• Home
  • »
  • News
  • »
  • entertainment
  • »
  • Anoop Bhandari Next Movie: ಅನೂಪ್ ಭಂಡಾರಿ ಮುಂದಿನ ಸಿನಿಮಾ ಯಾವುದು? ಯಾರು ಈ ಸಿನಿಮಾ ಹೀರೋ?

Anoop Bhandari Next Movie: ಅನೂಪ್ ಭಂಡಾರಿ ಮುಂದಿನ ಸಿನಿಮಾ ಯಾವುದು? ಯಾರು ಈ ಸಿನಿಮಾ ಹೀರೋ?

ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್ ಮುಂದಿನ ಚಿತ್ರ ಯಾವುದು?

ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್ ಮುಂದಿನ ಚಿತ್ರ ಯಾವುದು?

ಸಿನಿಮಾದ ಜಾನರ್ ಯಾವುದು ಅಂತ ಹೇಳಿದ್ರೆ, ಎಲ್ಲವನ್ನೂ ಈಗಲೇ ಬಿಟ್ಟುಕೊಟ್ಟಂತೆ ಆಗುತ್ತದೆ. ಯಾವುದಕ್ಕೂ ವೇಟ್ ಮಾಡಿ ಎಲ್ಲವನ್ನೂ ರಿವೀಲ್ ಮಾಡ್ತೀವಿ ಅಂತಲೇ ಅನೂಪ್ ಭಂಡಾರಿ ಹೇಳಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ (Kannada Industry) ಚಿತ್ರರಂಗದಲ್ಲಿ ಹಲವು ನಿರ್ದೇಶಕರಿದ್ದಾರೆ. ಇವರಲ್ಲಿ ಎಲ್ಲರದ್ದೂ ಒಂದೊಂದು ರೀತಿಯ (Cinema Making) ಸಿನಿಮಾ ಮೇಕಿಂಗ್ ಶೈಲಿ ಇದೆ. ಇದರಿಂದ ಕೆಲವರು ಗೆದ್ದು ಬೀಗಿದ್ದಾರೆ. ಇನ್ನೂ ಕೆಲವ್ರು ಏರಿಳಿತಗಳನ್ನೂ ಕಂಡಿದ್ದಾರೆ. ಇವರ ಮಧ್ಯ ಕೊಂಚ ವಿಭಿನ್ನ ನಿರ್ದೇಶಕ ಅನಿಸಿದವ್ರು ಅನೂಪ್ (Anoop Bhandari) ಭಂಡಾರಿ. ಅನೂಪ್ ಭಂಡಾರಿ ತಮ್ಮ ಚಿತ್ರ ನಿರ್ದೇಶನದ ಜೊತೆಗೆ ಹೊಸದೊಂದು ಜಗತ್ತನ್ನೂ ಜನಕ್ಕೆ ಕೊಡ್ತಾರೆ. ಕಿಚ್ಚನ ವಿಕ್ರಾಂತ್ (Vikrant Rona) ರೋಣ ಸಿನಿಮಾ ಆ ಸಾಲಿನ ಒಂದು ಸಿನಿಮಾ. ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ನಿರೀಕ್ಷಿಸಿದ್ದು ಬೇರೆ. ಇದ್ದದ್ದು ಬೇರೆ ಬೇರೆ ಅನ್ನೋ ಅಭಿಪ್ರಾಯಗಳೂ ಬಂದಿದ್ದವು. ಅದನ್ನ ತಿಳಿದುಕೊಂಡಿರೋ ಡೈರೆಕ್ಟರ್ ಅನೂಪ್ ಭಂಡಾರಿ ಈಗ ಏನ್ ಮಾಡ್ತಿದ್ದಾರೆ ಗೊತ್ತೇ? ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.


ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್ ಮುಂದಿನ ಚಿತ್ರ ಯಾವುದು?
ಡೈರೆಕ್ಟರ್ ಅನೂಪ್ ಭಂಡಾರಿ ವಿಕ್ರಾಂತ್ ರೋಣ ಆದ್ಮೇಲೆ ಏನ್ ಮಾಡ್ತಿದ್ದಾರೆ. ಈ ಒಂದು ಪ್ರಶ್ನೆ ಇದ್ದೇ ಇದೆ. ವಿಕ್ರಾಂತ್ ರೋಣ ತನ್ನದೇ ರೀತಿಯಲ್ಲಿಯೇ ಓಡಿದೆ. ಅತಿ ಹೆಚ್ಚು ನಿರೀಕ್ಷೆ ಮಾಡಿದ್ದ ಪ್ರೇಕ್ಷಕರಿಗೆ ಈ ಚಿತ್ರ ನಿರೀಕ್ಷೆ ಮೂಡಿಸಿದ್ದು ಅಷ್ಟೇ ಸತ್ಯ.




ವಿಕ್ರಾಂತ್ ರೋಣ ಚಿತ್ರದ ಹೈಪ್ ತುಂಬಾ ಇತ್ತು. ನಿರೀಕ್ಷೆ ಬೆಟ್ಟದಷ್ಟಿತ್ತು. ಚಿತ್ರ ಚೆನ್ನಾಗಿಯೇ ಇದೆ. ಆದರೆ ನಿರೀಕ್ಷೆ ಮಟ್ಟಕ್ಕಿಲ್ಲ ಈ ಚಿತ್ರ ಅನ್ನೋ ಅಭಿಪ್ರಾಯ ಕೂಡ ಬಂದವು.


Kannada Director Anoop Bhandari working on next movie for Sudeepa
ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್ ಭಂಡಾರಿ ವಿಶ್ಲೇಷಣೆ


ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್ ಭಂಡಾರಿ ವಿಶ್ಲೇಷಣೆ
ವಿಕ್ರಾಂತ್ ರೋಣ ಆದ್ಮೇಲೆ ಡೈರೆಕ್ಟರ್ ಅನೂಪ್ ಭಂಡಾರಿ ಮುಂದಿನ ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸೂಪರ್ ಸ್ಟಾರ್​ಗೆ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಅನೂಪ್ ಆ ಒಂದು ಅದೃಷ್ಟವನ್ನ ಪಡೆದುಕೊಂಡಿದ್ದರು.


ಇದನ್ನೂ ಓದಿ: Rakshit Shetty: ಸಮಂತಾ ಚಿತ್ರಕ್ಕೆ ಕನ್ನಡ ಸ್ಟಾರ್ ಸಾಥ್; ಚಿತ್ರದ ಟ್ರೈಲರ್ ರಿಲೀಸ್ ಮಾಡಲಿರುವ ರಕ್ಷಿತ್ ಶೆಟ್ಟಿ


ಅನೂಪ್ ಭಂಡಾರಿ ಪ್ರತಿ ಚಿತ್ರದ ನಂತರ ವಿಶ್ಲೇಷಣೆ ಮಾಡುತ್ತಾರೆ. ಈ ಹಿಂದಿನ ಸಿನಿಮಾದಲ್ಲಿ ಏನು ತಪ್ಪಾಗಿತ್ತು? ಜನ ಯಾವುದನ್ನ ಇಷ್ಟ ಪಟ್ಟರು? ಮುಂದಿನ ಚಿತ್ರದಲ್ಲಿ ಏನೆಲ್ಲ ಮಾಡಬೇಕು? ಯಾವುದು ಮಾಡಿದ್ರೆ ಸೂಪರ್ ಆಗಿ ಇರುತ್ತದೆ. ಈ ಎಲ್ಲ ಪ್ರಶ್ನೆಗಳ ವಿಶ್ಲೇಷಣೆ ಮತ್ತು ವಿಮರ್ಶೆ ಮುಂದುವರೆಸಿದ್ದಾರೆ.


ಕಿಚ್ಚನಿಗಾಗಿ ಮತ್ತೊಂದು ಕಥೆ-ಅನೂಪ್ ಭಂಡಾರಿ
ಅನೂಪ್ ಭಂಡಾರಿ ಮತ್ತೊಂದು ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿದ್ದಾರೆ. ಈ ಕಥೆ ಕಿಚ್ಚನಿಗಾಗಿಯೇ ಅನ್ನೋದನ್ನೂ ಹೇಳಿಕೊಂಡಿದ್ದಾರೆ. ಸುದೀಪ್ ಅವರ ಈ ಚಿತ್ರ ಯಾವ ಜಾನರ್​​ಗೆ ಸೇರಿದ್ದು ಅಂತ ಈಗಲೇ ಹೇಳಲು ಇಷ್ಟಪಡದ ಅನೂಪ್ ಭಂಡಾರಿ, ಸಿನಿಮಾದ ಕೆಲಸ ಇನ್ನೂ ಸ್ಕ್ರಿಪ್ಟಿಂಗ್ ಹಂತದಲ್ಲಿಯೇ ಇದೆ.


Kannada Director Anoop Bhandari working on next movie for Sudeepa
ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್ ಮುಂದಿನ ಚಿತ್ರ ಯಾವುದು?


ಸ್ಕ್ರಿಪ್ಟಿಂಗ್ ಕೆಲಸ ಮುಗಿದ್ಮೇಲೆ ಪ್ರೀ ಪ್ರೋಡಕ್ಷನ್ ಕೆಲಸ ಶುರು
ಅನೂಪ್ ಭಂಡಾರಿ ಸದ್ಯಕ್ಕೆ ಸುದೀಪ್ ಗಾಗಿ ಇನ್ನೂ ಒಂದು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಕೆಲಸದಲ್ಲಿಯೇ ಈಗ ಬ್ಯುಸಿ ಇದ್ದಾರೆ. ಒಂದೊಮ್ಮೆ ಸ್ಕ್ರಿಪ್ಟಿಂಗ್ ಕೆಲಸ ಮುಗಿದ್ಮೇಲೆ ಪ್ರೀ ಪ್ರೋಡಕ್ಷನ್ ಕೆಲಸ ಶುರು ಆಗುತ್ತದೆ. ಸದ್ಯಕ್ಕೆ ಸ್ಕ್ರಿಪ್ಟಿಂಗ್ ಕೊನೆ ಹಂತದಲ್ಲಿಯೇ ಇದೆ ಎಂದು ಹೇಳುತ್ತಾರೆ.


ವಿಕ್ರಾಂತ್ ರೋಣ ಡೈರೆಕ್ಟರ್ ಅನೂಪ್ ಸಿನಿಮಾ ಹೇಗಿರುತ್ತದ್ದೆ?
ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಮುಂದಿನ ಸಿನಿಮಾ ಯಾವ ರೀತಿ ಇರುತ್ತದೆ ಅಂತ ತುಂಬಾ ಕುತೂಹಲ ಇದೆ. ಆದರೆ ಈ ಬಗ್ಗೆ ಕೇಳುವ ಪ್ರಶ್ನೆಗೆ ಸದ್ಯಕ್ಕೆ ಏನೂ ಹೇಳೋದಿಲ್ಲ.


ಇದನ್ನೂ ಓದಿ: Ashwini Puneeth Rajkumar: ನನಗೆ ಫೋನ್ ಕಾಲ್ ಮಾಡಲು ಬೆಟ್ಟ ಹತ್ತಿದ್ರು ಅಪ್ಪು; ಮೊದಲ ಬಾರಿಗೆ ಪುನೀತ್ ಬಗ್ಗೆ ಮನಬಿಚ್ಚಿ ಮಾತಾಡಿದ ಅಶ್ವಿನಿ


ಸಿನಿಮಾದ ಜಾನರ್ ಯಾವುದು ಅಂತ ಹೇಳಿದ್ರೆ, ಎಲ್ಲವನ್ನೂ ಈಗಲೇ ಬಿಟ್ಟುಕೊಟ್ಟಂತೆ ಆಗುತ್ತದೆ. ಯಾವುದಕ್ಕೂ ವೇಟ್ ಮಾಡಿ ಎಲ್ಲವನ್ನೂ ರಿವೀಲ್ ಮಾಡ್ತೀವಿ ಅಂತಲೇ ಅನೂಪ್ ಭಂಡಾರಿ ಹೇಳಿಕೊಂಡಿದ್ದಾರೆ.

First published: