ಚಂದನವನದ ಸಿಂಪಲ್ ಚೆಲುವೆ. ಸಾಫ್ಟ್ (Dia Khushi Ravi Special Look) ಸ್ಪೋಕನ್ ಬೆಡಗಿ. ಮೊದಲ ಚಿತ್ರದಲ್ಲಿಯೇ ಇಡೀ ಕನ್ನಡ ನಾಡಿನ ಜನತೆಯ ದಿಲ್ ಕದ್ದ ದಿಯಾ ಇವರೇ. ಇವರ ಲೈಫ್ ಅಲ್ಲಿ ಮೊದಲ ಹೆಜ್ಜೆನೆ ಸೂಪರ್ ಆಗಿದೆ. ಡೈರೆಕ್ಟರ್ ಅಶೋಕ್ ನಿರ್ದೇಶನದ ದಿಯಾ ಚಿತ್ರದ ಮೂಲಕ ಸಕ್ಸಸ್ ಕಂಡ ದಿಯಾ ಚಿತ್ರ ಖ್ಯಾತಿಯ (Khushi Ravi Photo Shoot) ನಟಿ ಖುಷಿ ರವಿ ಈಗೊಂದು ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಬೆಳ್ಳಂಬೆಳಗ್ಗೆ ಕೆ. ಆರ್. ಮಾರ್ಕೆಟ್‌ನಲ್ಲಿ ಈ ಒಂದು ಫೋಟೋ ಶೂಟ್ ಮಾಡಲಾಗಿದೆ. ಇದರ (Khushi Ravi New Shoot) ಅನುಭವವನ್ನ ನಟಿ ಖುಷಿ ರವಿ, ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.
ಒಂದಷ್ಟು ಫೋಟೋಗಳನ್ನ ಕೂಡ ಶೇರ್ (Dia Heroine New Photo Shoot) ಮಾಡಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ ಓದಿ.
ದಿಯಾ ಚಿತ್ರ ಖ್ಯಾತಿಯ ನಟಿ ಖುಷಿ ರವಿ ಬೆಳ್ಳಂಬೆಳಗ್ಗೆ ಕೆ. ಆರ್. ಮಾರ್ಕೆಟ್ ಗೆ ಹೋಗಿದ್ದರು. ಸುಮ್ನೆ ಏನೋ ಹೂವೋ ಹಣ್ಣೋ ತರೋಕೆ ಇವರು ಇಲ್ಲಿಗೆ ಹೋಗಿರಲಿಲ್ಲ. ಖುಷಿ ರವಿ ಇಲ್ಲಿ ಬರೋಕೆ ಒಂದು ಬಲವಾದ ಕಾರಣವೂ ಇತ್ತು. ಆ ಕಾರಣ ಏನೂ ಅನ್ನೋದು ಈಗಾಗಲೇ ಓದಿದ್ದಿರಿ. ಅದರ ಇನ್ನಷ್ಟು ವಿಷಯ ಇಲ್ಲಿ ಹೇಳ್ತಾ ಹೋಗ್ತೀವಿ ನೋಡಿ.
ದಿಯಾ ಚಿತ್ರದ ಖುಷಿಯ-ಸೂಪರೋ ಸೂಪರ್
ಅಂದ್ಹಾಗೆ ನಟಿ ಖುಷಿ ರವಿ ಇಲ್ಲಿಯ ಕೆ. ಆರ್. ಮಾರ್ಕೆಟ್‌ನ ಹೂವಿನ ಮಾರ್ಕೆಟ್‌ಗೆ ಹೋಗಿದ್ದರು. ತುಂಬಾ ಸುಂದರವಾದ ಸೀರೆಯನ್ನ ಧರಿಸಿಕೊಂಡು ಮೊದಲು ಖುಷಿ ಪಟ್ಟರು. ಆಮೇಲೆ ಕ್ಯಾಮೆರಾಗೆ ಪೋಸ್ ಕೊಟ್ರು ನೋಡಿ. ಪ್ರತಿ ಫೇಮ್ ಅಲ್ಲೂ ಅದ್ಭುತ ಎಕ್ಸಪ್ರೆಷನ್‌ಗಳು ಮೂಡಿ ಬಂದಿವೆ.
ಕೆ. ಆರ್. ಮಾರ್ಕೆಟ್‌ನ ಹೂವಿನ ಮಾರುಕಟ್ಟೆಯಲ್ಲಿ ದಿಯಾ ಹೂವುಗಳ ಮಧ್ಯೆ ಕುಳಿತು ಫೋಸ್ ಕೊಟ್ಟಿದ್ದಾರೆ. ಆ ಫೋಟೋಗಳನ್ನ ನೋಡಿದ್ರೆ, ಹೂವುಗಳ ಮಧ್ಯೆ ಮತ್ತೊಂದು ವಿಶೇಷ ಹೂವನ್ನ ಕಂಡಷ್ಟೇ ಖುಷಿ ಆಗುತ್ತದೆ. ಅಷ್ಟು ಮನಮೋಹಕವಾಗಿಯೇ ಖುಷಿ ಇಲ್ಲಿ ಕಾಣಿಸಿಕೊಳ್ಳುತ್ತಾರೆ.
ಕೆ. ಆರ್. ಮಾರ್ಕೆಟ್‌ನಲ್ಲಿ ಕಂಗೊಳಿಸಿದ ಕನ್ನಡದ ನಟಿ ಖುಷಿ
ಖುಷಿ ರವಿ ಅವರಿಗೆ ಈ ಒಂದು ಫೋಟೊ ಶೂಟ್ ಒಳ್ಳೆ ಅನುಭವ ಕೊಟ್ಟಿದೆ. ಬೆಳ್ಳಂಬೆಳಗ್ಗೆ ಕೆ. ಆರ್. ಮಾರ್ಕೆಟ್‌ನ ಸುಂದರ ಮತ್ತು ಅದ್ಭುತ ಅನಿಸೋ ನೈಜ ಲೋಕೇಶಷನ್‌ನಲ್ಲಿಯೇ ಫೋಟೋ ಶೂಟ್ ಮಾಡಿಸಿದ್ದಾರೆ.
ಈ ಫೋಟೋ ಶೂಟ್‌ಲ್ಲಿ ವಿಂಟೇಜ್ ಲುಕ್ ಅಲ್ಲಿಯೇ ಖುಷಿ ರವಿ ಕಾಣಿಸಿಕೊಂಡಿದ್ದಾರೆ. ನಾಗರಾಜ್ ಸೋಮಯಾಜಿ ಅವರ ಫೋಟೋಗ್ರಾಫಿಯಲ್ಲಿ ಇದು ಮೂಡಿ ಬಂದಿದೆ. ಇವರೇ ಈ ಒಂದು ವಿಶೇಷ ಫೋಟೋ ಶೂಟ್ ಪ್ಲಾನ್ ಮಾಡಿದ್ದಾರೆ.
ಹೂವಿನ ಸಂತೆಯಲಿ ಖುಷಿಯ ಹೊಸದೊಂದು ಖುಷಿ
ಖುಷಿ ರವಿ ಈ ಒಂದು ಫೋಟೋ ಶೂಟ್‌ಲ್ಲಿ ಹೂವಿನ ಮಧ್ಯೆದಲ್ಲಿ ಸ್ಪೆಷಲ್ ಆಗ ಕಾಣಿಸಿಕೊಳ್ಳೋದಲ್ಲದೇ, ಇಲ್ಲಿಯ ಲಾರಿ ಎದುರು ಕೂಡ ಕ್ಯಾಮೆರಾಗೆ ಪೋಜ್ ಕೊಟ್ಟಿದ್ದಾರೆ. ಅದು ಕೂಡ ಸ್ಪೆಷಲ್ ಆಗಿಯೇ ಕಾಣಿಸಿಕೊಳ್ಳುತ್ತದೆ.
ಇನ್ನು ಈ ಒಂದು ಫೋಟೋ ಶೂಟ್ ಹಿಂದೆ ಒಳ್ಳೆ ಟೀಮ್ ಇದೆ. ಐಶ್ವರ್ಯ ಸಾಕೆ ಸಾಯಿ-ಕಾಸ್ಟೂಮ್, ಶ್ವೇತಾ ಗೌಡ-ಮೇಕಪ್ ಮಾಡಿದ್ದಾರೆ. ಇನ್ನುಳಿದಂತೆ ಖುಷಿ ರವಿ ಈ ಮೂಲಕ ಹೊಸ ರೀತಿ ಕಾಣಿಸುತ್ತಿದ್ದಾರೆ. ದಿಯಾ ಸಿನಿಮಾದಲ್ಲಿ ವಿಭಿನ್ನ ಪಾತ್ರ ಮಾಡೋ ಮೂಲಕ ಕನ್ನಡಿಗರ ಹೃದಯದಲ್ಲಿ ಉಳಿದುಕೊಂಡಿದ್ದಾರೆ.
ದಿಯಾ ಚಿತ್ರದ ಖುಷಿಯ ಹೊಸ ಖುಷಿ ಏನು ಗೊತ್ತೇ?
ದಿಯಾ ಆದ್ಮೇಲೆ ಖುಷಿ ರವಿ, ಸ್ಪೂಕಿ ಕಾಲೇಜ್ ಚಿತ್ರದಲ್ಲಿ ಅಭಿನಯಿಸಿದ್ದರು. ಇದು ಕೂಡ ಸ್ಪೆಷಲ್ ಸಿನಿಮಾನೇ ಆಗಿತ್ತು. ಇದಾದ್ಮೇಲೆ ನಕ್ಷೆ ಅನ್ನೋ ಚಿತ್ರದಲ್ಲೂ ಖುಷಿ ರವಿ ನಟಿಸಿದ್ದಾರೆ. ಇದರ ಮಧ್ಯೆ ತಮಿಳಿನ ಆದಿಪೊಲಿ (Adipoli) ಹೆಸರಿನ ವಿಡಿಯೋ ಆಲ್ಮಂ ನಲ್ಲೂ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Atress Apoorva: ಇವರು 'ಜೊತೆ ಜೊತೆಯಲಿ' ಪುಷ್ಪಾನೇ, ಅಪೂರ್ವ ಅವರ ಅಪರೂಪದ ಫೋಟೋಗಳು
ದಿಯಾ ಚಿತ್ರದ ಖುಷಿ ರವಿ ಇದರ ಮಧ್ಯೆ ಈ ಒಂದು ಸ್ಪೆಷಲ್ ಫೋಟೋ ಶೂಟ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಹಿಂದಿನ ದಿಯಾ ಈ ಒಂದು ಫೋಟೋ ಶೂಟ್ ಅಲ್ಲಿ ನಿಮಗೆ ಕಾಣೋದೇ ಇಲ್ಲ. ಸ್ಪೆಷಲ್ ಆಗಿಯೇ ಖುಷಿ ಇಲ್ಲಿ ನಿಮ್ಮ ಕಣ್ಮಣ ಸೆಳೆಯುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ