ಕನ್ನಡ ಚಿತ್ರರಂಗದ ಖ್ಯಾತಿ (Kannda Film Industry) ಎಲ್ಲೆಡೆ ಪಸರಿಸುತ್ತಲೇ ಇದೆ. ಈ ಹಿಂದೆ ಕನ್ನಡ ಸಿನಿಮಾರಂಗದ ಬಗ್ಗೆ ಇದ್ದ ಅಭಿಪ್ರಾಯ ಬದಲಾಗಿದೆ. ಸಿನಿಮಾ ಪ್ರೇಮಿಗಳು (Sandalwood Cinemas) ಇಲ್ಲಿವರೆಗೂ ಕನ್ನಡದಲ್ಲಿ ಮಾತ್ರ ಇದ್ದರು. ಆದರೆ ಕನ್ನಡ ಚಿತ್ರ ಪ್ರೇಮಿಗಳು ಈಗ ಪರ ಭಾಷೆಯಲ್ಲೂ ಇದ್ದಾರೆ. ಕನ್ನಡದ (Kannada Film Content) ಕಂಟೆಂಟ್ನ್ನ ತಮ್ಮ ಭಾಷೆಯಲ್ಲಿ ನೋಡ್ತಿದ್ದಾರೆ. ಇದರಿಂದ ಕನ್ನಡ ಚಿತ್ರಗಳ ಮಾರುಕಟ್ಟೆ ಪರ ಭಾಷೆಯ ಮಾರುಕಟ್ಟೆಗೆ ಕಾಲಿಟ್ಟಿದೆ. ಇದರಿಂದ ಕನ್ನಡದ ನಿರ್ದೇಶಕರ ಜಾಣ್ಮೆ ಈಗ ಅಲ್ಲಿ ನಿರ್ಮಾಪಕರಿಗೂ (Kannada Movies) ತಿಳಿಸಿದೆ. ಮಫ್ತಿ ಚಿತ್ರ ಬಂದಾಗ ನರ್ತನ್ ಅಲ್ಲಿ ಪರಿಚಯವಾದರು. ಆರ್. ಚಂದ್ರು ಅವರಂತೂ ತಮ್ಮ ಯಾವುದೇ ಚಿತ್ರವಿದ್ದರೂ ಟಾಲಿವುಡ್ಗೆ ಮುಟ್ಟಿಸಿ ಬರ್ತಾರೆ.
ಮೊನ್ನೆ ಮೊನ್ನೆ ವೇದ ಚಿತ್ರವೂ ರಿಲೀಸ್ ಆಯಿತು. ಇದರ ವಿಷಯ ಎಲ್ಲ ಕಾಲಕ್ಕೂ ಎಲ್ಲರ ಹೃದಯದಲ್ಲೂ ಉಳಿಯುವಂತಹದ್ದೇ ಆಗಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆ ಗೀತಾ ಪಿಕ್ಚರ್ಸ್ ತಮ್ಮ ಈ ಚಿತ್ರವನ್ನ ಟಾಲಿವುಡ್ನಲ್ಲೂ ರಿಲೀಸ್ ಮಾಡಿದೆ.
ಶಿವ ವೇದ ಬಳಿಕ ಹೆಚ್ಚಿದ ಡೈರೆಕ್ಟರ್ ಎ. ಹರ್ಷಾ ಬೇಡಿಕೆ
ಶಿವ ವೇದ ಹೆಸರಿನಲ್ಲಿ ಈ ಒಂದು ಚಿತ್ರ ಟಾಲಿವುಡ್ನಲ್ಲಿ ರಿಲೀಸ್ ಆಗಿತ್ತು. ಇದಕ್ಕಾಗಿಯೇ ಇಲ್ಲಿ ಪ್ರೀ ರಿಲೀಸ್ ಇವೆಂಟ್ ಕೂಡ ನಡೆದಿತ್ತು. ದೊಡ್ಡಮಟ್ಟದಲ್ಲಿಯೇ ಚಿತ್ರ ಟಾಲಿವುಡ್ನಲ್ಲಿ ರಿಲೀಸ್ ಆಗಿತ್ತು.
ಇಂತಹ ಸಿನಿಮಾ ಡೈರೆಕ್ಟರ್ ಎ. ಹರ್ಷಾ ಸುತ್ತ ಈಗೊಂದು ಸುದ್ದಿ ಹರಿದಾಡುತ್ತಿದೆ. ಕನ್ನಡದ ನಿರ್ದೇಶಕ ಎ. ಹರ್ಷಾ ಟಾಲಿವುಡ್ಗೆ ಕಾಲಿಡುತ್ತಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿಯೇ ಇದೆ.
ಟಾಲಿವುಡ್ನಲ್ಲಿ ಎ. ಹರ್ಷ ಮಾಡ್ತಿರೋ ಚಿತ್ರ ಯಾವುದು?
ಟಾಲಿವುಡ್ನಲ್ಲಿ ದೊಡ್ಡ ಬಜೆಟ್ನ ಸಿನಿಮಾ ರೆಡಿ ಆಗುತ್ತವೆ. ಇಲ್ಲಿ ಭಾರಿ ವೆಚ್ಚದ ಸಿನಿಮಾ ನಿರ್ವಿಸುವ ಸಂಸ್ಥೆ ಕೂಡ ಇವೆ. ಹೀಗಿರೋವಾಗ ಕನ್ನಡದ ಎ.ಹರ್ಷ ಅವರು ಈಗ ಇಲ್ಲಿಯ ಒಂದು ಚಿತ್ರವನ್ನ ನಿರ್ದೇಶನ ಮಾಡೋ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಅನ್ನುವ ಸುದ್ದಿ ಇದೆ.
ಸದ್ಯ ಹರಿದಾಡುತ್ತಿರೋ ಸುದ್ದಿ ನಿಜವೇ? ಇಲ್ಲವೇ ಗಾಳಿ ಸುದ್ದಿನಾ? ಅನ್ನುವ ಕುತೂಹಲ ಕೂಡ ಮೂಡಿಸಿದೆ. ಆದರೆ ಈ ಬಗ್ಗೆ ತೆಲುಗು ಚಿತ್ರರಂಗದಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ಟಾಲಿವುಡ್ ಪ್ರೊಜೆಕ್ಟ್ ಬಗ್ಗೆ ಎ.ಹರ್ಷ ಕೊಟ್ಟ ಡಿಟೈಲ್ಸ್ ಏನು?
ಆದರೆ ಹರ್ಷ ಅವರಿಗೆ ಬೆಳಗ್ಗೆಯಿಂದಲೇ ಅನೇಕ ಕಾಲ್ಗಳು ಬರ್ತಿವೆ. ನೀವು ಟಾಲಿವುಡ್ ಸಿನಿಮಾ ಮಾಡ್ತಿರೋದು ನಿಜವೇ? ಅನ್ನುವ ಆ ಪ್ರಶ್ನೆಗೆ ಡೈರೆಕ್ಟರ್ ಎ. ಹರ್ಷ ಉತ್ತರ ಕೂಡ ಕೊಟ್ಟಿದ್ದಾರೆ. ಹಾಗೆ ನ್ಯೂಸ್-18 ಕನ್ನಡ ಡಿಜಿಟ್ಗೂ ಹರ್ಷ ಈ ವಿಷಯವಾಗಿ ಮಾತನಾಡಿದ್ದಾರೆ.
ಟಾಲಿವುಡ್ನಲ್ಲಿ ಒಂದು ಸಿನಿಮಾ ಮಾಡುವ ವಿಚಾರ ಇನ್ನೂ ಆರಂಭದ ಹಂತದಲ್ಲಿಯೇ ಇದೆ. ಈ ವಿಷಯವಾಗಿ ಮಾತುಕತೆ ನಡೆಯುತ್ತಿದೆ. ಆದರೆ ಇನ್ನು ಯಾವುದೇ ರೀತಿಯ ನಿರ್ಧಾರಗಳು ಆಗಿಲ್ಲ ಎಂದು ಹರ್ಷ ಹೇಳಿದ್ದಾರೆ.
ಟಾಲಿವುಡ್ ಪ್ರೊಜೆಕ್ಟ್ ಬಗ್ಗೆ ಹರ್ಷ ಇನ್ನೂ ಏನ್ ಹೇಳ್ತಾರೆ?
ಡೈರೆಕ್ಟರ್ ಹರ್ಷ ಪಕ್ಕಾ ಪ್ಲಾನ್ ಮಾಡಿಕೊಂಡೇ ಸಿನಿಮಾ ಮಾಡುತ್ತಾರೆ. ಸ್ಕ್ರಿಪ್ಟ್ ಲೆವಲ್ನಲ್ಲಿಯೇ ಒಳ್ಳೆ ಕಥೆ ಮಾಡಿಕೊಂಡಿರುತ್ತಾರೆ. ವೇದ ಚಿತ್ರವನ್ನು ಅದೇ ರೀತಿ ರೆಡಿ ಮಾಡಿಕೊಂಡಿದ್ದರು.
ಹಾಗೇನೆ ಈಗ ತೆಲುಗು ಚಿತ್ರಕ್ಕೆ ಸಂಬಂಧಿಸಿದಂತೆ ತಯಾರಿಯನ್ನ ಮಾಡಿಕೊಳ್ತಾರೆ ಅಂತಲೇ ಹೇಳಬಹುದು. ಆದರೆ ಈ ಬಗ್ಗೆ ಈಗಲೇ ಏನೂ ಹೇಳೋಕೆ ಆಗೋದಿಲ್ಲ ಅನ್ನುವ ಅರ್ಥದಲ್ಲಿ ಡೈರೆಕ್ಟರ್ ಎ. ಹರ್ಷ ಹೇಳಿಕೊಳ್ತಾರೆ.
ಇದನ್ನೂ ಓದಿ; Pakistani Actress: ಭಾರತೀಯ ವಧುವಿನಂತೆ ಉಡುಪು ಧರಿಸಿದ್ದಕ್ಕಾಗಿ ಟ್ರೋಲ್ ಆದ್ರು ಪಾಕಿಸ್ತಾನಿ ನಟಿ!
ಹಾಗೇನೆ ಸದ್ಯ ಹರಿದಾಡುತ್ತಿರೋ ಸುದ್ದಿಗೆ ಸಂಬಂಧಿಸಿದಂತೆ ಡೈರೆಕ್ಟರ್ ಎ. ಹರ್ಷ ನ್ಯೂಸ್-18 ಕನ್ನಡ ಡಿಜಿಟಲ್ಗೆ ರಿಯ್ಯಾಕ್ಟ್ ಮಾಡಿದ್ದಾರೆ. ಈ ಚಿತ್ರದ ಮಾಹಿತಿಯನ್ನ ಅಧಿಕೃತವಾಗಿಯೇ ಕೊಡೊದಾಗಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ