ಸ್ಯಾಂಡಲ್ವುಡ್ ನಲ್ಲಿ ಕಾಂತಾರ (Kantara) ಸಿನಿಮಾ ಹೊಸ ಅಲೆಯನ್ನ ಎಬ್ಬಿಸಿದೆ. ಪರ ಭಾಷೆಯಲ್ಲು ಕನ್ನಡದ ಕಾಂತಾರ ಹೊಸ ಕ್ರೇಜ್ ಹುಟ್ಟಿಸಿದೆ. ಚಿತ್ರದ ಕಥೆ ಮತ್ತು ಅದರ ನಿರೂಪಣೆ ಎಲ್ಲವೂ ಜನರಿಗೆ ಇಷ್ಟ ಆಗುತ್ತಿದೆ. ಒಂದು ಸಂಸ್ಕೃತಿಯನ್ನ ದೇಶೆಲ್ಲೆಡೆ ತಲುಪಿಸಿದ ಖ್ಯಾತಿನೂ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರಿಗೆ ಸಲ್ಲಬೇಕು. ಅವರ ಕಲ್ಪನೆಗೆ ದುಡಿದ ಎಲ್ಲರಿಗೂ ಸಲ್ಲಬೇಕು. ಅಷ್ಟು ಒಳ್ಳೆ ಸಿನಿಮಾ (Good Film) ಕೊಟ್ಟ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈಗ ತುಂಬಾ ಖುಷಿಯಲ್ಲಿಯೇ ಇದ್ದಾರೆ. ಇವರ ಈ ಒಂದು ಚಿತ್ರಕ್ಕೆ ಗುಡ್ ಲಕ್ ಹೇಳಿರೋ ಡೈರೆಕ್ಟರ್ ಅರವಿಂದ್ ಕೌಶಿಕ್ (Aravind Kaushik) ಈಗ ರಿಷಬ್ ಶೆಟ್ಟಿಯ ಆರಂಭದ ದಿನಗಳ ಬಗ್ಗೆ ಒಂದಷ್ಟು ಮೆಲುಕು ಹಾಕಿದ್ದಾರೆ.
ಒಂದೇ ಚಿತ್ರದಲ್ಲಿ ರಿಷಬ್ ಶೆಟ್ಟಿ ಹ್ಯಾಟ್ರಿಕ್ ಹೊಡೆದವ್ರೆ
ಹೌದು, ಇದು ನಮ್ಮ ಅಭಿಪ್ರಾಯ ಅಲ್ಲ. ಡೈರೆಕ್ಟರ್ ಅರವಿಂದ್ ಕೌಶಿಕ್ ಮನಸಿನ ಮಾತು. ಮನದಾಳದಲ್ಲಿದ್ದ ಅಭಿಪ್ರಾಯವನ್ನ ಯಥಾವತ್ತು ನ್ಯೂಸ್ 18 ಗೆ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ನಿಜಕ್ಕೂ ಗ್ರೇಟ್ ಆಗಿದ್ದಾರೆ. ಒಂದೇ ಚಿತ್ರದಲ್ಲಿ ಹ್ಯಾಟ್ರಿಕ್ ಹೊಡೆದಿದ್ದಾರೆ ಅಂತಲೇ ಹೇಳಿದ್ದಾರೆ.
ಒಂದೇ ಚಿತ್ರದಲ್ಲಿ ನಟನೆ-ನಿರ್ದೇಶನ ಕಥೆ ಬರೆಯೋದು. ಇವೆಲ್ಲ ಅಷ್ಟು ಸುಲಭದ ಮಾತುಗಳಲ್ಲ. ಅದನ್ನ ಕಾರ್ಯರೂಪಕ್ಕೆ ತರೋದು ಕೂಡ ಅಷ್ಟು ಸುಲಭವಲ್ಲ. ಆದರೆ ರಿಷಬ್ ಶೆಟ್ಟಿ ಈ ಮೂರು ಕೆಲಸಗಳನ್ನ ಮಾಡಿ ಗೆದಿದ್ದಾರೆ. ಇವರ ಈ ಒಂದು ಯಶಸ್ಸು ನೋಡಿ ತುಂಬಾ ಖುಷಿ ಆಗುತ್ತದೆ ಎಂದು ಅರವಿಂದ್ ಕೌಶಿಕ್ ಹೇಳಿಕೊಂಡಿದ್ದಾರೆ.
ಆ ಒಂದು ಸೀರಿಯಲ್ ಟೈಮ್ ರಿಷಬ್ ಪರಿಚಯ
ರಿಷಬ್ ಶೆಟ್ಟಿ ಮತ್ತು ನಾನು ಸೀರಿಯಲ್ ಪೈಲೆಟ್ ಎಪಿಸೋಡ್ ಟೈಮ್ ನಲ್ಲಿ ಭೇಟಿ ಆಗಿದ್ದೇವು. ಅದಾದ ಮೇಲೆ ಆಗಾಗ ಭೇಟಿ ಕೂಡ ಆಗಿದ್ದೇವು. ಆ ಸಮಯದಲ್ಲಿಯೇ ರಿಷಬ್ ಫೋಟೋ ಕೂಡ ಕೊಟ್ಟು ಹೋಗಿದ್ದರು. "ನನಗೆ ಆ್ಯಕ್ಟಿಂಗ್ ನಲ್ಲೂ ಆಸಕ್ತಿ ಇದೆ." ಎಂದು ಹೇಳಿದ್ದರು.
ತುಗ್ಲಕ್ ಚಿತ್ರಕ್ಕೆ ತಲೆ ಬೋಳಿಸಿಕೊಂಡ್ರು ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ತುಂಬಾ ಡೆಡಿಕೇಟೆಡ್ ನಟ ಕೂಡ ಹೌದು ಅಂತಲೇ ಹೇಳಬಹುದು. ನಮ್ಮ ಚಿತ್ರದಲ್ಲಿ ಮೆಡ್ಡಾ ರಮೇಶ್ ಹೆಸರಿನ ಪಾತ್ರ ಇತ್ತು. ಇದಕ್ಕಾಗಿಯೇ ತೆಲೆಕೂಡ ಬೋಳಿಸಿಕೊಳ್ಳಬೇಕಿತ್ತು. ಈ ಎಲ್ಲ ಕಂಡಿಷನ್ ಗಳನ್ನ ರಿಷಬ್ ಮುಂದೆ ಹೇಳಿದೆ. ಆ ಕೂಡಲೇ ಓಕೆ ಎಂದ ರಿಷಬ್ ಶೆಟ್ಟಿ, ಮರು ದಿನವೇ ತಲೆ ಬೋಳಿಸಿಕೊಂಡು ರೆಡಿ ಆಗಿಯೇ ಬಿಟ್ಟರು.
ಇದನ್ನೂ ಓದಿ: Robbie Coltrane-Harry Potter: ಹ್ಯಾರಿ ಪಾಟರ್ ನಟ ರೋಬಿ ಇನ್ನಿಲ್ಲ
ತುಗ್ಲಕ್ ಚಿತ್ರದಲ್ಲಿ ರಿಷಬ್ ಶೆಟ್ಟಿ ವಿಲನ್ ಪಾತ್ರವನ್ನೆ ಮಾಡಿದ್ದಾರೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ರಿಷಬ್ ಎಂತಹ ನಟ ಅನ್ನೋದು ತಿಳಿದು ಹೋಯಿತು. ಇಂಗ್ಲೀಷ್ ಮತ್ತು ಕನ್ನಡ ಇರೋ ಡೈಲಾಗ್ ಅನ್ನ ಹೇಳೋ ಈ ಪಾತ್ರದಲ್ಲಿ, ರಿಷಬ್ ತಮ್ಮ ಪ್ರತಿಭೆಯನ್ನ ತೋರಿಸಿಯೇ ಬಿಟ್ಟರು.
ರಿಷಬ್ ವಿಲನ್-ರಕ್ಷಿತ್ ಹಿರೋ-ಒಟ್ಟಿಗೆ ಫೈಟ್ ಪ್ರ್ಯಾಕ್ಟೀಸ್
ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ವಿಲನ್ ಆಗಿದ್ದರೆ, ರಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕನಟರೇ ಆಗಿದ್ದರು. ಇಬ್ಬರೂ ಒಟ್ಟಿಗೇ ಸೇರಿಯೇ ಚಿತ್ರದ ಫೈಟ್ ಪ್ರ್ಯಾಕ್ಟೀಸ್ ಮಾಡ್ತಾ ಇದ್ದರು ಅಂತಲೇ ಡೈರೆಕ್ಟರ್ ಅರವಿಂದ್ ಕೌಶಿಕ್ ಆ ದಿನಗಳನ್ನ ನೆನಪಿಸಿಕೊಂಡ್ರು.
ಇದನ್ನೂ ಓದಿ: Singer Vijay Prakash: ಲಂಡನ್ ಲೈಟ್ ಹೌಸ್ನಲ್ಲಿ ಫಸ್ಟ್ ಟೈಮ್ ಸಿಂಗಾರಿ ಸಿರಿಯೇ ಹಾಡಿನ ಗಾನ ಸುಧೆ
ರಿಷಬ್ ನಟನೆಯಲ್ಲಿ ಸೂಪರ್ ಅನ್ನೋದು ಆಗಲೇ ಗೊತ್ತಾಗಿತ್ತು. ನಿರ್ದೇಶನದಲ್ಲೂ ಹೆಚ್ಚಿನ ಆಸಕ್ತಿನೂ ಇತ್ತು. ಎರಡನ್ನೂ ನಿಭಾಯಿಸೋದು ನಿಜಕ್ಕೂ ಕಷ್ಟವೇ ಸರಿ. ಆದರೆ ರಿಷಬ್ ಶೆಟ್ಟಿ ಎರಡೂ ಸಾಧ್ಯ ಅನ್ನೋದನ್ನ ಈಗ ಕಾಂತಾರ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ.
ಸಿನಿಮಾ ಮೂಲಕ ಒಂದು ಸಂಸ್ಕೃತಿಯ ಅನಾವರಣ
ಒಂದು ಸಿನಿಮಾ ಮೂಲಕವೇ ಸಂಸ್ಕೃತಿಯನ್ನ ತೆಗೆದುಕೊಂಡು ಹೋಗೋದು ಅಷ್ಟು ಸುಲಭವಲ್ಲ. ರಿಷಬ್ ಶೆಟ್ಟಿ ಆ ಒಂದು ಕೆಲಸ ಮಾಡಿದ್ದಾರೆ. ಜನರ ಪ್ರೀತಿಗೂ ಪಾತ್ರರಾಗಿದ್ದಾರೆ. ನಟನೆ-ನಿರ್ದೇಶನ-ಕಥೆ ಎಲ್ಲವನ್ನೂ ಮಾಡಿಕೊಂಡು ಗೆದ್ದಿರೋ ರಿಷಬ್ ಶೆಟ್ಟಿಗೆ ಡೈರೆಕ್ಟರ್ ಅರವಿಂದ್ ಕೌಶಿಕ್ ಗುಡ್ ಲಕ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ