ಬಣ್ಣದ ಲೋಕದಲ್ಲಿ ಮಕ್ಕಳ ಸಿನಿಮಾ ಬರೋದು (Chinnara Chandra Movie Updates) ಕಡಿಮೇನೆ. ಥಿಯೇಟರ್‌ಗೆ ಬಂದು ಇಂತಹ ಸಿನಿಮಾ ನೋಡೊ ಜನ ಕೂಡ ಇಲ್ಲ ಅನ್ಬಹುದೇನೋ. ಆದರೂ ಆಗೊಮ್ಮೆ (Children's Movie Latest Updates) ಈಗೊಮ್ಮೆ ಮಕ್ಕಳ ಸಿನಿಮಾಗಳು ತಯಾರಾಗುತ್ತವೆ. ಕನ್ನಡದ ಸಿನಿಮಾರಂಗ ಕೂಡ ಇದಕ್ಕೆ ಹೊರತಾಗಿಲ್ಲ. ಇದರ ಮಧ್ಯೆ ಕನ್ನಡದ ಹೆಸರಾಂತ ಸಾಹಿತಿ ಮತ್ತು (Children's Movie Release Soon) ಸಿನಿಮಾ ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪ ಅವರು ಈಗೊಂದು ಸಿನಿಮಾ ಮಾಡಿದ್ದಾರೆ. ಇದು ಮಕ್ಕಳ ಸಿನಿಮಾನೇ ಆಗಿದೆ. ಇದರಲ್ಲಿ ಸಾಕಷ್ಟು ವಿಶೇಷತೆಗಳಿವೆ. ಅಡಗೂಲಜ್ಜಿಯ ಕಥೆನೂ ಇದೆ. ಇದರ ಸುತ್ತ ಒಂದಷ್ಟು (Baraguru Ramachandrappa Movie) ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಬರಗೂರು ರಾಮಚಂದ್ರಪ್ಪ ಅವರು ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ತಮ್ಮ ಸಾಹಿತ್ಯ ಕೃಷಿಯಲ್ಲೂ ಮಕ್ಕಳ ಕಥೆ ಬರೆದಿರೋದು ಇದೆ. ಧರಣಿ ಮಂಡಲ ಮಧ್ಯೆದೊಳಗೆ ಹಾಡಿನ ವಿಶೇಷ ಕಾರ್ಟೂನ್ ವಿಡಿಯೋಕ್ಕೂ ಇವರ ನಿರೂಪಣೆ ಕೂಡ ಇದೆ.
ಸದ್ದಿಲ್ಲದೇ ಮಕ್ಕಳ ಚಿತ್ರ ಮಾಡಿ ಮುಗಿಸಿದ ಬರಗೂರು ಮೇಷ್ಟ್ರು!
ಹಾಗೇನೆ ಮಕ್ಕಳ ಸಿನಿಮಾ ಬೇಕು ಅಂತಲೇ ಹೇಳುವ ಬರಗೂರು ಮೇಷ್ಟ್ರು, ಇದೀಗ ಒಂದು ಸಿನಿಮಾ ಮಾಡಿದ್ದಾರೆ. ಸದ್ದಿಲ್ಲದೇ ಶುರು ಆಗಿರೋ ಈ ಸಿನಿಮಾ ರಿಲೀಸ್ ಹಂತಕ್ಕೂ ಬಂದು ತಲುಪಿದೆ. ಇದರ ಬಗ್ಗೆ ಈಗ ಅಧಿಕೃತವಾಗಿಯೇ ಬರಗೂರು ಮೇಷ್ಟ್ರು ಮಾಹಿತಿ ಕೊಟ್ಟಿದ್ದಾರೆ.
ಬರಗೂರು ಮೇಷ್ಟ್ರು ಈ ಹಿಂದೆ ಅಡಗೂಲಜ್ಜಿ ಅನ್ನುವ ಕಾದಂಬರಿ ಬರೆದಿದ್ದರು. ಇದೇ ಕಾದಂಬರಿ ಆಧರಿಸಿರೋ ಸಿನಿಮಾವೊಂದನ್ನ ಮಾಡಿದ್ದಾರೆ. ಹಾಗೇ ತಯಾರದ ಈ ಚಿತ್ರಕ್ಕೆ ಚಿಣ್ಣರ ಚಂದ್ರ ಅಂತಲೇ ಹೆಸರಿಟ್ಟಿದ್ದಾರೆ.
ಬರಗೂರು ಮೇಷ್ಟ್ರ ಮೊಮ್ಮಗ ಆಕಾಂಕ್ಷ್ ಬರಗೂರ್ ನಾಯಕ
ಇನ್ನೂ ಒಂದು ವಿಶೇಷವೇನಂದ್ರೆ, ಮಕ್ಕಳ ಈ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪನವರ ಮೊಮ್ಮಗ ಆಕಾಂಕ್ಷ್ ಬರಗೂರ್ ನಾಯಕನಾಗಿ ಕಾಣಿಸಿಕೊಂಡಿದ್ದಾನೆ. ಈ ಹಿಂದೆ ಬಯಲಾಟದ ಭೀಮಣ್ಣ ಹಾಗೂ ತಾಯಿ ಕಸ್ತೂರ್ ಗಾಂಧಿ ಚಿತ್ರದಲ್ಲಿ ಆಕಾಂಕ್ಷ್ ಬರಗೂರ್ ಅಭಿನಯಿಸಿದ್ದಾನೆ.
ಮಕ್ಕಳ ಈ ಚಿತ್ರದಲ್ಲಿ ಅಭಿನವ್ ನಾಗ್, ನಿಕ್ಷೇಪ್, ಈಶಾನ್ ಪಾಟೀಲ್ ಹೆಸರಿನ ಮಕ್ಕಳು ಕೂಡ ಅಭಿನಯಿಸಿದ್ದಾರೆ. ಚಿಣ್ಣರ ಚಂದ್ರ ಮಕ್ಕಳ ಒಂದು ವಿಶೇಷ ಚಿತ್ರ ಆಗಿದೆ. ಈ ಚಿತ್ರದಲ್ಲಿ ಉತ್ತಮ ಶಿಕ್ಷಣದ ವಿಷಯವನ್ನ ಪ್ರಸ್ತಾಪಿಸಲಾಗಿದೆ.
ಮಕ್ಕಳ ಚಿತ್ರದಲ್ಲಿ ಹಿರಿಯ ಕಲಾವಿದರ ಅಭಿನಯ
ಇದರ ಜೊತೆಗೆ ಕ್ರೀಡೆ ಮತ್ತು ಸಮಾನತೆಯ ವಿಚಾರವನ್ನ ಬರಗೂರು ಮೇಷ್ಟ್ರು ಇಲ್ಲಿ ಹೇಳಿಸಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಸುಂದರ್‌ರಾಜ್, ರಾಧಾ ರಾಮಚಂದ್ರ, ರೇಖಾ ಸೇರಿದಂತೆ ಇನ್ನೂ ಅನೇಕರು ಅಭಿನಯಿಸಿದ್ದಾರೆ.
ಸಿನಿಮಾ ಕಥೆಗಳನ್ನ ಜಾನಪದ ಕಥೆ ರೂಪ ಹೇಳುವ ಅಡಗೂಲಜ್ಜಿ!
ಚಿಣ್ಣರ ಚಂದ್ರ ಸಿನಿಮಾದಲ್ಲಿ ಅಡಗೂಲಜ್ಜಿ ಪಾತ್ರ ತುಂಬಾ ವಿಶೇಷವಾಗಿಯೇ ಇದೆ. ಜಾನಪದ ಕಥೆಯನ್ನ ಉಳಿಸೋ ಕೆಲಸವನ್ನ ಈ ಒಂದು ಪಾತ್ರ ಇಲ್ಲಿ ಮಾಡುತ್ತದೆ. ಹಾಗೆ ಊರಿಗೆ ಟೂರಿಂಗ್ ಟಾಕೀಸ್ ಬಂದು ಮಕ್ಕಳು ಜಾನಪದ ಕಥೆಗಳನ್ನ ಕೇಳೋದನ್ನ ಬಿಟ್ಟು ಬಿಡ್ತಾರೆ.
ಆದರೆ ಅಜ್ಜಿ ಒಂದು ಐಡಿಯಾ ಮಾಡುತ್ತಾಳೆ. ಸಿನಿಮಾದ ಕಥೆಗಳನ್ನ ಜಾನಪದ ಶೈಲಿಯಲ್ಲಿ ಹೇಳುತ್ತಾಳೆ. ಈ ಮೂಲಕ ಮಕ್ಕಳಲ್ಲಿ ಜಾನಪದ ಕಥೆಗಳ ಶಕ್ತಿ ಮತ್ತು ಪ್ರೀತಿಯನ್ನ ಈ ಅಜ್ಜಿ ಉಳಿಸುತ್ತಾಳೆ ಅನ್ನೋದೇ ಈ ಪಾತ್ರದ ಹಲವು ವಿಶೇಷತೆಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: Actress Shruthi Daughter: ನಟಿ ಶ್ರುತಿ ತಮ್ಮ ಮಗಳಿಗೆ ಗೌರಿ ಅಂತ ಹೆಸರಿಟ್ಟಿದ್ದೇಕೆ? ಇಲ್ಲಿದೆ ನೋಡಿ ಅದರ ಗುಟ್ಟು!
ಮಕ್ಕಳ ಈ ಚಿತ್ರಕ್ಕೆ ಬರಗೂರು ಮೇಷ್ಟ್ರು ಕಥೆ-ಚಿತ್ರಕಥೆ ನಿರ್ದೇಶನ ಮಾಡಿದ್ದಾರೆ. ನಾಗರಾಜ್ ಆದವಾನಿ ಛಾಯಾಗ್ರಹಣ ಮಾಡಿದ್ದಾರೆ. ಗಾಯಕಿ ಶಮಿತಾ ಮಲ್ನಾಡ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಮಕ್ಕಳ ಈ ಚಿತ್ರಕ್ಕೆ ಜಿಗಣಿ ರಾಜಶೇಖರ್ ದುಡ್ಡುಹಾಕಿದ್ದಾರೆ. ಉಳಿದಂತೆ ಚಿತ್ರ ರಿಲೀಸ್‌ಗೂ ಈಗ ರೆಡಿ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ