• Home
  • »
  • News
  • »
  • entertainment
  • »
  • Director Shivamani: ಡೈರೆಕ್ಷನ್​ಗೂ ಸೈ-ನಟನೆಗೂ ಸೈ! ಮತ್ತೆ ಆ್ಯಕ್ಷನ್ ಕಟ್ ಅಂತಾರೆ ಶಿವಮಣಿ

Director Shivamani: ಡೈರೆಕ್ಷನ್​ಗೂ ಸೈ-ನಟನೆಗೂ ಸೈ! ಮತ್ತೆ ಆ್ಯಕ್ಷನ್ ಕಟ್ ಅಂತಾರೆ ಶಿವಮಣಿ

ಡೈರೆಕ್ಷನ್ ಗೂ ಸೈ-ನಟನೆಗೂ ಸೈ-ಡೈರೆಕ್ಟರ್ ಶಿವಮಣಿ

ಡೈರೆಕ್ಷನ್ ಗೂ ಸೈ-ನಟನೆಗೂ ಸೈ-ಡೈರೆಕ್ಟರ್ ಶಿವಮಣಿ

ಚಿತ್ರ ನಿರ್ದೇಶನ ಮಾಡಬೇಕು ಅನ್ನೋದಕ್ಕಾಗಿಯೇ ಎರಡು ಕಥೆಯನ್ನ ಸಿದ್ದಪಡಿಸಿದ್ದಾರೆ. ಎರಡೂ ಓಕೆ ಆಗಿವೆ. ಎರಡಲ್ಲಿ ಒಂದನ್ನ ನಿರ್ದೇಶನ ಮಾಡೋ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಡೈರೆಕ್ಟರ್ ಶಿವಮಣಿ.

  • News18 Kannada
  • Last Updated :
  • Bangalore [Bangalore], India
  • Share this:

ಚಂದನವನದಲ್ಲಿ (Sandalwood) ಅನೇಕ ಪ್ರತಿಭಾವಂತ ನಟರಿದ್ದಾರೆ. ಟ್ಯಾಲೆಂಟೆಡ್ ನಿರ್ದೇಶಕರ (Kannada Director) ಪಟ್ಟಿಯೇನೂ ಕಡಿಮೆ ಇಲ್ಲ. ಇಂತಹ ನಿರ್ದೇಶಕರು ನಾಯಕರಾಗಿರೋದು ಇಲ್ಲಿ ಉದಾಹರಣೆ ಇವೆ. ನಟನೆ ಮತ್ತು ನಿರ್ದೇಶನ ಎರಡನ್ನೂ ಮಾಡ್ತಿರೋರು ಇದ್ದಾರೆ. ಆದರೆ ನಿರ್ದೇಶನದಿಂದ ನಟನೆ ಮೇಲೆ ಫೋಕಸ್ ಮಾಡಿ ಹೆಸರು ಮಾಡ್ತಿರೋರಲ್ಲಿ ಜೋಶ್ ಚಿತ್ರದ (Director Shivamani) ಶಿವಮಣಿ ಒಬ್ಬರಾಗಿದ್ದಾರೆ. ಖಳನಾಯಕರಾಗಿಯೇ ಪರ ಭಾಷೆಯ ಸಿನಿಮಾದಲ್ಲೂ ಹೊಸ ಹವಾ ಕ್ರಿಯೇಟ್ ಮಾಡಿದ್ದಾರೆ. ತಮ್ಮ ಈ ಹೊಸ (New Journy) ಜರ್ನಿ ಬಗ್ಗೆ ಸ್ಪೆಷಲ್ ಆಗಿಯೇ ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಇನ್ನು ಈಗ ಡೈರೆಕ್ಟರ್ ಶಿವಮಣಿ ಲುಕ್ ಬದಲಾಗಿದೆ. ಬೆಳ್ಳಿ ಬಣ್ಣದ ಹೇರ್ ಸ್ಟೈಲ್, ಅದೇ ಬಣ್ಣದ ಬಿಯರ್ಡ್ ಲುಕ್, ಈಗ ನೋಡುಗರಲ್ಲಿ ಹೊಸ ಫೀಲ್ ಕೊಡುತ್ತಿದ್ದಾರೆ. ಸ್ಟೈಲಿಶ್ ಲುಕ್​ ನ ರೂಪವೂ ಕೂಡ ಬಂದು ಬಿಟ್ಟಿದೆ.


ಟೈಗರ್ ಗಲ್ಲಿ ಸಿನಿಮಾದಲ್ಲಿ ಖಳನಾಯಕರಾಗಿಯೇ ನಟನೆಯ ಖಾತೆ ತೆರೆದರು ನೋಡಿ. ಅಂದಿನಿಂದ ಇವರ ಪಯಣ ಈಗ ಯಶಸ್ವಿಯಾಗಿಯೇ ಸಾಗುತ್ತಿದೆ.


18 ರಿಂದ 19 ಚಿತ್ರಗಳಲ್ಲಿ ಶಿವಮಣಿ ಅಭಿನಯ


ಡೈರೆಕ್ಟರ್ ಶಿವಮಣಿ ಚಿತ್ರದ ನಿರ್ದೇಶನದಲ್ಲೂ ಸಕ್ಸಸ್ ಕಂಡಿದ್ದಾರೆ. ಇವರ ನಿರ್ದೇಶನದ ಜೋಶ್ ಸಿನಿಮಾ ಏನು ಕಡಿಮೇನೆ. ಈ ಚಿತ್ರದಲ್ಲಿ ಅನೇಕ ಪ್ರತಿಭಾವಂತ ನಟರು ಕನ್ನಡ ಚಿತ್ರರಂಗಕ್ಕೆ ಬಂದ್ರು. ತಮ್ಮದೇ ರೀತಿಯಲ್ಲಿಯೇ ಕನ್ನಡದಲ್ಲಿ ಬೆಳೆದು ನಿಂತರು.


ಇಂತಹ ನಿರ್ದೇಶಕ ಶಿವಮಣಿ ಅವರ ನಿರ್ದೇಶನದಿಂದ ನಟನೆಯತ್ತ ವಾಲಿಯಾಗಿದೆ. ಟೈಗರ್ ಗಲ್ಲಿ, ಬೆಲ್ ಬಾಟಂ, ಜೇಮ್ಸ್ ನಂತಹ ಚಿತ್ರದಲ್ಲಿ ಶಿವಮಣಿ, 18 ರಿಂದ 19 ಸಿನಿಮಾಗಳಲ್ಲಿ ಅಭಿನಯಿಸೋ ಮೂಲಕ ಜನರನ್ನ ರಂಜಿಸಿದ್ದಾರೆ.


ಕನ್ನಡದ ಹೊರತಾಗಿ ತಮಿಳಿನಲ್ಲೂ ಶಿವಮಣಿ ಅಭಿನಯ ಆರಂಭ


ಬೆಲ್ ಬಾಟಂ ಚಿತ್ರದಲ್ಲಿ ಶಿವಮಣಿ ಅವರು ಪಾತ್ರ ತುಂಬಾ ವಿಶೇಷವಾಗಿಯೇ ಇತ್ತು. ಈ ಚಿತ್ರದ ಸಕ್ಸಸ್​ನಿಂದೇ ಏನೋ, ಬೆಲ್ ಬಾಟಂ ತಮಿಳು ರಿಮೇಕ್ ಮೂಲಕ ಶಿವಮಣಿ ಅವರು ಕಾಲಿವುಡ್ ಗೂ ಕಾಲಿಟ್ಟರು.


Kannada Director-Actor Shivamani Planning to Direct movie
ನಟ-ನಿರ್ದೇಶಕ ಶಿವಮಣಿ ಸಖತ್ ಫೋಟೋ


ಇಷ್ಟೇ ಅಲ್ಲ, ಕಳೆದ ತಿಂಗಳ 15 ರಂದು ತೆರೆಕಂಡ ಸಿಂಬು ಅಭಿನಯದ Vendhu Thanindhathu Kaadu Part-1 ಸಿನಿಮಾದಲ್ಲೂ ಅಭಿನಯಿಸಿದ್ದಾರೆ.


ಸಿಂಬು ಅಭಿನಯದ ಈ ಚಿತ್ರದ ಕೊನೆ ದೃಶ್ಯದಲ್ಲಿ ಶಿವಮಣಿ ಬರುತ್ತಾರೆ. ಆದರೆ ಇವರ ಪಾತ್ರ ಭಾಗ ಎರಡರಲ್ಲೂ ಮುಂದುವರೆಯುತ್ತಿದೆ. ಗೌತಮ್ ಮೆನನ್ ನಿರ್ದೇಶನದ ಈ ಚಿತ್ರದಲ್ಲಿ ಕೂಡ ಸಖತ್ ಸ್ಟೈಲಿಶ್ ಲುಕ್​ ನಲ್ಲಿಯೇ ಶಿವಮಣಿ ಕಾಣಿಸಿಕೊಂಡಿದ್ದಾರೆ. ತಮ್ಮ ವೈಟ್ ಆ್ಯಂಡ್ ವೈಟ್ ಬಿಯರ್ಡ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ.


ಇದನ್ನೂ ಓದಿ: Anupama Gowda: ಬಿಗ್ ಬಾಸ್ ಮನೆಯಲ್ಲಿ ಅನುಪಮಾ ಹಾಟ್ ಲುಕ್, ಪಡ್ಡೆ ಹುಡುಗರ ನಿದ್ದೆ ಕದ್ದ ಸುಂದರಿ


ಶಿವಮಣಿ ಅವರು ಅಭಿನಯಿಸಿರೋ ಈ ಚಿತ್ರ ಇವರಿಗೆ ಮೊದಲ ಪರಭಾಷಾ ಸಿನಿಮಾನೇ ಆಗಿದೆ. ತಮಿಳು ರಿಮೇಕ್ ಬೆಲ್ ಬಾಟಂ ಎರಡನೇ ಸಿನಿಮಾನೆ ಆಗಿಲಿದ್ದು ಅದು ಇನ್ನಷ್ಟೇ ರಿಲೀಸ್ ಆಗಬೇಕಿದೆ.


ಡೈರೆಕ್ಟರ್ ಶಿವಮಣಿ ನಟನೆ ಸೂಪರ್-ಡೈರೆಕ್ಷನ್ ಏನ್ ಆಯ್ತು?
ಡೈರೆಕ್ಟರ್ ಶಿವಮಣಿಯವರು ಸದ್ಯಕ್ಕೆ ನಟನೆಯ ಬಗ್ಗೇನೆ ಹೆಚ್ಚು ಫೋಕಸ್ಡ್ ಆಗಿದ್ದಾರೆ. ಆದರೆ ಇದೇ ನಿರ್ದೇಶಕರು ತಮ್ಮ ಎಂದಿನ ನಿರ್ದೇಶನದ ಆಸಕ್ತಿಯನ್ನ ಉಳಿಸಿಕೊಂಡೂ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಎರಡು ಅದ್ಭುತ ಕಥೆಗಳನ್ನೂ ಈಗ ರೆಡಿ ಮಾಡಿಕೊಂಡಿದ್ದಾರೆ.


ಮುಂದಿನ ವರ್ಷದ ಆರಂಭದಲ್ಲಿ ಮತ್ತೆ ಶಿವಮಣಿ ಡೈರೆಕ್ಷನ್ ಶುರು


ನಟನೆ ಮತ್ತು ನಿರ್ದೇಶನ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡೇ ಹೋಗಬೇಕು ಅನ್ನೊದೇ ನಿರ್ದೇಶಕ ಶಿವಮಣಿಯವರ ಸದ್ಯದ ಪ್ಲಾನ್ ಆಗಿದೆ. ಆ ಒಂದು ಕಾರಣಕ್ಕೇನೆ ಮುಂದಿನ ವರ್ಷದ ಆರಂಭದಲ್ಲಿಯೇ ಸಿನಿಮಾ ನಿರ್ದೇಶನಕ್ಕೆ ಕೈಹಾಕಲಿದ್ದಾರೆ.


ಚಿತ್ರ ನಿರ್ದೇಶನ ಮಾಡಬೇಕು ಅನ್ನೋದಕ್ಕಾಗಿಯೇ ಎರಡು ಕಥೆಯನ್ನ ಸಿದ್ದಪಡಿಸಿದ್ದಾರೆ. ಎರಡೂ ಓಕೆ ಆಗಿವೆ. ಎರಡರಲ್ಲಿ ಒಂದನ್ನ ನಿರ್ದೇಶನ ಮಾಡೋ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಡೈರೆಕ್ಟರ್ ಶಿವಮಣಿ.


ನವ ನಿರ್ದೇಶಕರ ಜೊತೆಗಿನ ಶಿವಮಣಿ ಅನುಭವ ಸೂಪರ್
ಶಿವಮಣಿ ಅವರು ಅಪ್​ಡೇಟ್ ಆಗ್ತಾನೇ ಇದ್ದಾರೆ. ನವ ನಿರ್ದೇಶಕರ ಜೊತೆಗೆ ಕೆಲಸ ಮಾಡುತ್ತಲೇ ಹೊಸ ವಿಷಯಗಳನ್ನ ತಿಳಿದುಕೊಳ್ಳುತ್ತಲೇ ಇದ್ದಾರೆ. ಅವರ ಹೊಸ ಲಹರಿಯ ಯೋಚನೆಗಳಲ್ಲೂ ತಿಳಿದುಕೊಳ್ಳುತ್ತಿದ್ದಾರೆ.


ಈ ಒಂದು ಅವಕಾಶ ನಟನೆ ಮಾಡೋದ್ರಿಂದಲೇ ಸಿಗ್ತಾಯಿದೆ ಅನ್ನೋದೇ ಶಿವಮಣಿಯವರ ಅನುಭವದ ಮಾತಾಗಿದ್ದು, ಎರಡನ್ನೂ ನಿಭಾಯಿಸಲು ಸಾಧ್ಯ ಅನ್ನೋ ಕಾರಣಕ್ಕೆ ನಟನೆ ಜೊತೆಗೆ ನಿರ್ದೇಶನ ಮಾಡೋಕೆ ಈಗ ಸಿದ್ದರಾಗುತ್ತಿದ್ದಾರೆ.


ಇದನ್ನೂ ಓದಿ: Somu Sound Engineer: ದುನಿಯಾ ಸೂರಿ ಶಿಷ್ಯನ ಹೊಸ ಸೌಂಡ್, ಇದೇ 15ಕ್ಕೆ ಸೋಮು ಸೌಂಡ್ ಇಂಜಿನಿಯರ್ ಟೀಸರ್


ಶಿವಮಣಿ ಹೀರೋ ಕೂಡ ಆಗಿದ್ದರು-ಇದು ನಿಮ್ಗೆ ಗೊತ್ತೇ?
ಶಿವಮಣಿಯವರ ಚಿತ್ರ ಜೀವನದಲ್ಲಿ ನಾಯಕ ನಟನೆ-ರಂಗಭೂಮಿ-ನಿರ್ದೇಶನ ಎಲ್ಲವೂ ಆಗಿದೆ. ಆರಂಭದಲ್ಲಿ ನಾಯಕರಾಗಿಯೂ ಶಿವಮಣಿ ಅಭಿನಯಿಸಿದ್ದಾರೆ.


ಖಾಕಿ, ಲವ್ ಯು, ಬೆಳ್ಳಿ ಬೆಟ್ಟ, ವಿನ್ನರ್ ಸಿನಿಮಾದಲ್ಲಿ ಹೀರೋ ಆಗಿಯೂ ಅಭಿನಯಿಸಿದ್ದಾರೆ. ಈಗ ಅತ್ಯಾಕರ್ಷಕ ಸ್ಟೈಲ್ ಮೂಲಕ ಪವರ್ ಫುಲ್ ಪಾತ್ರದಿಂದಲೂ ಜನರನ್ನ ರಂಜಿಸುತ್ತಲೇ ಇದ್ದಾರೆ. ಮುಂದಿನ ವರ್ಷ ಮತ್ತೆ ನಿರ್ದೇಶನಕ್ಕೂ ಇಳಿಯಲಿದ್ದಾರೆ. ಇವರ ಚಿತ್ರಗಳ ಬಗ್ಗೆ ಅಪ್​​ಡೇಟ್ ಕೊಡ್ತಾಯಿರ್ತಿವಿ ವೇಟ್ ಮಾಡಿ.

First published: