James ಚಿತ್ರದಲ್ಲಿ ಅಪ್ಪು ಪಾತ್ರಕ್ಕೆ ಶಿವಣ್ಣ ಧ್ವನಿ? ಪುನೀತ್ ಕೊನೆಯ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ನಿರ್ದೇಶಕ!

ಅಪ್ಪು ಅವರ ಕೊನೆಯ ಸಿನಿಮಾ ‘ಜೇಮ್ಸ್‌’ ಮೇಲೆ ಎಲ್ಲರ ಗಮನ ನೆಟ್ಟಿದೆ. ಇದೀಗ ಈ ಸಿನಿಮಾದಿಂದ ಮತ್ತೊಂದು ಅಪ್​ಡೇಟ್(Update)​ ಸಿಕ್ಕಿದ್ದು, ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಹಾಗಿದ್ರೆ ಏನದು ಅಪ್​ಡೇಟ್​ ಅಂತೀರಾ? ಮುಂದೆ ನೋಡಿ..

ಚೇತನ್​ ಕುಮಾರ್, ಪುನೀತ್​ ರಾಜ್​ಕುಮಾರ್​

ಚೇತನ್​ ಕುಮಾರ್, ಪುನೀತ್​ ರಾಜ್​ಕುಮಾರ್​

  • Share this:
ಕನ್ನಡದ ಕಣ್ಮಣಿ ನಟ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ (Power Star Puneeth Rajkumar) ನಮ್ಮನ್ನಗಲಿ ಎರೆಡು ತಿಂಗಳಾಗಿದೆ. ಅವರ ನೆನಪು ಕನ್ನಡಿಗರಲ್ಲಿ ಅಚ್ಚಳಿಯದೆ ಉಳಿದಿದೆ. ಅವರನ್ನ ನೆನೆಯದ ದಿನಗಳೇ ಇಲ್ಲ ಎನ್ನುವಂತಾಗಿದೆ. ಅವರನ್ನ ಮರೆಯುವುದು ಅಸಾಧ್ಯ.  ಜನಮಾನಸದಲ್ಲಿ ಅಪ್ಪು (Appu)  ಎಂದಿಗೂ ಅಮರ ಎಂದರೆ ತಪ್ಪಲ್ಲ. ಇಂದಿಗೂ ಅವರು ನಮ್ಮೊಂದಿಗೆ ಇಲ್ಲ ಎನ್ನುವುದನ್ನೇ ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು(Appu) ಅವರು ಈಗ ದೇವರ(God) ಸಮಾನ. ಎಲ್ಲರೂ ಅವರನ್ನು ದೇವರ ರೀತಿ ನೋಡುತ್ತಿದ್ದಾರೆ. ಅಭಿಮಾನಿಗಳು ಇರುವವರೆಗೂ ಅಪ್ಪು ಜೀವಂತ. ಅಪ್ಪು ಅವರ ಕಡೆಯ ಸಿನಿಮಾ ‘ಜೇಮ್ಸ್​’(James) ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಚೇತನ್​ ಭರವಸೆ ನೀಡಿದ್ದರು. ಇದರ ಜೊತೆಗೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರ ‘ಗಂಧದ ಗುಡಿ’(Gandhada Gudi) ಕೂಡ ಚಿತ್ರಮಂದಿರದಲ್ಲೇ ತೆರೆ ಕಾಣಲಿದೆ. ಹೀಗಾಗಿ ಅಪ್ಪು ಅವರನ್ನು ಮತ್ತೆ ತೆರೆ ಮೇಲೆ ಕಣ್ತುಂಬಿಕೊಳ್ಳಬಹುದು ಎಂದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗ ಅವರ ಕೊನೆಯ ಸಿನಿಮಾ ‘ಜೇಮ್ಸ್‌’ ಮೇಲೆ ಎಲ್ಲರ ಗಮನ ನೆಟ್ಟಿದೆ. ಇದೀಗ ಈ ಸಿನಿಮಾದಿಂದ ಮತ್ತೊಂದು ಅಪ್​ಡೇಟ್(Update)​ ಸಿಕ್ಕಿದ್ದು, ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಹಾಗಿದ್ರೆ ಏನದು ಅಪ್​ಡೇಟ್​ ಅಂತೀರಾ? ಮುಂದೆ ನೋಡಿ..


ಸಿನಿಮಾದ ಫೂಟೇಜ್​ ನೋಡಿ ಕಣ್ಣೀರಿಟ್ಟ ನಿರ್ದೇಶಕ!

ಕಳೆದ ಒಂದೂವರೆ ವರ್ಷದಿಂದ ಪವರ್‌ ಸ್ಟಾರ್‌ ನಟನೆಯ ‘ಜೇಮ್ಸ್‌’ ಸಿನಿಮಾದ ಚಿತ್ರೀಕರಣ ನಡೆದಿತ್ತು. ಆ ಸಮಯದಲ್ಲಿ ಅಪ್ಪು ಜೊತೆಗೆ ಕಾಲ ಕಳೆದಿದ್ದ ನಿರ್ದೇಶಕ ಚೇತನ್‌ ಕುಮಾರ್‌ಗೆ ಅವರ ನೆನಪುಗಳು ಇನ್ನೂ ಕಾಡುತ್ತಿವೆಯಂತೆ. ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಬಹಳ ದಿನಗಳಿಂದ ನಡೆಯುತ್ತಿದೆ. ಇದರ ಫುಟೇಜ್‌ನಲ್ಲಿ ಪುನೀತ್‌ರನ್ನು ನೋಡುತ್ತಿದ್ದರೆ ಕಣ್ಣು ತಾನಾಗೇ ತುಂಬಿಕೊಂಡಿತ್ತಂತೆ. ಈ ಬಗ್ಗೆ ನಿರ್ದೇಶಕ ಚೇತನ್​ ಕುಮಾರ್​ ಹೇಳಿಕೊಂಡಿದ್ದಾರೆ.

ಇದನ್ನು ಓದಿ: ಹ್ಯಾಪಿ ಬರ್ತ್​ಡೇ ಅದಿತಿ.. ಶಾನೆ ಟಾಪಾಗವಳೆ.. ನಮ್ಮ ಕನ್ನಡದ ಹುಡುಗಿ!

ಡಬ್ಬಿಂಗ್​ ಮಾಡಿಕೊಡ್ತೇನೆ ಎಂದ್ದಾರಂತೆ ಶಿವಣ್ಣ!

‘ಜೇಮ್ಸ್‌ ಸಿನಿಮಾದಲ್ಲಿ ಅಪ್ಪು ಅವರಿಗೆ ಯಾರ ಧ್ವನಿ ನೀಡಬಹುದು ಎಂಬ ಚರ್ಚೆ ಹೊರಗಡೆ ನಡೆಯುತ್ತಿದೆ. ಒಂದಷ್ಟು ಮಂದಿ ಅವರದ್ದೇ ಧ್ವನಿಯನ್ನು ಉಳಿಸಿಕೊಳ್ಳುತ್ತಾರೆ ಎಂದಿದ್ದಾರೆ. ಆದರೆ ನಾವು ಚಿತ್ರೀಕರಣದ ಸಮಯದಲ್ಲಿ ರೆಕಾರ್ಡ್‌ ಆಗಿರುವ ಅಪ್ಪು ಧ್ವನಿಯನ್ನು ಉಳಿಸಿಕೊಳ್ಳಬೇಕು ಎಂದು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಸುತ್ತಮುತ್ತಲಿನ ಶಬ್ದಗಳನ್ನು ಕಂಟ್ರೋಲ್​ ಮಾಡಿ, ಅಪ್ಪು ಅವರ ಧ್ವನಿಯನ್ನೇ ಉಳಿಸಿಕೊಳ್ಳಲು ಆಗುತ್ತಾ ಎಂಬುದನ್ನು ನೋಡುತ್ತಿದ್ದೇವೆ’ ಎಂದು ಚೇತನ್​ ಹೇಳಿದ್ದಾರೆ.

ಇದನ್ನು ಓದಿ: ಅಪ್ಪು ದೇವರು ಅನ್ನೋಕೆ ಈ ಫೋಟೋಗಳೇ ಸಾಕ್ಷಿ.. ನೋಡಿದವರ ಮನಸ್ಸು ಭಾರವಾಗುತ್ತೆ ಕಣ್ರಿ..!

‘ಒಂದು ವೇಳೆ ಇದು ಸರಿಯಾಗದೆ ಹೋದರೆ ಶಿವಣ್ಣ ಡಬ್ಬಿಂಗ್‌ ಮಾಡಿಕೊಡುತ್ತೇನೆ ಎಂದಿದ್ದಾರೆ. ಇವೆಲ್ಲ ನಮಗೆ ಗೊತ್ತಾಗಲು ಇನ್ನೂ ಹದಿನೈದು ದಿನಗಳಷ್ಟು ಸಮಯ ಹಿಡಿಯುತ್ತದೆ. ಟೆಕ್ನಿಕಲಿ ಒಂದಷ್ಟು ಕೆಲಸಗಳಿವೆ. ಈ ಸಿನಿಮಾವನ್ನು ಎಷ್ಟು ಚೆನ್ನಾಗಿ ತೆರೆಯ ಮೇಲೆ ತರಬೇಕೋ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದಿದ್ದಾರೆ ನಿರ್ದೇಶಕರು.

ಜನವರಿ 26ಕ್ಕೆ ರಿಲೀಸ್​ ಆಗ್ತಿದೆ ಹೊಸ ಪೋಸ್ಟರ್​!

ಜೇಮ್ಸ್‌ ಸಿನಿಮಾದ ಹೊಸ ಪೋಸ್ಟರನ್ನು ಜನವರಿ 26ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಮಾರ್ಚ್ 17ಕ್ಕೆ ಪುನೀತ್‌ ಹುಟ್ಟುಹಬ್ಬವಿದ್ದು, ಅಂದು ಈ ಸಿನಿಮಾ ಬಿಡುಗಡೆ ಮಾಡುವ ಯೋಚನೆಯೂ ಚಿತ್ರತಂಡಕ್ಕಿದೆ. 100 ಸೀಟಿಂಗ್‌ ಪದ್ಧತಿ ಇದ್ದರೆ ಸಿನಿಮಾ ಮಾರ್ಚ್ 17ರಂದೇ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಚೇತನ್​ ಹೇಳಿದ್ದಾರೆ.
Published by:Vasudeva M
First published: