HOME » NEWS » Entertainment » KANNADA CREATIVE DIRECTOR UPENDRAS GURU ACTOR KASHINATH BIRTHDAY VB

Kashinath Birthday: ಕನ್ನಡ ಚಿತ್ರರಂಗದ ಖ್ಯಾತಿಯನ್ನು ಪರ್ವತದೆತ್ತರಕ್ಕೆ ಕೊಂಡೊಯ್ದ ಕಾಶೀನಾಥ್!

ಕಾಶೀನಾಥ್ ಅವರು ತೆಗೆದ ಸಿನಿಮಾಗಳು ಒಂದೊಂದೂ ಮಾಸ್ಟರ್​ ಪೀಸ್. ನಟನೆ, ಸಂಭಾಷಣೆ, ಕಥೆ, ಸಿನಿಮಾಟೋಗ್ರಫಿಯಲ್ಲಿ ಅಲ್ಲಿವರೆಗೆ ಇದ್ದ ಎಲ್ಲ ಅಲಿಖಿತ ಸಿನಿಮಾವಳಿಗಳನ್ನ ಕಿತ್ತೊಗೆದು ಹೊಸ ಶೈಲಿಯ ಮಾಸ್ಟರ್ ಆಗಿದ್ದರು.

news18-kannada
Updated:May 8, 2020, 3:45 PM IST
Kashinath Birthday: ಕನ್ನಡ ಚಿತ್ರರಂಗದ ಖ್ಯಾತಿಯನ್ನು ಪರ್ವತದೆತ್ತರಕ್ಕೆ ಕೊಂಡೊಯ್ದ ಕಾಶೀನಾಥ್!
ಕಾಶೀನಾಥ್
  • Share this:
ಇಂದು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ನಿರ್ದೇಶಕ ಕಾಶೀನಾಥ್ ಅವರ 69ನೇ ಹುಟ್ಟುಹಬ್ಬ. ಕಾಶೀನಾಥ್ ಸಿನಿಮಾಗಳು ಎಂದರೆ ಅದು ಪೋಲಿ ಸಿನಿಮಾ ಎಂಬ ಹಣೆಪಟ್ಟಿ ಕಟ್ಟಿಕೊಂಡರೂ ಆ ಮೂಲಕವೇ ಸಮಾಜದ ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದವು. ಪೋಲಿ ಡೈಲಾಗ್, ಹಸಿ ಬಿಸಿ ದೃಶ್ಯಗಳಿದ್ದರೂ ಅಂತಿಮವಾಗಿ ಅಲ್ಲೊಂದು ಸಂದೇಶ ಇದ್ದೇ ಇರುತ್ತಿತ್ತು.

Kashinath Birthday | Kannada Creative Director, Upendra's Guru Actor Kashinath Birthday | ಕನ್ನಡ ಚಿತ್ರರಂಗದ ಖ್ಯಾತಿಯನ್ನು ಪರ್ವತದೆತ್ತರಕ್ಕೆ ಕೊಂಡೊಯ್ದ ಕಾಶೀನಾಥ್! |
ಕಾಶೀನಾಥ್.


Rakul Preet Singh: ಮೆಡಿಕಲ್ ಸ್ಟೋರ್​ನಲ್ಲಿ ಮದ್ಯ ಸಿಗುತ್ತೆ ಅಂತ ಗೊತ್ತಿರಲಿಲ್ಲ: ನಟಿ ರಾಕುಲ್ ಪ್ರೀತ್ ಸಿಂಗ್

ಸಿನಿಮಾವನ್ನ ಗಂಭೀರವಾಗಿ ಜನರ ಮುಂದಿಟ್ಟರೆ ಸ್ವೀಕರಿಸುವುದಿಲ್ಲ ಎಂಬುದನ್ನ ಬಹು ಚೆನ್ನಾಗಿಯೇ ಅರಿತಿದ್ದರು ಕಾಶೀನಾಥ್. ಹಾಸ್ಯ, ಶೃಂಗಾರಗಳ ರಸಗಳನ್ನ ಬೆರೆಸಿದ ಮಸಾಲೆ ಮಾಡಿ ಸಿನಿರಸಿಕನಿಗೆ ಉಣಬಡಿಸುವುದರಲ್ಲಿ ಎತ್ತಿದ ಕೈ ಅವರದ್ದು.

ಮಾಸ್ಟರ್ ಪೀಸ್ ಎಂಬ ಪದಕ್ಕೆ ಕಾಶೀನಾಥ್ ಅನ್ವರ್ಥವೆಂದರೆ ತಪ್ಪಿಲ್ಲ. ಅವರು ತೆಗೆದ ಸಿನಿಮಾಗಳು ಒಂದೊಂದೂ ಮಾಸ್ಟರ್​ ಪೀಸ್. ನಟನೆ, ಸಂಭಾಷಣೆ, ಕಥೆ, ಸಿನಿಮಾಟೋಗ್ರಫಿಯಲ್ಲಿ ಅಲ್ಲಿವರೆಗೆ ಇದ್ದ ಎಲ್ಲ ಅಲಿಖಿತ ಸಿನಿಮಾವಳಿಗಳನ್ನ ಕಿತ್ತೊಗೆದು ಹೊಸ ಶೈಲಿಯ ಮಾಸ್ಟರ್ ಆಗಿದ್ದರು. ಜನರಿಗೆ ಮನಮುಟ್ಟುವಂತೆ ಹೇಳುವ ಅವರ ವಿಶಿಷ್ಟ ಶೈಲಿ ಪರಿಣಾಮಕಾರಿಯಾಗಿರುತ್ತಿತ್ತು.

ವರದಕ್ಷಿಣೆಗೆ ಹಪಾಹಪಿಸುವ ಗಂಡೆತ್ತ ತಾಯಿ, ಆಸೆಬುರುಕ ಹೆಂಡತಿ, ಯೌವ್ವನದ ತೊಳಲಾಟಗಳು, ಪ್ರೀತಿ, ಪ್ರೇಮ, ಪ್ರಣಯ, ಆಸೆ, ದುರಾಸೆ, ಮೋಜು ಹೀಗೆ ಸಮಾಜದ ಎಲ್ಲರ ಜೀವನದಲ್ಲಿ ಬಂದು ಹೋಗುವ ಅಂಶಗಳನ್ನ ತೆರೆ ಮೇಲೆ ಕಟ್ಟಿ ಕೊಟ್ಟವರು ಕಾಶೀನಾಥ್. ಹೀಗಾಗಿಯೇ ಅವರ ಚಿತ್ರಗಳು ಜನರಿಗೆ ತಲುಪುತ್ತಿದ್ದವು. ಅನುಭವ ಚಿತ್ರ 37 ವಾರ ಪ್ರದರ್ಶನ ಕಂಡಿದ್ದೇ ಇದಕ್ಕೆ ಸಾಕ್ಷಿ.

Rashmika Mandanna: ಅಮ್ಮನ ಬಲವಂತಕ್ಕೆ ತುಂಡುಡುಗೆ ಬಿಟ್ಟು ಸೀರೆಯುಟ್ಟು ಕೊಡವತಿಯಾದ ರಶ್ಮಿಕಾ ಮಂದಣ್ಣ..!ಕಾಶೀನಾಥ್ ಅವರೇ ಕೆಲವೆಡೆ ಹೇಳಿಕೊಂಡಿರುವ ಹಾಗೆ ಅವರ ಸಿನಿಮಾಗಳನ್ನ ಕಂಡು ಮನೆಯಲ್ಲೇ ಮುಜುಗರದ ವಾತಾವರಣ ನಿರ್ಮಾಣವಾಗಿತ್ತಂತೆ. ಆದರೂ ತಲೆಕೆಡಿಸಿಕೊಳ್ಳದಂತೆ ತಮ್ಮ ಕಾಯಕದಲ್ಲಿ ಮುಂದುವರೆದಿದ್ದರು.
First published: May 8, 2020, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories