ಸ್ಯಾಂಡಲ್ವುಡ್ ಡೈರೆಕ್ಟರ್ ಎ. ಪಿ. ಅರ್ಜುನ್ (Director A P Arjun) ಹೊಸದೊಂದು ಪ್ರಯೋಗ ಮಾಡಿದ್ದಾರೆ. ಮಾರ್ಟಿನ್ ಮೂಲಕ ಭಾರೀ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಡೈರೆಕ್ಟರ್ ಎ. ಪಿ. ಅರ್ಜುನ್, ಧ್ರುವ ಸರ್ಜಾ ಸಿನಿಮಾ ಪ್ರೇಮಿಗಳಿಗೆ (Teaser Release Soon) ಮತ್ತು ಅಭಿಮಾನಿಗಳಿಗೆ ಚಿತ್ರದ ಟೀಸರ್ನಲ್ಲಿಯೇ ಹೊಸ ವಿಶೇಷ ಅನುಭವ ಕೊಡಲು ಮುಂದಾಗಿದ್ದಾರೆ. ಸಿನಿಮಾದ ಟೀಸರ್ (Martin Cinema Teaser) ಹಾಗೆ ಸುಮ್ನೆ ರಿಲೀಸ್ ಮಾಡದೇ ಆ ಟೀಸರ್ನ್ನ ಒಳ್ಳೆ ಸೌಂಡ್ ವ್ಯವಸ್ಥೆ ಇರೋ ಥಿಯೇಟರ್ನಲ್ಲಿ ರಿಲೀಸ್ (Martin Teaser Release in Theater) ಮಾಡುತ್ತಿದ್ದಾರೆ. ಆದರೆ ಈ ಅನುಭವ ಪಡೆಯೋರಿಗೆ ಇದು ಉಚಿತ ಅಲ್ಲ ಬಿಡಿ ಅನ್ನೋದು ಕೂಡ ಅಷ್ಟೆ ಸತ್ಯ ನೋಡಿ.
ಹಾಗಂತ ಬಿಟ್ಟರೆ, ಆ ಅನುಭವ ಸಿಗೋದಿಲ್ಲ. ಈ ಹಿನ್ನೆಲೆಯಲ್ಲಿ ಡೈರೆಕ್ಟರ್ ಎ. ಪಿ. ಅರ್ಜುನ್ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಸ್ಪೆಷಲ್ ಆಗಿಯೇ ಮಾತನಾಡಿದ್ದಾರೆ. ಅವರ ಮಾತಿನ ಒಟ್ಟು ಚಿತ್ರಣ ಇಲ್ಲಿದೆ ಓದಿ.
ಫೆಬ್ರವರಿ-23 ರಂದು ಮಾರ್ಟಿನ್ ಟೀಸರ್ ಪ್ರದರ್ಶನ
ಮಾರ್ಟಿನ್ ಚಿತ್ರದ ಟೀಸರ್ಲ್ಲಿ ಸುಮಾರು ವಿಷಯಗಳನ್ನ ಹೇಳುತ್ತಿದ್ದೇವೆ. 2 ನಿಮಿಷ 33 ಸೆಕೆಂಡ್ನ ಟೀಸರ್ ಇದಾಗಿದೆ. ಈಗೆಲ್ಲ ಟೀಸರ್ ಟೈಮ್ ಇಷ್ಟೇ ಇರುತ್ತದೆ. ಥಿಯೇಟರಿಕಲ್ ಟ್ರೈಲರ್ ಟೈಮ್ ಇನ್ನೂ ಜಾಸ್ತಿ ಇರುತ್ತದೆ.
ಮಾರ್ಟಿನ್ ಚಿತ್ರದ ಟ್ರೈಲರ್ನ್ನ ಥಿಯೇಟರ್ನಲ್ಲಿ ತೋರಿಸಲಿಕ್ಕೆ ಒಂದು ಕಾರಣವೂ ಇದೆ. ಸಿನಿಮಾದ ಒಟ್ಟು ಅನುಭವ ಒಂದು ರೀತಿ ಇರುತ್ತದೆ. ಆದರೆ ಟೀಸರ್ನಲ್ಲೂ ಆ ಸಿನಿಮಾ ಅನುಭವ ಕೊಡುವ ಉದ್ದೇಶ ನಮ್ಮದಾಗಿದೆ.
ವೀರೇಶ್ ಸಿನಿಮಾಸ್ನಲ್ಲಿ ಮಾರ್ಟಿನ್ ಟೀಸರ್ ಪ್ರದರ್ಶನ
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವೀರೇಶ್ ಸಿನಿಮಾಸ್ನಲ್ಲಿ ಮಾರ್ಟಿನ್ ಚಿತ್ರದ ಟೀಸರ್ ಪ್ರದರ್ಶನ ಇರುತ್ತದೆ. ಫೆಬ್ರವರಿ-23 ರಂದು ಈ ಒಂದು ಟೀಸರ್ನ್ನು ರಿಲೀಸ್ ಮಾಡುತ್ತಿದ್ದೇವೆ.
ಫೆಬ್ರವರಿ-23 ರಂದು ಒಂದೇ ದಿನ ಮಾತ್ರ ಈ ಒಂದು ಟೀಸರ್ನ್ನ ಪ್ರದರ್ಶನ ಇರುತ್ತದೆ. ಇಲ್ಲಿ ಸಿನಿಪ್ರೇಮಿಗಳು ಎಷ್ಟು ಶೋ ಬರ್ತಾರೋ ಅಷ್ಟು ಶೋದಲ್ಲಿ ಟೀಸರ್ ಪ್ರದರ್ಶನವನ್ನ ಪ್ಲಾನ್ ಮಾಡಿದ್ದೇವೆ.
ರಾಜ್ಯದೆಲ್ಲೆಡೆ ಟೀಸರ್ ಪ್ರದರ್ಶನದ ಪ್ಲಾನ್ ಇತ್ತು!
ರಾಜ್ಯದೆಲ್ಲೆಡೆ ಈ ಒಂದು ಟೀಸರ್ ಪ್ರದರ್ಶನ ಪ್ಲಾನ್ ಇತ್ತು. ಆದರೆ ಅದಕ್ಕೆ ಟೈಮ್ ಸಾಲೋದಿಲ್ಲ ಅನ್ನುವ ಕಾರಣಕ್ಕೆ ಆ ಯೋಚನೆ ಬಿಟ್ಟಿದ್ದೇವೆ. ಚಿತ್ರದ ಟೀಸರ್ ಥಿಯೇಟರ್ನಲ್ಲಿ ಪ್ರದರ್ಶನ ಆದ ಮೂರು ನಾಲ್ಕು ಗಂಟೆ ಬಳಿಕ ಯುಟ್ಯೂಬ್ ಚಾನಲ್ನಲ್ಲೂ ಈ ಒಂದು ಟೀಸರ್ನ್ನ ನೋಡಬಹುದಾಗಿದೆ.
ಮಾರ್ಟಿನ್ ಚಿತ್ರದ ಟೀಸರ್ ಪ್ರದರ್ಶನದಿಂದ ಬರುವ ಹಣವನ್ನ ಒಂದು ಒಳ್ಳೆ ಕೆಲಸಕ್ಕೆ ಬಳಸುತ್ತಿದ್ದೇವೆ. ರಾಜ್ಯದಲ್ಲಿರೋ ಗೋಶಾಲೆಗಳಿಗೆ ಈ ಹಣವನ್ನ ಕೊಡುತ್ತಿದ್ದೇವೆ. ಸಿನಿಮಾ ಟೀಸರ್ ನೋಡಲಿಕ್ಕೆ ಸಾಕಷ್ಟು ಜನ ಬರ್ತಾರೆ ಅನ್ನುವ ನಂಬಿಕೆ ಇದ್ದೇ ಇದೆ.
ಮಾರ್ಟಿನ್ ನೋಡಲು ಜನ ಕಾಯುತ್ತಿದ್ದಾರೆ-ಎ. ಪಿ. ಅರ್ಜುನ್
ಮಾರ್ಟಿನ್ ಚಿತ್ರವನ್ನ ನೋಡಲಿಕ್ಕೆ ಜನ ಕಾಯುತ್ತಿದ್ದಾರೆ. ಆ ಕಾಯುವಿಕೆಗೇನೆ ನಾವು ಚಿತ್ರದ ಟೀಸರ್ನ್ನ ಚಿತ್ರ ಮಂದಿರದಲ್ಲಿ ಪ್ರದರ್ಶನ ಮಾಡುತ್ತಿದ್ದೇವೆ. ಆ ಅನುಭವ ಬೇಕು ಅನ್ನುವವರು ಮಾರ್ಟಿನ್ ಟೀಸರ್ ನೋಡ್ತಾರೆ ಅನ್ನುವ ನಂಬಿಕೆ ಜಾಸ್ತಿನೇ ಇದೆ.
ಮಾರ್ಟಿನ್ ಚಿತ್ರದಲ್ಲಿ ಮಾತುಗಳು ಕಡಿಮೆ ಇವೆ. 10 ಮಾತಿಗೆ ಒಂದು ಮಾತನ್ನ ಧ್ರುವ ಸರ್ಜಾ ಪಾತ್ರ ಇಲ್ಲಿ ಮಾತನಾಡುತ್ತದೆ. ಅದನ್ನ ಪೊಗರು ಚಿತ್ರ ಬರುವ ಮೊದಲೇ ಪ್ಲಾನ್ ಮಾಡಿದ್ದೇವೆ. ಸಿನಿಮಾಗೆ ಹೆಚ್ಚಿನ ಮಾತು ಬೇಡ ಅನ್ನೋ ಕಾರಣಕ್ಕೇನೆ ಇಲ್ಲಿ ಡೈಲಾಗ್ ಕಡಿಮೆ ಇಟ್ಟಿದ್ದೇವೆ.
ಮಾರ್ಟಿನ್ ಧ್ರುವ ಸರ್ಜಾ ಚಿತ್ರದಲ್ಲಿ ಮೂಡಿನಾ?
ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ ಕ್ಯಾರೆಕ್ಟರ್ ಮೂಡಿ ಕ್ಯಾರೆಕ್ಟರ್ ಆಗಿದೆ. ಅದಕ್ಕೇನೆ ಮಾತು ಕಡಿಮೆ ಅನ್ನೋದು ಅಷ್ಟೇ ಸತ್ಯ. ಸಿನಿಮಾದಲ್ಲಿ ಬೇರೆ ಬೇರೆ ಏನೇನೋ ವಿಷಯ ಇದೆ. ಆದರೆ ಸದ್ಯಕ್ಕೆ ಟೀಸರ್ ಮೂಲಕ ಒಂದಷ್ಟು ಥಿಯೇಟರಿಕಲ್ ಅನುಭವ ಕೊಡಲು ಮುಂದಾಗಿದ್ದೇವೆ ಅಂತ ಡೈರೆಕ್ಟರ್ ಎ.ಪಿ.ಅರ್ಜುನ್ ವಿವರಿಸುತ್ತಾರೆ.
ಟಿಕೆಟ್ ಖರೀದಿಸಿ-ಮಾರ್ಟಿನ್ ಟೀಸರ್ ವೀಕ್ಷಿಸಿ!
ಅಂದ್ಹಾಗೆ ಸಿನಿಮಾ ಹಾಗೇನೆ ಥಿಯೇಟರ್ನಲ್ಲಿ ಟೀಸರ್ ನೋಡಬೇಕು ಅನ್ನುವವರು, ಬಾಲ್ಕನಿಗೆ 100 ರೂಪಾಯಿ ಟಿಕೆಟ್ ಪಡೆಯಬೇಕು, ಡ್ರೆಸ್ ಸರ್ಕಲ್ ನಲ್ಲಿ ಕುಳಿತು ಮಾರ್ಟಿನ್ ಟೀಸರ್ ಎಂಜಾಯ್ ಮಾಡಬೇಕು ಅನ್ನೋರು 80 ರೂಪಾಯಿ ಟಿಕೆಟ್ ಪಡೆಯಬೇಕಿದೆ.
ಇದನ್ನೂ ಓದಿ: Love Birds: ಜೊತೆಯಾಗಿ ತೆರೆ ಮೇಲೆ ಬರೋಕೆ ರೆಡಿಯಾಗಿದ್ದಾರೆ ರಿಯಲ್ ಲವ್ ಬರ್ಡ್ಸ್
ಇನ್ನುಳಿದಂತೆ ಫೆಬ್ರವರಿ-23ಕ್ಕೆ ಮಾರ್ಟಿನ್ ಫ್ಯಾನ್ಸ್ ದೊಡ್ಡ ಹಬ್ಬ ಮಾಡಲಿದ್ದಾರೆ. ಅದಕ್ಕೆ ಬೇಕಾಗೋ ಎಲ್ಲ ತಯಾರಿನೂ ಈಗಲೇ ಶುರು ಆದಂತೆ ಕಾಣುತ್ತದೆ. ಹಾಗೇನೆ ಸಂಜೆ 5 ಗಂಟೆ ಹೊತ್ತಿಗೆ ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ