• Home
  • »
  • News
  • »
  • entertainment
  • »
  • Arvind Kaushik Director: ಬಿಗ್ ಬಾಸ್ ದಿವ್ಯಾ ಉರುಡುಗ ಅರ್ಧಂಬರ್ಧ ಪ್ರೇಮ ಕಥೆ ಬಗ್ಗೆ ಡೈರೆಕ್ಟರ್ ಅರವಿಂದ್ ಕೌಶಿಕ್ ಏನ್ ಹೇಳ್ತಾರೆ?

Arvind Kaushik Director: ಬಿಗ್ ಬಾಸ್ ದಿವ್ಯಾ ಉರುಡುಗ ಅರ್ಧಂಬರ್ಧ ಪ್ರೇಮ ಕಥೆ ಬಗ್ಗೆ ಡೈರೆಕ್ಟರ್ ಅರವಿಂದ್ ಕೌಶಿಕ್ ಏನ್ ಹೇಳ್ತಾರೆ?

ಅರ್ಧಂಬರ್ಧ ಪ್ರೇಮ ಕಥೆ ಚಿತ್ರದ ಡೈರೆಕ್ಟರ್

ಅರ್ಧಂಬರ್ಧ ಪ್ರೇಮ ಕಥೆ ಚಿತ್ರದ ಡೈರೆಕ್ಟರ್

ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಪ್ರೀತಿ-ಪ್ರೇಮದ ಮೇಲೆ ಸಿನಿಮಾ ಮಾಡಿದ್ದಾರೆ. ಹಂಗೇನೆ ನಾನು ಈ ಅರ್ಧಂಬರ್ಧ ಪ್ರೇಮ ಕಥೆಯಲ್ಲಿ ಪ್ರೀತಿ-ಪ್ರೇಮವನ್ನ ಬೇರೆ ರೀತಿಯಲ್ಲಿ ಹೇಳುತ್ತಿದ್ದೇನೆ ಅಂತಲೇ ಹೇಳಿಕೊಂಡಿದ್ದಾರೆ ಡೈರೆಕ್ಟರ್ ಅರವಿಂದ್ ಕೌಶಿಕ್.

  • Share this:

ಕನ್ನಡದ ಡೈರೆಕ್ಟರ್ ಅರವಿಂದ್ ಕೌಶಿಕ್ (Arvind Kaushik) ವಿಶೇಷ ಸಿನಿಮಾಗಳನ್ನೇ ಮಾಡ್ತಾನೇ ಬಂದಿದ್ದಾರೆ. ಇವರ ಸಿನಿಮಾಗಳ ಪ್ರೀತಿ ವಿಶೇಷವಾಗಿಯೆ ಇದೆ. ಇವರ ಆಯ್ದುಕೊಳ್ಳುವ ಸಿನಿಮಾ (Cinema) ವಿಷಯಗಳೂ ಸ್ಪೆಷಲ್ (Special) ಆಗಿಯೇ ಇರುತ್ತವೆ. ಆದರೆ ಎಲ್ಲವೂ ಪ್ರೇಕ್ಷಕರನ್ನ ರೀಚ್ ಆಗುತ್ತವೆ ಅನ್ನೋದು ಡೌಟ್. ಸಿನಿಮಾ ಪ್ರೇಮಿಗಳನ್ನ ಮೆಚ್ಚಿಸೋದು ಅಷ್ಟು ಸುಲಭ ಅಲ್ಲವೇ ಅಲ್ಲ. ಆದರೂ ಅರವಿಂದ್ ಕೌಶಿಕ್ ತಮ್ಮ ಸಿನಿ ಪಯಣ ಮುಂದುವರೆಸಿದ್ದಾರೆ. ಹುಲಿರಾಯ, (Huliraya) ಶಾರ್ದೂಲಾ, ಈಗ ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾ ಮಾಡಿದ್ದಾರೆ. ಇದು ಅಪ್ಪಟ ಕಮರ್ಷಿಲ್ (Commercial Cinema) ಸಿನಿಮಾನೇ ಆಗಿದೆ. ಈ ಹಿಂದಿನ ರೀತಿ ಅಲ್ಲದೇ, ಇಲ್ಲಿ ಜನರಿಗೆ ರೀಚ್ ಆಗೋ ಚಿತ್ರವನ್ನೇ ತೆಗೆದುಕೊಂಡು ಬರ್ತಿದ್ದಾರೆ.


ಅರ್ಧಂಬರ್ಧ ಪ್ರೇಮ ಕಥೆಯೊಂದಿಗೆ ಅರವಿಂದ್ ಕೌಶಿಕ್
ಅರವಿಂದ್ ಕೌಶಿಕ್ ಮತ್ತು ರಕ್ಷಿತ್ ಶೆಟ್ಟಿ ಒಟ್ಟಿಗೆ ಸಿನಿಮಾಡಿದವ್ರು. ಈಗ ಇವರ ಸಿನಿಮಾ ಬೇಡಿಕೆಗಳಲ್ಲಿ ವ್ಯತ್ಯಾಸ ಇದೆ. ಆದರೆ ಅರವಿಂದ್ ಕೌಶಿಕ್ ಸಿನಿಮಾ ಮತ್ತು ಸೀರಿಯಲ್ ಅಂತ ಎರಡರಲ್ಲೂ ಬ್ಯುಸಿ ಆಗಿರುತ್ತಾರೆ.


Kannada Director Arvind Kaushik Talk About his New Film and Reveal Some Secret
ಬಿಗ್ ಬಾಸ್ ದಿವ್ಯಾ ಉರುಡುಗ


ಬಹು ದಿನಗಳ ನಂತರ ಈಗ ಅರ್ಧಂಬರ್ಧ ಪ್ರೇಮ ಕಥೆ ಹೆಸರಿನ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯಾ ಉರುಡುಗ ಇರೋದು ವಿಶೇಷ.


ಅರ್ಧಂಬರ್ಧ ಪ್ರೇಮ ಕಥೆ ಚಿತ್ರದ ನಾಯಕನೂ ಬೈಕರ್?
ಈ ಚಿತ್ರದ ನಾಯಕ ಕೂಡ ಬೈಕರ್. ಹಾಗಾಗಿಯೇ ಬೈಕರ್ ಅರವಿಂದ್ ಈ ಸಿನಿಮಾದ ಹೀರೋ ಅನ್ನೋ ಮಾತುಗಳೂ ಈಗ ಕೇಳಿ ಬರುತ್ತಿವೆ. ಆದರೆ ಇದು ನಿಜವೋ, ಇಲ್ಲವೆ ಸುಳ್ಳೋ ಅನ್ನೋದನ್ನ ಸ್ವತಃ ಅರವಿಂದ್ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Ponniyin Selvan 1: ಚೋಳ ಸಾಮ್ರಾಜ್ಯದ ಕಥೆ ನೋಡಿ ವಾವ್ ಎಂದ ವಿದೇಶಿಗರು! PS1ಗೆ ಭರ್ಜರಿ ರೆಸ್ಪಾನ್ಸ್


ಹುಲಿರಾಯ ಮತ್ತು ಶಾರ್ದೂಲ ದಂತಹ ಸಿನಿಮಾ ಮಾಡಿದ್ದ ಅರವಿಂದ್ ಕೌಶಿಕ್ ಈಗೊಂದು ಪಕ್ಕ ಲವ್ ಸ್ಟೋರಿ ಸಿನಿಮಾ ಮಾಡಿದ್ದಾರೆ. ಇದು ಅಪ್ಪಟ ಲವ್ ಸಿನಿಮಾನೇ ಆಗಿದೆ. ಇದಕ್ಕೆ ಯಾವುದೇ ರಿಯಲಿಸ್ಟಿಕ್ ಟಚ್ ಇಲ್ಲ. ಹಾಗೇನೆ ಇದು ದಿವ್ಯಾ ಹಾಗೂ ಅರವಿಂದ್ ಬಿಗ್ ಬಾಸ್ ಲವ್ ಸ್ಟೋರಿನೂ ಅಲ್ಲ.


ಚಿತ್ರದ ನಾಯಕನ ಬಗ್ಗೆ ಡೈರೆಕ್ಟರ್ ಅರವಿಂದ್ ಹೇಳೋದೇನು?
ಇದು ಬೇರೆನೆ ಇದೆ ಅಂತಲೇ ಡೈರೆಕ್ಟರ್ ಅರವಿಂದ್ ಕೌಶಿಕ್ ಹೇಳುತ್ತಾರೆ. ಇದಲ್ಲದೇ, ತಮ್ಮ ಚಿತ್ರದಲ್ಲಿರೋ ಹೀರೋ ಕೂಡ ಒಬ್ಬ ಬೈಕರ್ ಆಗಿದ್ದಾರೆ. ಹಾಗಾಗಿಯೇ ಬಿಗ್ ಬಾಸ್ ಅರವಿಂದ್ ಕೂಡ ಬೈಕರ್ ಆಗಿದ್ದಾರೆ. ಈ ಕಾರಣಕ್ಕೇನೆ ನಮ್ಮ ಚಿತ್ರದ ನಾಯಕ ಅರವಿಂದ್ ಅಂತಲೇ ನಂಬಲಾಗುತ್ತಿದೆ.


ಅರ್ಧಂಬರ್ಧ ಪ್ರೇಮ ಕಥೆಯ ಹೀರೋ ಯಾರು?
ಆದರೆ ಇದು ಸತ್ಯ ಅಲ್ಲವೇ ಅಲ್ಲ. ಇದೇ ತಿಂಗಳ 5 ರಂದು ನಾವು ನಮ್ಮ ಚಿತ್ರದ ನಾಯಕನ ಪರಿಚಯ ಮಾಡಿಸುತ್ತಿದ್ದೇವೆ. ಅದಕ್ಕಾಗಿಯೇ ಈಗ ಟೀಸರ್ ಕೂಡ ಮಾಡಿದ್ದೇವೆ. ಆ ಟೀಸರ್​ನಲ್ಲಿಯೇ ಹೀರೋ ಯಾರೂ ಅನ್ನೋದನ್ನ ನೋಡಿ ಬಿಡಿ ಅಂತಲೇ ಅರವಿಂದ್ ಕೌಶಿಕ್ ಹೇಳುತ್ತಿದ್ದಾರೆ.


Kannada Director Arvind Kaushik Talk About his New Film and Reveal Some Secret
ದಿವ್ಯಾ ಉರುಡುಗ ಅಭಿನಯದ ಅರ್ಧಂಬರ್ಧ ಪ್ರೇಮ ಕಥೆ ಚಿತ್ರದ ಪೋಸ್ಟರ್


ಅರ್ಧಂಬರ್ಧ ಪ್ರೇಮ ಕಥೆ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇದೇ ತಿಂಗಳು ನಾಯಕ ಪರಿಚಯವನ್ನ ಮಾಡಿಸುತ್ತೇವೆ. ಹಾಗೇನೆ ಚಿತ್ರದ ನಾಯಕಿ ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಲ್ಲಿಯೇ ಇದ್ದಾರೆ.


ಅರ್ಧಂಬರ್ಧ ಪ್ರೇಮ ಕಥೆಗೆ ಅರ್ಜುನ್ ಜನ್ಯ ಸಂಗೀತ
ಇವರ ಹೊರಗಡೆ ಬಂದ್ಮೇಲೆ ಚಿತ್ರದ ಇತರ ಕೆಲಸಗಳೂ ಪ್ರಾರಂಭಗೊಳುತ್ತವೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಚಿತ್ರವನ್ನ ನಾನೇ ಬರೆದು ನಿರ್ದೇಶನ ಮಾಡಿದ್ದೇನೆ ಅಂತಲೂ ಅರವಿಂದ್ ಕೌಶಿಕ್ ಹೇಳಿಕೊಂಡ್ರು.


ಅರವಿಂದ್ ಕೌಶಿಕ್ ಹಾಗೂ ದಿವ್ಯಾ ಉರುಡುಗ ಅವರಿಗೆ ಇದು ಎರಡನೇ ಸಿನಿಮಾ ಆಗಿದೆ. ಈ ಹಿಂದಿನ ಹುಲಿರಾಯ ಸಿನಿಮಾದಲ್ಲೂ ದಿವ್ಯಾ ಉರುಡುಗ ಇದ್ದರು. ಅಲ್ಲಿಗೆ ಈಗ ದಿವ್ಯಾ ಹಾಗೂ ಅರವಿಂದ್ ಕೌಶಿಕ್ ಈ ಮೂಲಕ ಮತ್ತೊಮ್ಮೆ ಕೆಲಸ ಮಾಡಿದ್ದಾರೆ.


ಈ ಚಿತ್ರಕ್ಕೆ ಅರ್ಧಂಬರ್ಧ ಪ್ರೇಮ ಕಥೆ ಟೈಟಲ್ ಯಾಕೆ?
ಅರ್ಧಂಬರ್ಧ ಪ್ರೇಮ ಕಥೆ ಅಂತ ಟೈಟಲ್ ಇಡೋಕೆ ಒಂದು ಕಾರಣವೂ ಇದೆ. ಅದನ್ನ ಡೈರೆಕ್ಟರ್ ಅರವಿಂದ್ ಕೌಶಿಕ್ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ. ಅರ್ಧಂಬರ್ಧ ಪ್ರೇಮ ಕಥೆ ಅನ್ನೋದು ನಿಜವೇ, ಎಲ್ಲ ಪ್ರೇಮಗಳು ಪೂರ್ತಿ ಆಗೋದು ಕಡಿಮೇನೆ.


ಆದರೆ ಅಮ್ಮ, ಅಕ್ಕ, ತಂಗಿ ಪ್ರೀತಿ ಲೆಕ್ಕ ಬೇರೆ. ಹುಡುಗ-ಹುಡುಗಿ ವಿಷಯದಲ್ಲಿ ಪ್ರೀತಿ ಪ್ರೇಮ ಪೂರ್ಣ ಆಗೋದು ಕಡಿಮೇನೆ ಅನ್ನೋ ಅರ್ಥದಲ್ಲಿಯೇ ಡೈರೆಕ್ಟರ್ ರವಿಂದ್ ಕೌಶಿಕ್ ಹೇಳುತ್ತಾರೆ.


ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾ ಹೇಗಿರುತ್ತದೆ?
ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಪ್ರೀತಿ-ಪ್ರೇಮದ ಮೇಲೆ ಸಿನಿಮಾ ಮಾಡಿದ್ದಾರೆ. ಅವರೂ ಕೂಡ ಅದನ್ನ ವಿಭಿನ್ನವಾಗಿಯೇ ಹೇಳಿದ್ದಾರೆ. ಹಂಗೇನೆ ನಾನು ಈ ಅರ್ಧಂಬರ್ಧ ಪ್ರೇಮ ಕಥೆಯಲ್ಲಿ ಪ್ರೀತಿ-ಪ್ರೇಮವನ್ನ ಬೇರೆ ರೀತಿಯಲ್ಲಿ ಹೇಳುತ್ತಿದ್ದೇನೆ ಅಂತಲೇ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Upendra-Shiva Rajkumar: ರಮೇಶ್ ರೆಡ್ಡಿ ಹೊಸ ಚಿತ್ರದಲ್ಲಿ ಮತ್ತೆ ಜೊತೆಯಾದ ಶಿವಣ್ಣ- ಉಪೇಂದ್ರ!


ಉಳಿದಂತೆ ಅರ್ಧಂಬರ್ಧ ಪ್ರೇಮ ಕಥೆಯ ಸಿನಿಮಾ ಬಗ್ಗೆ ಒಂದು ನಿರೀಕ್ಷೆ ಇದ್ದೇ ಇದೆ. ಚಿತ್ರದ ಟೈಟಲ್ ಆ ಒಂದು ಸೆಳೆತವನ್ನ ಈಗಲೇ ಹುಟ್ಟುಹಾಕಿದೆ.

First published: