ಕನ್ನಡದ ದಿಯಾ (Dia Movie)ಸಿನಿಮಾ ಇಬ್ಬರು ಹೀರೋ ಮತ್ತು ಒಬ್ಬ ಹೀರೋಯಿನ್ನ್ನು ಕನ್ನಡ (Kannada Film Industry) ಇಂಡಸ್ಟ್ರಿಗೆ ಕೊಟ್ಟಿದೆ. ಅದಕ್ಕೂ ಮೊದಲು ಈ ಚಿತ್ರದ ಕಲಾವಿದರು ತಮ್ಮದೇ ರೀತಿಯಲ್ಲಿ ಇಂಡಸ್ಟ್ರಿಯಲ್ಲಿದ್ದಾರೆ, ಗುರುತಿಸಿಕೊಂಡಿದ್ದಾರೆ. ಆದರೆ ಇವರಿಗೆ ದಿಯಾ ಸಿನಿಮಾ ಕೊಟ್ಟ ಯಶಸ್ಸು ಇನ್ನೂ ಇದೆ. ಇದರಿಂದಲೇ ಜನ ಈ ಕಲಾವಿದರನ್ನ ಗುರುತಿಸುತ್ತಾರೆ. ಹಾಗೇಯೇ ಈ ಚಿತ್ರದ ಕಲಾವಿದರು ತಮ್ಮದೇ ರೀತಿಯಲ್ಲಿ ಬೇರೆ ಬೇರೆ ಸಿನಿಮಾಗಳಲ್ಲಿ ಅಭಿನಯಿಸುತ್ತಲೇ, ತಮ್ಮ ಸಿನಿ ಜರ್ನಿಯನ್ನ ಮುಂದುವರೆಸಿದ್ದಾರೆ. ಆ ನಿಟ್ಟಿನಲ್ಲಿಯೇ ದಿಯಾ ಚಿತ್ರದ ಇಬ್ಬರು ನಾಯಕರಲ್ಲಿ ಒಬ್ಬರಾದ ನಟ ದೀಕ್ಷಿತ್ ಶೆಟ್ಟಿ(Dheekshith Shetty) ಕನ್ನಡ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಆ ಲೆಕ್ಕದಲ್ಲಿ ಈಗ ದೀಕ್ಷಿತ್ ಶೆಟ್ಟಿ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.
ದಿಯಾ ಹೀರೊ ಅಭಿನಯದ ಆ ಚಿತ್ರ ಯಾವುದು?
ದಿಯಾ ಚಿತ್ರದ ಮೂಲಕ ದೀಕ್ಷಿತ್ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಅದೇ ರೀತಿ ಸೀರಿಯಲ್ ಮೂಲಕವೂ ದೀಕ್ಷಿತ್ ಸೀರಿಯಲ್ಯ ಪ್ರಿಯರ ಫೇವರಿಟ್ಗೆ ಆಗಿದ್ದಾರೆ. ಆದರೆ ದಿಯಾ ಸಿನಿಮಾ ಬಂದ್ಮೇಲೆ ಕಂಪ್ಲೀಟ್ ದಿಯಾ ಹೀರೋನೆ ಆಗಿದ್ದಾರೆ.
ದಿಯಾ ಸಿನಿಮಾ ಆದ್ಮೇಲೆ ದೀಕ್ಷಿತ್ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ನಾಯಕ ನಟ ನಾನಿ ಅಭಿನಯದ ಪ್ಯಾನ್ ಇಂಡಿಯಾ ದಸರಾ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಹೀಗೆ ತಮ್ಮ ಸಿನಿ ಜರ್ನಿಯನ್ನ ಟಾಲಿವುಡ್ಗೂ ತೆಗೆದುಕೊಂಡು ಹೋಗಿರೋ ದೀಕ್ಷಿತ್, ಕನ್ನಡದ ಒಂದಷ್ಟು ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ.
ದೀಕ್ಷಿತ್ ಕನ್ನಡ ಚಿತ್ರಗಳಿಗೆ ಇಂಗ್ಲೀಷ್ ಟೈಟಲ್!
ದೀಕ್ಷಿತ್ ಅಭಿನಯದ ಕನ್ನಡದ ಒಂದಷ್ಟು ಸಿನಿಮಾಗಳು ಇವೆ. ಈ ಚಿತ್ರಗಳಿಗೆ ಇಂಗ್ಲೀಷ್ ಟೈಟಲ್ ಇವೆ. ಆದರೆ ಅವುಗಳಿಗೆ ಅದರದ್ದೇ ಆದ ಮೀನಿಂಗ್ ಕೂಡ ಇದೆ. ಆ ಲೆಕ್ಕದಲ್ಲಿಯೇ ದೀಕ್ಷಿತ್ ಅಭಿನಯದ KTM ಸಿನಿಮಾದ ಪೋಸ್ಟರ್ ಈಗ ಹೊರ ಬಂದಿದೆ.
ದೀಕ್ಷಿತ್ ಅಭಿನಯದ KTM ಸಿನಿಮಾದಲ್ಲಿ ದೀಕ್ಷಿತ್ ಅಭಿನಯ ವಿಶೇಷವಾಗಿಯೇ ಇದೆ. ಪ್ರೀತಿ ಪ್ರೇಮದ ಕಥೆಯನ್ನೂ ಈ ಚಿತ್ರ ಹೊಂದಿದೆ. ಹಾಗಾಗಿಯೇ KTM ಸಿನಿಮಾದ ಸಬ್ ಟೈಟಲ್ ಅಷ್ಟೇ ವಿಶೇಷ ಕೂಡ ಅನಿಸುತ್ತದೆ.
ರೈಸ್ ಇನ್ ಲವ್ ಅನ್ನೋದೇ ಈ ಸಿನಿಮಾದ ಸಬ್ ಟೈಟಲ್ ಆಗಿದೆ. ಲವ್ ಅಲ್ಲಿ ಬೀಳೋದು ಅನ್ನೋ ಮಾತು ಇದೆ. ಆದರೆ, ಇಲ್ಲಿ ರೈಸ್ ಇನ್ ಲವ್ ಅನ್ನೋ ಮೂಲಕ ಡೈರೆಕ್ಟರ್ Aruna ಪ್ರೀತಿಗೆ ಹೊಸ ಬರಹ ಬರೆದಂತೆ ಕಾಣುತ್ತಿದೆ.
KTM ಕನ್ನಡ ಸಿನಿಮಾ ಯಾವಾಗ ರಿಲೀಸ್?
ರಚನೆ ಮತ್ತು ನಿರ್ದೇಶನವನ್ನ ಈ ಚಿತ್ರಕ್ಕೆ Aruna ಅವ್ರೇ ಮಾಡಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಎಲ್ಲ ಕೆಲಸ ಪೂರ್ಣಗೊಂಡಿದೆ. ಚಿತ್ರದ ಮೊದಲ ಪೋಸ್ಟರ್ ಗಮನ ಸೆಳೆದಿತ್ತು. ಈಗ ಈ ಸಿನಿಮಾದ ಎರಡನೇ ಪೋಸ್ಟರ್ ರಿಲೀಸ್ ಆಗಿದೆ. ಗಮನ ಸೆಳೆದಿದೆ.
ಕೆಟಿಎಂ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಸಿನಿಮಾ ಈಗ ರಿಲೀಸ್ಗೂ ರೆಡಿ ಆಗಿದೆ. ಅಷ್ಟರಲ್ಲಿಯೇ ಸಿನಿಮಾದ ಎರಡನೇ ಪೋಸ್ಟರ್ ಭರವಸೆ ಮೂಡಿಸಿದೆ. ಇನ್ನುಳಿದಂತೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಬೇಕಿದೆ.
ಇದನ್ನೂ ಓದಿ: Appu Tattoo: ಅಭಿಮಾನಿಗಳೇ ನನ್ನ ದೇವರು ಎಂದು ಟ್ಯಾಟೂ ಹಾಕಿಸಿಕೊಳ್ತೀನಿ, ಅಪ್ಪು ಹೇಳಿದ ಈ ಮಾತು ನೆರವೇರಲೇ ಇಲ್ಲ!
ಇನ್ನು ನಟ ದೀಕ್ಷಿತ್ ಶೆಟ್ಟಿ ಚಿತ್ರ ಜೀವನದಲ್ಲಿ ಈ ಸಿನಿಮಾ ವಿಶೇಷವೇ ಆಗಿದೆ. ಈ ಚಿತ್ರಕ್ಕಾಗಿಯೇ ದೀಕ್ಷಿತ್ ಲುಕ್ ಅನ್ನೂ ಬದಲಿಸಿಕೊಂಡಿದ್ದಾರೆ. ಆ ಮೂಲಕ ನಿರೀಕ್ಷೆಯನ್ನೂ ಹೆಚ್ಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ