ್ನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೂ ಹೇಳಿದ್ದರು. ಅದನ್ನ ಕೇಳಿದ್ದ ಅಪ್ಪು ಕೂಡ ಕಥೆಯನ್ನ ಮೆಚ್ಚಿಕೊಂಡಿದ್ದರು.


ಕನ್ನಡದ ಸ್ಟಾರ್ ನಟರಿಗೂ ಕಥೆ ಹೇಳಿದ್ದ ಹೇಮಂತ್ ರಾವ್!
ಅಪ್ಪು ಆದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಅವರಿಗೂ ಹೇಮಂತ್​ ರಾವ್ ಈ ಕಥೆಯನ್ನ ಹೇಳಿದ್ದರು. ಆದರೆ ಅದು ಗೂಗ್ಲಿ ಸಿನಿಮಾ ಬರುವ ಮೊದಲು ಅನ್ನುವುದು ಕೂಡ ಅಷ್ಟೇ ಸತ್ಯವಾದ ಮಾತಾಗಿದೆ.


Kannada Director Hemanth Rao Reveal Sapta Sagaradaache Ello Movie Secrets
ಕನ್ನಡದ ಸ್ಟಾರ್ ನಟರಿಗೂ ಕಥೆ ಹೇಳಿದ್ದ ಹೇಮಂತ್ ರಾವ್!


ಕೊನೆಗೆ ಈ ಕಥೆ ಕೆಳಿದ ನಟ ರಕ್ಷಿತ್ ಶೆಟ್ಟಿ ಸಿನಿಮಾ ಮಾಡೋಕೆ ಒಪ್ಪಿಕೊಂಡರು. 2022 ರಲ್ಲಿ ಈ ಚಿತ್ರ ಶುರು ಆಗಿದೆ. ಈಗ ಚಿತ್ರದ ಬಹುತೇಕ ಚಿತ್ರೀಕರಣ ಕೂಡ ಪೂರ್ಣ ಆಗಿದೆ.


ದೇಹದ ತೂಕ ಹೆಚ್ಚಿಸಿಕೊಂಡು ಅಭಿನಯಿಸಿದ ರಕ್ಷಿತ್
ರಕ್ಷಿತ್ ಶೆಟ್ಟಿ ಜೊತೆಗೆ ನವ ನಟಿ ರುಕ್ಮಿಣಿ ವಸಂತ್ ಜೋಡಿ ಆಗಿದ್ದಾರೆ. 2010 ರಿಂದ 2022 ರ ನಡುವೆ ನಡೆಯೋ ಕಥೆ ಇದಾಗಿದ್ದು, ಈಗ ಹೆಚ್ಚು ಗಮನ ಸೆಳೆಯುತ್ತಿದೆ. ರಕ್ಷಿತ್ ಶೆಟ್ಟಿ ಅವರಿಗೂ ಈ ಚಿತ್ರದ ಕಥೆ ತುಂಬಾ ಇಷ್ಟ ಆಗಿದೆ.


ಇದನ್ನೂ ಓದಿ:  Martin Movie: ಆ್ಯಕ್ಷನ್ ಪ್ರಿನ್ಸ್ ಮಾರ್ಟಿನ್ ಬಿಗ್ ಅಪ್ಡೇಟ್! ಟೀಸರ್ ರಿಲೀಸ್ ಡೇಟ್ ಫಿಕ್ಸ


ಈ ಕಾರಣಕ್ಕೇನೆ ರಕ್ಷಿತ್ ಶೆಟ್ಟಿ ದೇಹದ ತೂಕ ಹೆಚ್ಚಿಸಿಕೊಂಡು ಕೂಡ ಅಭಿನಯಿಸಿದ್ದಾರೆ. ನಾಯಕ ರಕ್ಷಿತ್ ಶೆಟ್ಟಿ ಅಷ್ಟೇ ಅಲ್ಲ, ನಾಯಕಿ ರುಕ್ಮಿಣಿ ವಸಂತ್ ಕೂಡ ಎರಡು ಶೇಡ್​​ನಲ್ಲಿ ಅಭಿನಯಿಸಿರೋದು ವಿಶೇಷ ಅಂತಲೇ ಹೇಳಬಹುದು. ಈಗಾಗಲೇ ಈ ಚಿತ್ರದ ಒಂದು ಟೀಸರ್ ಕೂಡ ರಿಲೀಸ್ ಆಗಿ ಎಲ್ಲರ ಗಮನ ಕೂಡ ಸೆಳೆಯುತ್ತಿದೆ.

First published: