Dia Actress Khushi: ವಿಜಯ್ ರಾಘವೇಂದ್ರ ಜೊತೆ ದಿಯಾ ಹೀರೋಯಿನ್ ಖುಷಿ!

ನಿಮ್ಮ ದಿಯಾ ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗಿದೆ. ಮರಾಠಿ ಭಾಷೆಯಲ್ಲೂ ಇದೆ ಕಥೆ ರಿಮೇಕ್ ಆಗಿದೆ. ಆದರೆ ಈ ಚಿತ್ರಗಳಲ್ಲಿ ಪ್ರಮುಖ ಪಾತ್ರಧಾರಿ ನೀವೇ ಇಲ್ವೇ ? ಹೀಗೆ ಪ್ರಶ್ನೆ ಮಾಡಿದ್ರೆ, ಖುಷಿ ಯಾವುದೇ ಭಯ ಇಲ್ಲದೆ ಎಲ್ಲ ಹೇಳಿಬಿಡ್ತಾರೆ.

ದಿಯಾ ಸಿನಿಮಾ ನಾಯಕಿ ಖುಷಿ ಫೋಸ್

ದಿಯಾ ಸಿನಿಮಾ ನಾಯಕಿ ಖುಷಿ ಫೋಸ್

  • Share this:
ಕನ್ನಡದ ದಿಯಾ ಸಿನಿಮಾ ನಾಯಕಿ ಖುಷಿ (Khushi) ಏನ್ ಮಾಡುತ್ತಿದ್ದಾರೆ. ದಿಯಾ ಸಿನಿಮಾ (Cinema) ಬಂದ್ಮೇಲೆ ಎಲ್ಲಿಗೆ ಹೋದ್ರು, ಕನ್ನಡದ ದಿಯಾ ಹಿಂದಿಯಲ್ಲೂ ರಿಮೇಕ್ ಆಗಿದೆ. ಮರಾಠಿಯಲ್ಲೂ ಚಿತ್ರ ಇನ್ನೇನು ಮುಗಿತಾ ಬಂತು. ಆದರೂ ದಿಯಾ ಪಾತ್ರಧಾರಿ ಖುಷಿ ಕಳೆದೇ ಹೋದ್ರೆ, ಹೀಗೆ ಕೇಳೋ ಹೊತ್ತಿಗೆ ಸ್ವತಃ ಖುಷಿ ನೋ ವೇ ಚಾನ್ಸೆ ಇಲ್ಲ ಅಂತ ಒಂದಷ್ಟು ಪ್ರೋಜೆಕ್ಟ್​ ಗಳನ್ನ (Projects) ಈಗಾಗಲೆ ಒಪ್ಪಿಕೊಂಡಿದ್ದಾರೆ. ಮೊನ್ನೆ ಮೊನ್ನೆ ಹೊಸ ಚಿತ್ರವೊಂದರ ಮುಹೂರ್ತ ಕೂಡ ಆಗಿದೆ. ಈ ಚಿತ್ರಕ್ಕೆ ವಿಜಯ್ ರಾಘವೇಂದ್ರ ಹೀರೋ. ದಿಯಾ ಚಿತ್ರ ಖ್ಯಾತಿಯ ನಾಯಕಿ ಖುಷಿ ಇಲ್ಲಿ ಹೀರೋಯಿನ್​.ಈ ಹೊಸ ಚಿತ್ರದ ಹಿನ್ನೆಲೆಯಲ್ಲಿಯೇ ಖುಷಿ ತಮ್ಮ ಇತರ ಪ್ರೋಜೆಕ್ಟ್ ಬಗ್ಗೆ ಮಾತನಾಡಿದ್ದಾರೆ. ದಿಯಾ ಚಿತ್ರ ಅಸಲಿ ಸತ್ಯವನ್ನೂ ಮತ್ತೆ ಹೇಳಿಕೊಂಡಿದ್ದಾರೆ.

ಕನ್ನಡದ ದಿಯಾ ಚಿತ್ರದ ನಾಯಕಿ ಖುಷಿ ಒಳ್ಳೇ ನಟಿ ಅಂತ ಈ ಚಿತ್ರದಲ್ಲಿಯೇ ಎಲ್ಲರಿಗೂ ಗೊತ್ತಾಗಿದೆ. ತಮ್ಮ ಈ ಚಿತ್ರದ ಮೂಲಕವೇ ಕನ್ನಡಿಗರ ಮನಸ್ಸಿನಲ್ಲಿ ಮನೆಮಾಡಿಕೊಂಡಿದ್ದಾರೆ. ತಮ್ಮ ವಿಶೇಷ ಭಾವಾಭಿನಯ, ವಿಭಿನ್ನ ಅನಿಸೋ ಡೈಲಾಗ್ ಡಿಲೇವರಿ, ಎಲ್ಲವೂ ವಿಶೇಷವಾಗಿಯೇ ಇವೆ.

ದಿಯಾ ಚಿತ್ರದಲ್ಲಿ ನಾಯಕ ಖುಷಿ ಪಾತ್ರ ಅದ್ಭುತ 
ಇಂತಹ ಈ ಚಿತ್ರ ದಿಯಾ ಹಿಟ್ ಆಯಿತು. ಜನ ಈ ಚಿತ್ರವನ್ನ ಕೊಂಡಾಡಿದರು. ಸಿನಿಮಾದ ಪಾತ್ರಧಾರಿ ಗೋಳು ಕಂಡು ಒಂದ್ ಅರೆಕ್ಷಣ ಬೇಸರ ಪಟ್ಟುಕೊಂಡರು. ಅಷ್ಟು ಪರಿಣಾಮಕಾರಿಯಾಗಿಯೇ ದಿಯಾ ಪಾತ್ರವನ್ನ ಖುಷಿ ಅಭಿನಯಿಸಿದ್ದರು.

ದುರಂತ ನೋಡಿ, ಇದೇ ಚಿತ್ರದ ಇದೇ ನಾಯಕಿ ಪಾತ್ರವನ್ನೇ ಎಲ್ಲರೂ ಇಷ್ಟಪಟ್ಟರು. ಚಿತ್ರ ಕೂಡ ಬೇರೆ ಭಾಷೆಯಲ್ಲಿ ರಿಮೇಕ್ ಆಗುತ್ತದೆ ಅಂದ್ಮೇಲೆ ಸಹಜವಾಗಿಯೇ ಈ ನವ ನಟಿಯನ್ನೇ ಕಾಸ್ಟ್ ಮಾಡ್ತಾರೆ ಅನ್ನೊ ಅಂದಾಜು ಎಲ್ಲರಿಗೂ ಇತ್ತು.

Dia film Actress Khushi New Project with Vijay Raghavendra
ಕನ್ನಡ ನಾಯಕಿ ನಟಿ ಖುಷಿ



ದಿಯಾ ರಿಮೇಕ್ ಸಿನಿಮಾದಲ್ಲಿ ಖುಷಿ ಇಲ್ಲವೇ ಇಲ್ಲ ಯಾಕೆ
ಆದರೆ ಅದು ಹಾಗೆ ಆಗಲೆ ಇಲ್ಲ. ಹಿಂದಿ ರಿಮೇಕ್ ನಲ್ಲೂ ಕನ್ನಡದ ಖುಷಿ ಇಲ್ಲ. ಮರಾಠಿ ಭಾಷೆಯ ದಿಯಾ ಚಿತ್ರದಲ್ಲೂ ಖುಷಿ ಕಾಣಲೇ ಇಲ್ಲ. ಇದಕ್ಕೆ ಕಾರಣಗಳು ಸಿಂಪಲ್ ಆಗಿಯೇ ಇವೆ. ಸ್ವತಃ ಖುಷಿ ನಮ್ಮ ಜೊತೆಗೆ ಅದನ್ನ ಯಾವುದೇ ಭಯವೂ ಇಲ್ಲದೆ ಹಂಚಿಕೊಂಡಿದ್ದಾರೆ.

ನಿಮ್ಮ ದಿಯಾ ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗಿದೆ. ಮರಾಠಿ ಭಾಷೆಯಲ್ಲೂ ಕಥೆ ರಿಮೇಕ್ ಆಗಿದೆ. ಆದರೆ ಈ ಚಿತ್ರಗಳಲ್ಲಿ ಪ್ರಮುಖ ಪಾತ್ರಧಾರಿ ನೀವೇ ಇಲ್ವೇ ? ಹೀಗೆ ಪ್ರಶ್ನೆ ಮಾಡಿದ್ರೆ, ಖುಷಿ ಯಾವುದೇ ಭಯ ಇಲ್ಲದೆ ಎಲ್ಲ ಹೇಳಿಬಿಡ್ತಾರೆ.

ದಿಯಾ ಹೀರೋಯಿನ್ ಖುಷಿ ಈಗ ಏನ್ ಹೇಳ್ತಾರೆ
ಒಂದು ಚಿತ್ರದಲ್ಲಿ ಅದ್ಯಾರೋ ತಮ್ಮ ರಿಲೇಟಿವ್ ಹುಡುಗಿಗಾಗಿಯೇ ಈ ಚಿತ್ರ ಮಾಡಿದರು. ಇನ್ನೊಂದು ಭಾಷೆಯ ಚಿತ್ರದಲ್ಲಿ ಫೇಮಸ್ ನಟಿ ಬೇಕು ಅಂತ ಅದ್ಯಾರನ್ನೋ ಹಾಕಿದರು. ಹಿಂಗಾಗಿಯೇ ನಾನು ರಿಮೇಕ್ ಸಿನಿಮಾದಲ್ಲಿ ಅಭಿನಯಿಸೋಕೆ ಆಗಲೇ ಇಲ್ಲ ಅಂತಲೇ ದಿಯಾ ಖ್ಯಾತಿಯ ನಟಿ ಖುಷಿ ಹೇಳಿಕೊಂಡಿದ್ದಾರೆ

Dia film Actress Khushi New Project with Vijay Raghavendra
ದಿಯಾ ಚಿತ್ರದ ನಾಯಕಿ ನಟಿ ಖುಷಿ ಸಖತ್ ಲುಕ್


ಖುಷಿ ಸದ್ಯಕ್ಕೆ ಖುಷಿಯಾಗಿಯೇ ಇದ್ದಾರೆ. ಫ್ಯಾಮಿಲಿ ಜೊತೆಗೆ ಟೈಮ್ ಸ್ಪೆಂಡ್ ಮಾಡ್ತಾನೇ, ಕೇಸ್ ಆಫ್ ಕೊಂಡಾಣ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದೇವಿ ಪ್ರಸಾದ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಸ್ಪೂಕಿ ಕಾಲೇಜ್ ಅನ್ನೋ ಇನ್ನೂ ಒಂದು ಸಿನಿಮಾ ಮಾಡಿದ್ದಾರೆ. ಇದೂ ಕೂಡ ವಿಶೇಷ ಅನಿಸುತ್ತಿದ್ದು, ಖುಷಿ ಸದ್ಯ ಖುಷಿಯಾಗಿಯೇ ಇದ್ದಾರೆ.
First published: