ಕನ್ನಡದ ಕಿರುತೆರೆಯ ಕಾಮಿಡಿ (Comedy Khiladigalu) ಕಿಲಾಡಿಗಳು ಸಖತ್ ಫೇಮಸ್ ಶೋ ಆಗಿದೆ. ಹಾಸ್ಯಭರಿತ ಈ ಶೋದಲ್ಲಿ ಹಾಸ್ಯ ಕಲಾವಿದರೆಲ್ಲ ಹೆಸರು ಮಾಡಿದ್ದಾರೆ. ಪುಟ್ಟ ಪರದೆಯಿಂದ (Big Screen) ದೊಡ್ಡ ಪರದೆಗೂ ಕಾಲಿಟ್ಟಿದ್ದಾರೆ. ಆ ನಿಟ್ಟಿನಲ್ಲಿ ಮಡೆನೂರು ಮನು ವಿಶೇಷವಾಗಿಯೇ ಕಾಮಿಡಿ ಮಾಡ್ತಿದ್ದ ಹಾಸ್ಯ (Comedy Actor) ಕಲಾವಿದರೇ ಆಗಿದ್ದಾರೆ. ಕನ್ನಡ ಇಂಡಸ್ಟ್ರಿಯ ಸ್ಟಾರ್ ನಟರ ಮಿಮಿಕ್ರಿಯನ್ನ ಕೂಡ ತಮ್ಮ ಅಭಿನಯದಲ್ಲಿ ತೋರಿಸುತ್ತಿದ್ದದ್ದು ಮನು ಪ್ರತಿಭೆಗೆ ಹಿಡಿದ ಕೈಗನ್ನಡಿ. ಮನು (Manu) ಪುಟ್ಟ ಪರದೆ ಮತ್ತು ಕಾರ್ಯಕ್ರಮಗಳನ್ನ ಕೊಡ್ತಾನೇ ಜನರನ್ನ ಹಾಸ್ಯದ ಮೂಲಕ ರಂಜಿಸುತ್ತಲೇ ಬಂದಿದ್ದಾರೆ. ಆದರೆ ಈಗ ಇದೇ ಮನು ಬೆಳ್ಳಿ ಪರದೆ ಮೇಲೆ ನಾಯಕರಾಗಿಯೇ ಬರ್ತಿದ್ದಾರೆ. ಆ ಚಿತ್ರದ ಒಂದಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
"ವಿಚಾರಣೆ" ಎಂಬ ಮನು ಬದುಕು ಬದರ್ಲಿಸ್ತಿರೋ ಸಿನಿಮಾ!
ಕನ್ನಡದಲ್ಲಿ ಎಲ್ಲರಿಗೂ ಅದೃಷ್ಟ ಹುಡುಕಿ ಬರೋದಿಲ್ಲ. ಬಂದ್ರೂ ಸಣ್ಣ ಪುಟ್ಟ ಪಾತ್ರಕ್ಕೆ ಅದು ಸೀಮಿತವಾಗಿರುತ್ತದೆ. ಇಲ್ಲವೇ ಅದೃಷ್ಟ ದುರಾದೃಷ್ಟವಾಗಿಯೂ ಒಂದೇ ಚಿತ್ರಕ್ಕೆ ಬದಲಾಗಿ ಬಿಡುತ್ತದೆ. ಹಾಸ್ಯ ನಟ ಮಡೆನೂರು ಮನು ವಿಷಯದಲ್ಲಿ ಅದೃಷ್ಟದ ಬಾಗಿಲು ಈಗ ತೆರೆದಿದೆ.
ನಾಯಕ ನಟನಾಗಿಯೇ ಬರ್ತಿದ್ದಾರೆ ಮಡೆನೂರು ಮನು
ಮಡೆನೂರು ಮನು ಬೆಳ್ಳಿ ತೆರೆಗೆ ಕಾಲಿಟ್ಟಿದ್ದಾರೆ. ಹಾಗೆ ಹಾಸ್ಯ ನಟನಾಗಿ ಬರ್ತಿಲ್ಲ. ಚಿತ್ರದ ನಾಯಕನಾಗಿಯೇ ಆಗಮಿಸುತ್ತಿದ್ದಾರೆ. ಸಿನಿಮಾದ ಹೆಸರು ಈಗಾಗಲೇ ಹೇಳಿದಂತೆ "ವಿಚಾರಣೆ" ಅನ್ನೋದೇ ಆಗಿದೆ.
"ವಿಚಾರಣೆ" ಚಿತ್ರದ ಒನ್ ಲೈನ್ ಕಥೆ ಏನು ಗೊತ್ತೇ?
"ವಿಚಾರಣೆ" ಅನ್ನೋ ಟೈಟಲ್ನಲ್ಲಿಯೆ ಒಂದು ಅರ್ಥ ಇದೆ. ಅದರಂತೆ ಸಿನಿಮಾದಲ್ಲಿ ಒಬ್ಬ ಅಮಾಯಕ ಯುವಕ ಇರುತ್ತಾನೆ. ತಪ್ಪೇ ಮಾಡದೇನೆ ಒಂದು ಘಟನೆಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ.
ಇವನನ್ನ ಮದುವೆ ಆದ ಹುಡುಗಿ ಕೂಡ ಸಮಸ್ಯೆ ಎದುರಿಸುತ್ತಾಳೆ. ಇದರಿಂದ ಆ ಯುವಕ ಹೊರಗೆ ಬರ್ತಾನಾ ಇಲ್ವಾ ಅನ್ನೋದೇ ಚಿತ್ರದ ಒನ್ ಲೈನ್ ಸ್ಟೋರಿ ಆಗಿದೆ.
ಮನುಗೆ ಜಾನು ಜೋಡಿ-ಇಬ್ಬರದ್ದು ಸಖತ್ ಮೋಡಿ!
ಮಡೆನೂರು ಮನುಗೆ ಇಲ್ಲಿ ನವ ನಟಿ ಜೋಡಿ ಆಗಿದ್ದಾರೆ. ನವ ನಟಿ ಜಾನು ಈ ಚಿತ್ರದಲ್ಲಿ ಮನುಗೆ ಜೊತೆಯಾಗಿದ್ದಾರೆ. ನವ ನಿರ್ದೇಶಕ ಎನ್.ಅಕುಲ್ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಮೂಲಕ ನಿರ್ದೇಶಕರಾಗಿದ್ದಾರೆ. ಆದರೆ ಈ ಮೊದಲು ಒಬ್ಬ ನೃತ್ಯ ನಿರ್ದೇಶಕರಾಗಿಯೇ ಅಕುಲ್ ಗುರುತಿಸಿಕೊಂಡಿದ್ದಾರೆ.
"ವಿಚಾರಣೆ" ಸಿನಿಮಾದಲ್ಲಿ ಮೂರು ಹಾಡು ನಾಲ್ಕು ಫೈಟ್ಸ್!
ಮನು ಮತ್ತು ಜಾನು ಅಭಿನಯದ ಈ ಚಿತ್ರದಲ್ಲಿ ಮೂರು ಹಾಡುಗಳೂ ಇವೆ. ನಾಲ್ಕು ಫೈಟ್ಸ್ ಕೂಡ ಇವೆ. ಇವರ ಈ ಚಿತ್ರದ ಕಥೆ ಕೂಡ ವಿಭಿನ್ನವಾಗಿಯೇ ಇದೆ. ವಿಷಯಾಧಾರಿತ ಚಿತ್ರವೇ ಇದಾಗಿದೆ.
ಮಡೆನೂರು ಮನು ಚಿತ್ರದಲ್ಲಿ ಹಾಸ್ಯ ಇರಲ್ವೇ?
ಇನ್ನು ಈ ಚಿತ್ರದಲ್ಲಿ ನಾಗೇಂದ್ರ ಅರಸ್, ಪ್ರಮೋದ್ ಶೆಟ್ಟಿ, ಆದಿ ಕೇಶವ್ ಸೇರಿದಂತೆ ಇನ್ನೂ ಅನೇಕರಿದ್ದಾರೆ. ಜಿ.ವಿ.ರಮೇಶ್ ಛಾಯಾಗ್ರಹಣ ಮಾಡಿದ್ದಾರೆ. ಸತೀಶ್ ಬಾಬು ಸಂಗೀತ ಕೊಟ್ಟಿದ್ದಾರೆ. ಹಾಸ್ಯ ನಟ ಮಡೆನೂರು ಮನು ಲಕ್ ಈ ಮೂಲಕ ಈಗ ತೆರೆದುಕೊಂಡಿದೆ.
ಇದನ್ನೂ ಓದಿ: ದೊಡ್ಮನೆ ಯುವ ರಾಜಕುಮಾರ್ ಮೊದಲ ಚಿತ್ರಕ್ಕೆ ಹೀರೋಯಿನ್ ಯಾರು? ಯುವರಾಜ್ ಕುಮಾರ್ ಕೊಟ್ಟ ಆಪ್ಡೇಟ್ಸ್ ಏನು?
ಇಡೀ ಸಿನಿಮಾದಲ್ಲಿ ಕೇವಲ ಮಡೆನೂರು ಮನು ಹೀರೋಯಿಸಂ ಇರುತ್ತದೆಯೇ? ಇಲ್ಲವೇ ಹಾಸ್ಯ ಸ್ಪರ್ಶವೂ ಕಾಣಬಹುದೇ ಅನ್ನೋ ಪ್ರಶ್ನೆ ಕೂಡ ಇದೆ. ಸದ್ಯದ ಕಂಟೆಂಟ್ ಆಧರಿಸಿದ ಸಿನಿಮಾಗಳ ಸಾಲಿನ ವಿಚಾರಣೆ ಸಿನಿಮಾ ಕೂಡ ಸೇರಿದೆ. ಇನ್ನುಳಿದಂತೆ ಸದ್ಯಕ್ಕೆ ಇಷ್ಟೆ. ಬಾಕಿ ಮಾಹಿತಿಗಾಗಿ ವೇಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ